ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

42,000 ಅಂಶ ದಾಟಿದ ಸೆನ್ಸೆಕ್ಸ್‌; ಸಾರ್ವಕಾಲಿಕ ದಾಖಲೆ

Last Updated 16 ಜನವರಿ 2020, 6:00 IST
ಅಕ್ಷರ ಗಾತ್ರ

ಮುಂಬೈ:ಬುಧವಾರ 80 ಅಂಶಗಳ ಇಳಿಕೆ ಕಂಡಿದ್ದಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ ಹೊಸ ಎತ್ತರ ತಲುಪಿದೆ. ಅಮೆರಿಕ ಮತ್ತು ಚೀನಾ ಮೊದಲ ಹಂತದ ವ್ಯಾಪಾರ ಒಪ್ಪಂದ ಮಾಡಿಕೊಂಡ ಪರಿಣಾಮ ಜಾಗತಿಕ ಸಕಾರಾತ್ಮ ಬೆಳವಣಿಗಳಿಂದಾಗಿ ವಹಿವಾಟು ಆರಂಭದಲ್ಲಿ ಸೆನ್ಸೆಕ್ಸ್‌ 42,000 ಅಂಶಗಳ ಗಡಿ ದಾಟಿತು.

ಸೆನ್ಸೆಕ್ಸ್‌ ಸಾರ್ವಕಾಲಿಕ ದಾಖಲೆ 42,009.94 ಅಂಶ ಮುಟ್ಟಿದರೆ, ನಿಫ್ಟಿ 12,377.80 ಅಂಶ ತಲುಪಿತು. ಸನ್‌ ಫಾರ್ಮಾ, ನೆಸ್ಟ್ಲೆ ಇಂಡಿಯಾ, ಹಿಂದುಸ್ಥಾನ್‌ ಯುನಿಲಿವರ್‌ ಲಿಮಿಟೆಡ್‌, ಕೊಟ್ಯಾಕ್‌ ಬ್ಯಾಂಕ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಭಾರ್ತಿ ಏರ್‌ಟೆಲ್‌ ಹಾಗೂ ಬಜಾಜ್‌ ಆಟೊ ಷೇರುಗಳು ಗಳಿಕೆ ದಾಖಲಿಸಿವೆ.ಆರಂಭಿಕ ಏರಿಕೆ ಕಂಡ ಷೇರು ಪೇಟೆ ಸೂಚ್ಯಂಕ ನಂತರದ ವಹಿವಾಟಿನಲ್ಲಿ ಕುಸಿತದ ಹಾದಿಯಲ್ಲಿದೆ.

ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಸ್ಟೀಲ್‌, ಎನ್‌ಟಿಪಿ, ಟೈಟಾನ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಟೆಕ್‌ ಮಹೀಂದ್ರಾ, ಒಎನ್‌ಜಿಸಿ ಹಾಗೂ ಏಷ್ಯಾ ಪೇಯಿಂಟ್ಸ್‌, ಇನ್ಫೊಸಿಸ್‌ ಷೇರುಗಳ ಬೆಲೆ ಕುಸಿದಿವೆ.

ಬುಧವಾರ ಅಮೆರಿಕದ ಷೇರು ಪೇಟೆ ವಾಲ್‌ ಸ್ಟ್ರೀಟ್‌ ದಾಖಲೆ ಮಟ್ಟದೊಂದಿದೆವಹಿವಾಟು ಮುಗಿಸಿದೆ. ಬ್ರೆಂಟ್‌ ಕಚ್ಚಾ ತೈಲ ಬೆಲೆ ಶೇ 0.61ರಷ್ಟು ಹೆಚ್ಚಳದೊಂದಿದೆ ಬ್ಯಾರಲ್‌ಗೆ 64.39 ಆಗಿದೆ. ಡಾಲರ್‌ ಎದುರು ರೂಪಾಯಿ ₹ 70.77ರಲ್ಲಿ ವಹಿವಾಟು ನಡೆದಿದೆ.

ಷೇರು ವಿನಿಮಯ ಕೇಂದ್ರಗಳ ಮಾಹಿತಿ ಪ್ರಕಾರ, ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 297.53 ಕೋಟಿ ಮೌಲ್ಯದ ಷೇರು ಖರೀದಿಸಿದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹ 648.34 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT