ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳ ಬಳಿಕ ಷೇರುಪೇಟೆ ಚೇತರಿಕೆ

ವಾರದ ವಹಿವಾಟಿನಲ್ಲಿ ಸಂಪತ್ತು ₹ 3.31 ಲಕ್ಷ ಕೋಟಿ ವೃದ್ಧಿ
Last Updated 10 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಮುಂಬೈ/ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿಒಂದು ತಿಂಗಳ ಬಳಿಕ ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 464 ಅಂಶ ಹೆಚ್ಚಾಗಿ 37,581 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 112 ಅಂಶ ಹೆಚ್ಚಾಗಿ 11,109 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸಕಾರಾತ್ಮಕ ಅಂಶಗಳು: ಆರ್ಥಿಕತೆಯ ಚೇತರಿಕೆಗೆ ಕೇಂದ್ರ ಸರ್ಕಾರ ಉತ್ತೇಜನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಉದ್ಯಮದ ವಲಯದ ಸಮಸ್ಯೆ ಗಳನ್ನು ಬಗೆಹರಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಪಿಐ) ಮೇಲಿನ ಸರ್ಚಾರ್ಜ್‌ ಅನ್ನು ಮರುಪರಿಶೀಲನೆ ನಡೆಸಲು ಸಾಧ್ಯವಿದೆ ಎಂದು ಸಚಿವೆ ನಿರ್ಮಲಾ ಸೂಚನೆ ನೀಡಿ
ದ್ದಾರೆ.ತೆರಿಗೆ ಕಿರುಕುಳ, ತೆರಿಗೆ ವ್ಯಾಜ್ಯಗಳನ್ನು ಬಗೆಹರಿಸುವುದಾಗಿ ಹೇಳಿದ್ದಾರೆ.

‘ಸದ್ಯದ ಈ ಸ್ಥಿತಿಯ ಮೇಲೆ ಏನನ್ನೂ ಅಂದಾಜು ಮಾಡುವುದು ಕಷ್ಟ.ತೆರಿಗೆ ಸಮಸ್ಯೆ, ನಗದು ಬಿಕ್ಕಟ್ಟು, ಬಡ್ಡಿದರ ಕಡಿತ ಮತ್ತು ಆರ್ಥಿಕತೆಗೆ ಉತ್ತೇಜನ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರವೇ ಹಣಕಾಸು ವರ್ಷದ ದ್ವಿತೀಯಾರ್ದದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ರೂಪಾಯಿ: ವಾರದ ವಹಿವಾಟಿನಲ್ಲಿ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾರಲ್‌ ಎದುರು ರೂಪಾಯಿ ಮೌಲ್ಯ 118 ಪೈಸೆ ಇಳಿಕೆಯಾಗಿದ್ದು ಒಂದು ಡಾಲರ್‌ಗೆ ₹ 70.89ಕ್ಕೆ ತಲುಪಿದೆ.

ಎಫ್‌ಪಿಐ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ವಾರದ ವಹಿವಾಟಿನಲ್ಲಿ ₹ 4,508 ಕೋಟಿಗೂ ಹೆಚ್ಚಿನ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಹೂಡಿಕೆದಾರರ ಸಂಪತ್ತು ವೃದ್ದಿ

ಹೂಡಿಕೆದಾರರ ಸಂಪತ್ತು ಮೌಲ್ಯ ₹ 3.31 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 141.68 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಎರಡು ದಿನಗಳ ಸಕಾರಾತ್ಮಕ ವಹಿವಾಟಿನಿಂದಬಜೆಟ್‌ ನಂತರ ಹೂಡಿಕೆದಾರರ ಸಂಪತ್ತಿನಲ್ಲಿ ಆಗಿರುವ ಇಳಿಕೆ ಪ್ರಮಾಣ ತುಸು ತಗ್ಗಿದೆ. ಜುಲೈ 5 ರಿಂದ ಆಗಸ್ಟ್‌ 7ರವರೆಗೆ₹ 12.53 ಲಕ್ಷ ಕೋಟಿ ಕರಗಿತ್ತು. ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಸಂಪತ್ತಿನಲ್ಲಿ 2.68 ಲಕ್ಷ ಕೋಟಿ ಹೆಚ್ಚಾಗಿರುವುದರಿಂದ ನಷ್ಟದ ಪ್ರಮಾಣ₹ 9.67 ಕೋಟಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT