ಗಂಗಾವತಿ: ನಗರದ ಗ್ರಾಮ ದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವವು ಶುಕ್ರವಾರ ಅದ್ದೂರಿಯಾಗಿ ಜರುಗಿತು.

ದುರ್ಗಾದೇವಿ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ದೇವಿ ಮೂರ್ತಿಗೆ ಬೆಳಗ್ಗೆಯಿಂದ ಅಭಿಷೇಕ, ಹೋಮ ಹವನ, ಅಲಂಕಾರ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ನಂತರ ದೇವಿ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಯಲ್ಲಿ ಕಳಶ ಕುಂಭಗಳೊಂದಿಗೆ ಮೆರವಣಿಗೆಯನ್ನು ಮಾಡಲಾಯಿತು. ರಥೋತ್ಸವಕ್ಕೆ ಪಟ ಏರಿಸುವುದು ಸೇರಿದಂತೆ ಸಂಪ್ರದಾಯಕವಾಗಿ ಮಡಿ ತೇರು ಎಳೆಯಲಾಗಿಯಿತು.

ಸಂಜೆ ತಾಲ್ಲೂಕು ಸೇರಿದಂತೆ ನಾನಾ ಗ್ರಾಮಗಳಿಂದ ಆಗಮಿಸಿದ ನೂರಾರು ಭಕ್ತರ ಸಮ್ಮುಖದಲ್ಲಿ ದೇವಿಯ ರಥೋತ್ಸವವು ಪ್ರಮುಖ ವೃತ್ತಗಳಾದ ಗಣೇಶ ಸರ್ಕಲ್, ಗಾಂಧಿ ಸರ್ಕಲ್‍ಗಳ ಮೂಲಕ ಬಸವಣ್ಣ ಸರ್ಕಲ್‍ನವರೆಗೆ ಅದ್ದೂರಿಯಾಗಿ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.