ಗುರುವಾರ , ಜೂನ್ 17, 2021
27 °C

ಆರ್‌ಬಿಐನ ಆರ್ಥಿಕ ಉತ್ತೇಜನಾ ಕ್ರಮ: ಸೆನ್ಸೆಕ್ಸ್‌ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮೂರು ದಿನಗಳಿಂದ ಇಳಿಮುಖವಾಗಿದ್ದ ದೇಶದ ಷೇರುಪೇಟೆಗಳು ಬುಧವಾರ ಆರ್‌ಬಿಐನ ಆರ್ಥಿಕ ಉತ್ತೇಜನಾ ಕ್ರಮಗಳಿಂದ ಚೇತರಿಕೆ ಹಾದಿಗೆ ಮರಳಿದವು.

ರೂಪಾಯಿ ಮೌಲ್ಯ ಇಳಿಕೆ ಕಂಡರೂ ಬ್ಯಾಂಕಿಂಗ್‌, ಔಷಧ ಮತ್ತು ಐ.ಟಿ. ವಲಯದ ಷೇರುಗಳ ಚೇತರಿಕೆಯಿಂದಾಗಿ ಸಕಾರಾತ್ಮಕ ವಹಿವಾಟು ನಡೆಯಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 424 ಅಂಶ ಏರಿಕೆ ಕಂಡು 38,677 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 121 ಅಂಶ ಏರಿಕೆಯಾಗಿ 14,617 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಹಣಕಾಸು, ಐ.ಟಿ. ಮತ್ತು ಫಾರ್ಮಾ ವಲಯದ ಷೇರುಗಳ ಚೇತರಿಕೆಯಿಂದಾಗಿ ದೇಶಿ ಷೇರುಪೇಟೆಗಳು ಚೇತರಿಕೆ ಕಂಡವು. ಆರ್‌ಬಿಐ ಬುಧವಾರ ಘೋಷಿಸಿದ ಕೆಲವು ಕೊಡುಗೆಗಳು ಸಕಾರಾತ್ಮಕ ವಹಿವಾಟಿಗೆ ಪ್ರಮುಖ ಕಾರಣವಾಯಿತು ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಯೋಜನಾ ಮುಖ್ಯಸ್ಥ ವಿನೋದ್‌ ಮೋದಿ ತಿಳಿಸಿದ್ದಾರೆ.

ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.05ರವರೆಗೂ ಏರಿಕೆ ಕಂಡವು. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆ ಕಂಡು ಒಂದು ಡಾಲರ್‌ಗೆ ₹ 73.91ರಂತೆ ವಿನಿಮಯಗೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು