ಮುಂಬೈ(ಪಿಟಿಐ): ಬೃಹತ್ ಕೈಗಾರಿಕೆಗಳಿಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮತ್ತು ಉತ್ಪನ್ನಗಳ ಗುಣ ಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರ ರೂ.1,000 ಕೋಟಿಗಳಷ್ಟು ಬೃಹತ್ ಮೊತ್ತದ ನೆರವಿನ ಪ್ಯಾಕೇಜ್ ಪ್ರಕಟಿಸಿದೆ.

‘ದೇಶೀಯ ಉದ್ಯಮ ಸಂಸ್ಥೆಗಳ ನಡುವೆ ಆರೋಗ್ಯಕಾರಿ ಸ್ಪರ್ಧೆ ಹೆಚ್ಚಿಸು ವುದು, ಆ ಮೂಲಕ ಜಾಗತಿಕ ಮಾರು ಕಟ್ಟೆಯ ಮಾನದಂಡಕ್ಕೆ ತಕ್ಕಂತಹ ಸರಕು ಗಳನ್ನು ತಯಾರಿಸುವುದು ಮತ್ತು ಕೌಶಲ ಅಭಿವೃದ್ಧಿ ಈ ನೆರವಿನ ಹಿಂದಿನ ಮುಖ್ಯ ಉದ್ದೇಶ’ ಎಂದು ಬೃಹತ್ ಕೈಗಾ ರಿಕೆಗಳ ಹೆಚ್ಚುವರಿ ಕಾರ್ಯದರ್ಶಿ ಅಂಬುಜಾ ಶರ್ಮಾ ಶನಿವಾರ ಇಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಭೆಯಲ್ಲಿ ಹೇಳಿದರು.

ಸಂಪುಟ ಅನುಮೋದನೆ ಬಳಿಕ ಮುಂದಿನ ಎರಡು ಮೂರು ತಿಂಗಳಲ್ಲಿ ಈ ಪ್ಯಾಕೇಜ್ ಜಾರಿಯಾಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಾರಿ ಯಂತ್ರೋಪಕರಣ ವಲಯದ ರಫ್ತು ವಹಿವಾಟು ಕಳೆದ ಮೂರು ವರ್ಷ ಗಳಲ್ಲಿ ಶೇ 100ರಷ್ಟು ಏರಿಕೆ ಕಂಡಿದೆ. 1990ರಲ್ಲಿ ರೂ.500 ಕೋಟಿಯಷ್ಟಿದ್ದ ವಹಿವಾಟು ಗಾತ್ರ ಈಗ ರೂ.10 ಸಾವಿರ ಕೋಟಿಗೆ ಏರಿಕೆ ಕಂಡಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.