ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಜಾನುವಾರು ಪ್ರದರ್ಶನಕ್ಕೆ ಬಂದ ಸಾರ್ವಜನಿಕರಿಗೆ `ಒಂಗೋಲ್~ ತಳಿಯ ಎತ್ತುಗಳು ಪ್ರಮುಖ ಆಕರ್ಷಣೆಯಾಗಿದ್ದವು.

ರಜೆಯ ದಿನವಾದ ಭಾನುವಾರ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ದೈತ್ಯ ಎತ್ತುಗಳನ್ನು ಕಂಡು `ಹೋ~ ಎಂದು ಉದ್ಘರಿಸುತ್ತಾ ಅಚ್ಚರಿ ವ್ಯಕ್ತಪಡಿಸಿದರು. ಧಾರವಾಡದ ಹೆಬ್ಬಳ್ಳಿ ಅಗಸಿಯ ರೈತ ಆರ್.ಎಫ್.ನೀರಲಕಟ್ಟಿ ಅವರಿಗೆ ಸೇರಿದ 6 ವರ್ಷದ ಈ ಎತ್ತುಗಳು ತಲಾ 650 ಕೆ.ಜಿ ತೂಕ ಇದ್ದು, 1.8 ಮೀಟರ್ ಎತ್ತರ ಇವೆ. 1.5 ವರ್ಷದ ಹಿಂದೆ ಈ ಜೋಡಿಯನ್ನು ನೀರಲಕಟ್ಟಿ ಆಂಧ್ರಪ್ರದೇಶದ ಗುಂಟೂರಿನಿಂದ ರೂ.2.5ಲಕ್ಷ ನೀಡಿ ಖರೀದಿಸಿ ತಂದಿದ್ದಾರೆ.

ಹೆಚ್ಚು ಜಮೀನು ಇರುವ ಕಾರಣ ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನೀರಲಕಟ್ಟಿ ಶಕ್ತಿಶಾಲಿಯಾದ ಈ ಎತ್ತುಗಳನ್ನು ಖರೀದಿಸಿದ್ದಾರೆ. ಕೃಷಿ ಮೇಳದ ಸಂಘಟಕದ ಮನವಿಯ ಮೇರೆಗೆ ಮೇಳದ ಮೂರನೇ ದಿನ ಒಂಗೋಲ್ ತಳಿಯನ್ನು ತಂದು ಪ್ರದರ್ಶನಕ್ಕಿಟ್ಟಿದ್ದರು.

`ಒಂಗೋಲ್ ಎತ್ತುಗಳು 35ಎಚ್ಪಿ ಸಾಮರ್ಥ್ಯದ ಸಜೀವ ಟ್ರ್ಯಾಕ್ಟರ್~ ಎಂದು ಬಣ್ಣಿಸುವ ಕೃಷಿ ವಿಶ್ವವಿದ್ಯಾಲಯದ ಪಶುವೈದ್ಯ ಡಾ.ಅನಿಲ ಪಾಟೀಲ, ಟ್ರಾಕ್ಟರ್ ಸಾಗಿಸುವಷ್ಟೇ ತೂಕದ ವಸ್ತುಗಳನ್ನುಒಂಗೋಲ್ ಎತ್ತುಗಳು ಸರಾಗವಾಗಿ ಹೊರುತ್ತವೆ ಎನ್ನುತ್ತಾರೆ.

ಒಂಗೋಲ್ ಮೂಲತಃ ಆಂಧ್ರಪ್ರದೇಶದ ರಾಯಲಸೀಮೆ ಭಾಗದ ತಳಿಯಾಗಿದ್ದು, ಮೂರು ದಶಕಗಳ ಹಿಂದೆ ಬ್ರೆಜಿಲ್ನವರು ತಮ್ಮ ದೇಶಕ್ಕೆ ಕೊಂಡೊಯ್ದು ಅಲ್ಲಿನ ಸ್ಥಳೀಯ ತಳಿಯೊಂದಿಗೆ ಅಭಿವೃದ್ಧಿಪಡಿಸಿ `ಬ್ರಹ್ಮ~ ಹೆಸರಿನಲ್ಲಿ ಹೊಸ ತಳಿ ರೂಪಿಸಿದ್ದಾರೆ ಎನ್ನುವ ಅವರು, ಚನ್ನಾಗಿ ಸಾಕಿದರೆ ಒಂಗೋಲ್ ತಳಿ ಸುಮಾರು 32ರಿಂದ 36 ವರ್ಷ ಬದುಕುತ್ತವೆ. ಆಂಧ್ರದಲ್ಲಿ ಅಲ್ಲಿನ ದೊಡ್ಡ ಜಮೀನ್ದಾರರು ಹವ್ಯಾಸಕ್ಕಾಗಿಯೇ ಈ ಎತ್ತುಗಳನ್ನು ಸಾಕುತ್ತಾರೆ ಎಂದು ಹೇಳುತ್ತಾರೆ.

ಗುಂಟೂರಿನಿಂದ ತರುವಾಗ ಲಾರಿ ಬಾಡಿಗೆಯಾಗಿ ರೂ.30 ಸಾವಿರ ವ್ಯಯಿಸಿರುವುದಾಗಿ ಹೇಳುವ ನೀರಲಕಟ್ಟಿ ಅವರ ಮಗ ಶಿವಯೋಗಿ, ಕುಂಟೆ-ನೇಗಿಲು ಯಾವುದೂ ಈ ಎತ್ತುಗಳಿಗೆ ಭಾರ ಎನಿಸುವುದಿಲ್ಲ. ಸರಾಗವಾಗಿ ಎಳೆದುಕೊಂಡು ಓಡಿಬಿಡುತ್ತವೆ. ಅವನ್ನು ಹಿಡಿಯಲು ಕೆಲಸಗಾರರು ಹೆದರುತ್ತಾರೆ.

ಹೊಸದಾಗಿ ಕೊಂಡು ತಂದಾಗ ಆಂಧ್ರದಿಂದ ಬಂದ ಇಬ್ಬರು 15 ದಿನ ಇದ್ದು, ಅವುಗಳನ್ನು ನಿಭಾಯಿಸುವುದು ಹೇಳಿಕೊಟ್ಟಿದ್ದರು. ಇಲ್ಲಿಗೆ ಒಗ್ಗದ ಕಾರಣ ಈಗ ಹೆಚ್ಚಾಗಿ ಕೃಷಿ ಚಟುವಟಿಕೆಗೆ ಬಳಸುತ್ತಿಲ್ಲ. ಹಾಗೆಯೇ ಇಟ್ಟಿದ್ದೇವೆ.

ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತೇವೆ ಎಂದು ಹೇಳುತ್ತಾರೆ.ನಿತ್ಯ ಹಿಂಡಿ, ಹಸಿ ಮೇವು, ಸೊಪ್ಪೆಯನ್ನು ಆಹಾರವಾಗಿ ನೀಡುತ್ತಿದ್ದು. ಮನೆಯ ಇತರೆ ದನಗಳು ಈ ದೈತ್ಯರ ಹತ್ತಿರ ಸುಳಿಯಲು ಹಿಂಜರಿಯುವುದರಿಂದ ಶಿವಯೋಗಿ ಅವುಗಳಿಗಾಗಿಯೇ ಪ್ರತ್ಯೇಕ ಕೊಟ್ಟಿಗೆ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.