ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ
ಜ್ಯೋತಿಷ್ಯ ಪದ್ಮಭೂಷಣ,ಸಂಪರ್ಕ: 8197304680

ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)
ಅನವಶ್ಯ ಖರ್ಚು ಎದುರಾಗಬಹುದು, ಆಲೋಚಿಸಿ ಖರ್ಚು ಮಾಡಿ. ಮಾನಸಿಕ ಉದ್ವೇಗ ಕಡಿಮೆ ಮಾಡಿಕೊಳ್ಳುವುದು ಉತ್ತಮ. ತೊಂದರೆ ಎದುರಾದರೂ ಬುದ್ಧಿವಂತಿಕೆಯಿಂದ ನಿಭಾಯಿಸುವಿರಿ. ವ್ಯವಹಾರಗಳಲ್ಲಿ ಅಡೆತಡೆ ಎದುರಾದರೂ ಸಹ ವ್ಯವಹಾರ ನಿಲ್ಲುವುದಿಲ್ಲ. ಮಧ್ಯವರ್ತಿಗಳ ಸಹಾಯದಿಂದ ವ್ಯವಹಾರಗಳು ಸುಸೂತ್ರವಾಗಿ ನಡೆಯುತ್ತವೆ. ನೀರಿನಿಂದ ರೋಗಗಳು ಬರಬಹುದು ಎಚ್ಚರ ವಹಿಸಿರಿ. ಸರ್ಕಾರಿ ಸಂಸ್ಥೆಗಳಿಗೆ ವಸ್ತುಗಳ ಸರಬರಾಜು ಗುತ್ತಿಗೆ ಪಡೆದವರಿಗೆ ಹೊಸ ಗುತ್ತಿಗೆ ಆದೇಶ ಸಹ ಸಿಗುತ್ತದೆ. ತಂದೆಯಿಂದ ಧನಸಹಾಯ ದೊರೆಯುತ್ತದೆ.

ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ1 2)
ಪ್ರಮುಖ ಯೋಜನೆಗಳ ಆಗುಹೋಗುಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಪರಿಶೀಲಿಸುವಿರಿ. ಮಧ್ಯಸ್ಥಿಕೆ ವ್ಯವಹಾರಗಳಲ್ಲಿ ಗಂಭೀರ ಚಿಂತನೆ ನಡೆದು ನಿಮಗೆ ಹೆಚ್ಚು ಲಾಭವಾಗುತ್ತದೆ.ಉದ್ಯೋಗ ಕ್ಷೇತ್ರದಲ್ಲಿ ಸಲ್ಪ ಯಶಸ್ಸು ಸಾಧಿಸುವಿರಿ. ಹೆಣ್ಣುಮಕ್ಕಳು ನಡೆಸುವ ವ್ಯವಹಾರಗಳಲ್ಲಿ ಆದಾಯ ಹೆಚ್ಚಿರಲಿದೆ. ಪಾರಂಪರಿಕ ಕೃಷಿ ಮಾಡುವವರಿಗೆ ಉತ್ತಮ ಬೇಡಿಕೆ ಮತ್ತು ಬೆಲೆ ಬರುತ್ತದೆ. ಕರಿದ ತಿಂಡಿಗಳನ್ನು ತಯಾರಿಸಿ ಮಾರುವವರ ವ್ಯವಹಾರ ವೃದ್ಧಿಸುತ್ತದೆ. ಸ್ವಂತ ಆರೋಗ್ಯಕ್ಕಾಗಿ ಸ್ವಲ್ಪ ಹಣ ಮೀಸಲಿಡಿ. ವಿದ್ಯಾರ್ಥಿಗಳಿಗೆ ತಾವು ಕಲಿಯುವ ವಿಷಯದ ಬಗ್ಗೆ ಗೊಂದಲ ಉಂಟಾಗಬಹುದು, ತಾಳ್ಮೆಯಿಂದ ಆಲೋಚಿಸಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ವ್ಯವಹರಿಸಿ ಲಾಭ ಮಾಡಿಕೊಳ್ಳಿ. ಹಣದ ಒಳಹರಿವು ಉತ್ತಮ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚು. ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿರುವವರ ಬಣ್ಣ ಬಯಲಾಗಲಿದೆ. ವ್ಯವಹಾರದಲ್ಲಿ ತಾಯಿಯು ಮಧ್ಯಪ್ರವೇಶಿಸಿ ವ್ಯವಹಾರ ಸರಿದಾರಿಗೆ ತರುವರು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚುವುದು. ರಾಜಕಾರಣಿಗಳು ತಮ್ಮಸ್ಥಾನ ಭದ್ರತೆಗಾಗಿ ಹೋರಾಡಬೇಕಾಗಬಹುದು. ಸಂಗೀತಗಾರರಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಕಳೆದುಹೋದ ಗೌರವ ಮತ್ತೆ ಪಡೆಯಲು ಉತ್ಸುಕರಾಗುವಿರಿ. ಸಂಗಾತಿಯು ನಿಮ್ಮ ಮೇಲೆ ಮುನಿಸಿಕೊಳ್ಳಬಹುದು. ಸಹೋದರಿಯರು ನಿಮ್ಮಿಂದ ಸಹಾಯ ಬಯಸಿ ಬರಬಹುದು. ಉಪನ್ಯಾಸಕರಿಗೆ ಉತ್ತಮ ಅವಕಾಶ ದೊರೆತು ಒಳ್ಳೆಯ ವಿಷಯಗಳ ಬಗ್ಗೆ ಉಪನ್ಯಾಸ ಮಂಡಿಸಿ ಜನರಿಂದ ಗೌರವ ಪಡೆಯುವರು. ಮಕ್ಕಳು ನಿಮ್ಮಿಂದ ಅವರ ಆಸೆಗಳಿಗಾಗಿ ಹಣ ಖರ್ಚು ಮಾಡಿಸುವರು. ಪಾಲುದಾರಿಕೆ ವ್ಯವಹಾರಗಳಲ್ಲಿ ಸ್ವಲ್ಪ ಮಾತಿನ ಚಕಮಕಿ ನಡೆಯಬಹುದು. ತರಕಾರಿ ಬೆಳೆಗಾರರಿಗೆ ಹೆಚ್ಚಿನ ಲಾಭ ದೊರೆಯುವುದು. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ಆದಾಯ ಹೆಚ್ಚುವುದು.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಬಂಧುಗಳೊಡನೆ ಉತ್ತಮ ಬಾಂಧವ್ಯ ಹೊಂದುವಿರಿ. ಆರ್ಥಿಕ ಸ್ಥಿತಿಯು ಚೇತರಿಕೆಯ ಹಾದಿಯಲ್ಲಿ ಸಾಗುವುದು. ಆಸ್ತಿಯ ವಿಚಾರದಲ್ಲಿ ಸ್ವಲ್ಪ ತಗಾದೆ ಏಳಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರೆತು ಹೆಚ್ಚಿನ ಸಾಧನೆ ಮಾಡಿ ತೋರಿಸಬಹುದು. ದೇಹದಲ್ಲಿ ವಾಯು ಪ್ರಕೋಪ ಹೆಚ್ಚಾಗುವ ಸಾಧ್ಯತೆ ಇದೆ. ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿ, ಇದಕ್ಕೆ ಅನುಭವಿಗಳಿಂದ ಸಹಾಯ ದೊರಕುವುದು. ಹೊಂದಿಕೊಳ್ಳುವ ಮನೋಭಾವ ತೋರಿಸಿದಲ್ಲಿ ನಿಮ್ಮ ಕೆಲವು ಒಡಂಬಡಿಕೆಗಳು ಸರಿದಾರಿಗೆ ಬರುತ್ತವೆ. ಶತ್ರುಗಳ ವಿರುದ್ಧ ಜಯ ಖಂಡಿತವಾಗಿ ಸಾಧಿಸಬಹುದು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಸಂಕಷ್ಟಗಳು ಪರಿಹಾರದತ್ತ ಸಾಗುತ್ತವೆ. ನಿಂತಿದ್ದ ಕೆಲಸಗಳಿಗೆ ಚಾಲನೆ ದೊರೆತು ಪ್ರಗತಿಯ ಪಥದಲ್ಲಿ ಸಾಗುತ್ತವೆ. ನಿಮ್ಮ ದುಡುಕುತನದಿಂದ ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ ಆಗಬಹುದು. ಕುಟುಂಬದ ಸದಸ್ಯರೊಡನೆ ಸಂತಸದಿಂದ ಕಾಲ ಕಳೆಯಬಹುದು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ತೋರಬೇಕು. ಸಂಶೋಧಕರಿಗೆ ಅವರ ಸಂಶೋಧನೆಯಲ್ಲಿ ಹೊಸಬೆಳಕು ಕಾಣುತ್ತದೆ. ಇವರಿಗೆ ವಿದೇಶಿ ಕಂಪನಿಗಳಿಂದ ಸಹಾಯ ದೊರೆಯುವುದು. ವೃತ್ತಿಯಲ್ಲಿ ನಿಮ್ಮ ವರ್ಚಸ್ಸು ಹೆಚ್ಚುವುದು. ಸಾವಯವ ಕೃಷಿ ಮಾಡುವವರಿಗೆ ಉತ್ತಮ ಅವಕಾಶವಿರುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಅತಿಯಾದ ಆತ್ಮಗೌರವದಿಂದಾಗಿ ಜನಗಳ ಪ್ರೀತಿ ಕಳೆದುಕೊಳ್ಳುವಿರಿ. ಹಣದ ಹರಿವು ಅಷ್ಟು ತೃಪ್ತಿದಾಯಕವಾಗಿ ಇರುವುದಿಲ್ಲ. ಗಂಭೀರ ವಿಷಯಗಳನ್ನು ಕುಟುಂಬದವರೊಡನೆ ಕುಳಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಕುಟುಂಬದವರ ಸಹಾಯಗಳು ನಿಲ್ಲಬಹುದು. ಕೆಲಸ ಕಾರ್ಯಗಳಲ್ಲಿ ಮಂದಗತಿ ಇರುತ್ತದೆ. ಆಸ್ತಿ ಹಂಚಿಕೆಯ ವಿಚಾರದಲ್ಲಿ ಸಮಸ್ಯೆಗಳು ಆಗಬಹುದು. ಬಂಧುಗಳೊಡನೆ ಹಣಕಾಸಿನ ವ್ಯವಹಾರ ಮಾಡದಿರುವುದು ಉತ್ತಮ. ಹೈನುಗಾರಿಕೆ ಮಾಡುತ್ತಿರುವವರಿಗೆ ಆದಾಯ ಹೆಚ್ಚಾಗುವುದು.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಆಕರ್ಷಣೀಯ ವ್ಯಕ್ತಿತ್ವದ ಜೊತೆಗೆ ನಿಮ್ಮ ನಡವಳಿಕೆಯಿಂದಾಗಿ ಅಭಿಮಾನಿಗಳು ಹೆಚ್ಚಾಗುವರು. ಸಮರ್ಥ ಕಾರ್ಯಗಳನ್ನು ಸರಿಯಾಗಿ ನಿಭಾಯಿಸಿ ಜನರ ಮೆಚ್ಚುಗೆ ಗಳಿಸುವಿರಿ. ನಿಮ್ಮ ಪರಿಶ್ರಮದ ಮುಂದೆ ನಿಮ್ಮ ಕಷ್ಟಗಳು ಕರಗಲಾರಂಭಿಸುತ್ತವೆ. ಹಣದ ಒಳಹರಿವು ಸುಸ್ಥಿತಿಯಲ್ಲಿರುತ್ತದೆ. ವೃತ್ತಿಯಲ್ಲಿ ನಿಮ್ಮ ಮೇಲಿದ್ದ ಆಪಾದನೆಗಳಿಂದ ಮುಕ್ತಿ ಕಾಣುವಿರಿ. ಮಕ್ಕಳ ಬಗ್ಗೆ ಸರಿಯಾದ ಕಾಳಜಿ ವಹಿಸಿರಿ. ಕೃಷಿಯಲ್ಲಿ ಉತ್ತಮ ಸಾಧನೆ ಮಾಡಬಹುದು ಮತ್ತು ಹೆಚ್ಚಿನ ಗಳಿಕೆ ಸಹ ಪಡೆಯಬಹುದು. ಸಿದ್ಧ ಉಡುಪುಗಳನ್ನು ತಯಾರಿಸುವವರಿಗೆ ಬೇಡಿಕೆ ಬರುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1 )
ನೈತಿಕ ಬಲದಿಂದ ನಿಮ್ಮ ಸುತ್ತ ಉತ್ತಮ ವಾತಾವರಣ ಉಂಟುಮಾಡುವಿರಿ. ಇದಕ್ಕಾಗಿ ಸಾರ್ವಜನಿಕ ಪ್ರಶಂಸೆಗಳು ಕೇಳಿ ಬರುತ್ತವೆ. ಬೇರೆಯವರ ಸಲಹೆ ನಂಬಿ ಹಣಹೂಡಿಕೆ ಮಾಡಬೇಡಿ, ಇದರಿಂದ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ. ಉತ್ತಮ ತಂತ್ರಗಳಿಂದ ಮತ್ತು ಪರಾಕ್ರಮದಿಂದ ಶತ್ರುಗಳನ್ನು ಮಣಿಸುವಿರಿ. ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವಾಗ ಹಿಂಜರಿಕೆ ಬೇಡ. ಹಣದ ಹರಿವು ಸಾಮಾನ್ಯ. ಆರ್ಥಿಕ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯ. ವ್ಯವಹಾರಗಳಲ್ಲಿ ಸುಗಮ ಚರ್ಚೆಗಳು ನಡೆದು ಪ್ರಮುಖ ನಿರ್ಧಾರಗಳು ಹೊರಬರುತ್ತವೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯ ಕಂಡು ಹಿರಿಯ ಅಧಿಕಾರಿಗಳು ಗೌರವಿಸುವರು. ನಿಮ್ಮ ಸಹನಾಶಕ್ತಿಯು ನಿಮ್ಮನ್ನು ಕಾಯುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳಲ್ಲಿ ಕೆಲವನ್ನು ಮಾಡಿ ಮುಗಿಸಬಹುದು. ತಂದೆ ಮಕ್ಕಳ ನಡುವೆ ಬಾಂಧವ್ಯವು ವೃದ್ಧಿಸುತ್ತದೆ.ವಿದೇಶದಲ್ಲಿ ಓದುತ್ತಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ನರದೌರ್ಬಲ್ಯಗಳು ಸ್ವಲ್ಪ ಬಾಧಿಸಬಹುದು. ತಂದೆಯಿಂದ ಧನಸಹಾಯ ದೊರೆಯುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ. ಬಂಧುಗಳಿಗೆ ಕೊಟ್ಟ ಹಣ ವಾಪಸ್ಸು ಬಾರದಿರಬಹುದು ಎಚ್ಚರ. ಖರ್ಚು ಕಡಿಮೆ ಮಾಡುವುದು ಉತ್ತಮ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಎಚ್ಚರಿಕೆಯ ವ್ಯವಹಾರದಿಂದಾಗಿ ಉತ್ತಮ ಲಾಭ ಪಡೆಯುವಿರಿ. ಜಾಣ್ಮೆಯಿಂದ ಕೂಡಿದ ದಕ್ಷತೆಯಿಂದಾಗಿ ನಿಮ್ಮ ಕೆಲಸಗಳು ಸರಾಗವಾಗಿ ಆಗುವುದು. ಏಕಕಾಲದಲ್ಲಿ ಹಲವಾರು ಕೆಲಸಗಳನ್ನು ಹಮ್ಮಿಕೊಂಡು ಗೊಂದಲದಲ್ಲಿ ಸಿಲುಕಬೇಡಿ. ಇದು ಅನಗತ್ಯ ವಿಳಂಬಕ್ಕೆ ಕಾರಣವಾಗಬಹುದು. ಸಾಹಸ ಪ್ರವೃತ್ತಿಯವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಕಲಾವಿದರಿಗೆ ಉತ್ತಮ ಪ್ರಶಂಸೆಯ ಜೊತೆಗೆ ಆದಾಯವೂ ಹೆಚ್ಚುತ್ತದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ ಇರುತ್ತದೆ. ಹೊಸ ಆಸ್ತಿ ದೊರೆಯುವ ಸಾಧ್ಯತೆ ಇದೆ. ಶೀತಬಾಧೆ ಇರುವವರು ಸ್ವಲ್ಪ ಎಚ್ಚರಿಕೆ ವಹಿಸಿರಿ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಆದಾಯ ಮತ್ತು ಖರ್ಚಿನಲ್ಲಿ ಸಮತೋಲನ ಸಾಧಿಸುವಿರಿ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು. ಸಂತಾನಕ್ಕಾಗಿ ಹಂಬಲಿಸುತ್ತಿರುವವರಿಗೆ ಶುಭ ಸಂದೇಶ ಬರುತ್ತದೆ. ನಿಂತುಹೋಗಿದ್ದ ಕಾರ್ಯಗಳು ಈಗ ನಡೆಯುತ್ತವೆ. ಏಕಕಾಲದಲ್ಲಿ ಹಲವು ಕೆಲಸಗಳನ್ನು ಆರಂಭಿಸಿ ಗೊಂದಲ ಮಾಡಿಕೊಳ್ಳಬೇಡಿ. ಸ್ವಲ್ಪ ಆಲಸಿ ಮನೋಭಾವ ನಿಮಗೆ ಬರಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ಕಣ್ಣಿನ ಅಥವಾ ಉಸಿರಾಟದ ತೊಂದರೆ ಇರುವವರು ಎಚ್ಚರ ವಹಿಸಿ. ಸಂಗಾತಿಯ ಪೂರಕ ಸಹಾಯ ನಿಮಗೆ ಸಂತೋಷ ತರುತ್ತದೆ. ವೃತ್ತಿಯಲ್ಲಿ ಯಾವುದೇ ಏರಿಳಿತ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.