ಯಯೋರೇವ ಸಮಂ ವಿತ್ತಂ ಯಯೋರೇವ ಸಮಂ ಶ್ರುತಮ್ ।

ತಯೋರ್ವಿವಾಹಃ ಸಖ್ಯಂ ಚ ನ ತು ಪುಷ್ಟವಿಪುಷ್ಟಯೋಃ ।।

ಇದರ ತಾತ್ಪರ್ಯ ಹೀಗೆ:

‘ಯಾರಿಗೆ ಹಣ ಮತ್ತು ವಿದ್ಯೆ ಸಮಾನವಾಗಿದೆಯೋ ಅಂಥವರ ನಡುವೆ ಮಾತ್ರ ಮದುವೆಯಾಗಲೀ ಸ್ನೇಹವಾಗಲೀ ಸರಿ; ಹೆಚ್ಚು ಕಡಿಮೆ ಇರತಕ್ಕವರಲ್ಲಿ ಇವೆರಡು ಪ್ರಶಸ್ತವಲ್ಲ.’

ಸ್ನೇಹ–ಸಂಬಂಧಗಳು ಯಾವಾಗ ಊರ್ಜಿತವಾಗಬಲ್ಲವು ಎಂಬ ಸೂಕ್ಷ್ಮವನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.

ಸ್ನೇಹ ಹೇಗೆ ಆರಂಭವಾಗುತ್ತದೆ – ಎಂದು ಹೇಳಲಾಗುವುದಿಲ್ಲ. ಆರಂಭದಲ್ಲಿ ಸ್ನೇಹ ಚೆನ್ನಾಗಿರುತ್ತದೆ. ಆದರೆ ಕ್ರಮೇಣ ಅದು ಕೆಡುವ ಸಂದರ್ಭಗಳು ಹೆಚ್ಚುತ್ತಹೋಗುತ್ತವೆ. ಎಲ್ಲ ಸ್ನೇಹಗಳೂ ಕೆಡುತ್ತವೆ ಎಂದೇನಲ್ಲ; ಆದರೆ ಹಲವು ಸ್ನೇಹಗಳಂತೂ ಕೆಡುವುದು ನಿಜ. ಸ್ನೇಹ ಕೆಡುವುದಕ್ಕೆ ಪ್ರಧಾನ ಕಾರಣಗಳನ್ನು ಸುಭಾಷಿತ ಗುರುತಿಸಿದೆ; ಅವೇ ಹಣ ಮತ್ತು ವಿದ್ಯೆ.

ಹಣ ಇದ್ದವನು ಮತ್ತು ಹಣ ಇಲ್ಲದವನು – ಇವರಿಬ್ಬರ ನಡುವೆ ಏರ್ಪಟ್ಟ ಸ್ನೇಹ ಹೆಚ್ಚು ದಿನ ಉಳಿಯಲಾರದು; ಹೀಗೆಯೇ ವಿದ್ಯಾವಂತ ಮತ್ತು ಅವಿದ್ಯಾವಂತ – ಇವರಿಬ್ಬರ ನಡುವೆಯೂ ಸ್ನೇಹ ಉಳಿಯಲಾರದು – ಎನ್ನುತ್ತಿದೆ ಸುಭಾಷಿತ. ಹೀಗಾಗಿ ಹಣ ಮತ್ತು ವಿದ್ಯೆಯಲ್ಲಿ ಸರಿಸಮಾನರೊಡನೆ ಮಾತ್ರ ಸ್ನೇಹವಾಗುವುದು ಹೆಚ್ಚು ಫಲಕಾರಿ ಎಂದು ಅದು ಅಭಿಪ್ರಾಯಿಸಿದೆ.

ಮದುವೆಯ ಬಗ್ಗೆಯೂ ಸುಭಾಷಿತ ಇದೇ ಮಾನದಂಡವನ್ನು ಅನುಸರಿಸಿ ಹೇಳಿದೆ; ಹಣ ಮತ್ತು ವಿದ್ಯೆಯಲ್ಲಿ ಸಮಾನರಾಗಿರುವ ನಡುವೆ ಮದುವೆ ನಡೆಯವುದು ಸೂಕ್ತ.

ಇಂದು ಹಲವು ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿರುವುದು ಸುಳ್ಳಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ಹಣ ಮತ್ತು ವಿದ್ಯೆಯೂ ಇದಕ್ಕೆ ಪ್ರಮುಖ ಕಾರಣಗಳು ಎಂಬುದೂ ಸುಳ್ಳಲ್ಲ.

ಈ ಶ್ಲೋಕ ಮಹಾಭಾರತದಲ್ಲಿರುವುದು. ಎಂದರೆ ಆ ಕಾಲದಲ್ಲಿಯೂ ಮದುವೆಗಳಲ್ಲಿ ಸಮಸ್ಯೆಗಳು ಇರುತ್ತಿದ್ದವು ಎಂದು ಇದರಿಂದ ಅರ್ಥಮಾಡಿಕೊಳ್ಳಬಹುದು. ಮದುವೆ ಕೂಡ ಸ್ನೇಹದ ಒಂದು ಸ್ವರೂಪವೇ ಹೌದು. ಹೀಗಾಗಿ ಸ್ನೇಹಕ್ಕೆ ತೊಂದರೆಗಳಾಗಬಹುದಾದಂಥವು ಮದುವೆಯ ಬಾಂಧವ್ಯದಲ್ಲೂ ಅಡ್ಡಿಗಳಾಗುವುದು ಸಹಜವೇ. ಸ್ನೇಹದಲ್ಲಾಗಲೀ ದಾಂಪತ್ಯದಲ್ಲಾಗಲೀ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದು ಮುಖ್ಯ; ಹೊಂದಾಣಿಕೆ ಮುಖ್ಯ. ಆದರೆ ಇಂಥ ಸೌಹಾರ್ದವನ್ನು ಹಣ ಮತ್ತು ವಿದ್ಯೆ ಕೆಡಿಸಬಲ್ಲದು ಎನ್ನುತ್ತಿದೆ ಸುಭಾಷಿತ.

ಹಣ ಇಬ್ಬರ ನಡುವೆ ಸಮಾನತೆಯನ್ನು ಕೆಡಿಸಬಲ್ಲದು; ವಿದ್ಯೆ ಇಬ್ಬರ ನಡುವೆ ಅಹಂಕಾರವನ್ನು ಹುಟ್ಟಿಸಬಹುದು. ಹೀಗಾಗಿ ಸ್ನೇಹದಲ್ಲಾಗಲೀ ದಾಂಪತ್ಯದಲ್ಲಾಗಲೀ ಇವೆರಡರ ಅನವಶ್ಯಕ ಪ್ರವೇಶ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ನೇಹ ಮತ್ತು ಮದುವೆ – ಎರಡೂ ಮುರಿದು ಬೀಳುವುದು ದಿಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.