ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿರುವುದರಿಂದ ಗೃಹ, ವಾಹನ ಖರೀದಿ ಮತ್ತು ಉದ್ದಿಮೆ - ಕೈಗಾರಿಕಾ ಸಾಲಗಳ ಬಡ್ಡಿ ದರಗಳು ಹೆಚ್ಚಳಗೊಳ್ಳುವ ಸಾಧ್ಯತೆಗಳು ಇವೆ.

ಬಡ್ಡಿ ದರ ಹೆಚ್ಚಳ ಹೊರತುಪಡಿಸಿ ಬ್ಯಾಂಕ್ಗಳಿಗೆ ಬೇರೆ ಮಾರ್ಗವೇ ಇಲ್ಲ. ಶೇ 0.25ರಿಂದ ಶೇ 0.50ರಷ್ಟು ತುಟ್ಟಿಯಾಗಲಿವೆ. ನಿಧಿಗಳ ನಿರ್ವಹಣಾ ವೆಚ್ಚ ಹೆಚ್ಚಳಗೊಂಡಿರುವುದರಿಂದ ಬ್ಯಾಂಕ್ಗಳು ತಮ್ಮ ಬಡ್ಡಿ ದರಗಳನ್ನು ಹೆಚ್ಚಿಸಲು ಮುಂದಾಗಲಿವೆ. ರೆಪೊ ದರ ಏರಿಕೆಯಾಗಿರುವುದು ಖಂಡಿತವಾಗಿಯೂ ಬಡ್ಡಿ ದರಗಳ ಮೇಲೆ ಪ್ರಭಾವ ಬೀರಲಿದೆ ಎಂದು ಬ್ಯಾಂಕ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ. ಆರ್ಬಿಐ, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು 2010ರ ಮಾರ್ಚ್ ತಿಂಗಳಿನಿಂದೀಚೆಗೆ 9ನೇ ಬಾರಿ ಹೆಚ್ಚಿಸಿದೆ. ಕಳೆದ ಬಾರಿ ಆರ್ಬಿಐ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದಾಗ, ಬ್ಯಾಂಕ್ಗಳು ಬಡ್ಡಿ ದರಗಳನ್ನು ಹೆಚ್ಚಿಸಿರಲಿಲ್ಲ. ಈ ಬಾರಿ ಮಾತ್ರ ಹಾಗೆ ಆಗಲಿಕ್ಕಿಲ್ಲ ಎಂದು ದೇನಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ದತ್ತ ಹೇಳಿದ್ದಾರೆ.

ಕಟ್ಟಡ ನಿರ್ಮಾಣ ಸಂಸ್ಥೆಗಳು ಬ್ಯಾಂಕ್ಗಳಿಂದ ಪಡೆಯುವ ಸಾಲವು ತುಟ್ಟಿಯಾಗಲಿರುವುದರಿಂದ ಮನೆ, ಅಪಾರ್ಟ್ಮೆಂಟ್ಗಳ ಬೆಲೆಗಳು ಏರಿಕೆಯಾಗಲಿವೆ ‘ಕ್ರೆಡಾಯ್’ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.