ಆ ಪಾರಿವಾಳಕ್ಕೆ ತಾನು ರಾಜನಾದ ಹೆಮ್ಮೆ. ಈಗ ಒಂದು ತಿಂಗಳಿನ ಹಿಂದಷ್ಟೇ ಹಿರಿಯ ರಾಜ ನಿವೃತ್ತನಾಗಿ ತನ್ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದ್ದ. ಈಗ ಇಡೀ ಗುಂಪಿನ ಜವಾಬ್ದಾರಿ ತನ್ನದು. ಒಂದು ದಿನ ಅವರೆಲ್ಲರನ್ನು ತನ್ನ ಜೊತೆಗೆ ತಪ್ಪಲಿನ ಪ್ರದೇಶಕ್ಕೆ ಕರೆದು ತಂದಿತು. ಕೆಳಗೆ ಹಾಸಿದಂತಿದ್ದ ಭತ್ತದ ಗದ್ದೆಗಳನ್ನು ನೋಡಿ ಹೃದಯ ತುಂಬಿ ಬಂತು. ತನ್ನ ಲೆಕ್ಕ ಸರಿಯಾಗಿದೆ.

ಇನ್ನೂ ಅನೇಕ ದಿನಗಳವರೆಗೆ ತನ್ನ ಇಡೀ ಪರಿವಾರಕ್ಕೆ ಆಹಾರದ ಚಿಂತೆಯಿಲ್ಲ ಎಂದುಕೊಂಡಿತು. ಇನ್ನೇನು ಗದ್ದೆಗಳತ್ತ ಹಾರಬೇಕೆನ್ನುವಾಗ ಕಾಗೆಯೊಂದು ಹತ್ತಿರಬಂದು ಕೂಗಿತು, ಹೋಗಬೇಡಿ, ಬೇಟೆಗಾರ ಬಲೆ ಹಾಕಿದ್ದಾನೆ, ಸಿಕ್ಕು ಬೀಳುತ್ತೀರಿ. ತನ್ನ ನಾಯಕತ್ವದಲ್ಲಿ ಅಷ್ಟೊಂದು ನಂಬಿಕೆಯಿದ್ದ ಪಾರಿವಾಳ ಆ ಸೂಚನೆಯನ್ನು ಗಮನಿಸದೆ ಪಕ್ಷಿಗಳಿಗೆ ಹಾರಲು ಅಪ್ಪಣೆಕೊಟ್ಟಿತ್ತು. ಕ್ಷಣದಲ್ಲಿಯೇ ಎಲ್ಲ ಪಾರಿವಾಳಗಳೂ ಬಲೆಯಲ್ಲಿ ಬಿದ್ದವು.

ಈಗ ಪಾರಿವಾಳ ನಾಯಕನಿಗೆ ದುಃಖವಾಯಿತು. ತನ್ನ ಯೋಚನೆಯಿಲ್ಲದ ಆಜ್ಞೆಯಿಂದಾಗಿ ಇಡೀ ಪರಿವಾರ ಸಿಕ್ಕಿಬೀಳುವಂತಾಯಿತು. ಇನ್ನು ನನ್ನ ನಾಯಕತ್ವದ ಮೇಲೆ ಯಾರಿಗೂ ನಂಬಿಕೆ ಇರುವುದು ಸಾಧ್ಯವಿಲ್ಲ. ಹೀಗೆ ಯೋಚಿಸುತ್ತಿದ್ದಾಗ, ಹಿಂದಿನ ರಾಜ ಹೇಳಿದ್ದು ನೆನಪಾಯಿತು. ಹಿಂದೊಮ್ಮೆ ಹೀಗೆ ಸಿಕ್ಕುಬಿದ್ದಾಗ ಎಲ್ಲ ಪಾರಿವಾಳಗಳೂ ಒಮ್ಮೇಲೆ ಹಾರಿ ಪಾರಾಗಿದ್ದನ್ನು ನೆನಪಿಸಿಕೊಂಡು ಮತ್ತೆ ಎಲ್ಲರೂ ಒಮ್ಮೆಲೇ ಹಾರುವಂತೆ ಅಪ್ಪಣೆ ನೀಡಿದ. ಎಲ್ಲ ಪಾರಿವಾಳಗಳೂ ಒಮ್ಮೆಲೇ ಹಾರಿದಾಗ ಬಲೆಯೂ ಅವರೊಂದಿಗೆ ಹೋಯಿತು. ಬೇಟೆಗಾರ ಪೆಚ್ಚಾಗಿ ನಿಂತ. ಆತ ತನ್ನ ಹಿರಿಯ ಹೇಳಿದ ಮಾತನ್ನು ಮರೆತಿದ್ದ.

ಹಿಂದಿನ ರಾಜ ಮಾಡಿದಂತೆ ಈ ರಾಜನೂ ಬಲೆಯೊಂದಿಗೆ ಹಾರುತ್ತ ತಮ್ಮ ಸ್ನೇಹಿತನಾದ ಇಲಿಯ ಬಳಿಗೆ ಬಂದಿಳಿದ. ಇಲಿಗೆ ಹೇಳಿದ, ಹಿಂದೆ ನಮ್ಮ ಹಳೆಯ ರಾಜನಿಗೆ ಇಂಥ ಸಂದರ್ಭ ಬಂದಾಗ ಆತ ಎಲ್ಲ ಸ್ನೇಹಿತರಿಗೂ ಏಕಕಾಲದಲ್ಲಿ ಹಾರಲು ಹೇಳಿ ಬಲೆಸಮೇತ ನಿಮ್ಮಲ್ಲಿಗೆ ಬಂದಿದ್ದನಂತೆ. ಆಗ ನಿಮ್ಮ ತಂದೆ ಬಲೆಯನ್ನು ಕತ್ತರಿಸಿ ಎಲ್ಲರನ್ನೂ ಬಿಡುಗಡೆ ಮಾಡಿದ್ದರಂತೆ. ದಯವಿಟ್ಟು ಈ ಬಾರಿಯೂ ಹಾಗೆಯೇ ಮಾಡುತ್ತೀಯಾ? ನನ್ನ ಪರಿವಾರದವರೆಲ್ಲ ಕೃತಜ್ಞತೆಯಿಂದ ಕಾಳುಗಳ ರಾಶಿಯನ್ನೇ ತಂದು ನಿಮ್ಮ ಮುಂದೆ ಹಾಕುತ್ತೇವೆ.

‘ಹೌದಯ್ಯ, ನನ್ನ ತಂದೆಯೂ ಹಿಂದೆ ಹಾಗೇ ಮಾಡಿದ್ದ. ನಿಮ್ಮ ಹಳೆಯ ರಾಜನೂ ನೀನು ಹೇಳಿದಂತೆ ಕಾಳುಗಳನ್ನು ನೀಡಿದ್ದ’ ಎಂದಿತು ಇಲಿ. ಮುಂದೆ ಬಂದು ಬಲೆಯನ್ನು ಕತ್ತರಿಸಲು ನೋಡಿತು. ಆಗ ರಾಜ ಪಾರಿವಾಳ, ‘ಸ್ನೇಹಿತ, ದಯವಿಟ್ಟು ನನ್ನನ್ನು ಮೊದಲು ಬಿಡುಗಡೆ ಮಾಡಬೇಡ. ಎಲ್ಲರನ್ನೂ ಬಿಡಿಸಿ ಕೊನೆಗೆ ನನ್ನನ್ನು ಬಿಡಿಸು. ಯಾಕೆಂದರೆ ಬಲೆಯನ್ನು ಕತ್ತರಿಸುವಾಗ, ನಿನ್ನ ಹಲ್ಲು ಮೊಂಡಾಗಬಹುದು, ಮುರಿದೇ ಹೋಗಬಹುದು. ಆ ಹೊತ್ತಿಗೆ ಬೇಡರವನೇ ಮತ್ತೆ ಬರಬಹುದು. ಆಗ ನಾನು ಮಾತ್ರ ಸ್ವತಂತ್ರವಾಗಿ ಉಳಿದವರು ಸಿಕ್ಕಿಬೀಳುತ್ತಾರೆ. ಅದು ನಾಯಕತ್ವದ ಲಕ್ಷಣವಲ್ಲ’ ಎಂದಿತು. ಕೊನೆಗೆ ತನ್ನನ್ನು ಬಿಡಿಸಿಕೊಂಡಿತು. ತನ್ನ ಪರಿವಾರದವರ ಮೆಚ್ಚುಗೆ ಪಡೆಯಿತು.

ಕೆಲವೊಮ್ಮೆ ನಾಯಕರಿಂದ ತಪ್ಪು ತೀರ್ಮಾನಗಳು ಬರಬಹುದು. ಅದು ಸಾಮಾನ್ಯ. ಆದರೆ ಮುಂದಿನ ಪ್ರಯತ್ನಗಳಲ್ಲಿ ಸರಿಯಾದ ನಾಯಕತ್ವದ ತೀರ್ಮಾನ ತೆಗೆದುಕೊಂಡಾಗ ಹಿಂದಿನ ತಪ್ಪು ನಿರ್ಧಾರ ಮರೆಯಾಗಿ ನಾಯಕತ್ವ ಮತ್ತೆ ಸ್ಥಿರವಾಗುತ್ತದೆ. ಈ ನಾಯಕತ್ವದ ಪ್ರಮುಖ ಲಕ್ಷಣವೆಂದರೆ ತನ್ನನ್ನೇ ಪ್ರಧಾನವಾಗಿ ನೋಡದೇ ತನ್ನ ತಂಡದ ಎಲ್ಲ ಸದಸ್ಯರ ಭದ್ರತೆಯನ್ನು, ಬೆಳವಣಿಗೆಯನ್ನು ತನಗಿಂತ ಪ್ರಮುಖವಾಗಿ ಗಮನಿಸುವುದು. ಅಂಥ ನಾಯಕತ್ವ ಮೆಚ್ಚುಗೆ ಗಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.