ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | 2023 ಮಾರ್ಚ್ 26, ಭಾನುವಾರದಿಂದ ಏಪ್ರಿಲ್‌ 01, ಶನಿವಾರದವರೆಗೆ

Last Updated 25 ಮಾರ್ಚ್ 2023, 18:30 IST
ಅಕ್ಷರ ಗಾತ್ರ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಜೀವನದಲ್ಲಿನ ಹೊಸ ಹೊಸ ಆಕಾಂಕ್ಷೆಗಳು ಹಾಗೂ ಗುರಿಗಳನ್ನು ಅರಿತು ನಡೆಯುವುದು ಮುಖ್ಯ. ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ನೀವು ನಡೆಯುವುದು ಸರಿಯಲ್ಲ. ಆಟೋಮೊಬೈಲ್ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಛಾಯಾಗ್ರಾಹಕರಿಗೆ ಹೆಚ್ಚು ಕೆಲಸ ದೊರೆಯುವುದರ ಜೊತೆಗೆ ಸಂಭಾವನೆಯೂ ಹೆಚ್ಚುತ್ತದೆ. ನಿಮ್ಮ ಆಪ್ತರಿಂದಲೇ ಮೋಸ ಹೋಗುವ ಸಂದರ್ಭವಿದೆ ಎಚ್ಚರ ವಹಿಸಿರಿ. ವ್ಯವಹಾರದ ಕೆಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳು ದೊರೆಯುತ್ತವೆ. ಜನರನ್ನು ಸರಿಯಾಗಿ ಸಂಭಾಳಿಸುವ ಶಕ್ತಿಯನ್ನು ನೀವು ಬೆಳೆಸಿಕೊಳ್ಳಿರಿ. ಲೇವಾದೇವಿ ವ್ಯವಹಾರಗಳು ಖಂಡಿತ ನಷ್ಟ ಉಂಟು ಮಾಡುತ್ತವೆ. ಧನಾದಾಯವು ತಕ್ಕಮಟ್ಟಿಗೆ ಸುಧಾರಿಸುತ್ತದೆ. ಕಾರ್ಮಿಕರಿಗೆ ಹೆಚ್ಚು ಕೆಲಸಗಳು ದೊರೆತು ಆದಾಯ ಹೆಚ್ಚುತ್ತದೆ.

ವೃಷಭರಾಶಿ(ಕೃತಿಕಾ 2,3,4 ರೋಹಿಣಿ ಮೃಗಶಿರಾ1,2)

ರೈತರಿಗೆ ಉತ್ತಮ ಬೆಳೆಯನ್ನು ಪಡೆಯುವ ಯೋಗವಿದೆ. ಅನಾರೋಗ್ಯದಿಂದ ಹೊರಬರಲು ಚಿಕಿತ್ಸೆಯ ಜೊತೆಗೆ ಮಾನಸಿಕ ಧೈರ್ಯವು ಸಹ ಬಹಳ ಮುಖ್ಯ. ಕಚೇರಿ ಕೆಲಸದ ನಿಮಿತ್ತ ಕೆಲವರಿಗೆ ವಿದೇಶ ಪ್ರಯಾಣ ಮಾಡುವ ಯೋಗವಿದೆ. ಗಣ್ಯ ವ್ಯಕ್ತಿಗಳ ಪರಿಚಯ ಆಗುವ ಸಂದರ್ಭವಿದೆ. ಇದರಿಂದ ನಿಮ್ಮ ಸ್ವಂತ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ಪರರಿಂದ ಟೀಕೆ ಬಂದರೂ ಲೆಕ್ಕಿಸದೆ ಮುನ್ನಡೆಯಿರಿ. ರಾಜಕೀಯದವರು ತಮ್ಮ ಅನುಯಾಯಿಗಳನ್ನು ಸರಿಯಾಗಿ ಕಾಪಾಡಿ ಕೊಳ್ಳುವುದು ಉತ್ತಮ. ಕಟ್ಟಡ ನಿರ್ಮಾಣ ಕಾರ್ಯ ಮಾಡುವವರು ಖರ್ಚು ವೆಚ್ಚಗಳ ಬಗ್ಗೆ ಸರಿಯಾಗಿ ಅರಿತು ನಂತರ ಬೆಲೆ ಹೇಳುವುದು ಉತ್ತಮ. ಹಣದ ಒಳಹರಿವು ಮಧ್ಯಮಗತಿಯಲ್ಲಿ ರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಸಾಕಷ್ಟು ಮುನ್ನಡೆ ಇರುತ್ತದೆ.

ಮಿಥುನ ರಾಶಿ(ಮೃಗಶಿರಾ 3,4 ಆರಿದ್ರಾ ಪುನರ್ವಸು 1,2,3)

ಅನಿವಾರ್ಯ ಕಾರಣಗಳಿಂದ ನಿಮ್ಮ ಕೆಲವೊಂದು ವ್ಯವಹಾರದಲ್ಲಿನ ರೀತಿ ರಿವಾಜುಗಳನ್ನು ಬದಲಾವಣೆ ಮಾಡಿಕೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಅಡೆತಡೆಗಳು ಎದುರಾಗಬಹುದು. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಅನ್ಯರಿಗೆ ಸಲಹೆ ಕೊಡುವ ಮುನ್ನ ಸಾಕಷ್ಟು ಆಲೋಚನೆ ಮಾಡಿರಿ. ಕ್ರೀಡಾಪಟುಗಳಿಗೆ ತಮ್ಮ ಆಸೆಯಂತೆ ಕಲಿಯುವ ಅವಕಾಶ ದೊರೆಯುತ್ತದೆ. ಸಿದ್ಧಪಡಿಸಿದ ಬಟ್ಟೆಗಳನ್ನು ವಿದೇಶಕ್ಕೆ ರಫ್ತು ಮಾಡುವವರಿಗೆ ಹೆಚ್ಚಿನ ವ್ಯವಹಾರ ನಡೆದು ಹೊಸ ಅವಕಾಶಗಳು ದೊರೆಯುತ್ತವೆ. ನಿಮ್ಮ ಖರ್ಚನ್ನು ಸರಿಯಾಗಿ ನಿಭಾಯಿಸುವುದು ಅತಿಮುಖ್ಯ. ಮಕ್ಕಳ ಬೆಳವಣಿಗೆ ವಿಚಾರದಲ್ಲಿ ಚಿಂತೆ ಮೂಡುತ್ತದೆ. ಸಂಗಾತಿಗೆ ಉದ್ಯೋಗ ದೊರೆಯುವ ಎಲ್ಲ ರೀತಿಯ ಲಕ್ಷಣಗಳಿವೆ. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆ ಆಗಿ ಸಂತಸವೆನಿಸುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರು ತಮ್ಮ ಸ್ವಂತ ಉದ್ದಿಮೆಯನ್ನು ಸ್ಥಾಪಿಸಬಹುದು. ತೋಟಗಾರಿಕೆ ಮಾಡುವವರಿಗೆ ಕೀಟಬಾಧೆ ಎದುರಾಗಬಹುದು. ಇಂಧನ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರವಾಗಿ ಲಾಭ ಹೆಚ್ಚುತ್ತದೆ. ಅನಾವಶ್ಯಕ ಪ್ರಯಾಣದಿಂದ ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಎಚ್ಚರವಹಿಸಿರಿ. ಉದ್ದಿಮೆಗಳಲ್ಲಿ ಅನುಭವ ಹೊಂದಿದ ಕೆಲವು ಕೆಲಸಗಾರರು ಅಸಹಕಾರ ತೋರಬಹುದು. ಆಸ್ತಿ ಮಾರಾಟ ವಿಚಾರದಲ್ಲಿ ಸ್ವಲ್ಪಮಟ್ಟಿನ ನಷ್ಟದ ಸಾಧ್ಯತೆ ಇದೆ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಕೃಷಿಕರಿಗೆ ಆದಾಯ ಕಡಿಮೆಯಾಗಬಹುದು.

