ಶುಕ್ರವಾರ, ಸೆಪ್ಟೆಂಬರ್ 25, 2020
25 °C

ವಚನಾಮೃತ | ತನ್ನ ತಾನರಿತರೇ ತನ್ನರಿವೇ ತನಗೆ ಗುರು

ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ Updated:

ಅಕ್ಷರ ಗಾತ್ರ : | |

Prajavani

ತಪ್ಪು ಮಾಡುವುದು ಮಾನವನ ಸ್ವಭಾವ. ಆದರೆ, ತಾನು ಮಾಡಿದ ತಪ್ಪನ್ನು ತಿಳಿದ ಮೇಲೆಯೂ ಅದನ್ನು ತಿದ್ದಿಕೊಂಡು ನಡೆಯದಿದ್ದರೆ ಮಾನವನಾಗಿ ಜನಿಸಿದ್ದು ವ್ಯರ್ಥವಾಗುತ್ತದೆ. ಅದಕ್ಕೆ ಬಸವಣ್ಣನವರು ‘ಅರಿದೊಡೆ ಶರಣ ಮರೆತೊಡೆ ಮಾನವ’ ಎಂದು ಬೋಧಿಸಿದ್ದಾರೆ.

ಅದು ಹೇಗೆಂದರೆ ನಾವು ರಾತ್ರಿಯಲ್ಲಿ ಬಾವಿ ಕಂಡಿರುತ್ತೇವೆ. ರಾತ್ರಿಯಲ್ಲಿ ಕಣ್ಣು ಕಾಣಿಸದಿದ್ದರೂ ಅಲ್ಲಿ ಬಾವಿ ಇರುವುದು ನಮಗೆ ತಿಳಿದಿರುತ್ತದೆ. ಕತ್ತಲಲ್ಲಿ ಕಂಡ ಬಾವಿಗೆ ಹಗಲು ಹೋಗಿ ಬೀಳುತ್ತೇವೆ ಎಂದರೆ ಅದರಷ್ಟು ಮುರ್ಖತನ ಮತ್ತೊಂದಿಲ್ಲ.

ಮಾನವನ ಜೀವನವು ಅರಿವಿನಿಂದ ಕೂಡಿದೆ. ಜ್ಞಾನವುಳ್ಳ ಮಾನವನು ಕತ್ತಲಲ್ಲಿಯೂ ಅರಿತುಕೊಂಡು ಬೆಳಕಿನಲ್ಲಿ ತಪ್ಪು ಮಾಡುವುದು ಅಪರಾದವೇ ಸರಿ. ತನ್ನ ಕಾಯಕದತ್ತ ಗುರಿಯಿರಬೇಕು. ಮಾಯಾ, ಮೋಹಗಳಿಂದ ಕೂಡಿದ ಸಂಸಾರವನ್ನು ಅರಿವಿನ ಜಾಣತನದಿಂದ ನಡೆಸಬೇಕು. ನಶ್ವರವಾದ ಶರೀರವನ್ನು ಅಶಾಶ್ವತವಾದ ಸಂಪತ್ತನ್ನು ನೆಚ್ಚಿ ಮಾನವ ಜನ್ಮವನ್ನು ಹಾನಿ ಮಾಡಿಕೊಳ್ಳಬಾರದು. ‘ಮಾನವ ಜನ್ಮ ದೊಡ್ಡದ ಹಾನಿ ಮಾಡಿಕೊಳ್ಳಲು ಬೇಡಿರೊ ಹುಚ್ಚಪ್ಪಗಳಿರಾ’ ಎಂದು ಪುರಂದರ ದಾಸರು ಹಾಡಿದ್ದಾರೆ.
ನಾನು ನನ್ನದೆಂಬ ಮಮಕಾರವನ್ನು ಬಿಟ್ಟು ದೇವರಲ್ಲಿ ದೃಡ ನಂಬಿಕೆಯಿಟ್ಟು ಮುಕ್ತನಾಗಬೇಕೆನ್ನುವ ಹಂಬಲವುಳ್ಳವನಾಗಬೇಕು. ಅಂದಾಗ ಮಾತ್ರ ಜೀವನ ಪಾವನವಾಗುವುದು.

ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.