ಹಾಂಗ್ಝೌ: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಈಕ್ವೆಸ್ಟ್ರಿಯನ್ ಸ್ಪರ್ಧಿಗಳ ಉತ್ತಮ ಪ್ರದರ್ಶನ ಮುಂದುವರಿದಿದ್ದು ವಿಪುಲ್ ಹೃದಯ್, ಅನುಷ್ ಅಗರವಾಲ್ ಮತ್ತು ದಿವ್ಯಕೃತಿ ಸಿಂಗ್ ಅವರು ಡೆಸಾಜ್ ವೈಯಕ್ತಿಕ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ವಿಪುಲ್ 73.883 ಪಾಯಿಂಟ್ಸ್ಗಳೊಂದಿಗೆ ಅಗ್ರಸ್ಥಾನ ಪಡೆದು ಪದಕ ಸುತ್ತು ತಲುಪಿದರು. ಅನುಷ್ (71.706) ಮತ್ತು ದಿವ್ಯಕೃತಿ (67.676) ಅವರು ಕ್ರಮವಾಗಿ ನಾಲ್ಕು ಹಾಗೂ 11ನೇ ಸ್ಥಾನ ಪಡೆದು ಫೈನಲ್ಗೆ ಅರ್ಹತೆ ಗಳಿಸಿದರು.

ಸುದೀಪ್ತಿ ಹಜೇಲಾ ಅರ್ಹತಾ ಸುತ್ತಿನಲ್ಲೇ ಎಡವಿದರು. ಅಗ್ರ 15 ಸ್ಥಾನಗಳನ್ನು ಪಡೆದ ಸ್ಪರ್ಧಿಗಳು ಗುರುವಾರ ನಡೆಯುವ ಫೈನಲ್ನಲ್ಲಿ ಸ್ಥಾನ ಪಡೆದರು.

ಹೃದಯ್, ಅನುಷ್, ದಿವ್ಯಕೃತಿ ಮತ್ತು ಸುದೀಪ್ತಿ ಅವರು ಮಂಗಳವಾರ ನಡೆದ ಡ್ರೆಸಾಜ್ ತಂಡ ವಿಭಾಗದಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.