ಬುಧವಾರ, ಆಗಸ್ಟ್ 10, 2022
23 °C

ಭತವಂತನ ಸ್ಮರಿಸಿದರೆ ಸಂಸಾರ ಸಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಲಲ್ಲಿ ಕಟ್ಟಿದ ಗುಂಡು

ಕೊರಳಲ್ಲಿ ಕಟ್ಟಿದ ಬೆಂಡು

ತೇಲಲಿಯದು ಗುಂಡು

ಮುಳಗಲೀಯದು ಬೆಂಡು

ಇಂತಪ್ಪ ಸಂಸಾರ ಶರಧಿಯ ದಾಂಟಿಸಿ

ಕಾಲಾಂತಕನೇ ಕಾಯೋ

ಕೂಡಲಸಂಗಮ ದೇವಾ...

ಸಂಸಾರ ಎಂಬುದು ತುಂಬಾ ಜಂಜಡದಿಂದ ಕೂಡಿದೆ. ನಾವು ಏನನ್ನು ಬಯಸುತ್ತೇವೆಯೋ ಅದು ಸಿಗುವುದಿಲ್ಲ. ಯಾವುದನ್ನು ಬಯಸುವುದಿಲ್ಲವೋ ಅದು ಸಿಗುತ್ತದೆ. ಉದಾಹರಣೆಗೆ ಕಬ್ಬಿಣದ ಗುಂಡು ತುಂಬಾ ಭಾರವಾಗಿರುತ್ತದೆ. ಅದನ್ನು ನಿರಿನಲ್ಲಿ ತೇಲಿಸಲಾಗುವುದಿಲ್ಲ. ಅದೇ ರೀತಿ ಬೆಂಡನ್ನು ಮುಳುಗಿಸಲು ಆಗುವುದಿಲ್ಲ. ಸಂಸಾರ ಕೂಡ ಸಂಕಷ್ಟಗಳಿಂದ ಕೂಡಿರುತ್ತದೆ. ಭಕ್ತಿಯಿಂದ ಭಗವಂತನನ್ನು ಸ್ಮರಿಸಿದರೆ ಅದು ಸಸಾರ (ಸರಳ)ವಾಗುತ್ತದೆ. ಭಗವಂತನೇ ಎಲ್ಲದಕ್ಕೂ ಕಾರಣೀಕರ್ತನು. ಆತನೇ ಈ ಭವಸಂಸಾರದಿಂದ ಸಂರಕ್ಷಣೆ ಮಾಡಬೇಕು ಎಂದು ಬಸವಣ್ಣ ತಿಳಿಸುತ್ತಾರೆ. ಅವರ ಆಶಯದಂತೆ ನಡೆದುಕೊಂಡರೆ ಜೀವನ ಸುಗಮವಾಗಿ ನಡೆಯುತ್ತದೆ. ದೇವರ ನಾಮ ಸ್ಮರಣೆಯನ್ನು ಬಿಡಬಾರದು.

(ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ, ಬೆಳಗಾವಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.