ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | 2023ರ ಏಪ್ರಿಲ್‌ 2ರಿಂದ 8ರವರೆಗೆ

Last Updated 1 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ನಿಮ್ಮ ಮಿತ್ರರ ಉಪಾಯಗಳಿಂದ ಕೆಲವು ಸಂಕಟದಿಂದ ಪಾರಾಗುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಅತ್ಯಂತ ಚುರುಕಾಗಿ ಕೆಲಸ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ಸ್ಥಿರಾಸ್ತಿಯ ವಿಚಾರದಲ್ಲಿ ಮುನ್ನಡೆಯನ್ನು ಕಾಣಬಹುದು. ರಕ್ತದ ತೊಂದರೆ ಅಥವಾ ತಲೆನೋವು ಕಾಡಬಹುದು. ಹೈನುಗಾರಿಕೆ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಸಂಸಾರದಲ್ಲಿ ಸ್ವಲ್ಪ ಕಿರಿಕಿರಿಗಳಾದರೂ ಅಂತಹ ತೊಂದರೆ ಇರುವುದಿಲ್ಲ. ಕ್ರೀಡಾಪಟುಗಳು ಅನಿರೀಕ್ಷಿತ ಪ್ರಗತಿಯನ್ನು ಕಾಣಬಹುದು. ಉದ್ದಿಮೆ ನಡೆಸುವವರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗುವರು. ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಿರಿ. ನಿಮ್ಮ ವೃತ್ತಿಯಲ್ಲಿ ಸಾಧಾರಣ ಪ್ರಗತಿಯನ್ನು ಕಾಣಬಹುದು. ಮನೆಯಲ್ಲಿ ದೇವತಾ ಕಾರ್ಯಗಳನ್ನು ಹಮ್ಮಿಕೊಳ್ಳುವಿರಿ.

ವೃಷಭರಾಶಿ(ಕೃತಿಕಾ2, 3, 4 ರೋಹಿಣಿ ಮೃಗಶಿರಾ1 2)

ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಕೆಲಸ ಕಾರ್ಯಗಳಲ್ಲಿ ವೃಥಾ ಕಾಲಹರಣ ಮಾಡಿದಲ್ಲಿ ಸಾಕಷ್ಟು ನಷ್ಟ ಅನುಭವಿಸುವಿರಿ. ವಿಶೇಷ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಸಾಕಷ್ಟು ವಿಚಾರ ಮಾಡಿರಿ. ಕೃಷಿಯಿಂದ ಹೆಚ್ಚಿನ ಆದಾಯ ಬರುತ್ತದೆ. ಭೂಮಿ ವ್ಯಾಪಾರ ಮಾಡುವವರಿಗೆ ವ್ಯಾಪಾರ ದೊರೆಯುವುದರ ಜೊತೆಗೆ ಹೆಚ್ಚಿನ ಲಾಭವಿರುತ್ತದೆ. ಅತ್ಯಂತ ಚುರುಕಾಗಿ ವಿಷಯಗಳನ್ನು ಗ್ರಹಿಸಿಕೊಂಡು ಓದಿನಲ್ಲಿ ಮುನ್ನಡೆ ಸಾಧಿಸುವಿರಿ. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದೀತು. ಉದರ ಸಂಬಂಧಿ ಕಾಯಿಲೆಗಳು ಸ್ವಲ್ಪ ಕಾಡಬಹುದು. ಸಂಗಾತಿಗೆ ಸ್ಥಿರ ಆಸ್ತಿ ಒದಗುವ ಯೋಗವಿದೆ. ಸರ್ಕಾರಿ ಗುತ್ತಿಗೆಗಳನ್ನು ಮಾಡುವವರಿಗೆ ಹೊಸ ಗುತ್ತಿಗೆಗಳು ಲಭಿಸಬಹುದು. ತಂದೆಯಿಂದ ಕೃಷಿಭೂಮಿ ದೊರೆಯುವ ಸಾಧ್ಯತೆ ಇದೆ.

ಮಿಥುನ ರಾಶಿ(ಮೃಗಶಿರಾ 3, 4 ಆರಿದ್ರಾ ಪುನರ್ವಸು 1, 2, 3)

ವೃತ್ತಿಯಲ್ಲಿ ನಿಮ್ಮ ನಾಯಕತ್ವದ ಗುಣ ಅನಾವರಣಗೊಂಡು ಮೆಚ್ಚುಗೆ ಸಿಗುತ್ತದೆ. ಹೊರ ಗುತ್ತಿಗೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಈಗ ಉತ್ತಮ ಅವಕಾಶಗಳು ದೊರೆಯುತ್ತವೆ. ಭೂಮಿ ಖರೀದಿಯ ವಿಷಯದಲ್ಲಿ ನಿಮ್ಮ ತೀರ್ಮಾನವನ್ನು ಬದಲಾಯಿಸಬೇಕಾಗಬಹುದು. ಷೇರು ಮಾರುಕಟ್ಟೆ ವ್ಯವಹಾರಗಳು ಅಷ್ಟು ಲಾಭ ತರುವುದಿಲ್ಲ. ಹಣದ ಒಳಹರಿವು ಉತ್ತಮವಾಗಿದ್ದರೂ ಅಷ್ಟೇ ಖರ್ಚು ಸಹ ಇರುತ್ತದೆ. ಈ ವಾರ ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಉತ್ತಮ ಮಾತನಾಡಿ ಬಂಧುಗಳ ಜೊತೆ ಸ್ನೇಹ ಸಂಪಾದನೆಯನ್ನು ಮಾಡುವಿರಿ. ಆಸ್ತಿ ಮಾರಾಟ ಮಾಡುವ ಮಧ್ಯವರ್ತಿಗಳಿಗೆ ಹೆಚ್ಚಿನ ಕಮಿಷನ್ ದೊರೆಯುತ್ತದೆ. ವಿದೇಶಿ ವ್ಯವಹಾರ ಮಾಡುವವರ ಲಾಭ ಹೆಚ್ಚುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಹಂಗಾಮಿ ನೌಕರಿಯಲ್ಲಿರುವವರಿಗೆ ನೌಕರಿ ಕಾಯಂ ಆಗುವ ಲಕ್ಷಣವಿದೆ. ಮಾರ್ಗದರ್ಶಕರ ಸ್ಪಷ್ಟ ಸಲಹೆಗಳು ನಿಮಗೆ ಹೆಚ್ಚು ಅನುಕೂಲವನ್ನು ತರುತ್ತವೆ. ಧನದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ನಿಮ್ಮ ಚಾಣಾಕ್ಷತನ ವೃತ್ತಿಯಲ್ಲಿ ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತದೆ. ನಿಮ್ಮ ಉದ್ಧಟತನದ ಮಾತು ನಿಮಗೆ ತೊಂದರೆ ಮಾಡಬಹುದು. ಸಿದ್ಧ ಉಡುಪು ಮಾರಾಟಗಾರರಿಗೆ ಹೆಚ್ಚಿನ ವ್ಯವಹಾರವಿರುತ್ತದೆ. ಬಣ್ಣ ತಯಾರಿಕೆಯನ್ನು ಮಾಡುವವರಿಗೆ ವ್ಯಾಪಾರ ವಿಸ್ತರಣೆಯ ಯೋಗವಿದೆ. ಕೆಲವರಿಗೆ ಕಾಲು ಅಥವಾ ಬೆನ್ನು ನೋವು ಕಾಡಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಹಿತಶತ್ರುಗಳು ಜಾಸ್ತಿ ಆಗಬಹುದು. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಹೆಚ್ಚು ಗಮನ ಕೊಡುವುದು ಒಳ್ಳೆಯದು. ಕೃಷಿಯ ಉತ್ಪನ್ನಗಳಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತದೆ.

ಸಿಂಹ ರಾಶಿ( ಮಖ, ಪೂರ್ವಪಲ್ಗುಣಿ, ಉತ್ತರ ಫಲ್ಗುಣಿ 1)

ಯಾವುದೇ ಕೆಲಸ ಆರಂಭಿಸಿದ ನಂತರ ಅದನ್ನು ಮುಕ್ತಾಯಗೊಳಿಸುವವರೆಗೂ ಅದರೊಡನೆ ಇರುವುದು ಮುಖ್ಯ. ಧನಾದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಅವಶ್ಯಕತೆಗಿಂತ ಹೆಚ್ಚು ಖರ್ಚು ಮಾಡುವುದು ಬೇಡ. ಕಾನೂನು ವಿದ್ಯೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಏಳಿಗೆ ಇರುತ್ತದೆ. ಹಿರಿಯರಿಂದ ನಿಮ್ಮ ಕಾರ್ಯಗಳಿಗೆ ಧನ ಸಹಾಯ ಸಿಗುತ್ತದೆ. ಧಾರ್ಮಿಕ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದುವಿರಿ. ಆಸ್ತಿ ಕೊಳ್ಳುವ ವಿಚಾರದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು. ಮಕ್ಕಳ ಆಸೆಗಾಗಿ ಹೆಚ್ಚು ಹಣ ಖರ್ಚಾಗುವುದು. ಸಂಗಾತಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ. ಶಾಲಾ ಕಾಲೇಜು ನಡೆಸುವವರಿಗೆ ಸರ್ಕಾರದ ಕಾನೂನು ತೊಡಕುಗಳು ಎದುರಾಗುವ ಸಾಧ್ಯತೆ ಇದೆ. ಹಿರಿಯರು ನಡೆಸುತ್ತಿದ್ದ ವ್ಯವಹಾರಗಳಲ್ಲಿ ನಿಮಗೆ ಅಭಿವೃದ್ಧಿ ಇರುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ, 2, 3, 4, ಹಸ್ತಾ ಚಿತ್ತಾ 1.2)

ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಕಾರ್ಯ ಸಾಧನೆಗಾಗಿ ಸಾಕಷ್ಟು ಶ್ರಮಪಡಬೇಕಾದೀತು. ಧನಾದಾಯವು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಏಳಿಗೆ ಇರುತ್ತದೆ. ಗೃಹ ನಿರ್ಮಾಣ ಮಾಡುತ್ತಿರುವವರಿಗೆ ಬೇಕಾದ ಆರ್ಥಿಕ ಸಹಾಯ ದೊರೆಯುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಸಾಕಷ್ಟು ಅನಿವಾರ್ಯದ ಓಡಾಟಗಳು ಎದುರಾಗುತ್ತವೆ. ಹೊಸ ಉದ್ಯೋಗಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರಗಳು ಖಂಡಿತಾ ಬೇಡ. ಸಾಲದ ವ್ಯವಹಾರಗಳು ಸದ್ಯಕ್ಕೆ ಬೇಡ. ಧಾರ್ಮಿಕ ನಾಯಕರಿಗೆ ಹೆಚ್ಚಿನ ಗೌರವ ಮತ್ತು ಪ್ರಗತಿ ಇರುತ್ತದೆ. ನಿಮ್ಮ ವೃತ್ತಿರಂಗದಲ್ಲಿ ಹೆಚ್ಚಿನ ಶ್ರದ್ಧೆ ತೋರುವುದು ಅಗತ್ಯ. ಮೂಳೆಯ ತೊಂದರೆ ಇರುವವರು ವಿಶ್ರಾಂತಿ ಪಡೆಯುವುದು ಉತ್ತಮ. ಅನಿರೀಕ್ಷಿತವಾಗಿ ವಿದೇಶಿ ವ್ಯವಹಾರಗಳಲ್ಲಿ ನಿಮಗೆ ಪಾಲುದಾರಿಕೆ ದೊರೆಯಬಹುದು.

ತುಲಾ ರಾಶಿ( ಚಿತ್ತಾ 3,4 ಸ್ವಾತಿ ವಿಶಾಖ 1, 2, 3)

ನಿಮ್ಮ ಯಶಸ್ಸನ್ನು ನಿಮ್ಮ ಸಹವರ್ತಿಗಳು ಅಥವಾ ನಿಮ್ಮ ಪಾಲುದಾರರು ತಡೆಹಿಡಿಯುವರು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ದೊರೆಯುತ್ತದೆ. ಪ್ರಭಾವಿತ ವ್ಯಕ್ತಿಗಳನ್ನು ಸಂಧಿಸುವ ಅವಕಾಶ ದೊರೆತು ಅವರಿಂದ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವಿರಿ. ವಕೀಲರಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ ಹಾಗೂ ಹೆಚ್ಚು ಸಂಪಾದನೆ ಇರುತ್ತದೆ. ಹಣದ ಒಳ ಹರಿವು ಮಂದಗತಿಯಲ್ಲಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಕೃಷಿಕರಿಗೆ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ. ಮಕ್ಕಳಿಂದ ನಿಮಗೆ ಅಗೌರವ ಉಂಟಾಗಬಹುದು. ಸಂಗಾತಿಯೊಡನೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಕಾವೇರಿದ ಮಾತುಗಳಾಗುತ್ತವೆ. ಹೈನುಗಾರಿಕೆಯನ್ನು ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಇರುವುದಿಲ್ಲ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧಾ, ಜೇಷ್ಠ)

ವ್ಯವಹಾರದಲ್ಲಿ ಸಾಕಷ್ಟು ಪೈಪೋಟಿಯನ್ನು ಎದುರಿಸಬೇಕಾಗಬಹುದು. ಕೆಲವರು ನಿಮ್ಮನ್ನು ಕೆಣಕಲೆಂದೇ ಬರುವರು ಅವರ ಬಗ್ಗೆ ತಾಳ್ಮೆಯಿಂದಿರಿ. ಷೇರುಪೇಟೆ ವ್ಯವಹಾರಗಳಿಂದ ಕೆಲವರಿಗೆ ಹೆಚ್ಚಿನ ಸಂಪಾದನೆಯಾಗಬಹುದು. ತಾಂತ್ರಿಕ ತಜ್ಞರಿಗೆ ಅಧಿಕ ಆಯಾಸದಿಂದ ಕೆಲಸಗಳು ಬಾಕಿ ಉಳಿಯಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಬಹಳ ಉತ್ತಮ ವ್ಯಾಪಾರ ನಡೆದು ಆದಾಯ ಹೆಚ್ಚುತ್ತದೆ. ಸರ್ಕಾರಿ ಗುತ್ತಿಗೆಗಳನ್ನು ಮಾಡುವವರಿಗೆ ಹೆಚ್ಚಿನ ಆದಾಯವಿರುತ್ತದೆ. ಹಣದ ಒಳಹರಿವು ನಿರೀಕ್ಷಿತಮಟ್ಟಕ್ಕೆ ಇರುತ್ತದೆ. ಸಿರಾಸ್ತಿಯನ್ನು ಕೊಳ್ಳುವ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸಿರಿ. ವಿದ್ಯಾರ್ಥಿಗಳಿಗೆ ಈಗ ಯಶಸ್ಸನ್ನು ಪಡೆಯುವ ಕಾಲ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಮುನ್ನಡೆ ಇದ್ದು ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶನ ಮಾಡುವ ಯೋಗವಿದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ, ಉತ್ತರಾಷಾಢ 1)

ಹಣಕಾಸಿನ ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರ ವಹಿಸಿರಿ. ಇಲ್ಲವಾದಲ್ಲಿ ನಷ್ಟ ಸಂಭವಿಸಬಹುದು. ನಿಮ್ಮ ಸಾಮರ್ಥ್ಯವನ್ನು ಒರೆಹಚ್ಚಿ ಕೆಲಸಮಾಡಿದಲ್ಲಿ ಒಳ್ಳೆಯ ಹೆಸರು ಬರುತ್ತದೆ. ನಿಮ್ಮ ಯೋಜನಾಬದ್ಧ ಕೆಲಸಗಳಿಂದ ಪ್ರಗತಿಯನ್ನು ಕಾಣಬಹುದು. ಹಣದ ಒಳ ಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು. ಇತರರ ನಯವಂಚನೆ ಮಾತುಗಳಿಗೆ ಬೆರಗಾಗದಿರಿ. ನಿಮ್ಮಶತ್ರುಗಳನ್ನು ಅವರದೇ ತಂತ್ರಗಳಿಂದ ಮಣಿಸಬಹುದು. ವಿದೇಶದಲ್ಲಿ ಓದುವ ಆಸೆ ಇದ್ದವರಿಗೆ ಈಗ ಅವಕಾಶಗಳು ಒದಗಿಬರುತ್ತದೆ. ತೆರಿಗೆ ತಜ್ಞರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಬಂಧುಗಳಲ್ಲಿ ಹೆಚ್ಚಿನ ಬಾಂಧವ್ಯ ಮೂಡುವ ಸಂದರ್ಭವಿದೆ. ಕೃಷಿಕರಿಗೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತವೆ. ತಾಯಿಯಿಂದ ಹೆಚ್ಚಿನ ಅನುಕೂಲತೆಗಳು ದೊರೆಯುವ ಸಂದರ್ಭವಿದೆ.

ಮಕರ ರಾಶಿ( ಉತ್ತರಾಷಾಢ 2, 3, 4 ಶ್ರವಣ. ಧನಿಷ್ಠ 1,2)

ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಸಂತೋಷವಾಗುತ್ತದೆ. ಮಂದಗತಿಯಲ್ಲಿರುವ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮುಗಿಸಲು ಸಿಬ್ಬಂದಿಗೆ ತಾಕೀತು ಮಾಡಬೇಕಾಗಬಹುದು. ಕೆಲವರಿಗೆ ಷೇರು ವ್ಯವಹಾರಗಳಿಂದ ಲಾಭವಾಗುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಮಹಿಳಾ ರಾಜಕಾರಣಿಗಳಿಗೆ ಹೆಚ್ಚಿನ ಮನ್ನಣೆ ದೊರೆಯುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಬಂಧುಗಳ ಒಡನಾಟ ಹೆಚ್ಚಾಗುತ್ತದೆ. ಆಸ್ತಿ ವಿಚಾರಗಳಲ್ಲಿ ಸ್ವಲ್ಪಮಟ್ಟಿನ ಪ್ರಗತಿಯನ್ನು ಕಾಣಬಹುದು. ಬೆಂಕಿಯ ಜೊತೆ ಕೆಲಸ ಮಾಡುವವರು ಹೆಚ್ಚು ಎಚ್ಚರ ವಹಿಸಬೇಕು. ತಾಯಿಯೊಡನೆ ಕಾವೇರಿದ ಮಾತುಗಳು ಆಗಬಹುದು ಹಿರಿಯರಿಂದ ವೃತ್ತಿಯ ಬಗ್ಗೆ ತಿಳಿವಳಿಕೆ ಬರುತ್ತದೆ. ಧಾರ್ಮಿಕ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಸಹಾಯ ಬರುತ್ತದೆ. ಕೃಷಿಕರಿಗೆ ಆದಾಯ ಕಡಿಮೆ.

ಕುಂಭ ರಾಶಿ( ಧನಿಷ್ಠ 3, 4 ಶತಭಿಷಾ ಪೂರ್ವಭಾದ್ರ 1, 2, 3)

ನಿಮ್ಮ ಕೆಲವೊಂದು ಗೊಂದಲದ ಸಮಸ್ಯೆಗಳಿಗೆ ಉತ್ತಮ ಮಾರ್ಗದರ್ಶನ ಪಡೆಯುವುದು ಸಾಕಷ್ಟು ಒಳ್ಳೆಯದು. ಯುವಕರು ಹಣ ಸಂಪಾದನೆಗಾಗಿ ಅನೈತಿಕ ಮಾರ್ಗಗಳನ್ನು ಅನುಸರಿಸುವುದು ಬೇಡ. ಹೋಟೆಲ್ ಉದ್ಯಮದವರಿಗೆ ಉತ್ತಮ ವ್ಯವಹಾರ ನಡೆಯುತ್ತದೆ. ಮನೆಯವರೊಡನೆ ಕಿರುಪ್ರವಾಸ ಹೋಗಿ ಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ ಇದೆ. ನಿಮ್ಮ ಧನಾದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಸರ್ಕಾರಿ ಸಾಲ ಸೌಲಭ್ಯಗಳು ಸರಾಗವಾಗಿ ದೊರಕುತ್ತವೆ. ವಿದೇಶದಲ್ಲಿ ನೆಲೆಸಿರುವವರಿಗೆ ಸೂಕ್ತ ಸೌಲಭ್ಯಗಳು ದೊರೆಯುತ್ತವೆ. ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ದೊರೆಯುತ್ತದೆ. ಪ್ರೀತಿ ಪ್ರೇಮಗಳ ವಿಷಯದಲ್ಲಿ ಗೊಂದಲ ಮೂಡಬಹುದು. ಅನಿರೀಕ್ಷಿತ ಧನಾದಾಯ ಬರುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಏನೂ ವ್ಯತ್ಯಾಸವಿರುವುದಿಲ್ಲ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಅತಿಯಾದ ಆತ್ಮವಿಶ್ವಾಸ ಸ್ವಲ್ಪ ತೊಂದರೆ ಕೊಡಬಹುದು. ಹಣದ ಒಳಹರಿವಿನಲ್ಲಿ ಏರಿಳಿತವಿರುತ್ತದೆ. ವಿದೇಶಗಳಿಗೆ ಬಟ್ಟೆ ಹಾಗೂ ಔಷಧಿಯನ್ನು ರಫ್ತು ಮಾಡುವವರಿಗೆ ಉತ್ತಮ ಮಾರುಕಟ್ಟೆ ದೊರೆತು ಸಂತಸವಾಗುತ್ತದೆ. ರಿಯಲ್ಎಸ್ಟೇಟ್ ವ್ಯವಹಾರವನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಮಕ್ಕಳು ಹೆಚ್ಚು ಹಣ ಖರ್ಚು ಮಾಡಿಸುವರು. ಕುಟುಂಬದಲ್ಲಿ ಸಾಕಷ್ಟು ಸ್ಥಿರತೆಯನ್ನು ಕಾಣಬಹುದು. ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ. ತಂದೆಯಿಂದ ಕೃಷಿ ಕಲೆಯನ್ನು ಈಗ ಕಲಿಯಬಹುದು. ವೃತ್ತಿಯಲ್ಲಿ ಇದ್ದ ಗೊಂದಲಗಳು ದೂರವಾಗಿ ಮನಸ್ಸಿಗೆ ಶಾಂತಿ ಎನಿಸುತ್ತದೆ. ಕೆಲವೊಮ್ಮೆ ಆದಾಯದಷ್ಟೇ ಖರ್ಚು ಬರುತ್ತದೆ. ಮಕ್ಕಳ ಅಭ್ಯಾಸದ ಬಗ್ಗೆ ಹೆಚ್ಚು ಕಾಳಜಿ ವಹಿಸಿರಿ. ನಿಮ್ಮಲ್ಲಿದ್ದ ಅಭದ್ರತೆಯ ಭಾವ ದೂರವಾಗುತ್ತದೆ. ಆಭರಣ ಮಾರಾಟಗಾರರಿಗೆ ಉತ್ತಮ ವ್ಯವಹಾರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT