ವಾಸುದೇವ್ ಕರ್ಬಾನಿ, ಬಾಗಲಕೋಟೆ
*ನಾನು ಬೆಸ್ಕಾಂನಲ್ಲಿ ಅಸಿಸ್ಟೆಂಟ್ ಎಂಜಿನಿಯರಿಂಗ್ ಆಗಿ ಕೆಲಸ ಮಾಡುತ್ತೇನೆ. ತಿಂಗಳ ಸಂಬಳ ₹54,000. ಕಡಿತ ಎನ್ಪಿಎಸ್ ₹4,400. ಪಿಎಲ್ಐ ₹5863, ಎಲ್ಐಸಿ ₹2583, ಎಲ್ಲಾ ಕಳೆದು ₹4000 ಕೈಗೆ ಬರುತ್ತದೆ. ಇದರಲ್ಲಿ ಸಾಲ ತೀರಿಸಲು ನನ್ನ ತಂದೆಗೆ ಪ್ರತಿ ತಿಂಗಳು ₹2500 ಕೊಡುತ್ತೇನೆ. ತಿಂಗಳ ಅಂತ್ಯಕ್ಕೆ ₹2000 – ₹3000 ಮಾತ್ರ ಉಳಿಯುತ್ತದೆ. ಬಾಗಲಕೋಟೆಯಲ್ಲಿ ಒಂದು ನಿವೇಶನ ಕೊಳ್ಳಬಯಸುತ್ತೇನೆ. ಮಾರ್ಗದರ್ಶನ ಮಾಡಿ

ಉತ್ತರ: ನಿಮ್ಮ ಸಾಲದ ವಿವರಣೆಯಲ್ಲಿ ತೆರಬೇಕಾದ ಬಡ್ಡಿ ವಿಚಾರ ತಿಳಿಸಿಲ್ಲ. ಅಲ್ಲಿ ಕೊಡುವ ಬಡ್ಡಿ ಬಹಳ ಹೆಚ್ಚಾದಲ್ಲಿ, ನೀವು ಸಂಬಳ ಪಡೆಯುವ ಬ್ಯಾಂಕ್ನಲ್ಲಿ 10 ತಿಂಗಳ ವೈಯಕ್ತಿಕ ಸಾಲ ಪಡೆದು ತಕ್ಷಣ ಖಾಸಗಿ ಸಾಲದಿಂದ ಮುಕ್ತರಾಗುವುದು ಲೇಸು. ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ಉಳಿತಾಯ ಮಾಡುವುದು ಕಷ್ಟವಾದರೂ 6 ತಿಂಗಳಿಗೊಮ್ಮೆ ಪಡೆಯುವ ಹೆಚ್ಚಿನ ತುಟ್ಟಿಭತ್ಯೆ, ಹಾಗೂ ವಾರ್ಷಿಕ ಇನ್ಕ್ರಿಮೆಂಟ್ನಲ್ಲಿ ಕನಿಷ್ಠ ಶೇ 50, ಸಂಬಳ ಪಡೆಯುವ ಬ್ಯಾಂಕ್ನಲ್ಲಿ 5 ವರ್ಷಗಳ ಆರ್.ಡಿ. ಮಾಡಿ. ಈ ಪ್ರಕ್ರಿಯೆ ನಿರಂತರವಾಗಿರಲಿ.

ಸಿ.ಎಸ್.ಸ್ವಾಮಿ, ಮೈಸೂರು
*ನನಗೆ ನಿವೃತ್ತಿಯಿಂದ ಈ ಕೆಳಗಿನಂತೆ ಹಣ ಬಂದಿರುತ್ತದೆ. ಡಿಸಿಆರ್ಜಿ ₹5,54,400, ಕಮ್ಯುಟೇಶನ್ ₹6,59,232, ಜಿಐಎಸ್ ₹90,000. ಈ ಮೊತ್ತಕ್ಕೆ ಆದಾಯ ತೆರಿಗೆ ಬರುತ್ತದೆಯೇ ತಿಳಿಸಿ.

ಉತ್ತರ: ಡಿಜಿಆರ್ಜಿ ಮತ್ತು ಜಿಐಎಸ್ ಎಂದರೆ ಏನು ಎಂಬುದು ತಿಳಿಯಲಿಲ್ಲ. ನೌಕರಿಯಿಂದ ನಿವೃತ್ತರಾಗುವಾಗ ಬರುವ ಪಿಎಫ್, ಗ್ರ್ಯಾಚುಟಿ (ಗರಿಷ್ಠ ಮಿತಿ ₹10 ಲಕ್ಷ ) ಕಮ್ಯುಟೇಶನ್, ರಜಾ ಸಂಬಳ (ಗರಿಷ್ಠ ₹3 ಲಕ್ಷ) ಇವುಗಳಿಗೆ ತೆರಿಗೆ ವಿನಾಯ್ತಿ ಇದೆ. ನೀವು ಪಡೆದಿರುವ ಹಣ ಈ ವ್ಯಾಪ್ತಿಯಲ್ಲಿ ಬಾರದಿರುವಲ್ಲಿ, ಅಂತಹ ಆದಾಯ ಒಟ್ಟು ಆದಾಯದೊಳಗೆ ಸೇರಿಸಿ, ತೆರಿಗೆ ಕೊಡಬೇಕಾಗುತ್ತದೆ.

ಲಲಿತ ಹಾವೇರಿ,
*ವಯಸ್ಸು 38. ಕೇಂದ್ರ ಸರ್ಕಾರಿ ನೌಕರಳು. ಕಳೆದ ವರ್ಷ ₹19 ಲಕ್ಷ ಗೃಹ ಸಾಲ ಪಡೆದು ಕಟ್ಟಿಸಿದ್ದ ಮನೆ ಖರೀದಿಸಿದ್ದೇನೆ. ಪತಿಗೆ ಖಾಸಗಿ ಕಂಪೆನಿಯಲ್ಲಿ ಕೆಲಸ. ಹಳ್ಳಿಯಲ್ಲಿರುವ ನನ್ನ ಯಜಮಾನರ ಸ್ವಲ್ಪ ಜಮೀನು ಮಾರಿದ್ದರಿಂದ ಸುಮಾರು ₹10 ಲಕ್ಷ ಹಣ ಬಂದಿದೆ. ನಾನು ಹೀಗೆ ಬರುವ ಹಣದಿಂದ ಗೃಹಸಾಲದ ಸ್ವಲ್ಪ ಭಾಗ ತೀರಿಸಲೇ ಅಥವಾ ಬರುವ ಹಣ ಬೇರೆ ಹೂಡಿಕೆ ಮಾಡಲೇ ತಿಳಿಸಿ. ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಅವರ ಭವಿಷ್ಯದ ಬಗ್ಗೆ ಸಲಹೆ ನೀಡಿ. ನನ್ನ ಸಂಬಳ ₹ 30,000. ತೆರಿಗೆ ಉಳಿಸುವ ವಿಚಾರ ಕೂಡಾ ತಿಳಿಸಿ.

ಉತ್ತರ: ನಿಮ್ಮ ಯಜಮಾನರ ಜಮೀನಿನಿಂದ ಬರುವ ಹಣಕ್ಕೆ ತೆರಿಗೆ ಇರುವುದಿಲ್ಲ. ಹಾಗೆ ಬರುವ ಹಣ ವಿಂಗಡಿಸಿ ತಲಾ ₹5 ಲಕ್ಷದಂತೆ ನಿಮ್ಮ ಚಿಕ್ಕ ಮಕ್ಕಳ ಹೆಸರಿನಲ್ಲಿ ನೀವು ಸಂಬಳ ಪಡೆಯುವ ಬ್ಯಾಂಕ್ನಲ್ಲಿ 10 ವರ್ಷಗಳ ಅವಧಿಗೆ ಒಮ್ಮೆಲೆ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ. ಶೇ 8 ಬಡ್ಡಿದರದಲ್ಲಿ ₹10 ಲಕ್ಷ ಬೆಳೆದು, ₹22.80 ಲಕ್ಷ ಆಗಿ ನಿಮ್ಮ ಕೈಸೇರುತ್ತದೆ. ಈ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ.

ನೀವು ಆದಾಯ ತೆರಿಗೆಗೆ ಒಳಗಾಗುವುದರಿಂದ ಗೃಹಸಾಲ ಅವಧಿಗೆ ಮುನ್ನ ತೀರಿಸುವುದು ಜಾಣತನವಲ್ಲ. ಗೃಹಸಾಲದ ಕಂತು ಸೆಕ್ಷನ್ 80ಸಿ, ಹಾಗೂ ಬಡ್ಡಿ 24(ಬಿ) ಆಧಾರದ ಮೇಲೆ ವಿನಾಯ್ತಿ ಪಡೆಯಬಹುದು. ನಿಮಗೆ ಜೀವವಿಮೆ ಇಲ್ಲವಾದಲ್ಲಿ, ಕನಿಷ್ಠ ₹1000 ಕಂತು ತುಂಬುವ ಎಲ್ಐಸಿ ಜೀವನ್ ಆನಂದ್ ಪಾಲಿಸಿ ಮಾಡಿಸಿ. ಇದೇ ವೇಳೆ ₹1000 ಪಿಪಿಎಫ್ ಖಾತೆ ತೆರೆದು ತುಂಬಿರಿ. ಈ ಎಲ್ಲಾ ಉಳಿತಾಯ ಆದಾಯ ತೆರಿಗೆ ಉಳಿಸಲು ಅನುಕೂಲವಾಗುತ್ತದೆ. ಜತೆಗೆ ಭದ್ರತೆಯಿಂದ ಕೂಡಿದ ಉತ್ತಮ ಹೂಡಿಕೆ ಕೂಡಾ.

ಎಂ.ಸಿ.ಶಿವಾನಂದ, ವಾಲ್ಮಿಕಿನಗರ
*ನನ್ನ ಮಗಳಿಗೆ 20 ವರ್ಷ. ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ. ಆಸ್ಪತ್ರೆ ಹಾಗೂ ಔಷಧ ಖರ್ಚನ್ನು ನನ್ನ ವಾರ್ಷಿಕ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದೆ?

ಉತ್ತರ: ಸೆಕ್ಷನ್ 80ಡಿಡಿಬಿ ಆಧಾರದ ಮೇಲೆ ನಿಮ್ಮ ಮಗಳ ಆಸ್ಪತ್ರೆ ಮತ್ತು ಔಷಧಗಳ ಖರ್ಚು ಗರಿಷ್ಠ ₹ 60,000 ವಾರ್ಷಿಕವಾಗಿ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ನೀವು ಮಾಡಿರುವ ಖರ್ಚಿನ ಪುರಾವೆ ಒದಗಿಸಬೇಕು. ಒಟ್ಟಿನಲ್ಲಿ ನಿಜವಾಗಿ ಮಾಡಿರುವ ಖರ್ಚು ₹60,000 ಒಳಗಿರಬೇಕು. ಹೆಚ್ಚಿನ ಮಾಹಿತಿಗೆ ಆದಾಯ ತೆರಿಗೆ ಕಚೇರಿ 080–22868044/22864273 ಸಂಪರ್ಕಿಸಿರಿ.

ಯಶೋಧಾ, ದಾವಣಗೆರೆ ಸಮೀಪ ಹಳ್ಳಿ
*ಇಬ್ಬರು ಮಕ್ಕಳಿದ್ದಾರೆ. ಮಗಳಿಗೆ 19 ವರ್ಷ. ಬಿಎಸ್ಸಿ 2ನೇ ವರ್ಷ. ಮಗನಿಗೆ 17 ವರ್ಷ. ಡಿಪ್ಲೊಮಾ ಒಂದೇ ವರ್ಷದಲ್ಲಿ ಓದುತ್ತಿದ್ದಾರೆ ಇವರಿಬ್ಬರನ್ನೂ ಪಿ.ಜಿಯಲ್ಲಿಟ್ಟು, ಸಿಟಿಯಲ್ಲಿ ಓದಿಸುತ್ತಿದ್ದೇನೆ. ಇಬ್ಬರ ತಿಂಗಳ ಖರ್ಚು ₹8000. ನಮ್ಮ ವ್ಯಾಪಾರದಿಂದ ₹50,000 ತಿಂಗಳ ಆದಾಯವಿದೆ. ಇದರಿಂದ ಮನೆ ಖರ್ಚು ₹8000–10000. ಮಕ್ಕಳ ಖರ್ಚು 8000 ಕಳೆದು ಕರ್ಣಾಟಕ ಬ್ಯಾಂಕ್, ಎಸ್ಬಿಎಂ ಹಾಗೂ ಗ್ರಾಮೀಣ ಬ್ಯಾಂಕ್ನಲ್ಲಿ ₹18000 ಆರ್ಡಿ ಮಾಡಿದ್ದೇನೆ. ₹5 ಲಕ್ಷದ ಜೀವನ ಆನಂದ ಪಾಲಿಸಿ ಇದೆ. ನಾನು ಹಾಗೂ ನನ್ನ ಪತ್ನಿ ವಿದ್ಯಾವಂತರಲ್ಲ. ನಮಗಿರುವ ಸಾಲ ತೀರುತ್ತಾ ಬಂದಿದೆ. ವ್ಯವಹಾರಕ್ಕೆ ಬ್ಯಾಂಕ್ನಿಂದ ₹10 ಲಕ್ಷ ಒ.ಡಿ. ಪಡೆದು ದಾವಣಗೆರೆಯಲ್ಲಿ ಚಿಕ್ಕ ನಿವೇಶನ ಕೊಂಡುಕೊಳ್ಳಲು ಸಲಹೆ ನೀಡಿ.

ಉತ್ತರ: ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತಿರಬೇಕು. ಸಲ್ಲಿಸದಿರುವಲ್ಲಿ, ದಾವಣಗೆರೆಯಲ್ಲಿ ಯಾರಾದರೂ ಚಾರ್ಟರ್ಡ್ ಅಕೌಂಟೆಂಟ್ ಅವರನ್ನು ವಿಚಾರಿಸಿರಿ. ತೆರಿಗೆ ರಿಟರ್ನ್ ತುಂಬಿ ಆದಾಯ ತೆರಿಗೆ ಸಲ್ಲಿಸುವುದರಿಂದ ಮುಂದೆ ನಿಮಗೆ ಹಲವು ಅನುಕೂಲಗಳಿವೆ. ಜತೆಗೆ , ನಿಮ್ಮ ಎಲ್ಲಾ ಉಳಿತಾಯ ಕಪ್ಪು ಹಣವಾಗುವುದಿಲ್ಲ.

ನಿಮ್ಮ ಉಳಿತಾಯ ತುಂಬಾ ಚೆನ್ನಾಗಿದೆ. ಅವುಗಳನ್ನು ಮುಂದುವರಿಸಿ. ಬಂಗಾರ ಕೂಡಾ ಪ್ರತಿ ವರ್ಷ ಕೊಳ್ಳಿರಿ. ಬ್ಯಾಂಕ್ನಲ್ಲಿ ಓ.ಡಿ ಪಡೆಯುವುದಕ್ಕಿಂತ, ಗೃಹಸಾಲ ಪಡೆಯಿರಿ. ಗೃಹಸಾಲಕ್ಕೆ 20–30 ವರ್ಷಗಳ ಅವಧಿಯಿರುತ್ತದೆ. ಹಾಗೂ ತೆರಿಗೆ ಉಳಿಯಲು ಅನುವು ಮಾಡಿಕೊಡುತ್ತದೆ.

ನವೀನ್ ಎ.ಎಸ್., ಊರು ಬೇಡ
*ನನ್ನ ವಾರ್ಷಿಕ ಸಂಬಳ ₹5.21 ಲಕ್ಷ. ಸೆಕ್ಷನ್ 80ಸಿ ಯಲ್ಲಿ ಗರಿಷ್ಠ ₹1.50 ಲಕ್ಷ ಕಟ್ಟುತ್ತೇನೆ. ಎನ್ಪಿಎಸ್ನಲ್ಲಿ ವಾರ್ಷಿಕ ₹48728 ಕಟ್ಟುತ್ತೇನೆ. ಎನ್ಪಿಎಸ್ 80ಸಿ ಒಳಗೆ ಬರುತ್ತದೆಯೇ? ಹಾಗೂ ಸುಕನ್ಯಾ ಸಮೃದ್ಧಿ ಕೂಡಾ ಇದೇ ಸೆಕ್ಷನ್ ಒಳಗಿದೆಯೇ?

ಉತ್ತರ: ಸೆಕ್ಷನ್ 80ಸಿ ಆಧಾರದ ಮೇಲೆ ಗರಿಷ್ಠ ₹1.50 ಲಕ್ಷ ಉಳಿಸಿ ತೆರಿಗೆ ವಿನಾಯ್ತಿ ಪಡೆಯಬಹುದು. ಸುಕನ್ಯಾ ಸಮೃದ್ಧಿ ಸೆಕ್ಷನ್ 80 ಸಿ ಒಳಗೆ ಬರುತ್ತದೆ. ಸೆಕ್ಷನ್ 80 ಸಿಸಿಡಿ (1.ಬಿ) ಆಧಾರದ ಮೇಲೆ 80 ಸಿ ಹೊರತುಪಡಿಸಿ, ಗರಿಷ್ಠ ₹50000 ವಿನಾಯ್ತಿ ಪಡೆಯಲು ಅವಕಾಶವಿದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಸೆಕ್ಷನ್ 80ಸಿ ಅಡಿ ₹1.50 ಲಕ್ಷ, ಸೆಕ್ಷನ್ 80ಸಿಸಿಡಿ (1ಬಿ) ಆಧಾರದ ಮೇಲೆ ₹50,000 ಹೀಗೆ ಆರ್ಥಿಕ ವರ್ಷದಲ್ಲಿ ₹2 ಲಕ್ಷಗಳ ತನಕ ತೆರಿಗೆ ವಿನಾಯ್ತಿ ಪಡೆಯಬಹುದು.

ಹೆಸರು, ಊರು ಬೇಡ
*ನಾನಾ ಮತ್ತು ನನ್ನ ಹೆಂಡತಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತೇವೆ. ನನಗೆ ₹19 ಸಾವಿರ ಹಾಗೂ ನನ್ನ ಹೆಂಡತಿಗೆ ₹11 ಸಾವಿರ ತಿಂಗಳ ಸಂಬಳ. ನನ್ನ ಸಂಬಳದಲ್ಲಿ ಪಿಎಫ್ ₹2,280, ಪಿಟಿ. ₹200 ಕಳೆದು ಕೈಗೆ ₹16,250 ಬರುತ್ತದೆ. ಹೆಂಡತಿ ಸಂಬಳದಲ್ಲಿ ಪಿಎಫ್ ₹1320 ಕಳೆದು ₹9680 ಬರುತ್ತದೆ. ಇಬ್ಬರ ಒಟ್ಟು ತಿಂಗಳ ಅದಾಯ ₹28,680. ಮನೆ ಬಾಡಿಗೆ ₹4,000. ಇತರೆ ಖರ್ಚು ₹16680 ಕಳೆದು ₹8000 ಉಳಿಯುತ್ತದೆ. ಆರೋಗ್ಯ ವಿಮೆ ₹3 ಲಕ್ಷಕ್ಕೆ ₹15 ಸಾವಿರ ತುಂಬುತ್ತೇನೆ. ಇಬ್ಬರ ಎಲ್ಐಸಿ ಪ್ರೀಮಿಯಂ ವಾರ್ಷಿಕ ₹30,000. ನನ್ನ ವಯಸ್ಸು 56. ಹೆಂಡತಿ ವಯಸ್ಸು 48. ಮೊದಲನೇ ಮಗಳು ಬಿ.ಇ ಕೊನೆ ವರ್ಷ. ಎರಡನೇ ಮಗಳು ಬಿ.ಕಾಂ ಓದುತ್ತಿದ್ದಾಳೆ. ಇಬ್ಬರ ಹೆಸರಿನಲ್ಲಿ ₹8 ಲಕ್ಷ ಎಫ್ಡಿ ಇದೆ. ನಿವೇಶನ, ಮನೆ ಇಲ್ಲ. ಭವಿಷ್ಯದ ಬಗ್ಗೆ ಸಲಹೆ ನೀಡಿ.

