ಸೆಪ್ಟೆಂಬರ್ 11, 2001: ಕೇವಲ ಅಮೆರಿಕಾ ದೇಶವನ್ನಷ್ಟೇ ಅಲ್ಲ, ಇಡೀ ಜಗತ್ತನ್ನೇ ನಡುಗಿಸಿದ ಭಯಾನಕ ದುರಂತ ನಡೆದು ಹೋದ ದಿನವದು. ಆ ಕರಾಳ ದಿನದಂದು ನಾಲ್ಕು ಪ್ರಯಾಣಿಕರ ವಿಮಾನಗಳು ಭಯೋತ್ಪಾದಕರ ವಶಕ್ಕೆ ಸಿಲುಕಿದವು.

ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಶಿಖರಗಳು ಹಾಗೂ ಅಮೆರಿಕಾದ ರಕ್ಷಣಾ ಇಲಾಖೆಯ ಕೇಂದ್ರ ಸ್ಥಾನವಾದ ಪೆಂಟಗನ್ ಕಟ್ಟಡಗಳು ಅಪಹರಣಕ್ಕೆ ಒಳಗಾದ ಮೂರು ವಿಮಾನಗಳು ಅಪ್ಪಳಿಸಿದ ಕಾರಣ ಧರೆಗುರುಳಿದವು. ಇಷ್ಟೇ ಅಲ್ಲದೆ, ಸಹಸ್ರಾರು ಜೀವಗಳು, ಅನೇಕ ಕುಟುಂಬಗಳು ಹಾಗೂ ಅವರ ಬದುಕಿನ ನೆಲೆಗಳು ಆ ದಿನ ಮರೆಯಾಗಿ ಹೋದವು.

ಈ ಘಟನೆ ಭಯೋತ್ಪಾದನೆಯ ಅತ್ಯಂತ ಕರಾಳ ಮುಖದರ್ಶನವನ್ನು ನಮಗೆ ಮಾಡಿಸಿದ್ದೇ ಅಲ್ಲದೆ, ಇಂಥ ಹೃದಯಹೀನ-ಅಮಾನವೀಯ ಕೃತ್ಯಗಳು ನಡೆದಾಗ ನಾವೆಷ್ಟು ಅಸಹಾಯಕರಾಗಿ ಬಿಡುತ್ತೇವೆ ಎಂಬ ಕಟುಸತ್ಯವನ್ನು ನಮ್ಮ ಮುಂದೆ ಬಿಚ್ಚಿಟ್ಟಿತ್ತು.

ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ರಕ್ಷಣಾ ಹಾಗೂ ಗುಪ್ತಚರ ವ್ಯವಸ್ಥೆಯನ್ನು ಹೊಂದಿರುವ ಅಮೆರಿಕಾದ ನೆಲದಲ್ಲಿಯೇ ಆ ದೇಶದ ಅಂತಃಸತ್ವವನ್ನೇ ಪರೀಕ್ಷೆಗೆ ಒಡ್ಡಿದ ಷಡ್ಯಂತ್ರವನ್ನು ಯಾರಿಗೂ ಸುಳಿವು ಸಿಗದ ಹಾಗೆ ರಚಿಸಿದ ಆತ್ಮಾಹುತಿ ದಾಳಿಕೋರರ ತಂಡದ ಹಿಂದಿದ್ದ ಒಂದು ಜಾಲ ತನ್ನ ಅಟ್ಟಹಾಸವನ್ನು ಮೆರೆದಿತ್ತು.

ಜಗತ್ತಿನ ಅತಿ ಪ್ರಬಲ ರಾಷ್ಟ್ರವೆಂಬ ಬಿರುದನ್ನು ಹೊತ್ತಿರುವ ಅಮೆರಿಕಾಗೆ ತಾನು ಅನುಭವಿಸಿರುವ ಆಗಾಧ ಪ್ರಮಾಣದ ಹಾನಿಯ ಸ್ವರೂಪದ ಚಿತ್ರಣ ಮನಸ್ಸಿನ ಆಳಕ್ಕೆ ಇಳಿಯುವ ವೇಳೆಗಾಗಲೇ ನಡೆಯಬಾರದ್ದು ನಡೆದು ಹೋಗಿತ್ತು.

9/11 ಎಂಬುದು ಇಂದು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ ಎಂದು ಅನೇಕರು ಭಾವಿಸಿರಬಹುದು. ಆದರೆ ತನ್ನ ಮಗನನ್ನು ಕಳೆದು ಕೊಂಡ ತಂದೆಯೊಬ್ಬರು ಹೇಳಿದ ಹಾಗೆ `ಇದು ಇತಿಹಾಸವಲ್ಲ, ದಿನನಿತ್ಯವೂ ನಮ್ಮಡನೆಯೇ ಬರುತ್ತಿರುವ-ಬದುಕುತ್ತಿರುವ ಜೀವಂತ ಸತ್ಯ~.

ಈ ಅಮಾನವೀಯ ಕೃತ್ಯ ನಡೆದು ಒಂದು ದಶಕ ಕಳೆದು ಹೋದ ಸಂದರ್ಭದಲ್ಲಿ ಅಮೆರಿಕಾ ಹುತಾತ್ಮರನ್ನು ಗೌರವಿಸಲು, ಈ ಅವಘಡದಲ್ಲಿ ಬದುಕಿ ಉಳಿದವರನ್ನು ಅಭಿನಂದಿಸಲು, ಸ್ಮಾರಕಗಳನ್ನು ದೇಶಕ್ಕೆ ಅರ್ಪಿಸಲು ಸಜ್ಜಾಗುತ್ತಿರುವಾಗಲೇ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ನಗರಗಳಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಬೆದರಿಕೆಯನ್ನು ಹಾಕಿದ್ದಾರೆಂಬ ಸುದ್ದಿ ದಟ್ಟವಾಗಿ ಹರಡಿತ್ತು.

ಒಂದೆಡೆ ಬಿಚ್ಚಿಕೊಳ್ಳುತ್ತಿರುವ ನೆನಪುಗಳ ಸರಮಾಲೆ. ಮತ್ತೊಂದೆಡೆ 9/11 ಮರುಕಳಿಸದ ಹಾಗೆ ಅತಿ ಬಿಗಿಯಾದ ಭದ್ರತಾ ವ್ಯವಸ್ಥೆ- ಇದು ಈ ಹೊತ್ತು ಅಮೆರಿಕಾದಲ್ಲಿ ಕಂಡು ಬರುತ್ತಿರುವ ಪರಿಸ್ಥಿತಿ.

ಭಾರತವೂ ಸೇರಿದಂತೆ ಜಗತ್ತಿನ ಬೇರೆ-ಬೇರೆ ಭಾಗಗಳಲ್ಲಿ ಭಯೋತ್ಪಾದಕರ ದಾಳಿಗಳು ನಡೆಯುತ್ತಲೇ ಇವೆ, ಆದರೆ 9/11ರ ನಂತರ ಅಮೆರಿಕಾದಲ್ಲಿ ಮತ್ತೊಂದು ಅಂಥ ಕೃತ್ಯ ನಡೆಯಲು ಅವಕಾಶ ನೀಡಿಲ್ಲ ಎಂಬುದು ನಾವು ಆಗಾಗ್ಗೆ ಕೇಳುತ್ತಿರುವ ಮಾತು.

ಈ ದೇಶದ ಆಂತರಿಕ ಭದ್ರತಾ ವ್ಯವಸ್ಥೆ ಅನೇಕ ಸಂದರ್ಭಗಳಲ್ಲಿ ಅನುಸರಿಸುವ `ಅತಿರೇಕ~ವೆನಿಸುವ ಸುರಕ್ಷತಾ ವಿಧಾನಗಳು ಎಷ್ಟು ಟೀಕೆಗಳಿಗೆ ಗುರಿಯಾಗಿವೆಯೋ, ಅಷ್ಟೇ ಮೆಚ್ಚುಗೆಗೂ ಪಾತ್ರವಾಗಿರುವುದನ್ನು ನೋಡಬಹುದು. ಆದರೆ ಆ ದಿನ ನಡೆದು ಹೋದ ದುರಂತ ಕಬಳಿಸಿದ ಅಮಾಯಕ ಜೀವಗಳನ್ನು ಮಾತ್ರ ಯಾರಿಂದಲೂ ಮರು ತರಲು ಸಾಧ್ಯವಿಲ್ಲ.

ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ, ಅಂದು ಬದುಕಿದರೂ ನಂತರ ಜೀವ ತೆತ್ತವರ ಅಥವಾ ಬದುಕಿದ್ದೂ ಸತ್ತಂತಿರುವವರ ಚಿತ್ರಗಳು-ಕಥೆಗಳು ಕಳೆದ ವಾರದಿಂದ ಮಾಧ್ಯಮಗಳಲ್ಲಿ ನಿರಂತರವಾಗಿ ಮೂಡಿ ಬರುತ್ತಿದ್ದು ಯಾರು, ಯಾವಾಗ, ಎಲ್ಲಿ ಬೇಕಾದರೂ ಈ ಭಯೋತ್ಪಾದನೆಯೆಂಬ ಪಾಶವೀ ಪ್ರವೃತ್ತಿಗೆ ಬಲಿಯಾಗಬಹುದು ಎಂಬ ಕಹಿ ಸತ್ಯವನ್ನು ನಮ್ಮ ಮುಖಕ್ಕೆ ರಾಚುತ್ತಿವೆ.

9/11ರ ಆ ದಿನ ನಡೆದದ್ದಾದರೂ ಏನು? ಆ ದಿನ ಹತ್ತೊಂಬತ್ತು ಮಂದಿ ಭಯೋತ್ಪಾದಕರು ತಮ್ಮ ವಶಕ್ಕೆ ತೆಗೆದುಕೊಂಡದ್ದು ಯುನೈಟೆಡ್ ಏರ್ಲೈನ್ಸ್ನ ಎರಡು ಹಾಗೂ ಅಮೆರಿಕನ್ ಏರ್ಲೈನ್ಸ್ನ ಎರಡು ವಿಮಾನಗಳನ್ನು.

ಇವುಗಳಲ್ಲಿ ಎರಡು ವಿಮಾನಗಳನ್ನು. ಅಪಹರಣಕಾರರು ಅಮೆರಿಕಾದ ಆರ್ಥಿಕ ಚಟುವಟಿಕೆಗಳ ಕೇಂದ್ರ ಬಿಂದುವೆಂದೇ ಗುರುತಿಸಲ್ಪಡುತ್ತಿದ್ದ, ಇಡೀ ವಿಶ್ವದ ವ್ಯಾಪಾರ-ವಹಿವಾಟುಗಳ ರೂಪುರೇಷೆಗಳನ್ನು ನಿರ್ದೇಶಿಸುವಂಥ ಅನೇಕ ಸಂಸ್ಥೆಗಳಿಗೆ ಆಶ್ರಯ ತಾಣವಾಗಿದ್ದ ಹಾಗೂ ಈ ದೇಶ ಸಾಧಿಸಿದ್ದ ತಾಂತ್ರಿಕ ಪ್ರಗತಿ ಸಾಕ್ಷಿಯಾಗಿದ್ದ ವಿಶ್ವವಾಣಿಜ್ಯ ಕೇಂದ್ರದ ಎರಡು ಶಿಖರಗಳಿಗೆ ಅಪ್ಪಳಿಸಿದರು.

ಮೂರನೆಯ ವಿಮಾನವನ್ನು ವರ್ಜಿನಿಯಾದ ಆರ್ಲಿಂಗ್ಟನ್ನಲ್ಲಿರುವ ಅಮೆರಿಕಾದ ರಕ್ಷಣಾ ಇಲಾಖೆಯ ಕೇಂದ್ರಸ್ಥಾನವಾದ ಪೆಂಟಗನ್ ಕಟ್ಟಡಕ್ಕೆ ಡಿಕ್ಕಿ ಹೊಡೆಸಿದರು. ಈ ಮೂರು ವಿಮಾನಗಳಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರೇ ಅಲ್ಲದೆ ನೆಲಕ್ಕುರುಳಿದ ಕಟ್ಟಡಗಳ ಭಾಗಗಳಲ್ಲಿ ಕಾರ್ಯನಿರತವಾಗಿದ್ದ ಸಾವಿರಾರು ಮಂದಿ ಪ್ರಾಣ ತೆತ್ತರು.

ಅಪಹರಣಕ್ಕೆ ಒಳಗಾಗಿದ್ದ ನಾಲ್ಕನೆಯ ವಿಮಾನ ವಾಷಿಂಗ್ಟನ್ನಲ್ಲಿದ್ದ ಸಂಸತ್ನ ಕಟ್ಟಡ `ಕ್ಯಾಪಿಟಲ್~ ಅಥವಾ ದೇಶದ ಅಧ್ಯಕ್ಷರ ಅಧಿಕೃತ ನಿವಾಸವಾದ `ವೈಟ್ ಹೌಸ್~ ಕಟ್ಟಡವನ್ನು ಅಪ್ಪಳಿಸುವ ಉದ್ದೇಶದಿಂದ ಧಾವಿಸುತ್ತಿದ್ದುದನ್ನು ಮನಗಂಡ ಕೆಲ ಪ್ರಯಾಣಿಕರು ವಿಮಾನವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದರಿಂದ ಅಪಹರಣಕಾರರು ನಿಯಂತ್ರಣವನ್ನು ಕಳೆದುಕೊಂಡು ವಿಮಾನವನ್ನು ನೆಲಕ್ಕಪ್ಪಳಿಸಬೇಕಾದಂಥ ಪರಿಸ್ಥಿತಿ ಸೃಷ್ಟಿಯಾಯಿತು.

