ನವದೆಹಲಿ (ಪಿಟಿಐ): ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಬಡ್ಡಿ ದರ ಹೆಚ್ಚಳದಿಂದ ಕಾರ್ಪೊರೇಟ್ ಕಂಪೆನಿಗಳು ಪ್ರಸಕ್ತ ಸಾಲಿನ ದೀಪಾವಳಿ ಉಡುಗೊರೆ ಕೊಡುಗೆಯನ್ನು ಶೇ 30ರಷ್ಟು ಕಡಿತಗೊಳಿಸಿವೆ ಎಂದು `ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ `ಅಸೋಚಾಂ~ ಹೇಳಿದೆ.

ಹಣದುಬ್ಬರ ಮತ್ತು ಬಡ್ಡಿ ದರ ಹೆಚ್ಚಳದಿಂದ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಕೊಡುವ ದೀಪಾವಳಿ ಕೊಡುಗೆ ಮೀಸಲನ್ನು ಶೇ 70ರಿಂದ 30ಕ್ಕೆ ಇಳಿಸಿವೆ. ರಿಯಲ್ ಎಸ್ಟೇಟ್, ಎಫ್‌ಎಂಸಿಜಿ, ಔಷಧಿ ಕಂಪೆನಿಗಳು, ವಿಮಾನಯಾನ ಸಂಸ್ಥೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ, ದೀಪಾವಳಿ ಉಡುಗೊರೆ ಮೊತ್ತವನ್ನು ಶೇ 25ಕ್ಕೆ ಇಳಿಸಿವೆ ಎಂದು `ಅಸೋಚಾಂ~ ಕಾರ್ಯದರ್ಶಿ ಡಿ.ಎಸ್ ರಾವತ್ ಹೇಳಿದ್ದಾರೆ.

ಹಾಗಂತ ಕಂಪೆನಿಗಳು ಉಡುಗೊರೆ ಕೊಡುವುದನ್ನು ಕಡಿಮೆ ಮಾಡಿಲ್ಲ. ಅಗ್ಗದ ದರದ `ಚೀನಾ~ ಸರಕುಗಳನ್ನು ಉಡುಗೊರೆ ನೀಡುವ ಪ್ರವೃತ್ತಿ ಹೆಚ್ಚಿದೆ. ಕೆಲವು ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಗಳನ್ನು ಸಗಟು ರೂಪದಲ್ಲಿ ಚೀನಾದಿಂದ ತರಿಸಿಕೊಂಡಿವೆ ಎಂದು ಅಸೋಚಾಂ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.