ಉತ್ತರ:ನೀವು ಉಳಿಸುವ ₹8 ಸಾವಿರದಲ್ಲಿ ವಿಮೆ ಹಾಗೂ ಆರೋಗ್ಯ ವಿಮೆ ಕಳೆದು ₹3000–4000 ಉಳಿಸಬಹುದು. ಈ ಮೊತ್ತ ಸದ್ಯಕ್ಕೆ 5 ವರ್ಷಗಳಲ್ಲಿ ಆರ್.ಡಿ. ಮಾಡಿ. ಆರೋಗ್ಯ ವಿಮೆ ₹3 ಲಕ್ಷ ಫ್ಲೋಟರ್ ಪಾಲಿಸಿ ಎಂದು ತಿಳಿಯುತ್ತೇನೆ. ₹3 ಲಕ್ಷ ಆರೋಗ್ಯ ವಿಮೆಗೆ ವಾರ್ಷಿಕ ₹15000 ತುಂಬುವ ಅವಶ್ಯವಿಲ್ಲ. ಸಿಂಡಿಕೇಟ್ ಬ್ಯಾಂಕ್ನ ‘ಸಿಂಡ್ ಆರೋಗ್ಯ ವಿಮೆ’ಯಲ್ಲಿ ನಿಮ್ಮ 4 ಜನ ಸೇರಿ ಫ್ಲೋಟರ್ ಪಾಲಿಸಿ ₹3 ಲಕ್ಷಕ್ಕೆ ಪಡೆದರೆ ವಾರ್ಷಿಕ ಪ್ರೀಮಿಯಂ ಹಣ ಬರೀ ₹9265 ಮಾತ್ರ.

ನಿಮ್ಮ ಮನೆಗೆ ಸಮೀಪದ ಸಿಂಡಿಕೇಟ್ ಬ್ಯಾಂಕ್ನಲ್ಲಿ ವಿಚಾರಿಸಿ. ನಿವೇಶನ–ಮನೆ ಸದ್ಯಕ್ಕೆ ಕೈಗೆತ್ತಿಕೊಳ್ಳಬೇಡಿ. ಮಕ್ಕಳ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರುತ್ತಿದ್ದಂತೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.

ರಮಾಕಾಂತ್ ಯಲಗಾರ, ಸಿರ್ಸಿ
*ನಾನಾ ಕಾಲೇಜು ಪ್ರಾಂಶುಪಾಲನಾಗಿ ಕೆಲಸ ಮಾಡುತ್ತೇನೆ. ಸಿಬ್ಬಂದಿ ಆದಾಯ ತೆರಿಗೆಯನ್ನು ಟ್ಯಾನ್ಗೆ ಕಟ್ಟುವುದು ಅಥವಾ ಸಂಬಳದ ಬಿಲ್ಲಿನಲ್ಲಿ ಕಟಾವಣೆ ಮಾಡುವುದು– ಇವೆರಡರಲ್ಲಿ ಯಾವುದು ಉತ್ತಮ? ಸಂಬಳದ ಬಿಲ್ನಲ್ಲಿ ಮುರಿದರೆ ಆದಾಯ ತೆರಿಗೆ ಲೆಕ್ಕಕ್ಕೆ ಜಮಾ ಆಗುವುದು ತಡವಾಗಿ ರಿಫಂಡ್ ಕ್ಲೈಮ್ ಬೇಗ ಆಗುವುದಿಲ್ಲವಂತೆ ನಿಜವೇ? ಬಟವಾಡೆ ಅಧಿಕಾರಿ ಆದಾಯ ತೆರಿಗೆ ಲೆಕ್ಕ ಹಾಕುವಾಗ ಸಿಬ್ಬಂದಿಯ ಸಂಬಳದಲ್ಲಿ ಬರುವ ಹಣಕ್ಕೆ ಮಾತ್ರ ಜವಾಬ್ದಾರನೇ ಅಥವಾ ಖಾಸಗಿ ಉಳಿತಾಯಕ್ಕೆ ಜವಾಬ್ದಾರಿ ಇದೆಯೇ? ಆದಾಯ ತೆರಿಗೆಯನ್ನು ಮೂರು ತಿಂಗಳಿಗೊಮ್ಮೆ ತುಂಬಬಹುದೇ? ಶಿಕ್ಷಣ ಸೆಸ್ ಪ್ರತಿ ತಿಂಗಳೂ ತೆರಿಗೆ ಜತೆಯಲ್ಲಿಯೇ ಕಟ್ಟಬೇಕೆ? ಕೊನೆಗೆ ಕಟ್ಟಬಹುದೆ?

ಉತ್ತರ: ಸಿಬ್ಬಂದಿ ಸಂಬಳದಿಂದ ಕಡಿತ ಮಾಡಿದ ಆದಾಯ ತೆರಿಗೆ, ನಿಮಗೆ ಆದಾಯ ತೆರಿಗೆಯವರು ಒದಗಿಸಿದ ಟ್ಯಾನ್ ನಂಬರ್ ನಮೂದಿಸಿ, ಪ್ರತಿ ತಿಂಗಳೂ ಆದಾಯ ತೆರಿಗೆ ಕಚೇರಿಗೆ ಕಟ್ಟಬೇಕು. ತೆರಿಗೆ ಮುರಿದು 15 ದಿನದ ಒಳಗೆ ಆದಾಯ ತೆರಿಗೆ ಕಚೇರಿಗೆ ಕಟ್ಟುವ ಜವಾಬ್ದಾರಿ ಸಂಬಳ ಬಟವಾಡೆ ಮಾಡುವ ವ್ಯಕ್ತಿಯ ಜವಾಬ್ದಾರಿಯಾಗಿರುತ್ತದೆ. ಟ್ಯಾನ್ಗೆ ಕಟ್ಟುವುದು ಅಥವಾ ಬಿಲ್ನಲ್ಲಿ ಕಟಾವಣೆ ಮಾಡುವುದು ಇದರ ಅರ್ಥವಾಗಲಿಲ್ಲ. ಒಟ್ಟಿನಲ್ಲಿ, ಸಂಬಳ ವಿತರಿಸುವಾಗ ತೆರಿಗೆ ಮುರಿದೇ ಸಂಬಳ ಕೊಡಿರಿ. ಹಾಗೂ ಮುರಿದ ಹಣ 15 ದಿವಸದೊಳಗೆ ಟ್ಯಾನ್ಗೆ ನಮೂದಿಸಿ, ತೆರಿಗೆ ಕಚೇರಿಗೆ ರವಾನಿಸಿ. ಸಂಬಳದಲ್ಲಿ ತೆರಿಗೆ ಮುರಿಯುವುದು ನಿಮ್ಮ ಕರ್ತವ್ಯ.

ಇದರಿಂದ ಜಮಾ ಆಗುವುದು ತಡವಾಗುವುದು ಅಥವಾ ರಿಫಂಡ್ ಕ್ಲೈಮ್ ಬೇಗ ಆಗುವುದಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನೀವು ತೆರಿಗೆ ಲೆಕ್ಕ ಹಾಗುವಾಗ ಸಿಬ್ಬಂದಿ ಸಂಬಳ ಮಾತ್ರ ಲೆಕ್ಕಹಾಕಿರಿ. ಒಂದು ವೇಳೆ ಸಿಬ್ಬಂದಿ ಅವರ ಖಾಸಗಿ ಉಳಿತಾಯ ಲಿಖಿತದಲ್ಲಿ ಕೊಟ್ಟರೆ ಅದನ್ನು ಲೆಕ್ಕಹಾಕಿ ತೆರಿಗೆ ಮುರಿಯಿರಿ. ಒಟ್ಟಿನಲ್ಲಿ ನಿಮ್ಮ ಗಮನಕ್ಕೆ ಬಾರದ ಸಿಬ್ಬಂದಿ ಖಾಸಗಿ ಉಳಿತಾಯಕ್ಕೆ ತೆರಿಗೆ ಜವಾಬ್ದಾರಿ ನಿಮಗಿರುವುದಿಲ್ಲ. ಈ ಹಿಂದೆ, ತಿಳಿಸಿದಂತೆ, ಪ್ರತಿ ತಿಂಗಳೂ ಮುರಿದ ತೆರಿಗೆ 15 ದಿನದೊಳಗೆ ರವಾನಿಸತಕ್ಕದ್ದು. ಶಿಕ್ಷಣ ಸೆಸ್ ಕೊನೆಯಲ್ಲಿ ಲೆಕ್ಕಹಾಕಿ ಕಟ್ಟಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.