ಸಾವು ತಮ್ಮನ್ನು ಸುತ್ತುವರೆದಿದೆ ಎಂದು ತಿಳಿದ ಮೇಲೆಯೂ ತಮ್ಮ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ದ್ಯೋತಕಗಳ ಮೇಲೆ ನಡೆಯಬಹುದಾಗಿದ್ದ ದಾಳಿಯನ್ನು ತಪ್ಪಿಸಿದ ಈ ಪ್ರಯಾಣಿಕರು ಸಿಬ್ಬಂದಿ ಆ ಗಳಿಗೆಯಲ್ಲಿ ಅನುಭವಿಸಿರಬಹುದಾದ ಯಾತನೆ ಹಾಗೂ ಅವರು ಪ್ರದರ್ಶಿಸಿದ ಧೈರ್ಯ 9/11 ನ ದಾಖಲೆಗಳ ಪುಟಗಳಲ್ಲಿ ವಿಶೇಷವಾಗಿ ಪ್ರಸ್ತಾಪವಾಗಿದೆ. ಅವರ ಗೌರವಾರ್ಥ ವಿಮಾನ ನೆಲಕ್ಕಪ್ಪಳಿಸಿದ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಿ ದೇಶಕ್ಕೆ ಕಳೆದ ಶನಿವಾರ ಸಮರ್ಪಿಸಲಾಗಿದೆ.

ಈ ಅವಘಡ ನಡೆದ ತಕ್ಷಣದಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಹಾಗೂ ಅವುಗಳು ಅಪ್ಪಳಿಸಿದ ಮೂರು ಕಟ್ಟಡಗಳಲ್ಲಿದ್ದ ವಿವಿಧ ಕಚೇರಿಗಳ ಸಿಬ್ಬಂದಿ ಅಥವಾ ಅಲ್ಲಿಗೆ ಕಾರ್ಯ ನಿಮಿತ್ತ ಬಂದಿದ್ದವರನ್ನು ಮಾತ್ರ ಗಣನೆಗೆ ತೆಗೆದುಕೊಂಡು ಸತ್ತವರ ಸಂಖ್ಯೆ ಮೂರು ಸಾವಿರಕ್ಕೆ ಹತ್ತಿರ ಎಂದು ಘೋಷಿಸಲಾಯಿತು.

ಆದರೆ ದಿನಗಳು ಉರುಳುತ್ತಾ ಹೋದ ಹಾಗೆಲ್ಲಾ ಈ ಪಟ್ಟಿಯಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಇತರ ರಕ್ಷಣಾ ವ್ಯವಸ್ಥೆಗಳ ಸಿಬ್ಬಂದಿ ಹಾಗೂ ನ್ಯೂಯಾರ್ಕ್ನಲ್ಲಿ ಅವಳಿ ಶಿಖರಗಳು ಕೆಳಗುರುಳಿದಾಗ ಸುತ್ತಮುತ್ತ ಇದ್ದ ಅನೇಕ ಮಂದಿ ತಮ್ಮ ಪ್ರಾಣವನ್ನು ತೆತ್ತಬೇಕಾಯಿತು.

ಈ ಹೊತ್ತು ಲಭ್ಯವಿರುವ ಅಂಕಿ-ಅಂಶಗಳು 9/11ರಂದು ಹಾಗೂ ನಂತರದಲ್ಲಿ ಸುಮಾರು ಆರು ಸಾವಿರ ಜನ ತಮ್ಮ ಪ್ರಾಣತ್ಯಾಗ ಮಾಡಬೇಕಾಯಿತು ಎಂಬ ಘೋರ ಸತ್ಯವನ್ನು ಹೊರ ಹಾಕಿವೆ.

ಒಂದೆಡೆ ಅಪಾರ ಪ್ರಮಾಣದ ಜೀವಹಾನಿ, ಮತ್ತೊಂದೆಡೆ ದೇಶದ ಆರ್ಥಿಕ ವ್ಯವಸ್ಥೆಗೆ ತಗುಲಿದ ಆಘಾತ; ಇದು 9/11 ರಂದು ನಡೆದ ಮಾರಣ ಹೋಮದ ನೇರ ಪರಿಣಾಮ. ಈ ಘೋರ ಅಪರಾಧದ ಪರಿಣಾಮವಾಗಿ ನ್ಯೂಯಾರ್ಕ್ ನಗರವೊಂದಕ್ಕೇ ಸಂಭವಿಸಿದ ಆರ್ಥಿಕ ನಷ್ಟ 105 ಬಿಲಿಯನ್ ಡಾಲರ್ಗಳು.

ವಿಮಾನಗಳು ಅಪ್ಪಳಿಸಿದ ಪ್ರಯುಕ್ತ ನೆಲಕ್ಕುರುಳಿದ ಕಟ್ಟಡಗಳು ಉಂಟು ಮಾಡಿದ ಪರಿಸರ ಮಾಲಿನ್ಯದ ಶುದ್ಧೀಕರಣಕ್ಕಾಗಿ ವೆಚ್ಚವಾದ ಹಣ 600 ಮಿಲಿಯನ್ ಡಾಲರ್ಗಳು. ಈ ದುರಂತದಿಂದ ನಾಶವಾದ ಉದ್ಯೋಗಾವಕಾಶಗಳು, ಉದ್ದಿಮೆಗಳು, ಕಟ್ಟಡಗಳ ದುರಸ್ತಿಗಾಗಿ ವೆಚ್ಚವಾದ ಹಣ-ಹೀಗೆ ಲೆಕ್ಕ ಹಾಕುತ್ತಾ ಹೊರಟರೆ ಪ್ರಾಯಶಃ ಊಹೆಗೂ ನಿಲಕದಷ್ಟು ಆರ್ಥಿಕ ಸಂಪನ್ಮೂಲವನ್ನು ಅಮೆರಿಕಾ ದೇಶ ಆ ಸಂದರ್ಭದಲ್ಲಿ ಒತ್ತೆ ಇಡಬೇಕಾಯಿತು.

ಈ ದೇಶದ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಗಳಿಗೆ ದೊಡ್ಡ ಪೆಟ್ಟನ್ನು ನೀಡಬೇಕೆಂಬ ಉದ್ದೇಶದಿಂದಲೇ ಇಂಥ ಕೃತ್ಯವೊಂದಕ್ಕೆ ಭಯೋತ್ಪಾದಕರು ಕೈ ಹಾಕಿದ್ದು.

9/11 ರಂಥ ಘಟನೆಗಳು ನಡೆದಾಗ ಸಂಭವಿಸುವ ಆಸ್ತಿ ಹಾನಿಯನ್ನು ಕಾಲ ಕಳೆದ ಹಾಗೆ ಸರಿಪಡಿಸಲು ಸಾಧ್ಯವಾಗಬಹದು. ಹಾಗೆಯೇ ಕೆಳಗುರುಳಿದ ಕಟ್ಟಡಗಳನ್ನೂ ಮತ್ತೆ ನಿರ್ಮಾಣ ಮಾಡಬಹುದು. ಆದರೆ ಆ ಸಂದರ್ಭದಲ್ಲಿ ಸೃಷ್ಟಿಯಾದ ಬೆಂಕಿ, ದೂಳು, ಹೊಗೆ ಹಾಗೂ ವಿಶ್ವ ವಾಣಿಜ್ಯ ಕೇಂದ್ರದ ವಿವಿಧ ಕಚೇರಿಗಳಲ್ಲಿದ್ದ ಕಂಪ್ಯೂಟರ್ಗಳು, ಗಾಜಿನ ಕಿಟಕಿ-ಬಾಗಿಲುಗಳು, ಕಡತಗಳು ಪುಡಿಪುಡಿಯಾದಾಗ ಗಾಳಿಯಲ್ಲಿ ಹಾರಾಡುತ್ತಿದ್ದ ಹಾನಿಕಾರಕ ವಸ್ತುಗಳು ಸುತ್ತಮುತ್ತಲಿದ್ದ ಅನೇಕರ ಆರೋಗ್ಯ ಸ್ಥಿತಿಯನ್ನು ಹದಗೆಡಿಸಿದ್ದು ಈ ದುರಂತದ ಮತ್ತೊಂದು ಮುಖ.

ಅಪಘಾತ ಸಂಭವಿಸಿದಾಗ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಶಿಖರಗಳಿಂದ ಸಾಧ್ಯವಾದಷ್ಟು ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದ ಅಗ್ನಿಶಾಮಕ ದಳದ 343 ಸಿಬ್ಬಂದಿ ತಮ್ಮ ಪ್ರಾಣಾರ್ಪಣೆ ಮಾಡಿದರೆ, ಇನ್ನೂ ಅನೇಕರು ಇಂದಿಗೂ ಗಂಭೀರವಾದ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿದ್ದಾರೆ.

ಶ್ವಾಸಕೋಶದ ಕ್ಯಾನ್ಸರ್ನಿಂದ ಹಿಡಿದು, ದೃಷ್ಟಿದೋಷ ಹಾಗೂ ಸ್ಮರಣ ಶಕ್ತಿಯ ನಾಶದವರೆಗೆ ನಾನಾ ಬಗೆಯ ತೊಂದರೆಗಳನ್ನು ಅನುಭವಿಸುತ್ತಿರುವ ಅನೇಕರಿಗೆ ಬದುಕು ಕಷ್ಟವಾಗಿದೆ, ಭವಿಷ್ಯ ಶೂನ್ಯವಾಗಿದೆ. ಹತ್ತು ವರ್ಷಗಳ ನಂತರವೂ ಶೇಕಡ 40 ರಷ್ಟು ರಕ್ಷಣಾ ಸಿಬ್ಬಂದಿಯ ಆರೋಗ್ಯ ಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗಿಲ್ಲವೆಂಬುದನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ವರದಿಯೊಂದು ತಿಳಿಸಿದೆ.

ಜಗತ್ತು ಕಂಡ ಅತ್ಯಂತ ಹೃದಯ ವಿದ್ರಾವಕ ಘಟನೆಗಳಲ್ಲೊಂದು ನಡೆದು ಒಂದು ದಶಕ ಕಳೆದು ಹೋಯಿತು. ಸ್ಮಾರಕಗಳು ನಿರ್ಮಾಣವಾದವು, ಮೃತರಿಗೆ ಸಮ್ಮಾನ ಗೌರವಗಳು ಸಮರ್ಪಣೆಯಾದವು. ಮುರಿದು ಹೋದ ಅನೇಕ ಬದುಕುಗಳು ಮತ್ತೆ ಚಲಿಸಲಾರಂಭಿಸಿದವು.

ಭಯಾನಕ ದುರಂತ ತಂದ ಸಾವು ನೋವುಗಳು ಹಾಗೂ ಅಗಲಿಕೆಗಳನ್ನು ನೆನೆಸಿಕೊಂಡ ಕ್ಷಣಗಳಲ್ಲಿ ಬೇರೆಲ್ಲ ಭಾವನೆಗಳು ಹಿಂದೆ ಸರಿದಂತೆ ಭಾಸವಾದವು. ಆದರೆ 9/11 ಬಿಟ್ಟು ಹೋದ ದ್ವೇಷ, ಅಪನಂಬಿಕೆ, ಅಪಮಾನ, ಕ್ರೌರ್ಯ, ಹಿಂಸೆಗಳ ಛಾಯೆಯಿಂದ ಹೊರಬರಲು ಇಂದಿಗೂ ವ್ಯಕ್ತಿಗಳಿಗಾಗಲಿ, ವ್ಯವಸ್ಥೆಗಳಿಗಾಗಲಿ ಸಾಧ್ಯವಾಗಿಲ್ಲ.

ಈ ಘಟನೆ ನಡೆದಾಗ ಮತ್ತು ಆ ನಂತರದಲಿ ಅನ್ಯಾಯವಾಗಿ ಹಿಂಸೆಗಳಿಗೆ ಒಳಪಟ್ಟ ಅಮಾಯಕರ ನೆನಪನ್ನು ನಾವು ಗೌರವಿಸುವುದೇ ಆದರೆ ಜಗತ್ತಿನ ಎಲ್ಲ ಪ್ರಜ್ಞಾವಂತ ಮನಸ್ಸುಗಳು ಒಗ್ಗೂಡಬೇಕು. ಜನಾಂಗ, ಜಾತಿ, ಧರ್ಮ, ಲಿಂಗ, ಭಾಷೆ, ಪ್ರಾಂತ್ಯಗಳ ಎಲ್ಲೆಗಳನ್ನು ಮೀರಿ ಸಂಘಟಿತ ಹೋರಾಟಕ್ಕೆ ಕೈ ಜೋಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.