ಮುಂಬೈ (ಪಿಟಿಐ): ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಮತ್ತೊಮ್ಮೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಸೋಮವಾರ ವಹಿವಾಟಿನ ಒಂದು ಹಂತದಲ್ಲಿ ರೂಪಾಯಿ ಮೌಲ್ಯ 97 ಪೈಸೆಗಳಷ್ಟು ಕುಸಿದು ರೂ61.21ಕ್ಕೆ ಜಾರಿತು.

ನಂತರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಪಮೌಲ್ಯ ತಪ್ಪಿಸಲು ಕರೆನ್ಸಿ ಮಾರುಕಟ್ಟೆಗೆ ಮಧ್ಯಪ್ರವೇಶಿಸುವುದಾಗಿ ಹೇಳಿದ ನಂತರ ದಿನದಂತ್ಯಕ್ಕೆ ರೂ60.61ರಲ್ಲಿ ವಹಿವಾಟು ಅಂತ್ಯಗೊಳಿಸಿತು.

ಜೂನ್ 26ರಂದು ರೂಪಾಯಿ ಮೌಲ್ಯ ರೂ60.76ಕ್ಕೆ ಕುಸಿದಿತ್ತು. ಇಲ್ಲಿಯವರೆಗೆ ದಾಖಲಾಗಿರುವ ಸಾರ್ವಕಾಲಿಕ ಗರಿಷ್ಠ ಕುಸಿತ ಇದಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 9 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಇದರಿಂದ ಆಮದುದಾರರಿಂದ ಡಾಲರ್ ಬೇಡಿಕೆ ಹೆಚ್ಚಿದೆ. ಇದರ ಜತೆಗೆ ಅಮೆರಿಕದ ಉದ್ಯೋಗ ಮಾರುಕಟ್ಟೆ ನಿರೀಕ್ಷೆಗೂ ಮೀರಿ ಚೇತರಿಕೆ ಕಂಡಿದೆ. ಇದರಿಂದ ಫೆಡರಲ್ ರಿಸರ್ವ್ ಭಾರತಕ್ಕೆ ನೀಡುವ ಉತ್ತೇಜನ ಕೊಡುಗೆಗಳನ್ನು ಕಡಿತ ಮಾಡುವ ಸೂಚನೆ ನೀಡಿದೆ.ಈ ಎಲ್ಲ ಸಂಗತಿಗಳು ರೂಪಾಯಿ ಅಪಮೌಲ್ಯ ಮುಂದುವರಿಯುವಂತೆ ಮಾಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಶುಕ್ರವಾರಕ್ಕೆ ಹೋಲಿಸಿದರೆ ಸೋಮವಾರ ರೂಪಾಯಿ ಮೌಲ್ಯ 39 ಪೈಸೆಗಳಷ್ಟು ಕುಸಿತ ಕಂಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸೋಮವಾರ ಡಾಲರ್ ವಿರುದ್ಧ ರೂಪಾಯಿಗೆ ರೂ60.58ವರೆಗೂ ವಿನಿಮಯ ಮೌಲ್ಯ ನೀಡಿದವು.

ಸದ್ಯ ಪೌಂಡ್, ಯೆನ್, ಸೇರಿದಂತೆ ಪ್ರಮುಖ 6 ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯ 3 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ. ಕಳೆದ 9 ವಾರಗಳಲ್ಲಿ ರೂಪಾಯಿ ಮೌಲ್ಯ ಒಟ್ಟಾರೆ ಶೇ 13.50ರಷ್ಟು ಕುಸಿತ ಕಂಡಿದೆ.

`ಎಫ್ಐಐ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಷೇರುಪೇಟೆಯಿಂದ ಬಂಡವಾಳ ವಾಪಸ್ ಪಡೆಯುತ್ತಿರುವುದು ವಿದೇಶಿ ವಿನಿಮಯ ಕೊರತೆ ಹೆಚ್ಚುವಂತೆ ಮಾಡಿದೆ. ಖಾಸಗಿ ಹೂಡಿಕೆಯ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಲಿದೆ' ಎಂದು ಕೊಟಕ್ ಮ್ಯೂಚುವಲ್ ಫಂಡ್ನ `ಸಿಇಒ' ಸಂದೇಶ್ ಕಿರ್ಕಿರೆ ಹೇಳಿದ್ದಾರೆ.

ಆಮದು ತುಟ್ಟಿ
ರೂಪಾಯಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿರುವುದರಿಂದ ಕಚ್ಚಾ ತೈಲ ಆಮದು ತುಟ್ಟಿಯಾಗಲಿದೆ. ದೇಶದ ಚಾಲ್ತಿ ಖಾತೆ ಕೊರತೆ (ಸಿಎಡಿ) ಕೂಡ ಹೆಚ್ಚಲಿದೆ. ಮುಂಬರುವ ದಿನಗಳಲ್ಲಿ ರೂಪಾಯಿ ಮೌಲ್ಯ ರೂ62 ದಾಟಬಹುದು ಎಂದು ಅಲ್ಪರಿ ಫೈನಾಶ್ಶಿಯಲ್ನ `ಸಿಇಒ' ಪ್ರಮೀತ್ ಬ್ರಂಬಾಟ್ ಅಭಿಪ್ರಾಯಪಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.