ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಸ್ಪಂದನ | ಗರ್ಭಕೋಶದಲ್ಲಿ ಬೆಳೆದ ಪೊರೆ: ಪರಿಹಾರವೇನು?

Published : 24 ಜನವರಿ 2025, 22:07 IST
Last Updated : 24 ಜನವರಿ 2025, 22:07 IST
ಫಾಲೋ ಮಾಡಿ
Comments
ಪ್ರ

ನನಗೆ 42ವರ್ಷಗಳು 78 ಕೆ.ಜಿ. ಇದ್ದೇನೆ. 160 ಸೆಂಟಿ ಮೀಟರ್‌ ಎತ್ತರವಿದ್ದೇನೆ. ಮುಟ್ಟು ಅನಿಯಮಿತವಾಗಿದ್ದು, ಪ್ರತಿ ಬಾರಿ ರಕ್ತಸ್ರಾವ 8ರಿಂದ 10 ದಿನಗಳವರೆಗೆ ಇರುತ್ತದೆ. ಸ್ಕ್ಯಾನಿಂಗ್  ಮಾಡಿಸಿದ್ದೇನೆ. ಅದರಲ್ಲಿ ಗರ್ಭಕೋಶ 16.ಮಿ.ಮೀ ಪೊರೆ ಬೆಳೆದಿದೆ. ಜತೆಗೆ ಫ್ಯಾಟಿಲಿವರ್‌ ಇದೆ ಎಂದು ತಿಳಿಸಿದ್ದಾರೆ. ಈ ನೋವು ತಡೆಯಲು ಆಗುತ್ತಿಲ್ಲ. ಗರ್ಭಕೋಶ ತೆಗೆಸಿಬಿಡಲೇ?

ಸ್ಕ್ಯಾನಿಂಗ್ ವರದಿಯ ಪ್ರಕಾರ ಗರ್ಭಕೋಶದ ಒಳಪದರವು (ಎಂಡೋಮೆಟ್ರಿಯಂ) ಸಹಜಕ್ಕಿಂತ ಹೆಚ್ಚು ದಪ್ಪವಾಗಿ ಬೆಳೆದಿರುವುದು ಕಂಡುಬರುತ್ತದೆ.
ಸಹಜ ಋತುಚಕ್ರದಲ್ಲಿ ಗರ್ಭಕೋಶದ ಒಳಪದರ ಹಾರ್ಮೋನುಗಳ ಪ್ರಭಾವದಿಂದ 4ರಿಂದ 9 ಮಿ.ಮಿನಷ್ಟು ಬೆಳೆಯುತ್ತದೆ. ಋತುಸ್ರಾವದಲ್ಲಿ ಈ ಒಳಪದರವು ಛಿದ್ರ ಛಿದ್ರವಾಗಿ ಹೊರಬರುವುದೇ ಮುಟ್ಟಿನಸ್ರಾವ ಎನಿಸಿಕೊಳ್ಳುತ್ತದೆ. ನಿಮಗೆ ಈ ಗರ್ಭಕೋಶದ ಒಳಪದರವು (ಎಂಡೋಮೆಟ್ರಿಯಂ) 16ಮಿ.ಮಿ
ಬೆಳೆದಿರುವುದರಿಂದ ಅದು ಹೊರಹೋಗುವಾಗ ದೀರ್ಘಾವಧಿಯವರೆಗೆ ಅತಿರಕ್ತಸ್ರಾವ ಉಂಟಾಗುತ್ತದೆ. ಈ ಕಾರಣಕ್ಕಾಗಿ ನೀವು ಗರ್ಭಕೋಶ ತೆಗೆಸುವ ಅಗತ್ಯವಿಲ್ಲ. ಬದಲಾಗಿ  ಅಧಿಕತೂಕವನ್ನ ಕಡಿಮೆಮಾಡಿಕೊಳ್ಳಬೇಕು. ನಿಮ್ಮ ತೂಕ ನಿಮ್ಮ ಎತ್ತರಕ್ಕೆ ತಕ್ಕ ಹಾಗೆ 60ಕೆ.ಜಿ ಒಳಗಿರಬೇಕಾಗಿತ್ತು ಆದರೆ ನಿಮ್ಮ ತೂಕ 18ಕೆ.ಜಿ.ಯಷ್ಟು ಹೆಚ್ಚಿದೆ. ತೂಕ ಹೆಚ್ಚಾದಾಗ, ಶೇಖರಣೆಯಾಗುವ ಹೆಚ್ಚಿನ ಕೊಬ್ಬಿನಾಂಶವೇ ನಮ್ಮ ಶರೀರದಲ್ಲಿಯೇ ಹೆಣ್ತನದ ಹಾರ್ಮೋನಾದ ಈಸ್ಟ್ರೋಜನ್‌ ಆಗಿ
ಪರಿವರ್ತನೆಯಾಗುತ್ತದೆ. ಇದರಿಂದ ಅದಕ್ಕೆ ತಕ್ಕನಾದ ಪ್ರೊಜೆಸ್ಟ್ರಾನ್‌ ಹಾರ್ಮೋನ್‌ ಸ್ರವಿಸದೇ ಅಸಮತೋಲನ ಉಂಟಾಗುತ್ತದೆ. ಗರ್ಭಕೋಶದ ಒಳಪದರ ಬೆಳೆದು ಅತಿ  ರಕ್ತಸ್ರಾವ ಉಂಟಾಗುತ್ತಿದೆ. ಜತೆಗೆ ಕೆಟ್ಟಕೊಲೆಸ್ಟ್ರಾಲ್‌ನಿಂದ ಫ್ಯಾಟಿಲಿವರ್‌ ಉಂಟಾಗಿದೆ. ಎಲ್ಲದ್ದಕ್ಕೂ ಅತಿ ತೂಕವೇ ಕಾರಣ. ತಜ್ಞ ವೈದ್ಯರನ್ನು ಕಂಡು ಗರ್ಭಕೋಶದ ಒಳಪದರದ ಬಯಾಪ್ಸಿ ಮಾಡಿಸಿಕೊಳ್ಳಿ. ಹೆಚ್ಚಿನ ಸಂದರ್ಭದಲ್ಲಿ ಇಂತಹ ಸಮಸ್ಯೆಗೆ ಗರ್ಭಕೋಶ ತೆಗೆಯುವ ಅಗತ್ಯ ಬರುವುದೇ ಇಲ್ಲ.  ಕಡಿಮೆ ಕೊಬ್ಬು, ಹೆಚ್ಚು  ಪ್ರೋಟಿನ್‌ಯುಕ್ತ ಆಹಾರ ಸೇವಿಸಿ. ಹಸಿರು ಸೊಪ್ಪು, ತರಕಾರಿಗಳನ್ನು ಸೇವಿಸಿ. ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಿ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT