ಬೆಂಗಳೂರು: ಸಿದ್ಧ ಆಹಾರವನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆ ನೀಡುತ್ತಿರುವ ಜೊಮ್ಯಾಟೊ ಕಂಪನಿ ಷೇರು ಪೇಟೆಗೆ ಲಗ್ಗೆ ಇರಿಸಿದ ಆರಂಭದ ದಿನವೇ ಭರ್ಜರಿ ಗಳಿಕೆಯತ್ತ ಸಾಗಿದೆ.
ಜೊಮ್ಯಾಟೊ ಕಂಪನಿಯ ಷೇರುಗಳು ಸಾರ್ವಜನಿಕ ಖರೀದಿಗೆ ಮುಕ್ತವಾಗಿದ್ದು, ಶುಕ್ರವಾರ ನಿಗದಿತ ಮೊತ್ತಕ್ಕಿಂತ ಶೇ 53 ಏರಿಕೆ ದರದಲ್ಲಿ ಮಾರಾಟವಾಗಿದೆ.
ಜೊಮ್ಯಾಟೊ, ಐಪಿಒ ಮೂಲಕ ಪ್ರತಿ ಷೇರಿಗೆ ₹76 ದರ ನಿಗದಿಪಡಿಸಿತ್ತು. ಆದರೆ, ಶುಕ್ರವಾರದ ವಹಿವಾಟು ಆರಂಭದಲ್ಲಿ ಶೇ 53 ಏರಿಕೆಯೊಂದಿಗೆ ₹116 ದರ ಪಡೆದುಕೊಂಡಿದೆ.
ಅಲ್ಲದೆ, ಜೊಮ್ಯಾಟೊ ಷೇರು ಖರೀದಿಸಿದವರಲ್ಲಿ ಹೆಚ್ಚಿನವರು ಯುವಕರು ಮತ್ತು ಮೊದಲ ಬಾರಿಗೆ ಷೇರು ಹೂಡಿಕೆ ಕ್ಷೇತ್ರಕ್ಕೆ ಕಾಲಿರಿಸಿದವರು ಎಂದು ಪೇಟಿಎಂ ಮನಿ ಹೇಳಿತ್ತು.
ಜೊಮ್ಯಾಟೊ, 2008ರಲ್ಲಿ ಸ್ಥಾಪನೆಯಾಗಿದ್ದು, ದೇಶದ 525 ನಗರಗಳಲ್ಲಿ ಕಾರ್ಯಾಚರಿಸುತ್ತಿದ್ದು, ಸುಮಾರು 3,90,000 ರೆಸ್ಟೋರೆಂಟ್‌ಗಳ ಜತೆ ಸಹಭಾಗಿತ್ವ ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.