ಗುರುವಾರ , ಜೂನ್ 4, 2020
27 °C

ವಾರ ಭವಿಷ್ಯ | 17-5-2020ರಿಂದ 23-5-2020 ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಮಾತನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಉತ್ತಮ ದಿನ. ಇವರ ವಿಚಾರಧಾರೆಯನ್ನು ಇತರರು ಒಪ್ಪಿಕೊಳ್ಳುವರು. ಆದರೆ ರಾಜಕಾರಣಿಗಳು ಹೆಚ್ಚು ಮಾತಾಡಿದಲ್ಲಿ ಮುಖಭಂಗ ಆಗುವ ಸಾಧ್ಯತೆ. ಧನದ ಸಂಗ್ರಹ ಚೆನ್ನಾಗಿರುತ್ತದೆ. ನಿಮ್ಮ ಮಾತಿನ ಶಕ್ತಿಯು ಕೆಲವು ನಿಷ್ಠುರಗಳನ್ನು ಸೃಷ್ಟಿಸಬಹುದು. ವ್ಯಾಪಾರ-ವ್ಯವಹಾರಗಳಲ್ಲಿ ವೃದ್ಧಿ ಇರುತ್ತದೆ. ನಿಯಮಬದ್ಧ ಕಾರ್ಯಸೂಚಿಗಳಿಂದ ಕಾರ್ಯಸಾಧನೆ ಆಗುವುದು. ವೃತ್ತಿಯಲ್ಲಿ ಒತ್ತಡದ ವಾತಾವರಣ ನಿರ್ಮಾಣವಾದರೂ ನಂತರ ಪರಿಹಾರವಾಗುತ್ತದೆ.

ವೃಷಭ ರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ1 2)

ಯಾರನ್ನೋ ಮೆಚ್ಚಿಸಲು ಬೇರಾರನ್ನೋ ವಿರೋಧಿಸದಿರಿ. ಎದುರಾಳಿ ಮುಂದೆ ನಿಮ್ಮೆಲ್ಲಾ ಒಳಗುಟ್ಟನ್ನು ಹೇಳದಿರಿ. ಜನರಿಗೆ ಸಂಬಂಧಿಸಿದ ಸುಖ-ಸಂತೋಷಗಳ ಬಗ್ಗೆ ಕಾರ್ಯೋನ್ಮುಖರಾಗಿ ಗೌರವ ಗಳಿಸುವಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಕಛೇರಿಯಲ್ಲಿ ನಿಮ್ಮ ಕಾರ್ಯವಿಧಾನಗಳು ಎಲ್ಲರ ಪ್ರಶಂಸೆಗೆ ಗುರಿಯಾಗುತ್ತವೆ. ಆಹಾರ ಕುರಿತಾಗಿ ಅಸಡ್ಡೆ ಮಾಡದಿರಿ, ಇದು ಅನಾರೋಗ್ಯಕ್ಕೆ ಕಾರಣ ಆಗಬಹುದು. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರಿಗೆ ಅಭಿವೃದ್ಧಿ ಇದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಮನೆ ಕಟ್ಟುವ ವಿಚಾರದಲ್ಲಿ ಇದ್ದ ಕಠಿಣವಾದ ಅಡ್ಡಿಯು ನಿವಾರಣೆಯಾಗುವುದು. ಭ್ರಮಾತ್ಮಕ ಲೋಕದಿಂದ ಹೊರಬಂದು ಸತ್ಯವನ್ನು ಅರಿಯಿರಿ. ಸಂಬಂಧಿಗಳು ಸಹಾಯ ಕೇಳಲು ಬರುತ್ತಾರೆ. ಯೋಗ್ಯತೆಯನ್ನು ನೋಡಿ ಸಹಾಯ ಮಾಡಿ. ಪರಿಪಕ್ವವಾದ ಲೆಕ್ಕಾಚಾರದೊಂದಿಗೆ ಕಾರ್ಯ ನಡೆಸಿದಲ್ಲಿ ಯಶಸ್ಸು ನಿಮ್ಮದೇ ಆಗುತ್ತದೆ. ಹಿರಿಯರ ಆಸ್ತಿಯಲ್ಲಿ ನಿಮ್ಮ ಪಾಲು ದೊರೆಯುತ್ತದೆ. ಪ್ರೀತಿ ಪ್ರೇಮದಲ್ಲಿ ಇರುವವರು ಸಂಗಾತಿಯ ಪ್ರೀತಿಯ ನೈಜತೆಯನ್ನು ತಿಳಿಯಿರಿ. ಬಹಳ ದಿನಗಳಿಂದ ಮಾರಬೇಕೆಂದಿದ್ದ ಆಸ್ತಿಯು ಈಗ ಅಧಿಕ ಬೆಲೆಗೆ ಮಾರಾಟವಾಗುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ದೂರದ ಗೆಳೆಯನನ್ನು ಅನಿರೀಕ್ಷಿತವಾಗಿ ಸಂಧಿಸುವಿರಿ. ಕೆಲವೊಂದು ಕೌಟುಂಬಿಕ ವ್ಯಾಜ್ಯಗಳು ಸಂಧಾನದ ಮೂಲಕ ಬಗೆಹರಿಯುತ್ತವೆ. ನಿಮ್ಮ ಅರಿವಿಗೆ ನಿಮಗೆ ತಕ್ಕಂತೆ ಇರದಿರುವವರು ಮೂರ್ಖರು ಏನಲ್ಲ, ಅವರೇ ನಿಮ್ಮ ಕಷ್ಟಗಳಿಗೆ ಸ್ಪಂದಿಸುವರು. ಧನದ ಒಳಹರಿವು ನಿರೀಕ್ಷೆಯಂತೆ ಇರುತ್ತದೆ. ಬಹಳ ಹಿಂದೆ ಹೂಡಿದ್ದ ಹಣ ಈಗ ಇಡಿಗಂಟಾಗಿ ಒದಗಿಬರುತ್ತದೆ. ಸಂಗಾತಿಗೆ ಬರಬೇಕಾಗಿದ್ದ ವೇತನದ ಬಾಕಿ ಹಣ ಬರುತ್ತದೆ. ತಾಯಿಯು ನಿಮ್ಮ ಮೇಲೆ ಮುನಿಸಿಕೊಳ್ಳಬಹುದು.

ಸಿಂಹ ರಾಶಿ (ಮಖ ಪೂರ್ವಫಲ್ಗುಣಿ ಉತ್ತರ ಫಲ್ಗುಣಿ 1)

ಎಲ್ಲಾ ಕಾಲದಲ್ಲೂ ನಿಮ್ಮ ಮಾತು ನಡೆಯಬೇಕೆಂಬ ಹಟವನ್ನು ಬಿಡಿ. ನಿಮ್ಮ ಹಟದಿಂದ ಕೆಲವು ಉತ್ತಮ ಅವಕಾಶಗಳು
ಕೈ ಜಾರಬಹುದು. ವೃತ್ತಿಯಲ್ಲಿ ಬಡ್ತಿ ದೊರೆತರೂ ಅದನ್ನು ಅನುಭವಿಸಲು ಸ್ವಲ್ಪ ದಿನ ಕಾಯಬೇಕಾಗಬಹುದು. ಮಕ್ಕಳಿಗಾಗಿ ಹಣ
ಖರ್ಚು ಮಾಡಬೇಕಾಗಿ ಬರುತ್ತದೆ. ಹಳೆಯ ಸಾಲಗಳನ್ನು ಈಗ ತೀರಿಸಬಹುದು. ಪ್ರೀತಿ ಪ್ರೇಮಗಳಲ್ಲಿ ಸಿಲುಕಿದವರು ಹಿರಿಯರ
ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ವಿದೇಶದಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ವ್ಯವಹಾರ ವಿಸ್ತರಣೆಯಾಗಿ ಲಾಭ
ಹೆಚ್ಚುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಸಂಗಾತಿಯ ಬೇಕು-ಬೇಡಗಳನ್ನು ಪರಿಶೀಲಿಸಿ ಅವರ ಭಾವನೆಗಳಿಗೆ ಸ್ಪಂದಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಇದುವರೆಗೆ ಇದ್ದ ಕಷ್ಟಗಳು ಪರಿಹಾರವಾಗುತ್ತದೆ. ಸಂಸಾರದಲ್ಲಿನ ಗೊಂದಲಗಳು ಹೊರಗೆ ಬರುವುದು ಬೇಡ. ಹರಿತವಾದ ಆಯುಧಗಳನ್ನು ಬಳಸಿ ಕೆಲಸ ಮಾಡುವವರು ಸ್ವಲ್ಪ ಎಚ್ಚರವಾಗಿರಿ. ವೃತ್ತಿಯಲ್ಲಿ ಹಿತ ಶತ್ರುಗಳ ಕಾಟ ತಪ್ಪುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ಚಿಕಿತ್ಸೆ ಅತಿ ಅವಶ್ಯಕ. ತಂದೆಯಿಂದ ಆಸ್ತಿ ದೊರೆಯುತ್ತದೆ. ಕಬ್ಬಿಣದ ವ್ಯಾಪಾರಕ್ಕೆ ಲಾಭ ಹೆಚ್ಚು ಲಾಭವಿರುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಕಠಿಣ ಶ್ರಮವನ್ನು ಮಾಡುವವರಿಗೆ ಬೇಡಿಕೆ ಇರುತ್ತದೆ. ಹತ್ತಿದವರಿಂದಲೇ ಅನವಶ್ಯಕವಾದ ವಿರೋಧಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಒಳ ಪಟ್ಟುಗಳನ್ನು ಅರಿತ ಕೆಲವರು ಅದಕ್ಕೆ ವಿರುದ್ಧವಾಗಿ ತಂತ್ರ ರೂಪಿಸುವರು. ಕೆಲವು
ಸಾಲಗಾರರು ಸಾಲದ ಹಣ ವಾಪಸ್ಸು ಕೇಳಬಹುದು. ಆಸ್ತಿಗಳ ಮೇಲಿನ ವ್ಯಾಜ್ಯಗಳು ನಿಮ್ಮಂತೆ ಬಗೆಹರಿಯುತ್ತವೆ. ಚುನಾಯಿತ ಪ್ರತಿನಿಧಿಗಳು ಹಣಕಾಸಿನ ಬಗ್ಗೆ ಎಚ್ಚರವಾಗಿರಿ. ಮೂಳೆ ನೋವುಗಳು ಕಾಡಬಹುದು. ಹಣಕಾಸಿನ ಸ್ಥಿತಿಯು ಸಾಮಾನ್ಯವಾಗಿರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ನಿಂತಿದ್ದ ಕೆಲಸಗಳಲ್ಲಿ ಪ್ರಗತಿಕಂಡು ಬರುವುದು. ಜೀವನದಲ್ಲಿ ಕಳೆದಿದ್ದ ಮಾನಸಿಕ ನೆಮ್ಮದಿ ಪುನಃ ಪಡೆಯುವಿರಿ. ಉನ್ನತ ವ್ಯಾಸಂಗಕ್ಕಾಗಿ ಶ್ರಮಿಸುತ್ತಿರುವವರಿಗೆ ಸೂಕ್ತ ಸೌಲಭ್ಯಗಳು ದೊರೆಯುವುದು. ಕುಟುಂಬದ ರೀತಿ-ರಿವಾಜುಗಳ ನಡೆಸುವ ಉತ್ಸಾಹ ಇರುತ್ತದೆ. ಬಯಸಿದ್ದ ಆಸ್ತಿಯನ್ನು ಕೊಳ್ಳಲು ಧನಸಹಾಯ ಒದಗುತ್ತದೆ. ವೃತ್ತಿಯಲ್ಲಿನ ಗೊಂದಲಗಳು ನಿವಾರಣೆಯಾಗಿ ಮನಸ್ಸಿಗೆ ನಿರಾಳವೆನಿಸುತ್ತದೆ. ವಾರ್ತಾ ಬಾತ್ಮೀದಾರರಿಗೆ ಗೌರವ ಸಿಗುತ್ತದೆ. ಆನುವಂಶಿಕ ಆಸ್ತಿಗಳಲ್ಲಿ ಸ್ವಲ್ಪ ಭಾಗ ಬರುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಧಾರ್ಮಿಕ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ದೇಣಿಗೆ ಸಂಗ್ರಹ ಹೆಚ್ಚುತ್ತದೆ. ವ್ಯಾಯಾಮ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಗಿರಾಕಿಗಳು ಹೆಚ್ಚಾಗುವರು. ಅವಿವಾಹಿತರಿಗೆ ವಿದೇಶಿ ಸಂಗಾತಿ ದೊರೆಯುವ ಭಾಗ್ಯ. ಹೋಟೆಲ್ ಉದ್ದಿಮೆ ನಡೆಸುವವರಿಗೆ ವ್ಯವಹಾರ ವಿಸ್ತರಣೆಯ ಅವಕಾಶವಿದೆ. ಪಾರಂಪರಿಕ ಕೃಷಿಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಕ್ಕು ಯಶಸ್ಸನ್ನು ಸಾಧಿಸುವಿರಿ. ನೀವು ಬಯಸಿದ್ದ ವಾಹನವನ್ನು ಖರೀದಿಸಬಹುದು.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಹೊಸ ಅಧಿಕಾರ ಹೊಸ ರೀತಿಯ ಸನ್ನಿವೇಶಗಳು ನಿಮಗೆ ಎದುರಾಗುತ್ತವೆ. ಹಣಕಾಸಿನ ಸ್ಥಿತಿ ಉತ್ತಮವೆನಿಸುತ್ತದೆ. ಭಾಷಣಕಾರರಿಗೆ ಗೌರವ ಸಿಗುತ್ತದೆ. ಲೇಖಕರಿಗೆ ಉತ್ತಮ ಲೇಖನ ಪ್ರಕಟಿಸುವ ಯೋಗವಿದೆ. ಕಪ್ಪು ವಸ್ತುಗಳ ಮಾರಾಟ ಸತತ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಕೃಷಿಭೂಮಿಯ ನೀರಿನ ವ್ಯವಸ್ಥೆಯು ಸರಿಯಾಗಿ ನಿರಾಳತೆ ಮೂಡುತ್ತದೆ. ಸಮಯಕ್ಕೆ ಸರಿಯಾಗಿ ಸೋದರರ ಸಹಕಾರ ದೊರೆಯುತ್ತದೆ. ನೀರಿನ ವ್ಯಾಪಾರ ಮಾಡುವವರಿಗೆ ವ್ಯವಹಾರ ಹೆಚ್ಚಿ ಲಾಭ ಹೆಚ್ಚುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಸಂಗೀತಗಾರರಿಗೆ ಉತ್ತಮ ಸಂಭಾವನೆಯ ಅವಕಾಶವಿದೆ. ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯವಾಗುವುದು. ಗೃಹಾಲಂಕಾರಕ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುವುದು. ಖರ್ಚಿಗಾಗಿ ತಂದೆಯಿಂದ ಹಣ ಪಡೆಯುವಿರಿ. ಅನಿರೀಕ್ಷಿತವಾಗಿ ಉತ್ತಮ ವ್ಯವಹಾರದಲ್ಲಿ ಪಾಲುದಾರಿಕೆ ದೊರೆಯುತ್ತದೆ. ಧಾರ್ಮಿಕ ಸ್ಥಳಗಳನ್ನು ಸಂದರ್ಶಿಸುವ ಯೋಗವಿದೆ. ಸ್ತ್ರೀಯರಿಗೆ ಅವರ ತವರಿನಿಂದ ಆಸ್ತಿ ಅಥವಾ ಒಡವೆ ಬರಬಹುದು.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ನಿಮ್ಮ ಕೆಲಸಗಳು ಪ್ರಗತಿಯತ್ತ ಸಾಗುತ್ತವೆ. ಹಿರಿಯರಿಗೆ ಅನಾರೋಗ್ಯದ ಸಾಧ್ಯತೆ. ನಿಮ್ಮ ವಾಕ್ ಚಾತುರ್ಯದಿಂದ ಹಲವಾರು ಜನರನ್ನು ಗೆಲ್ಲುವಿರಿ. ಮಕ್ಕಳ ಸಂತೋಷಕ್ಕಾಗಿ ಹಣ ಖರ್ಚು ಮಾಡುವಿರಿ. ಮೂತ್ರದ ಸೊಂಕು ಏನಾದರೂ ಕಂಡುಬಂದಲ್ಲಿ ನಿರ್ಲಕ್ಷಿಸಬೇಡಿ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಸಂಗಾತಿಯ ಕಡೆಯ ಸಂತೋಷಕೂಟಕ್ಕೆ ಹೋಗಿ ಬರುವಿರಿ. ಅನಿರೀಕ್ಷಿತ ಆದಾಯ ಬರುವುದು. ವಾಹನ ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸ. ಶಾಲಾ- ಕಾಲೇಜುಗಳನ್ನು ನಡೆಸುವವರಿಗೆ ಉತ್ತಮ ಹೆಸರು ಬರುತ್ತದೆ.

(ಜ್ಯೋತಿಷ್ಯ ಪದ್ಮಭೂಷಣ ಡಾ.ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ ಸಂಪರ್ಕ: 8197304680)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.