ಸಿಂಹ ರಾಶಿ(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಕಚೇರಿಯಲ್ಲಿ ಅಧಿಕಾರಿಗಳ ಬೆಂಬಲದಿಂದ ಬಡ್ತಿ ದೊರೆಯಬಹುದು. ರಾಜಕೀಯ ವ್ಯಕ್ತಿಗಳು ತಮ್ಮ ಚಟುವಟಿಕೆಗಳಿಗಾಗಿ ಬಿರುಸಿನ ಓಡಾಟ ಮಾಡುವುದು ಅನಿವಾರ್ಯ. ಗೊಂದಲದ ಸಮಯಗಳಲ್ಲಿ ಯಾವ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಖಚಿತವಿಲ್ಲದಿದ್ದರೂ ಬದಲಿ ಅವಕಾಶವನ್ನು ಪರ್ಯಾಯವಾಗಿ ಸಿದ್ಧಪಡಿಸಿಕೊಳ್ಳಿರಿ. ಕುಟುಂಬದವರ ಜೊತೆ ತೀರ್ಥಯಾತ್ರೆ ಮಾಡುವ ಅವಕಾಶವಿರುತ್ತದೆ. ಹೊಸ ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನಗಳು ಈಗ ಫಲ ಕೊಡುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಹಣಕಾಸಿನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಿರಿ. ಅಜೀರ್ಣದಿಂದ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸ ಆಗಬಹುದು. ವ್ಯವಹಾರದಲ್ಲಿ ಪಾಲುದಾರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಒಳ್ಳೆಯದು.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2,3, 4 ಹಸ್ತಾ ಚಿತ್ತಾ 1,2)

ಸಿಹಿ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ವ್ಯವಹಾರ ನಡೆದು ಹೆಚ್ಚು ಲಾಭವಿರುತ್ತದೆ. ರಂಗಭೂಮಿಯ ಕಲಾವಿದರುಗಳಿಗೆ ಒಳ್ಳೆ ರೀತಿಯ ಅವಕಾಶಗಳು ದೊರೆಯುತ್ತವೆ. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಹೆಚ್ಚಿನ ಬೇಡಿಕೆ ಬಂದು ಅವರ ಬೆಳೆಗಳಿಗೆ ಉತ್ತಮ ಮೌಲ್ಯ ದೊರೆಯುತ್ತದೆ. ಅನಿರೀಕ್ಷಿತವಾಗಿ ರಫ್ತು ವ್ಯಾಪಾರದಲ್ಲಿ ನಿಮಗೆ ಪಾಲು ದೊರೆಯಬಹುದು. ಆಲಸ್ಯದಿಂದ ಯಾವುದೇ ಕೆಲಸಗಳನ್ನು ಮುಂದೂಡುವುದು ಬೇಡ. ಉದ್ದಿಮೆದಾರರು ತಮ್ಮ ಸಂಸ್ಥೆಗಳ ಅಭಿವೃದ್ಧಿಗಾಗಿ ಹೆಚ್ಚು ಶ್ರಮ ವಹಿಸುವುದು ಅಗತ್ಯ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕಾಗಿ ಹೆಚ್ಚಿನ ಶ್ರಮ ವಹಿಸಬೇಕಾಗಬಹುದು. ಧನದಾಯವು ಮಧ್ಯಮ ಗತಿಯಲ್ಲಿರುತ್ತದೆ. ಮೀನುಗಾರಿಕೆಯನ್ನು ಮಾಡುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ.

ತುಲಾ ರಾಶಿ(ಚಿತ್ತಾ 3,4 ಸ್ವಾತಿ ವಿಶಾಖ 1,2,3)

ಈ ಹಿಂದೆ ಆದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸುವುದು ಬಹಳ ಒಳ್ಳೆಯದು. ಕಮಿಷನ್ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ ಇರುತ್ತದೆ. ನಿಮ್ಮ ವ್ಯವಹಾರಗಳಲ್ಲಿ ಪಾಲುದಾರರು ನಿಮ್ಮ ಬಗ್ಗೆ ಸಣ್ಣ ಮಾತನ್ನು ಆಡಬಹುದು. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಪರಿಶ್ರಮ ಹಾಕಿ ಕೆಲಸ ಮಾಡುವುದು ಒಳಿತು. ಬಂಡವಾಳ ಹೂಡುವ ಮುಂಚೆ ಸಾಕಷ್ಟು ವಿವೇಚನೆ ಇರಲಿ. ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಮಕ್ಕಳಿಂದ ಅಂತಹ ಗೌರವ ದೊರೆಯುವುದಿಲ್ಲ. ಕೃಷಿಕರಿಗೆ ಹೆಚ್ಚಿನ ಲಾಭವಿರುತ್ತದೆ. ತಾಯಿಯಿಂದ ಸಿಗುತ್ತಿದ್ದ ಸಹಾಯ ನಿಲ್ಲುವ ಸಾಧ್ಯತೆ ಇದೆ. ಸಂಗಾತಿಯ ಕೋಪ ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು. ಹಣಕಾಸಿನ ವ್ಯವಹಾರಗಳು ನಷ್ಟ ತರಬಹುದು.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಸಿವಿಲ್ ಇಂಜಿನಿಯರ್‌ಗಳಿಗೆ ಕೆಲಸದ ಜೊತೆಗೆ ಕೀರ್ತಿ ಒದಗುವ ಸಂದರ್ಭವಿದೆ. ಸಾಕಷ್ಟು ಸಂಪಾದನೆಯಾಗುವ ಕೆಲಸಗಳು ದೊರೆಯಬಹುದು. ಲೆಕ್ಕಪತ್ರ ವ್ಯವಹಾರಗಳನ್ನು ನೋಡುವವರಿಗೆ ಸ್ವಲ್ಪ ಸಂದಿಗ್ಧ ಪರಿಸ್ಥಿತಿಗಳು ಎದುರಾಗಬಹುದು, ತಾಳ್ಮೆಯಿಂದ ಇರುವುದು ಒಳ್ಳೆಯದು. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಕೈಗಾರಿಕಾ ಉದ್ದಿಮೆಗಳನ್ನು ನಡೆಸುವವರಿಗೆ ಬೇಕಾದ ಸವಲತ್ತುಗಳು ಸಿಗುವುದರ ಜೊತೆಗೆ ಅಭಿವೃದ್ಧಿಯನ್ನು ಕಾಣಬಹುದು. ಆಶಿಸುತ್ತಿದ್ದ ಹಣಕಾಸಿನ ನೆರವು ಈಗ ದೊರೆಯುತ್ತದೆ. ಧನಾದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಮಿಶ್ರಲೋಹ ತಯಾರು ಮಾಡುವವರಿಗೆ ಬೇಡಿಕೆಹೆಚ್ಚುತ್ತದೆ. ಆರಕ್ಷಕ ಅಧಿಕಾರಿಗಳಿಗೆ ಕೆಲವೊಮ್ಮೆ ಸರಿತಪ್ಪುಗಳನ್ನು ತೀರ್ಮಾನಿಸುವುದು ಕಷ್ಟವಾಗಬಹುದು. ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಿರಿ.

ಧನಸ್ಸು ರಾಶಿ( ಮೂಲ, ಪೂರ್ವಾಷಾಢ ಉತ್ತರಾಷಾಢ 1 )

ನಿಮ್ಮ ಸಾಮರ್ಥ್ಯ, ದಕ್ಷತೆ ಹಾಗೂ ಸೇವಾ ಮನೋಭಾವದಿಂದಾಗಿ ಸಂಸ್ಥೆಯಲ್ಲಿ ಜವಾಬ್ದಾರಿಯುಳ್ಳ ಹುದ್ದೆ ದೊರಕುವುದು. ಒಂದೆಡೆ ಹಣದ ಉಳಿತಾಯಕ್ಕೆ ಯತ್ನಿಸಿದರೆ ಮತ್ತೊಂದೆಡೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಸರಿಯಾಗಿ ನಿರ್ವಹಣೆ ಮಾಡಿರಿ. ವಕೀಲರಿಗೆ ಹೆಚ್ಚಿನ ದಾವೆಗಳು ದೊರೆತು ಸಂಪಾದನೆ ಹೆಚ್ಚಾಗುತ್ತದೆ. ಕಟ್ಟಡ ಕಾರ್ಮಿಕರಿಗೆ ಉಡುಗೊರೆಯ ಜೊತೆ ಸೂಕ್ತ ಪ್ರೋತ್ಸಾಹದ ಧನ ದೊರೆಯುವ ಸಾಧ್ಯತೆಗಳಿವೆ. ಕೆಟರಿಂಗ್ ನಡೆಸುವವರಿಗೆ ಸಾಕಷ್ಟು ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಅಲಂಕಾರದ ಕಲಾಕೃತಿಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ಬಂಧುಗಳೊಂದಿಗೆ ಹೊಂದಾಣಿಕೆ ಹೆಚ್ಚಾಗಿ ಆನಂದಿಸುವಿರಿ. ಸರ್ಕಾರಿ ಕೆಲಸಗಳಲ್ಲಿ ಹೆಚ್ಚಿನ ಮುನ್ನಡೆ ಇರುತ್ತದೆ. ಹಣದ ಒಳಹರಿವು ಮಧ್ಯಮಗತಿಯಲ್ಲಿ ಇರುತ್ತದೆ.

ಮಕರ ರಾಶಿ( ಉತ್ತರಾಷಾಢ 2,3,4 ಶ್ರವಣ ಧನಿಷ್ಠ 1,2)

ನಿಮ್ಮ ಪ್ರಯತ್ನಗಳಲ್ಲಿ ಹೆಚ್ಚಿನ ಫಲವನ್ನು ಕಾಣಬಹುದು. ವೃತ್ತಿ ರಂಗದಲ್ಲಿ ಹೊಸ ಅದೃಷ್ಟದ ಬಾಗಿಲು ತೆರೆಯುವ ಸಾಧ್ಯತೆ ಇದೆ. ರಫ್ತು ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ಹೆಚ್ಚು ವ್ಯವಹಾರ ನಡೆದು ವ್ಯವಹಾರ ವಿಸ್ತರಿಸುತ್ತದೆ. ಮಹಿಳಾ ರಾಜಕಾರಣಿಗಳಿಗೆ ಮನ್ನಣೆಯ ದೊರೆತು ಸೂಕ್ತ ಸ್ಥಾನಮಾನಗಳು ದೊರೆಯುತ್ತವೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿದ್ದರೂ ಸಹ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಳ್ಳುವಿರಿ. ಒಡಹುಟ್ಟಿದವರಿಂದ ನಿಮ್ಮ ಕೆಲಸಕಾರ್ಯಗಳಿಗೆ ಸಾಕಷ್ಟು ಸಹಾಯ ದೊರೆಯುತ್ತದೆ. ನಿಮ್ಮ ಆಸ್ತಿಯ ಬೆಲೆ ಹೆಚ್ಚಾಗುತ್ತದೆ. ಹೆಣ್ಣು ಮಕ್ಕಳ ಅಭಿವೃದ್ಧಿಯು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡುವ ಅವಕಾಶ ದೊರೆಯುತ್ತದೆ.

ಕುಂಭ ರಾಶಿ( ಧನಿಷ್ಠ 3, 4 ಶತಭಿಷಾ ಪೂರ್ವಭಾದ್ರ 1, 2, 3)

ಸಹ ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರೆತು ಹೆಚ್ಚು ಸಂಪಾದನೆ ಆಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮಪಡುವುದು ಅಗತ್ಯ. ಕೆಲವೊಂದು ವಿಷಯಗಳಲ್ಲಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ವ್ಯಾಪಾರ ವ್ಯವಹಾರಗಳಲ್ಲಿ ಪೈಪೋಟಿ ಇದ್ದರೂ ತೊಂದರೆ ಇರುವುದಿಲ್ಲ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ಸೋದರಿಯರಿಂದ ಕೆಲಸ ಕಾರ್ಯಗಳಿಗೆ ಸಹಕಾರ ದೊರೆಯುತ್ತದೆ. ಸೈನ್ಯದಲ್ಲಿ ಕೆಲಸ ಮಾಡುವವರಿಗೆ ಬೇಕಾದ ಸವಲತ್ತುಗಳು ಸಿಗುತ್ತವೆ. ತಾಯಿಯು ತಮ್ಮ ಕೈಲಾದ ಧನಸಹಾಯ ಮಾಡುವರು. ಸಂಗಾತಿಗೆ ಉತ್ತಮ ಕೆಲಸ ದೊರೆಯುವ ಸಾಧ್ಯತೆ ಇದೆ. ಸರ್ಕಾರಿ ಸಂಸ್ಥೆಗಳ ವಸ್ತುಗಳನ್ನು ಪೂರೈಕೆ ಮಾಡುವವರಿಗೆ ಹೊಸ ಪೂರೈಕೆಯ ಆದೇಶಗಳು ದೊರೆಯುತ್ತವೆ. ದೂರದ ಸ್ಥಳಕ್ಕೆ ಕೆಲವರಿಗೆ ವರ್ಗಾವಣೆಯಾಗಬಹುದು.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಸಮಸ್ಯೆಗಳನ್ನು ಸೌಹಾರ್ದಯುತ ಮತ್ತು ನ್ಯಾಯವಾಗಿ ಈಗ ಬಗೆಹರಿಸಿಕೊಳ್ಳುವುದು ಉತ್ತಮ. ರಾಜಕೀಯ ವ್ಯಕ್ತಿಗಳಿಗೆ ನಿಕಟವರ್ತಿಗಳ ಸಹಕಾರದಿಂದ ಹಾದಿ ಸುಗಮವಾಗುತ್ತದೆ. ಸರ್ಕಾರಿ ಕೆಲಸಕಾರ್ಯಗಳು ಸರಾಗವಾಗಿ ಆಗುತ್ತದೆ. ಸಂಗೀತ ಕಲಾವಿದರಿಗೆ ಉತ್ತಮ ಅವಕಾಶಗಳಿದ್ದರೂ ಸಹ ಅದನ್ನು ಸದುಪಯೋಗ ಮಾಡಿಕೊಳ್ಳುವುದು ಅಗತ್ಯ. ಜವಳಿ ವ್ಯಾಪಾರಿಗಳು ಹೆಚ್ಚು ಪ್ರಗತಿ ಹೊಂದುವರು. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ಇಚ್ಛೆಪಟ್ಟ ಕೃಷಿ ಭೂಮಿಯನ್ನು ಕೊಳ್ಳುವಿರಿ. ಸರ್ಕಾರಿ ದಾಖಲಾತಿಗಳಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಪಾಲುದಾರರಲ್ಲಿ ಒಮ್ಮತ ಏರ್ಪಟ್ಟು ವ್ಯವಹಾರ ಸರಾಗವಾಗಿ ನಡೆಯುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಿಮಗೆ ಭಾಗ ದೊರೆಯುವ ಸಂದರ್ಭವಿದೆ. ವೃತ್ತಿಯಲ್ಲಿ ಹೊಸ ರೀತಿಯ ಸ್ಥಾನಮಾನಗಳು ಸಿಗುವ ಸಾಧ್ಯತೆ ಇದೆ.

ವಾರ ಭವಿಷ್ಯ:
ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ
ಜ್ಯೋತಿಷ್ಯ ವಿಶಾರದ ಮೊಬೈಲ್: 8197304680

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT