ದಾವಣಗೆರೆ: ಭತ್ತಕ್ಕೆ ಈಗ ವಿಪರೀತ ಬೆಲೆ ಸಿಕ್ಕಿದೆ. ಕಳೆದ ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ರೂ.1100 ಇದ್ದ ಭತ್ತದ ಧಾರಣೆ ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ಉತ್ತಮ ತಳಿಯ ಭತ್ತಕ್ಕೆ ರೂ.2,000ದಿಂದ ರೂ.2300ರಷ್ಟು ಏರಿಕೆಯಾಗಿದೆ. ಹೊರ ರಾಜ್ಯಗಳಿಂದ ಬರುತ್ತಿರುವ ದಲ್ಲಾಳಿಗಳು ಭತ್ತ ಖರೀದಿಗೆ ಪೈಪೋಟಿ ನಡೆಸುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಹೊನ್ನಾಳಿ, ಹರಿಹರ, ದಾವಣಗೆರೆ, ಚನ್ನಗಿರಿ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು `ಬಿಪಿಟಿ -5204', `ಎಸ್ಎಸ್ಎಲ್-1798', ಅಮಾನ್, ಜಯಶ್ರೀ, ಹಾವೇರಿ ಸೋನಾ, ಸೂಪರ್ ಫೈನ್, ಶ್ರೀರಾಮ್ ಸೋನಾ... ಇತ್ಯಾದಿ ತಳಿಯ ಭತ್ತ ಬೆಳೆಯುತ್ತಾರೆ.

ಈ ಹಿಂದೆ ಸೂಕ್ತ ಬೆಲೆ ಸಿಗದೆ ರೈತರು ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ಸರ್ಕಾರ ಕ್ವಿಂಟಲ್ಗೆ ಹೆಚ್ಚುವರಿಯಾಗಿ ರೂ.100 ಬೆಂಬಲ ಬೆಲೆ ಘೋಷಿಸಿತ್ತು. ಆದರೂ ರೈತರು ಹತಾಶರಾಗಿದ್ದರು. ಪ್ರಸಕ್ತ ಬೇಸಿಗೆ ಹಂಗಾಮಿನ ಅಂತ್ಯದ್ಲ್ಲಲಿ ಭತ್ತ ಬೆಳೆಗಾರರ ಅದೃಷ್ಟ ಖುಲಾಯಿಸಿದಂತಿದೆ.

`ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ಹಂಗಾಮಿನ ಭತ್ತದ ಗುಣಮಟ್ಟ ಉತ್ಕೃಷ್ಟವಾಗಿದೆ. ಅಲ್ಲದೇ ಭತ್ತದ ಕಣಜ `ಸಿಂಧನೂರು', `ಸಿರುಗುಪ್ಪ', ಕಾವೇರಿ ಕಣಿವೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಅಷ್ಟಾಗಿ ಭತ್ತ ಬೆಳೆದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶಕ್ಕೆ ಆಧಾರವಾಗಿದ್ದ ಗೋದಾವರಿ ಮತ್ತು ಇತರ ಜಲಾಶಯಗಳ ನೀರಿನ ಮಟ್ಟ ಕುಸಿದಿರುವುದರಿಂದ ಭತ್ತದ ಉತ್ಪಾದನೆ ಹಿನ್ನಡೆ ಕಂಡಿದೆ. ಮಹಾರಾಷ್ಟ್ರದಲ್ಲಿ ಅಧಿಕ ಉಷ್ಣಾಂಶ ಕಾರಣ ಭತ್ತದ ಗುಣಮಟ್ಟ ಅಷ್ಟು ಉತ್ತಮವಾಗಿರುವುದಿಲ್ಲ. ಕೃಷ್ಣ ಕೊಳ್ಳ ಬರಿದಾಗಿದೆ. ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯ ಬತ್ತಿದೆ. ಹೊರ ರಾಜ್ಯಗಳಿಂದ ಭತ್ತಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ಭತ್ತದ ದರ ಏರಿಕೆಯಾಗಿದೆ' ಎನ್ನುತ್ತಾರೆ ದಾವಣಗೆರೆ ಎಂಪಿಎಂಸಿ ಕಾರ್ಯದರ್ಶಿ ಎಚ್.ಕುಬೇರ ನಾಯ್ಕ.

`ಇಲ್ಲಿನ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಹುತೇಕ ಭತ್ತ ಬೆಳೆಗಾರರು ಯಾಂತ್ರೀಕೃತ ನಾಟಿ ಪದ್ಧತಿ ಅನುಸರಿಸುತ್ತಿದ್ದಾರೆ. ಅಲ್ಲದೇ ರಾಸಾಯನಿಕ ಬಳಕೆಯನ್ನೂ ಕಡಿಮೆಗೊಳಿಸುವ ಮೂಲಕ ಭೂಮಿ ಸುಸ್ಥಿರತೆ ಕಾಯ್ದುಕೊಂಡಿದ್ದಾರೆ. ಬೇಸಿಗೆ ಬಿಸಿಲು ಸಹ ಉತ್ತಮವಾಗಿತ್ತು. ತೆನೆಗಟ್ಟುವ ಸಂದರ್ಭದಲ್ಲಿ ಎರಡು ಬಾರಿ ಮುಂಗಾರು ಪೂರ್ವ ಮಳೆ ಸುರಿಯಿತು. ಹಾಗಾಗಿ, ಭತ್ತಕ್ಕೆ ಅಷ್ಟಾಗಿ ರೋಗ ಮತ್ತು ಕೀಟ ಹಾವಳಿ ಕಾಡಲಿಲ್ಲ. ಪರಿಣಾಮವಾಗಿ ಭತ್ತ ಜೊಳ್ಳಾಗದೇ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಜಿಲ್ಲೆಯ ಅತ್ತಿಗೆರೆ ರೈತ ಚಂದ್ರಶೇಖರ್ ಎಕರೆಗೆ 65 ಕ್ವಿಂಟಲ್ ಭತ್ತ ಬೆಳೆದಿದ್ದಾರೆ' ಎಂದು ಜಂಟಿ ಕೃಷಿ ನಿರ್ದೇಶಕ ಆರ್.ಜಿ.ಗೊಲ್ಲರ್ ವಿವರಿಸುತ್ತಾರೆ.

`ಪ್ರತಿ ವರ್ಷ ಅಕ್ಕಿಬೆಲೆ ಏರಿಕೆಯಾದರೂ, ಭತ್ತದ ಬೆಲೆ ಸ್ಥಿರವಾಗಿಯೇ ಇರುತ್ತಿತ್ತು. ಇದರಿಂದ ಭತ್ತ ಬೆಳೆಗಾರರು ನಿರಾಶೆ ಅನುಭವಿಸುತ್ತಲೇ ಬಂದಿದ್ದರು. ಆದರೆ, ಈ ವರ್ಷ ಭತ್ತ ದರ ದುಪ್ಪಟ್ಟು ಆಗುವ ಮೂಲಕ ಕೊಂಚ ಉಸಿರಾಡುವಂತೆ ಆಗಿದೆ. ಹೊರ ರಾಜ್ಯಗಳ ದಲ್ಲಾಳಿಗಳು ಖರೀದಿಗೆ ಪೈಪೋಟಿ ನಡೆಸಿರುವುದರಿಂದ ಬಹು ವರ್ಷಗಳ ನಂತರ ರೈತರು ಭತ್ತ ಮಾರಾಟದಲ್ಲಿ ಚೌಕಾಸಿ ಮಾಡುವಂತಾಗಿದೆ' ಎನ್ನುತ್ತಾರೆ ಹರಪನಹಳ್ಳಿ ತಾಲ್ಲೂಕಿನ ಹಿರೇಮೇಗಳಗೆರೆ ಗ್ರಾಮದ ರೈತ ವೀರೇಶಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.