ಸೋಮವಾರ, ಅಕ್ಟೋಬರ್ 26, 2020
29 °C

ವಾರ ಭವಿಷ್ಯ: 20-9-2020ರಿಂದ 26-9-2020ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ ಎನ್ ಲಕ್ಷ್ಮೀನರಸಿಂಹಸ್ವಾಮಿ, ಮೊಬೈಲ್‌ ನಂಬರ್‌: 8197304680 

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಯ ಸಂತಸವಿರುತ್ತದೆ. ಬಂಧುಗಳ ಕಿರಿಕಿರಿಯಿಂದ ತಲೆಬಿಸಿಯಾದರೂ ನಂತರ ಸಂತೋಷಕೂಟಗಳಲ್ಲಿ ಒಟ್ಟಾಗಿ ಸೇರಿ ಆತ್ಮೀಯತೆ ಮೂಡುತ್ತದೆ. ಭಾಷಣಕಾರರು ಸರಿಯಾದ ಪೂರ್ವ ತಯಾರಿ ಮಾಡಿಕೊಂಡು ಹೋಗುವುದು ಒಳ್ಳೆಯದು. ಹಿರಿಯ ಅಧಿಕಾರಿಗಳ ಸಹಾಯದಿಂದ ನೌಕರಿಯಲ್ಲಿ ಹೆಚ್ಚಿನ ