ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಾಚರಣೆಯಿಂದ ಬದುಕು ಸಾರ್ಥಕ

ಅಕ್ಷರ ಗಾತ್ರ

ಪ್ರಪಂಚದಲ್ಲಿರುವ ಜೀವಿಗಳಲ್ಲಿ ಮನುಷ್ಯನು ಅತ್ಯಂತ ಶ್ರೇಷ್ಠನೆಂದು ಪರಿಗಣಿಸಲ್ಪಟ್ಟಿದ್ದಾನೆ. ಇಂತಹ ಮನುಷ್ಯ ಜನ್ಮವನ್ನು ಪ್ರತಿಯೊಬ್ಬರೂ ಸಾರ್ಥಕಪಡಿಸಿಕೊಳ್ಳಬೇಕು. ಧರ್ಮಾಚರಣೆಯಿಮದ ಮಾತ್ರವೇ ಇದು ಸಾರ್ಥಕವಾಗುತ್ತದೆ. ಹಾಗಾಗಿ, ಎಲ್ಲರೂ ಧರ್ಮಾಚರಣೆ ಮಾಡಬೇಕು. ಅಧರ್ಮ ಮಾರ್ಗಕ್ಕೆ ಹೋಗಬಾರದು. ದೇವರಲ್ಲಿ ನಂಬಿಕೆಯನ್ನಿಟ್ಟುಕೊಂಡಿರಬೇಕು. ಸತ್ಪುರುಷರ ಸಹವಾಸ ಮಾಡಬೇಕು. ತಂದೆ– ತಾಯಿ ಮತ್ತು ಗುರುಗಳನ್ನು ದೇವರಂತೆ ಕಾಣಬೇಕು. ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವರ್ತಿಸಬೇಕು. ಯಾರಿಗೂ ಯಾವತ್ತೂ ತೊಂದರೆ ಮಾಡಬಾರದು.

ಇನ್ನೊಬ್ಬರಿಗೆ ಸಾಧ್ಯವಾದಷ್ಟು ಉಪಕಾರವನ್ನು ಮಾಡಬೇಕು. ನಮ್ಮ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಗೌರವ ಹೊಂದಿರಬೇಕು. ಅತಿಯಾದ ಆಸೆಯನ್ನು ಬಿಟ್ಟು ದೇವರು ನಮಗೆ ಕೊಟ್ಟಿರುವ ಪದಾರ್ಥಗಳಿಂದ ತೃಪ್ತಿಪಡುವ ಗುಣವನ್ನು ಅಳವಡಿಸಿಕೊಳ್ಳಬೇಕು. ಇನ್ನೊಬ್ಬರನ್ನು ನೋಡಿ ಅಸೂಯೆಪಡುವ ಸ್ವಭಾವ ಬಿಡಬೇಕು. ನಮಗೆ ಸಿಕ್ಕಿರುವ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡೆ ಒಳ್ಳೆಯ ಕೆಲಸಗಳಿಗಾಗಿ ವಿನಿಯೋಗಿಸಬೇಕು. ನಾವು ಒಳ್ಳೆಯ ಮಾತ್ರದಲ್ಲಿರುವುದಲ್ಲದೆ ನಮ್ಮ ಮಕ್ಕಳಿಗೂ ಒಳ್ಳೆಯ ಮಾರ್ಗವನ್ನು ತೋರಿಸಬೇಕು. ಈ ರೀತಿಯಾಗಿ ನಡೆದುಕೊಂಡಾಗ ಮಾತ್ರವೇ ನಮ್ಮ ಜೀವನವು ಸಾರ್ಥಕವಾಗುತ್ತದೆ.

ಹಿಂದೆಂದೂ ಕಂಡುಕೇಳರಿಯದ ಕೊರೊನಾ ಎಂಬ ವ್ಯಾಧಿಯು ವಿಶ್ವದಲ್ಲೆಲ್ಲಾ ವ್ಯಾಪಿಸಿರುವುದು ನಮಗೆ ತುಂಬಾ ಖೇದವನ್ನುಂಟು ಮಾಡಿದೆ. ಸುಖ– ಶಾಂತಿಗಳಿಂದ ಕಂಗೊಳಿಸುತ್ತಿದ್ದ ನಮ್ಮ ಈ ಪವಿತ್ರ ಭಾರತವು ಈ ವ್ಯಾಧಿಯ ದೆಸೆಯಿಂದ ಕಂಗೆಟ್ಟಿರುವುದು ಬಹಳ ಬೇಸರದ ವಿಷಯವಾಗಿದೆ. ಆದಷ್ಟು ಬೇಗ ಈ ಭಯಂಕರ ರೋಗವು ನಿರ್ಮೂಲನೆಯಾಗಿ ಎಲ್ಲರಿಗೂ ಕ್ಷೇಮವಾಗಲೆಂದು ನಾವು ಪ್ರತಿದಿನವೂ ಶ್ರೀಶಾರದಾಚಂದ್ರಮೌಳೀಶ್ವರರನ್ನು ಪ್ರಾರ್ಥಿಸುತ್ತಿದ್ದೇವೆ.

ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳು,
ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT