ನಮ್ಮ ಬುದ್ಧಿ ಹರಿತವಾಗಿದ್ದರೆ, ಸಮಸ್ಯೆಯನ್ನು ವಿನೂತನ ದೃಷ್ಟಿಯಿಂದ ನೋಡಲು ಸಾಧ್ಯವಾಗುವಂತಿದ್ದರೆ ಎತ್ತರದ ಸಾಧನೆ ಸುಲಭಸಾಧ್ಯ ಎನ್ನುವುದಕ್ಕೆ ಸಿ.ಕೆ ರಂಗನಾಥನ್ ಮಾದರಿಯಾಗುತ್ತಾರೆ. ಈ ಸಾಧನೆಯ ಯಾತ್ರೆ ಪ್ರಾರಂಭವಾದದ್ದು 1983ರಲ್ಲಿ.

ರಂಗನಾಥನ್ ಅವರು ವ್ಯಾಪಾರಿ ಮನೆತನದಿಂದ ಬಂದವರು. ಅವರ ಮನೆಯವರು ವೆಲ್ಪೆಟ್ ಎಂಬ ಶಾಂಪೂವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಮಾರಾಟಮಾಡುತ್ತಿದ್ದರು. ರಂಗನಾಥನ್ ಮನೆತನದ ವ್ಯಾಪಾರದಿಂದ ಹೊರಬಂದು ತಮ್ಮದೇ ಆದ ಬ್ಯೂಟಿ ಕಾಸ್ಮೆಟಿಕ್ಸ್ ಎಂಬ ಕಂಪೆನಿ ಪ್ರಾರಂಭಿಸಿದರು.

ಅವರ ಕಡೆಗೆ ಇದ್ದ ಬಂಡವಾಳ ಒಟ್ಟು ಹದಿನೈದು ಸಾವಿರ ರೂಪಾಯಿಗಳು ಮತ್ತು ಅಸಾಧ್ಯ ಧೈರ್ಯ. ಪ್ರಾರಂಭದಲ್ಲಿ ತುಂಬ ಕಷ್ಟವಾಗಿತ್ತು. ತಿಂಗಳಿಗೆ ಇನ್ನೂರೈವತ್ತು ರೂಪಾಯಿಗಳ ಬಾಡಿಗೆಯ ಮನೆ ಹಿಡಿದರು. ಅದೇ ಆಫೀಸೂ ಆಗಿತ್ತು. ಮತ್ತೊಂದು ಶೆಡ್ನ್ನು ತಿಂಗಳಿಗೆ ಮೂರು ನೂರು ರೂಪಾಯಿಗೆ ಬಾಡಿಗೆಗೆ ಪಡೆದರು.

ಅದು ಫ್ಯಾಕ್ಟರಿ. ಇವರಿಗೆ ಯಾರೂ ಸಾಲಕೊಡಲು ಮುಂದೆ ಬರಲಿಲ್ಲ, ಏಕೆಂದರೆ ಒತ್ತೆ ಇಡಲು ಇವರ ಬಳಿ ಇತ್ತಾದರೂ ಏನು. ಕೊನೆಗೊಬ್ಬ ಪುಣ್ಯಾತ್ಮ ಇವರ ಧೈರ್ಯವನ್ನು ನೋಡಿ ಏನೂ ಹೆಚ್ಚಿನ ಆದಾಯವಿಲ್ಲದಿದ್ದರೂ ಆದಾಯ ತೆರಿಗೆ ಕಟ್ಟುತ್ತಿದ್ದ ಪ್ರಾಮಾಣಿಕತೆ ಗಮನಿಸಿ 25,000 ರೂಪಾಯಿಗಳ ಸಾಲ ನೀಡಿದ.

ತಾವು ಮಾರುವ ಶಾಂಪೂವಿಗೆ ಚಿಕ್ ಎಂದು ಹೆಸರಿಟ್ಟರು. ಇದು ಅವರ ತಂದೆ ಚಿನ್ನಿ ಕೃಷ್ಣನ್ ಅವರ ಹೆಸರಿನ ಸುಲಭ ರೂಪಾಂತರ. ಶಾಂಪೂ ಮಾರಲು ದೊಡ್ಡ ಅಂಗಡಿಗಳಿಗೆ ಹೋಗದೆ ಹೊಸದಾದ, ಪುಟ್ಟ ಪುಟ್ಟ ರಸ್ತೆ ಬದಿಯ ಅಂಗಡಿಯ ಮಾರಾಟಗಾರರನ್ನು ಸಂಪರ್ಕಿಸಿದರು.

ಮಾರಾಟ ವರ್ಷಕ್ಕೆ ಕೇವಲ ನಾಲ್ಕು ಲಕ್ಷ ರೂಪಾಯಿಗಳಷ್ಟಾಗುತ್ತಿತ್ತು. ಆಗ ಅವರು ಹಳ್ಳಿಯ ಜನರನ್ನು ಕಂಡು ಮಾತನಾಡಿಸಿ ನೀವು ಯಾಕೆ ಕೂದಲನ್ನು ತೊಳೆಯಲು ಶಾಂಪೂ ಬಳಸುವುದಿಲ್ಲ ಎಂದು ಕೇಳಿ ಉತ್ತರ ಪಡೆದರು. ಅದು ಸ್ಪಷ್ಟವಾಗಿತ್ತು.

ಊಟಕ್ಕೇ ತತ್ವಾರವಾದಾಗ ಶಾಂಪೂಗೆ ಹಣ ಎಲ್ಲಿಂದ ತಂದಾರು. ಇದನ್ನು ಕಂಡು ರಂಗನಾಥನ್ ತಮ್ಮ ಚಿಕ್ ಶಾಂಪೂವನ್ನು ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ರೂಪಾಯಿಗೆ ಒಂದು ಪ್ಯಾಕೆಟ್ನಂತೆ ಮಾರತೊಡಗಿದರು. ಒಂದು ಪ್ಯಾಕೆಟ್ ಸರಿಯಾಗಿ ಬಳಸಿದರೆ ಆರು ಜನಕ್ಕೆ ಸಾಕಾಗುತ್ತಿತ್ತು. ವ್ಯಾಪಾರ ವೃದ್ಧಿಯಾಯಿತು. 1986 ರ ಹೊತ್ತಿಗೆ ಚಿಕ್ ಮಾರಾಟ ತಿಂಗಳಿಗೆ ಮೂರು ಲಕ್ಷವಾಯಿತು.

ಆಗ ರಂಗನಾಥನ್ ಇನ್ನೊಂದು ಹೊಸ ಯೋಜನೆ ಮಾಡಿದರು. ಯಾರಾದರೂ ಬಳಸಿದ ಚಿಕ್ ಶಾಂಪೂವಿನ ಖಾಲಿ ನಾಲ್ಕು ಸ್ಯಾಚೆಟ್ಗಳನ್ನು ತಂದರೆ ಒಂದು ಹೊಸ ಪ್ಯಾಕೆಟ್ನ್ನು ಉಚಿತವಾಗಿ ಕೊಡುವುದಾಗಿ ಸಾರಿದರು. ಜನ ನಕ್ಕರು. ಈತ ದಿವಾಳಿಯಾಗಿ ಹೋಗುತ್ತಾನೆ ಎಂದು ಸಾರಿದರು. ಆದರೆ ರಂಗನಾಥನ್ ದೃಷ್ಟಿಯೇ ಬೇರೆಯಾಗಿತ್ತು.

ನಾಲ್ಕು ಖಾಲಿ ಚೀಲ ರಸ್ತೆಯಲ್ಲಿ ದೊರೆಯಬೇಕಾದರೆ ಯಾರಾದರೂ ಮೊದಲು ಕೊಂಡಿರಲೇಬೇಕಲ್ಲ. ಪ್ರತಿಕ್ರಿಯೆ ಅಭೂತಪೂರ್ವವಾಗಿತ್ತು. ಇದು ದೇಶದಲ್ಲೆೀ ಮೊದಲ ಬಾರಿಗೆ ನಡೆದ ಪ್ರಯೋಗ. 1991 ರ ಹೊತ್ತಿಗೆ ಚಿಕ್ ಮಾರಾಟ ವಹಿವಾಟು ವರ್ಷಕ್ಕೆ ನಾಲ್ಕು ಕೋಟಿ ರೂಪಾಯಿಯಾಗಿತ್ತು.

ಈಗ ಅದು ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಹಿಂದೆ ಹಾಕಿ ದೇಶದ ಎರಡನೆಯ ಅತ್ಯಂತ ಹೆಚ್ಚು ಮಾರಾಟವಾಗುವ ಶಾಂಪೂ ಆಗಿದೆ. ಆ ಕಂಪನಿ ಕೆವಿನ್ಕೇರ್ ಎಂಬ ಹೆಸರಿನಿಂದ ಖ್ಯಾತವಾಗಿದ್ದು ಅದರ ಒಟ್ಟು ಬೆಲೆ 725 ಕೋಟಿ ರೂಪಾಯಿಗಳು! ಇದೊಂದು ಅದಮ್ಯ ಆತ್ಮವಿಶ್ವಾಸದ, ವಿಷಯವನ್ನು ನವೀನ ರೀತಿಯಲ್ಲಿ ಗಮನಿಸಿ ನೋಡುವ, ಹೊಸ ಆಯಾಮಗಳನ್ನು ಕಂಡುಕೊಳ್ಳುವಲ್ಲಿ ಹೆದರದಿರುವ, ಸಮಸ್ಯೆಯ ಮೂಲಕ್ಕೆ ಹೋಗಿ ಅರಿಯುವ ವಿಶಿಷ್ಟ ಗುಣದ ವ್ಯಕ್ತಿಯ ಕಥೆ.

ಈ ಕಥೆ ನಮ್ಮದೇ ಆಗಬಹುದು. ಆದರೆ, ಆ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.