ಪರೀಕ್ಷಾ ಭಯ ಬೇಡ... ನಿರಾಳಭಾವ ಇರಲಿ...

7
ಬೆಸ್ಟ್‌ ಆಫ್‌ ಲಕ್‌ ಎಸ್ಸೆಸ್ಸೆಲ್ಸಿ

ಪರೀಕ್ಷಾ ಭಯ ಬೇಡ... ನಿರಾಳಭಾವ ಇರಲಿ...

Published:
Updated:
Prajavani

ಅತಿ ಟೆನ್ಶನ್ ಮಾಡಿಕೊಳ್ಳಬೇಡಿ. ಪರೀಕ್ಷಾ ಭಯ ಬೇಡ. ನಿರಾಳಭಾವದಿಂದ ಪರೀಕ್ಷೆಗೆ ಸಿದ್ಧರಾಗಿ. ಇನ್ನೂ 35 ದಿನ ಬಾಕಿಯಿವೆ. ವಿಷಯ ಓದುವುದರ ಜತೆಗೆ ಅದನ್ನೇ ಗುಂಪು ಚರ್ಚೆ ಮೂಲಕ ಮನನ ಮಾಡಿಕೊಳ್ಳಬೇಕು.

ನಸುಕಿನಲ್ಲೇ ಓದುವುದು ಪರಿಣಾಮಕಾರಿ. ಮಿತ ಆಹಾರ ಸೇವಿಸಿ, ಮೊಬೈಲ್, ಟಿವಿ, ಮೋಜಿನ ಆಟಗಳಿಂದ ದೂರವಿರಿ. ಮುಂಜಾನೆ 10-15 ನಿಮಿಷ ವಾಕಿಂಗ್ ಮಾಡಿ. ಜ್ಞಾಪಕಶಕ್ತಿ ವೃದ್ಧಿಗಾಗಿ ದಿನಕ್ಕೊಂದು ಖಜೂರಿ ಹಣ್ಣನ್ನು ಜೇನು ತುಪ್ಪದಲ್ಲಿ ನೆನೆಸಿ ತಿನ್ನಿ.

ಅಂದವಾಗಿ, ಶುದ್ಧವಾಗಿ ಮತ್ತು ಸ್ಪಷ್ಟವಾಗಿ ಬರೆಯುವುದನ್ನು ರೂಢಿಸಿಕೊಳ್ಳಿ. ವರ್ಷವಿಡಿ ಅಧ್ಯಯನ ಮಾಡಿದ ಮತ್ತು ಶಾಲೆಯಲ್ಲಿ ಅಧ್ಯಾಪಕರು ಕೊಟ್ಟ ಪಾಠದ ಮುಖ್ಯಾಂಶಗಳನ್ನು ಪದೇ, ಪದೇ ಓದಿಕೊಳ್ಳಿ. ಒಂದೊಂದಾಗಿ ವಿಸ್ತೃತ ಉತ್ತರ ರೂಪಿಸಿಕೊಳ್ಳಿ. ಪ್ರಶ್ನೆ ಭಂಡಾರದ ಉಪಯೋಗ ಮಾಡಿಕೊಳ್ಳಿ. ನಿರ್ಭಯದಿಂದ ಪರೀಕ್ಷೆ ಬರೆಯಿರಿ ಆಲ್ ದಿ ಬೆಸ್ಟ್.

–ಎಸ್.ಎನ್.ಬಸವರಡ್ಡಿ
ಮುಖ್ಯಗುರು, ಕೇಶಿರಾಜ ಪ್ರೌಢಶಾಲೆ, ಕೊಂಡಗೂಳಿ, ಸಿಂದಗಿ ತಾಲ್ಲೂಕು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !