ಬುಧವಾರ, ಜನವರಿ 27, 2021
24 °C

ವಾರ ಭವಿಷ್ಯ | 14–06–2020 ರಿಂದ 20–06–2020 ರವರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಷ ರಾಶಿ

ಮನಸ್ಸಿಗೆ ಚಿಂತೆ ಕವಿದು ಸ್ವಲ್ಪ ಮಂಕಾಗಿರುವಿರಿ. ಸರ್ಕಾರಿ ಮೂಲಗಳಿಂದ ಸಾಲ ಅಥವಾ ಸಹಾಯ ಒದಗುತ್ತದೆ. ಸ್ವಲ್ಪ
ಆಲಸ್ಯದ ನಡವಳಿಕೆ ಇರುತ್ತದೆ. ತಾಯಿಯೊಡನೆ ಸ್ವಲ್ಪ ಮುನಿಸು ಬರಬಹುದು. ಮಕ್ಕಳು ಮಾನಸಿಕ ಸ್ಥೈರ್ಯವನ್ನು
ತುಂಬುವವರು. ಬಂಧುಗಳಲ್ಲಿ ಅಥವಾ ಒಡಹುಟ್ಟಿದವರಲ್ಲಿ ಹಣದ ವ್ಯವಹಾರ ಬೇಡ. ಸಂಗಾತಿಯ ಸ್ಥೈರ್ಯ ಹಣದ ನಿರ್ವಹಣೆಗೆ
ಸಹಕಾರಿಯಾಗುತ್ತದೆ. ಉದ್ಯೋಗದಲ್ಲಿ ಇದ್ದ ಅಸ್ತಿರತೆಯ ವಾತಾವರಣ ನಿರ್ಮೂಲವಾಗುತ್ತದೆ. ಕೃಷಿಕರಿಗೆ ಆದಾಯ
ನಿಧಾನವಾಗಿ ಏರುತ್ತದೆ.

**
ವೃಷಭರಾಶಿ

ಆತ್ಮ ವಿಶ್ವಾಸವು ಹೆಚ್ಚಾಗಿ ನಿಮ್ಮಕೆಲಸಗಳ ಮೇಲೆ ನಂಬಿಕೆ ಬರುತ್ತದೆ. ಹಣದ ಹರಿವಿನಲ್ಲಿ ಸ್ವಲ್ಪ ಕಡಿಮೆ ಇರುತ್ತದೆ.
ಸೈನಿಕ ಹೈನುಗಾರಿಕೆ ಮಾಡುತ್ತಿರುವವರಿಗೆ ವ್ಯವಹಾರದಲ್ಲಿ ಚೇತರಿಕೆ. ಸೈನಿಕರಿಗೆ ಸಿಗಬೇಕಾಗಿದ್ದ ಸೌಲಭ್ಯಗಳು ಈಗ
ಸಿಗಲಾರಂಭಿಸುತ್ತವೆ. ವಿದ್ಯುತ್ ಪ್ರಸರಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡ ಜಾಸ್ತಿ ಆಗಬಹುದು. ಅನಿರೀಕ್ಷಿತ
ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯವಿದೆ. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ವ್ಯವಹಾರದಲ್ಲಿ ವೃದ್ಧಿ ಇದ್ದು ಸಂಪಾದನೆ
ಹೆಚ್ಚುತ್ತದೆ.

**
ಮಿಥುನ ರಾಶಿ

ಅತಿಬುದ್ಧಿವಂತಿಕೆಯಿಂದ ಎಡವಟ್ಟಾಗಬಹುದು. ಆದಾಯದ ಅಷ್ಟೇ ಖರ್ಚು ಸಹ ಇರುತ್ತದೆ. ಬಂಧುಗಳು ಧನಸಹಾಯ
ಕೇಳಲು ಬರಬಹುದು. ಸಂಸಾರದಲ್ಲಿ ಸ್ವಲ್ಪ ಸಹನೆಯಿಂದ ಇರುವುದು ಮುಖ್ಯ. ಹೆಣ್ಣುಮಕ್ಕಳ ಅಲಂಕಾರಕ್ಕೆ ಹಣ ಖರ್ಚಾಗುವುದು.
ಆಸ್ತಿಯ ಮೇಲಿನ ಸಾಲವನ್ನು ಕಟ್ಟಲು ಹೆಚ್ಚಿನ ಸಮಯ ಸಿಗುವುದು. ಅನಿರೀಕ್ಷಿತವಾಗಿ ಬರಲಾರದು ಎಂದುಕೊಂಡಿದ್ದ ಸಾಲದ
ಹಣದಲ್ಲಿ ಸ್ವಲ್ಪ ಬರುವುದು. ತಂದೆಯ ಜೊತೆ ಕೃಷಿ ವಿಸ್ತರಣೆಗೆ ಕೈ ಹಾಕುವಿರಿ. ಸರ್ಕಾರಿ ಹುದ್ದೆಯಲ್ಲಿರುವವರಿಗೆ ಉತ್ತಮ ಸ್ಥಾನ
ಸಿಗುವ ಲಕ್ಷಣಗಳಿವೆ.

**
ಕಟಕ ರಾಶಿ

ದಿನಸಿ ವ್ಯಾಪಾರಿಗಳಿಗೆ ಲಾಭ. ಹಣ್ಣು-ತರಕಾರಿ ವ್ಯಾಪರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ಅಜೀರ್ಣ ಬಾಧೆ ಕಾಣಿಸಬಹುದು.
ವಿವಾಹದ ಮಾತುಕತೆಗಳು ಮುಂದುವರೆಯುತ್ತವೆ. ಅನಿರೀಕ್ಷಿತವಾಗಿ ಭೂಮಿಯನ್ನು ಕೊಳ್ಳಲು ನಿಮಗೆ ಆಹ್ವಾನ ಬರುತ್ತದೆ. ತಾಯಿ
ತಾಯಿಯಿಂದ ನಿಮ್ಮ ಕೆಲಸಗಳಿಗೆ ಮೆಚ್ಚಿಗೆ ದೊರೆಯುತ್ತದೆ. ಮೇಕಪ್ ಮಾಡುವವರರಿಗೆ ಕೆಲಸ ಬರಲಾರಂಭಿಸುತ್ತದೆ. ಕಣ್ಣಿನಲ್ಲಿ ಆಗಿದ್ದ ಬಾವು ಕಡಿಮೆಯಾಗುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿದ್ದವರಿಗೆ ಸ್ವಲ್ಪ
ಹಿನ್ನೆಡೆ ಇರುತ್ತದೆ.

**
ಸಿಂಹ ರಾಶಿ

ಉದ್ಯೋಗದಲ್ಲಿದ್ದ ಸಂಕಷ್ಟಗಳು ಕಡಿಮೆಯಾಗಿ ನಿರಾಳವಾದ ವಾತಾವರಣ ಮೂಡುತ್ತದೆ. ಔಷಧಿ ವ್ಯಾಪಾರಿಗಳಿಗೆ ವ್ಯವಹಾರದ ವಿಸ್ತರಣೆ. ಹೆಣ್ಣುಮಕ್ಕಳಿಗೆ ತಂದೆಯಿಂದ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟದ ಸಾಧನೆ ಮಾಡಲಾಗದಿರಬಹುದು.ನ್ಯಾಯವಾದಿಗಳಿಗೆ ಕೆಲವು ದಾವೆಗಳಲ್ಲಿ ಹಿನ್ನಡೆ ಎನಿಸಬಹುದು. ಸಂಗಾತಿಯೊಂದಿಗಿನ ಅನುಬಂಧ ಹೆಚ್ಚಾಗುವುದು.ತಾಯಿಯ ಔಷಧಿ ಮತ್ತು ಉಪಚಾರಗಳಿಗಾಗಿ ಹಣ ಮೀಸಲಿಡಿ. ತಂದೆಯ ಪಿತ್ರಾರ್ಜಿತ ಆಸ್ತಿಗಳ ಹಂಚಿಕೆಯ ಬಗ್ಗೆ ಇದ್ದ ಗೊಂದಲಗಳು ನಿವಾರಣೆಯಾಗುತ್ತವೆ.

**
ಕನ್ಯಾ ರಾಶಿ

ವೈದ್ಯಾಧಿಕಾರಿಗಳು ತಮ್ಮ ಕರ್ತವ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ವ್ಯವಹಾರದಲ್ಲಿ ಒಳಸಂಚು ಮಾಡುವವರು
ಇರುತ್ತಾರೆ ಎಚ್ಚರ. ವಿದ್ಯಾರ್ಥಿಗಳಿಗೆ ಒಂದು ಸಂತೋಷವಾದ ವಾರ್ತೆ ಕೇಳಿಬರಬಹುದು. ಬೆಂಕಿಯೊಡನೆ ಕೆಲಸ ಮಾಡುವವರು
ಎಚ್ಚರವಾಗಿರಿ. ಅನಿರೀಕ್ಷಿತ ಪ್ರೀತಿ ಪ್ರೇಮಗಳು ಮೂಡಬಹುದು. ತಂದೆಯಿಂದ ಅಥವಾ ಹಿರಿಯರಿಂದ ಸಹಾಯಗಳು ಬರುತ್ತವೆ.
ಉದ್ಯೋಗ ಬದಲಾವಣೆ ಮಾಡಲಿಚ್ಛಿಸುವವರು ಈಗ ಸುಮ್ಮನಿರಿ. ಸಂಗಾತಿಯು ಮಾಡುತ್ತಿದ್ದ ವ್ಯಾಪಾರವು
ಚಿಗುರ ತೊಡಗುತ್ತದೆ.

**
ತುಲಾ ರಾಶಿ

ಹಣದ ಹರಿವು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ . ಮಾತಿನಲ್ಲಿ ಕಠೋರತೆ ಇರುತ್ತದೆ, ತಾಳ್ಮೆ ಇದ್ದಲ್ಲಿ ನಿಮಗೆ ಅನುಕೂಲ. ನಿಮ್ಮ ಪ್ರಮುಖ ಕೆಲಸಗಳಲ್ಲಿ ಕೆಲವು ಮಾತ್ರ ಆಗುತ್ತವೆ. ಆತಂಕ ಪಡುತ್ತಿದ್ದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಒಂದು ಮಾರ್ಗಸೂಚಿ ದೊರೆಯುತ್ತದೆ. ನರದೌರ್ಬಲ್ಯ ಇರುವವರು ಔಷಧ ಉಪಚಾರಗಳಿಗೆ ಹೋಗುವುದು ಉತ್ತಮ. ಸಂಗಾತಿಯ ಧನಾಭಿವೃದ್ಧಿಗೆ ನಿಮ್ಮ ಸಲಹೆಗಳು ಪೂರಕವಾಗುತ್ತದೆ. ವೃತ್ತಿಯಲ್ಲಿ ತೃಪ್ತಿ ಇರುತ್ತದೆ. ತಂದೆಯವರ ಜೊತೆ ಸಂಬಂಧ ಸ್ವಲ್ಪ ಬಿಗಡಾಯಿಸಬಹುದು.

**
ವೃಶ್ಚಿಕ ರಾಶಿ

ಧಾರ್ಮಿಕ ವಿಧಿ ವಿಧಾನಗಳನ್ನು ಕಲಿಯಲು ಆಸಕ್ತಿ ತೋರುವಿರಿ. ಬಂಧುಗಳಲ್ಲಿ ಕೆಲವರು ನಿಮ್ಮ ಅಭಿಪ್ರಾಯಗಳಿಗೆ
ವಿರೋಧ ತೋರುವರು. ಸ್ಥಿರಾಸ್ತಿಯ ವಿಚಾರದಲ್ಲಿ ನಡೆದಿದ್ದ ವಾದ-ವಿವಾದಗಳಲ್ಲಿ ನಿಮಗೆ ಗೆಲುವು ಇರುತ್ತದೆ. ವಿದ್ಯಾರ್ಥಿಗಳಿಗೆ ಅವರಿಗೆ ಇಷ್ಟವಾದ ವಿಷಯಗಳ ದೊರೆಯುವ ಬಗ್ಗೆ ಇದ್ದ ಆತಂಕ ನಿವಾರಣೆಯಾಗುವುದು. ಹರಿತವಾದ ಆಯುಧಗಳನ್ನು ಉಪಯೋಗಿಸುವರು ಸ್ವಲ್ಪ ಎಚ್ಚರ ವಹಿಸಿರಿ. ಸಂಗಾತಿಗೆ ವೃತ್ತಿಯಲ್ಲಿ ಸಿಗಬೇಕಾಗಿದ್ದ ಸ್ಥಾನಗಳು ದೊರೆಯುವ ಸಂಭವವಿದೆ.

**
ಧನಸ್ಸು ರಾಶಿ

ಖರ್ಚು ಮತ್ತು ಆದಾಯ ಸಮವಾಗಿರುತ್ತದೆ. ಬಹಳ ಚುರುಕಾಗಿ ಕೆಲಸ ಮಾಡುವಿರಿ. ಸಂಗಾತಿಯೊಡನೆ ಆನಂದವಾಗಿ
ಕಾಲಕಳೆಯುವ ಯೋಗ. ನಿಮ್ಮ ಚಟುವಟಿಕೆಗಳಿಗೆ ಮಕ್ಕಳು ಮತ್ತು ಸಹಜಾತರು ಸಹಕಾರ ನೀಡುವರು. ನಿರೀಕ್ಷಿಸಿದ್ದ ಸಾಲಗಳು
ಸಿಗದೆಹೋದರೂ ಸರ್ಕಾರದ ಕಡೆಯಿಂದ ಸಾಲ ಅಥವಾ ಸಹಾಯ ಸಿಗುತ್ತದೆ. ಕಬ್ಬಿಣ ಮತ್ತು ಉಕ್ಕನ್ನು ತಯಾರು
ಮಾಡುವವರಿಗೆ ಹೊಸ ಆದೇಶಗಳು ಸಿಗುತ್ತವೆ. ಉದ್ಯೋಗದಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗಿ ಹೊಸ ಕೆಲಸವನ್ನು
ಕಲಿಯುವ ಅವಕಾಶ ಸಿಗುತ್ತದೆ.

**
ಮಕರ ರಾಶಿ

ನಿಮ್ಮ ವ್ಯಕ್ತಿತ್ವದ ಬೆಲೆಯು ಸಮಾಜಕ್ಕೆ ಗೊತ್ತಾಗಿ ನಿಮಗೆ ಗೌರವ ತೋರಿಸುವರು. ಕೋಪಕ್ಕೆ ಕಡಿವಾಣವನ್ನು ಹಾಕಿ
ಸಮಾಧಾನವಾಗಿ ಇರುವುದು ಒಳ್ಳೆಯದು. ಕೃಷಿ ಬೆಳೆಗೆ ತೃಪ್ತಿಕರ ಬೆಲೆ ಸಿಗುವುದು. ಪಾರಂಪರಿಕ ಕೃಷಿಗೆ ಹೆಚ್ಚು ಒಲವು
ತೋರುವಿರಿ. ಮಕ್ಕಳ ಅಭಿವೃದ್ಧಿಯು ನಿರೀಕ್ಷೆಯ ಮಟ್ಟಕ್ಕೆ ಇರುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗಿದ್ದ ಧನಸಹಾಯ
ಒದಗಿಬರುವುದು. ಯಾರದೋ ಸಾಲಕ್ಕೆ ಜಾಮೀನು ಆಗುವುದು ಕಷ್ಟ ತರಬಹುದು. ಮಿಶ್ರಲೋಹಗಳನ್ನು ತಯಾರಿಸುವವರಿಗೆ
ಮಾರುಕಟ್ಟೆ ಒದಗುತ್ತದೆ.

**
ಕುಂಭ ರಾಶಿ

ಸಾಹಸ ಕಲಾವಿದರಿಗೆ ಅವಕಾಶಗಳು ಸಿಗುತ್ತವೆ. ಕುಸ್ತಿಪಟುಗಳಿಗೆ ಬೇಕಾದ ಸೂಕ್ತ ಮಾರ್ಗದರ್ಶಕರು ಒದಗುವರು.
ಗಾಯಕರಿಗೆ ಮತ್ತು ನೃತ್ಯಗಾರರರಿಗೆ ಬೇಡಿಕೆ ಬರಲಾರಂಭಿಸುತ್ತದೆ. ಕುಟುಂಬದಲ್ಲಿ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಲು
ಯತ್ನಿಸುವಿರಿ. ಬಾಯಿಯಲ್ಲಿ ಅಥವಾ ಹಲ್ಲಿನಲ್ಲಿ ತೊಂದರೆ ಕಾಣಿಸಬಹುದು. ಹೆಂಗಸರು ಮಾಡುವ ವ್ಯಾಪಾರಗಳು ಉನ್ನತಿಯತ್ತ ಸಾಗತೊಡಗುತ್ತವೆ. ಕೆಲಸಕಾರ್ಯಗಳಲ್ಲಿ ನಿಮ್ಮ ಅನುಭವವನ್ನು ಸೇರಿಸಿ ಉತ್ತಮ ಫಲಿತಾಂಶ ಪಡೆಯುವಿರಿ. ಅಶಕ್ತರಿಗೆ ಸೇವೆ ಮಾಡುತ್ತಿರುವವರಿಗೆ ಸಮಾಜದಿಂದ ಸಹಾಯ ದೊರೆಯುತ್ತದೆ.

**
ಮೀನ ರಾಶಿ

ನಿಮ್ಮ ತಂತ್ರಗಳು ಫಲ ನೀಡಿ ವಿರೋಧಿಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ. ಕುಟುಂಬದಲ್ಲಿ ಖರ್ಚು ಹೆಚ್ಚಾಗುವ
ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಫಲಿತಾಂಶ. ಬಂಧುಗಳೊಂದಿಗೆ ಮಾಡಿದ ಹಣದ ವ್ಯವಹಾರ ಹಗರಣಕ್ಕೆ
ಕಾರಣವಾಗಬಹುದು. ಸಂಸಾರದಲ್ಲಿ ಇದ್ದ ಕಸಿವಿಸಿ ದೂರವಾಗಿ ಸಂತೋಷ ಮೂಡುತ್ತದೆ. ಕಬ್ಬಿಣದ ವ್ಯವಹಾರವನ್ನು
ಮಾಡುವವರಿಗೆ ಉತ್ತಮ ಅವಕಾಶಗಳಿವೆ. ಉಪಾಧ್ಯಾಯರುಗಳಿಗೆ ಅವರ ಶಿಷ್ಯರಿಂದ ಗೌರವ ದೊರೆಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.