ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ | ಸಾಲಿಗ್ರಾಮ ಶತಲಿಂಗ ದರ್ಶನ

Last Updated 19 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಮಹಾ ಶಿವರಾತ್ರಿ ಪ್ರಯುಕ್ತ ಫೆ. 21ರಂದು ಯಶವಂತಪುರದ ಶ್ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಅಪರೂಪದ ಸಾಲಿಗ್ರಾಮ ಶತಲಿಂಗ ದರ್ಶನವನ್ನು ಏರ್ಪಡಿಸಲಾಗಿದೆ.

ಶೈವಾಗಮ ಪರಂಪರೆಗೆ ಅನುಗುಣವಾಗಿ ಪ್ರತಿಷ್ಠಾಪಿಸಿರುವ ಸಾಲಿಗ್ರಾಮ ಶತಲಿಂಗಗಳಿಗೆ ಭಕ್ತಾದಿಗಳಿಂದಲೇ ಕ್ಷೀರಾಭಿಷೇಕ, ಬಿಲ್ವಾರ್ಚನೆ ಹಾಗೂ ರುದ್ರ ನಮಕ - ಚಮಕ ಪಾರಾಯಣವನ್ನು ಏರ್ಪಡಿಸಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಸಾಲಿಗ್ರಾಮ ಶತಲಿಂಗಗಳ ವೈಶಿಷ್ಟ್ಯ
ಹಿಮಾಲಯ ತಪ್ಪಲಲ್ಲಿ ಹರಿಯುವ ಪವಿತ್ರ ಗಂಡಕಿ ನದಿಯಿಂದ ಸಾಲಿಗ್ರಾಮ ಶತಲಿಂಗಗಳನ್ನು ಸಂಗ್ರಹಿಸಿ ತಂದು, ಪ್ರತಿಷ್ಠಾಪಿಸಲಾಗಿದೆ. ನದಿ ನೀರು ಹರಿಯುವ ರಭಸಕ್ಕೆ ಸಿಲುಕಿ ನದಿಯೊಳಗಿನ ಶಿಲೆಗಳು ಲಿಂಗರೂಪದಲ್ಲಿ ನೈಸರ್ಗಿಕವಾಗಿ ತನ್ನ ಸೃಷ್ಟಿ ಕಂಡುಕೊಂಡಿರುವ ಸಾಲಿಗ್ರಾಮ ಶಿವಲಿಂಗಗಳು ವಿವಿಧ ವರ್ಣಗಳಲ್ಲಿವೆ. ಸಾಲಿಗ್ರಾಮ ಶಿಲೆಗಳು ಹೆಚ್ಚಾಗಿ ನೇಪಾಳದಲ್ಲಿ ದೊರೆಯುತ್ತವೆ. ಹಿಂದೂ ಸಂಸ್ಕೃತಿಯಲ್ಲಿ ಸಾಲಿಗ್ರಾಮಗಳ ಆರಾಧನೆಗೆ ವಿಶಿಷ್ಟ ಸ್ಥಾನವಿದೆ.

ಶುಕ್ರವಾರ ಬೆಳಗ್ಗೆ10.00 ಗಂಟೆಗೆ ಗಿರಿಜಾ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ. ಮಹಾ ಶಿವರಾತ್ರಿ ಜಾಗರಣೆ ಪ್ರಯುಕ್ತ ನಾಡಿನ ಪ್ರಸಿದ್ಧ ಕಲಾವಿದರಿಂದ ಅಹೋರಾತ್ರಿ ಸಂಗೀತ ನೃತ್ಯೋತ್ಸವವಿರುತ್ತದೆ.

ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭ. ನರಸಿಂಹಯ್ಯ ಮತ್ತು ವೆಂಕಟೇಶ್ ತಂಡದಿಂದ ಕರ್ನಾಟಕ ಸಂಗೀತ ನಾದಸ್ವರ, ದಾತಾರ್ ಇನ್‍ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆಟ್ರ್ಸ್ ಕಲಾವಿದರಿಂದ ಭರತನಾಟ್ಯ ಮತ್ತು ಮೋಹಿನಿಯಾಟ್ಟಂ, 'ನಾಟ್ಯಾಂತರಂಗ' ಕಲಾವಿದರಿಂದ ಭರತನಾಟ್ಯ ಕಥಕ್ ನೃತ್ಯ, 'ನರ್ತನಪ್ರಿಯ' ಕಲಾವಿದರಿಂದ ಭರತನಾಟ್ಯ, 'ನಂದಿ ತಾಳವಾದ್ಯ' ತಂಡದಿಂದ ಕರ್ನಾಟಕ ಸಂಗೀತ ತಾಳವಾದ್ಯ,'ಕರ್ನಾಟಕ ಕಲಾದರ್ಶಿನಿ' ಕಲಾವಿದರಿಂದ 'ದಕ್ಷ ಯಜ್ಞ ಗಿರಿಜಾ ಕಲ್ಯಾಣ' ಯಕ್ಷಗಾನ ಪ್ರಸಂಗ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT