ಶುಕ್ರವಾರ, ಜೂನ್ 5, 2020
27 °C

ವಾರ ಭವಿಷ್ಯ | 24-5-2020ರಿಂದ 30-5-2020 ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

(ಜ್ಯೋತಿಷ್ಯ ಪದ್ಮಭೂಷಣ ಡಾ.ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ ಸಂಪರ್ಕ: 8197304680)

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ನಿಮ್ಮ ನಿರೀಕ್ಷೆಯಂತೆ ಕೆಲಸದಲ್ಲಿ ವೇಗವು ಕಂಡು ಬಂದರೂ ಮಧ್ಯದಲ್ಲಿ ಸ್ವಲ್ಪ ಅಡೆ ತಡೆ ಎದುರಾಗುವುದು.ಸಮಯ ಸಾಧಕರ ಬಗ್ಗೆ ಎಚ್ಚರವಾಗಿರಿ . ವ್ಯವಹಾರದ ವಿಸ್ತರಣೆ ಮಾಡಲು ಹೆಚ್ಚಿನ ಬಂಡವಾಳ ಹೂಡಬೇಡಿರಿ . ಹಣಕಾಸಿನ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ವಿದ್ಯಾರ್ಥಿಗಳು ಸ್ವಲ್ಪ ಶ್ರಮ ವಹಿಸುವುದು ಉತ್ತಮ.ನಿಮ್ಮ ಮಾತಿನ ಶಕ್ತಿಯು ಚೆನ್ನಾಗಿದ್ದರೂ ಕೆಲವೊಮ್ಮೆ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆ. ಕೃಷಿಕರಿಗೆ ಉತ್ತಮ ಪ್ರಗತಿ ಇದೆ ಮತ್ತು ಹೆಚ್ಚಿನ ಧನ ಸಂಪಾದನೆ ಇದೆ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಹಿರಿಯರೊಂದಿಗಿನ ಆಪ್ತಸಮಾಲೋಚನೆ ನಿಮ್ಮ ಕೌಟುಂಬಿಕ ಸಮಸ್ಯೆಯನ್ನು ದೂರ ಮಾಡುತ್ತದೆ. ಹಣದ ವಿಚಾರದಲ್ಲಿ ಎಚ್ಚರ  ಯಾರಿಗೂ ಜಾಮೀನು ಕೊಡಲು ಹೋಗಬೇಡಿರಿ. ಸೋದರರು ಮತ್ತು ಬಂಧುಗಳೊಂದಿಗೆ ಇದ್ದ ಭಿನ್ನಾಭಿಪ್ರಾಯವು ಬಗೆಹರಿಯುವುದು. ನಿವೃತ್ತಿಯ ಅಂಚಿನಲ್ಲಿ ಇರುವವರು ಈಗಲೇ ತಮ್ಮಮುಂದಿನ ಜೀವನದ ಬಗ್ಗೆ ಆಲೋಚಿಸುವುದು ಒಳ್ಳೆಯದು. ಸಂಗಾತಿಯೊಂದಿಗಿನ ವಿಶ್ವಾಸವೂ ವೃದ್ಧಿಸುತ್ತದೆ. ಉದರಕ್ಕೆ ಸಂಬಂಧಪಟ್ಟ ಖಾಯಿಲೆಗಳನ್ನು ನಿರ್ಲಕ್ಷ ಮಾಡಬೇಡಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಭದ್ರತಾ ಇಲಾಖೆಗಳಲ್ಲಿ ಕೆಲಸ ಮಾಡುವವರು ತಮ್ಮ ಸುಪರ್ದಿನಲ್ಲಿರುವ ಬೀಗದ ಕೈಗಳು ಮತ್ತು ದಾಖಲೆ ಪತ್ರಗಳನ್ನು ಜತನದಿಂದ ನೋಡಿಕೊಳ್ಳಿರಿ. ಮಕ್ಕಳ ನಡತೆಯಲ್ಲಿನ ವ್ಯತ್ಯಾಸ ಸ್ವಲ್ಪ ಚಿಂತೆಗೀಡು ಮಾಡುತ್ತದೆ. ಪೂರ್ವಿಕರ ಆಸ್ತಿಗಳು ಒದಗಿಬರುತ್ತವೆ. ಬಂಧುಗಳ ಸಹಕಾರದಿಂದ ಕೃಷಿಯಲ್ಲಿ ಮೇಲುಗೈ ಸಾಧಿಸುವಿರಿ. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ. ವಿವಾಹದ ಮಾತುಕತೆಗಳಲ್ಲಿ ಪ್ರಗತಿ ಇರುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಅತಿಯಾಗಿ ಮಾತಾಡಿದಲ್ಲಿ ನೀವೇ ಸಿಕ್ಕಿಬೀಳುವ ಸಾಧ್ಯತೆ ಇದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಉದ್ಯೋಗ ಸ್ಥಳದಲ್ಲಿ ಒತ್ತಡ ಇರುತ್ತದೆ, ತಾಳ್ಮೆಯಿಂದ ಇದನ್ನು ಎದುರುಸಿರಿ. ಸಿಗುತ್ತಿದ್ದ ಸರ್ಕಾರಿ ಸೌಲಭ್ಯಗಳಲ್ಲಿ ಹಿನ್ನಡೆ ಇರುತ್ತದೆ. ಕಂಪನಿಯ ಮೇಲಧಿಕಾರಿಗಳಿಗೆ ವೇತನದಲ್ಲಿ ಹೆಚ್ಚಳ. ಸ್ನೇಹಿತರೊಡಗೂಡಿ ಮಾಡುವ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ವಿದೇಶದಲ್ಲಿರುವ ಮಗನ ಆದಾಯದಲ್ಲಿ ಹೆಚ್ಚಳ. ಸಿದ್ದವಾಗಿದ್ದ ಪ್ರವಾಸವನ್ನು ಮುಂದೂಡ ಬೇಕಾಗಬಹುದು. ಸಂಗಾತಿಯಿಂದ  ಧನಸಹಾಯ ಒದಗಿದರೂ ಚುಚ್ಚುಮಾತುಗಳಿರುತ್ತವೆ. ಎಲ್ಲರನ್ನೂ ಹಗುರವಾಗಿ ಕಾಣಬೇಡಿ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ನೀವಾಗಿಯೇ ಹುಟ್ಟು ಹಾಕಿಕೊಂಡಿದ್ದ ಸಮಸ್ಯೆಗಳನ್ನು ಈಗ ಬಗೆಹರಿಸಿಕೊಳ್ಳಬಹುದು. ಧನ ಸಂಗ್ರಹದಲ್ಲಿ ಏರಿಕೆ ಇರುತ್ತದೆ. ಉತ್ಸಾಹದಿಂದ ದುಡಿಯುತ್ತಿರುವವರಿಗೆ ಹೆಚ್ಚಿನ ಕೆಲಸ ಚಿಕ್ಕು ಸಂಪಾದನೆ ಹೆಚ್ಚುತ್ತದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ವಿದ್ಯಾರ್ಥಿಗಳು ಸ್ವಲ್ಪ ಗಮನಕೊಟ್ಟು ಓದಿರಿ. ಹಿತೈಷಿಗಳ ಸಲಹೆಯಿಂದ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದು. ವೃತ್ತಿಯಲ್ಲಿ ಒತ್ತಡವಿದ್ದರೂ ಇರುತ್ತದೆ ಪ್ರಗತಿ ಇರುತ್ತದೆ. ವಿದೇಶಯಾನ ಮಾಡಬೇಕೆಂಬ ನಿಮ್ಮ ಆಸೆ ಏರುವ ಸಾಧ್ಯತೆ ಇದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ನಿಮ್ಮ ಮೇಲಿನ ವಿಶ್ವಾಸದಿಂದ ಕೆಲಸಗಳಲ್ಲಿ ಸಹಾಯಮಾಡಲು ಬರುವವರನ್ನು ನಿರಾಕರಿಸಬೇಡಿ. ಮನೆತನದ ಕೆಲವು ವಿಚಾರಗಳು ನಿಮ್ಮ ಗೌರವಕ್ಕೆ ಪೆಟ್ಟು ಕೊಡಬಹುದು. ಸರ್ಕಾರದಿಂದ ಬರಬೇಕಾಗಿದ್ದ ಸವಲತ್ತುಗಳು ಸಮಯಕ್ಕೆ ಸರಿಯಾಗಿ ಬರುತ್ತವೆ. ವ್ಯವಹಾರದಲ್ಲಿ ಸ್ವಲ್ಪ ದೃಢ ನಿರ್ಧಾರ ಗಳಿರಲಿ. ಭೂಮಯ ವಿಚಾರದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ಹಿರಿಯರಿಂದ
ಧನ್ಯವಾದಗಳು ಒದಗಿಬರುತ್ತವೆ. ಆದಾಯ ಮೀರಿದ ಖರ್ಚು ಒಳ್ಳೆಯದಲ್ಲ. ಸಂಗಾತಿಯ ನಡವಳಿಕೆ ಮಾರ್ಮಿಕವಾಗಿರುತ್ತದೆ. ವಿದೇಶದಲ್ಲಿ ವೃತ್ತಿಗಾಗಿ ಕಾಯುತ್ತಿದ್ದವರಿಗೆ ವೃತ್ತಿ ದೊರೆಯುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಎಲ್ಲಾ ಕೆಲಸಗಳಿಗೂ ಇತರರನ್ನು ಅವಲಂಬಿಸುವುದು ಅಷ್ಟು ಒಳಿತಲ್ಲ. ಇದರಿಂದ ನಿಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು. ಹಣದ ಹರಿವು ಉತ್ತಮವಾಗಿರುತ್ತದೆ. ರಾಜಿ ಸಂಧಾನ ಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕಬೇಡಿ. ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ತೋರಿಸುವ ಅವಕಾಶವಿದೆ. ಅಜೀರ್ಣ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಧನಾದಾಯ ಸ್ವಲ್ಪ ಹೆಚ್ಚಾಗಿ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ನಿಮ್ಮ ಸಮಯಸ್ಪೂರ್ತಿ ಸಹೋದ್ಯೋಗಿಗಳಿಗೆ  ಮಾದರಿಯಾಗುತ್ತದೆ. ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿರುವವರಿಗೆ ಶುಭ ಸಮಾಚಾರವಿರುತ್ತದೆ. ಯಾರನ್ನು ನಂಬಿ ಹಣ ಕೊಡಬೇಡಿ. ನಿಮಗೆ ಆಸ್ತಿ ಖರೀದಿಯ ಯೋಗವಿದೆ. ಬಂಧು ಬಾಂಧವರೊಡನೆ ಜಗಳ ಮಾಡಿಕೊಳ್ಳಬೇಡಿ. ವಿದೇಶಿ ಕಂಪನಿಗಳ ಜೊತೆ ವ್ಯವಹಾರ ಮಾಡುವುದು ಅಷ್ಟು ಒಳಿತಲ್ಲ. ನೀರು ಮತ್ತು ರೂಪದ ದ್ರವರೂಪದ ವಸ್ತುಗಳನ್ನು ಮಾರುವವರಿಗೆ ಲಾಭ ಹೆಚ್ಚು .ಹೋಟೆಲ್ ಉದ್ಯಮದವರಿಗೆ ವ್ಯವಹಾರ ವಿಸ್ತರಣೆ ಯಾಗುವುದು .

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1 )

ವಿನಾಕಾರಣ ಇನ್ನೊಬ್ಬರ ಮೇಲೆ ಸಂಶಯ ಪಡದಿರಿ ಅವರ ಸ್ನೇಹ ಹೋದೀತು ಎಚ್ಚರ. ಖಾಸಗಿ ಕಂಪನಿ ಅಧಿಕಾರ ಸ್ಥಾನದಲ್ಲಿರುವವರು ನಮ್ಮ ನಡೆ ನುಡಿಗಳನ್ನು ಸ್ವಲ್ಪ ತಿದ್ದಿಕೊಳ್ಳಬೇಕಾಗುತ್ತದೆ. ನೀವು ಎಂದೋ ಕೊಟ್ಟಿದ್ದ ಸಾಲದಲ್ಲಿ ಸ್ವಲ್ಪ ಭಾಗ ವಾಪಸ್ ಬಂದು ಸಮಾಧಾನವಾಗುತ್ತದೆ. ಹಿರಿಯರು ಆಡುತ್ತಿರುವ ನಾಟಕ ಎಲ್ಲರಿಗೂ ಗೊತ್ತಾದರೂ ಸುಮ್ಮನೆ ಇರುವರು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು. ತುಂಬಾ ಚುರುಕಾಗಿ ಕೆಲಸ ಮಾಡುವಿರಿ. ಹಣದ ಹರಿವು ಉತ್ತಮವಾಗಿರುತ್ತದೆ. ಬಂಧು ಬಾಂಧವರಲ್ಲಿ ಸಂಬಂಧ ಗಟ್ಟಿಗೊಳ್ಳುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಮಡದಿಯ ಕೋಪವನ್ನು ಸಹಿಸಿಕೊಂಡು ಅದನ್ನು ಆಲಿಸುವುದು ತಣ್ಣಗಾಗಿಸುವುದು ಅನಿವಾರ್ಯ. ನಿಮ್ಮ ಯಶಸ್ಸನ್ನು ಬೇರೆಯವರು ದುರುಪಯೋಗ ಮಾಡಿಕೊಳ್ಳಬಹುದು ಎಚ್ಚರವಾಗಿರಿ. ಸಹೋದ್ಯೋಗಿಗಳ ಸಹಾಯದಿಂದ ಕೆಲಸದಲ್ಲಿ ಉನ್ನತಿ. ಉದ್ದಿಮೆಯಲ್ಲಿನ ಸಮಸ್ಯೆಗಳಿಗೆ ತಜ್ಞರ ಸಲಹೆ ಅತಿ ಮುಖ್ಯ. ಹೊಸ ರೀತಿಯ ಅಧಿಕಾರ ಮತ್ತು ಸನ್ನಿವೇಶಗಳು ಎದುರಾಗಲಿವೆ. ನಿಮ್ಮದೇ ಆದ ಪ್ರಭಾವ ವಲಯವನ್ನು ಸೃಷ್ಟಿಸಿಕೊಂಡು ದೊಡ್ಡವರ ಸಂಪರ್ಕ ಪಡೆಯುವಿರಿ. ಹಣದ ಹರಿವು ಸಾಮಾನ್ಯವಾಗಿರುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ನೀವು ಕೊಡುವ ಅನೇಕ ಸಲಹೆಗಳು ಜನರಿಗೆ ಅನುಕೂಲವಾಗಿಯೇ ಫಲಿತಾಂಷ ನೀಡಿ ಜನರ ಮನದಲ್ಲಿ ಉಳಿದುಕೊಳ್ಳುತ್ತವೆ. ಧನ ಸಂಗ್ರಹ ತೃಪ್ತಿಕರವಾಗಿ ಇರುತ್ತದೆ .ಉದ್ಯೋಗ ರಹಿತರಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಅವಿವಾಹಿತರಿಗೆ ವಿವಾಹ ಒದಗುವ ಭಾಗ್ಯ. ಲೇವಾದೇವಿ ವ್ಯವಹಾರಗಳು ಖಂಡಿತ ಖಂಡಿತಾ ಸದ್ಯಕ್ಕೆ ಬೇಡ. ಆಸ್ತಿ ಖರೀದಿಯನ್ನು ಸ್ವಲ್ಪಕಾಲ ಮುಂದೂಡಿರಿ. ವೃತ್ತಿಯಲ್ಲಿರುವವರಿಗೆ ಅನಿರೀಕ್ಷಿತ ಬೆಳವಣಿಗೆಯ ನಡೆದು ವರ್ಗಾವಣೆಯ ಸಾಧ್ಯತೆ .

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ವ್ಯವಹಾರಗಳಲ್ಲಿ ನಿಮ್ಮ ಹಿಡಿತ ತಪ್ಪುವ ಸಂದರ್ಭ. ಧನ ಸಂಗ್ರಹ ಹೆಚ್ಚುತ್ತದೆ. ಬಂಧುಗಳ ಆಸ್ತಿ ಹಂಚಿಕೆ ವಿಚಾರಕ್ಕೆ ಹೋಗಬೇಡಿ. ವೃತ್ತಿಯಲ್ಲಿ ಹಿತಶತ್ರುಗಳ ಬಾಧೆಯಿಂದ ಸ್ವಲ್ಪ ಮಂಕು ಕವಿದ ವಾತಾವರಣ. ಹಣದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಿರಿ. ಉಸಿರಾಟದ ತೊಂದರೆಯನ್ನು ನಿರ್ಲಕ್ಷಿಸಬೇಡಿ. ಎಲ್ಲರಿಗೂ ಬುದ್ಧಿವಾದ ಹೇಳಲು ಹೋದರೆ ನಿಮಗೇ ಅಗೌರವ. ಶಾಲಾ-ಕಾಲೇಜುಗಳನ್ನು ನಡೆಸುತ್ತಿರುವವರಿಗೆ ಅಭಿವೃದ್ಧಿ ಇದೆ. ಇವರು ಹೊಸ ಶಾಖೆಗಳನ್ನು ತೆರೆಯಬಹುದು.

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

    ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

    ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.