ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಸೇವೆ ಜೀವನದ ಭಾಗವಾಗಲಿ’

ಬೀರಲಿಂಗೇಶ್ವರ ಜಾತ್ರೆ: ಉಚಿತ ಸಾಮೂಹಿಕ ವಿವಾಹ
Last Updated 22 ಫೆಬ್ರುವರಿ 2020, 11:01 IST
ಅಕ್ಷರ ಗಾತ್ರ

ಹನುಮಸಾಗರ: ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ ಶುಕ್ರವಾರ ಬೀರಲಿಂಗೇಶ್ವರ ಜಾತ್ರಾ ಮಹತೋತ್ಸವ ಹಾಗೂ ಇಟಗಿ ಭೀಮಾಂಬಿಕೆದೇವಿ ಪುರಾಣ ಮಹಾಮಂಗಲದ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿ,‘ಪ್ರತಿಯೊಬ್ಬರ ಬದುಕು ಸಾರ್ಥಕವಾಗಬೇಕಾದರೆ ಉತ್ತಮ ವಿಚಾರ, ಸಂಸ್ಕೃತಿ, ದೈವಿಕ ಆರಾಧನೆ ಅಗತ್ಯ. ಸಮಾಜ ಸೇವೆಯು ಬದುಕಿನ ಒಂದು ಭಾಗವಾಬೇಕು. ಎಲ್ಲ ಸಮುದಾಯಗಳೊಂದಿಗೆ ಸಹಬಾಳ್ವೆ ನಡೆಸುವಂಥ ವಾತಾವರಣ ನಿರ್ಮಾಣಗೊಳ್ಳಬೇಕು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ,‘ಉಚಿತ ಸಾಮೂಹಿಕ ಮದುವೆಗಳಲ್ಲಿ ದುಂದುವೆಚ್ಚ ಇರುವುದಿಲ್ಲ. ಬಡ ಕುಟುಂಬಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮನೆಯಲ್ಲಿಯೇ ಅವರಿಗೆ ಸಂಸ್ಕಾರ ನೀಡಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುತ್ತಾರೆ’ ಎಂದರು.

ಶಾಸಕ ಅಮರೇಗೌಡ ಬಯ್ಯಾಪೂರ ಮಾತನಾಡಿ,‘ಇಂಥದ್ದೇ ಜಾತಿಯಲ್ಲಿ ಹುಟ್ಟಬೇಕು ಎಂದುಕೊಂಡು ಹುಟ್ಟುವುದು ಯಾರಿಗೂ ಸಾಧ್ಯವಾಗುವುದಿಲ್ಲ. ಹುಟ್ಟಿನ ನಂತರ ಅವರವರ ಕಾಯಕ ವೃತ್ತಿಗಳಿಂದ ಜಾತಿಯನ್ನು ಗುರುತಿಸುತ್ತ ಬರಲಾಗಿತ್ತು. ಬಸವಣ್ಣನವರ ಕಾಯಕ ತತ್ವದಲ್ಲಿ ಪ್ರತಿಯೊಬ್ಬರೂ ನಂಬಿಕೆ ಇರಿಸಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕು’ ಎಂದು ಹೇಳಿದರು.

ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ, ತಹಶೀಲ್ದಾರ್ ಎಂ.ಸಿದ್ದೇಶ ಮಾತನಾಡಿದರು. ಒಂಭತ್ತು ಜೋಡಿ ಹಸಮಣೆ ಹತ್ತಿದವು.

ಕೊರಡಕೇರಾದ ಸಿದ್ದಯ್ಯ ಗುರುವಿನ ಉಪಸ್ಥಿತರಿದ್ದರು. ತಾಲ್ಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಭರಮಪ್ಪ ಬಿಂಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಭೀಮಣ್ಣ ಅಗಸಿಮುಂದಿನ, ಕೆ.ಮಹೇಶ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ವಾಲ್ಮೀಕಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರ, ವಿಠ್ಠಲಶ್ರೇಷ್ಠಿ ನಾಗೂರ, ವಿಶ್ವನಾಥ ಕನ್ನೂರ, ಫಕೀರಪ್ಪ ಚಳಗೇರಿ, ಪರಸಪ್ಪ ಕತ್ತಿ, ಲೆಂಕಪ್ಪ ವಾಲಿಕಾರ, ಅಧ್ಯಕ್ಷ ಚಂದಪ್ಪ ಹಕ್ಕಿ, ಪಿಡಿಒ ಬಸವರಾಜ ಸಂಕನಾಳ, ಸಕ್ರಪ್ಪ, ಬಸಪ್ಪ, ಡಾ. ಬಸವರಾಜ ಅಕ್ಕಿ, ಡಾ.ಮಾರುತಿಸಾ, ಎಎಸ್ಐ ಕಾಸೀಂಸಾಬ, ಮೌಲಾಲಿ, ಬಸವರಾಜ ದ್ಯಾವಣ್ಣವರ ಹಾಗೂ ಹನುಮಂತಪ್ಪ ಬಿಂಗಿ ಇದ್ದರು.

ನಾಗರಾಜ ಹಕ್ಕಿ ಸ್ವಾಗತಿಸಿದರು. ಪರಶುರಾಮ ವಣಗೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT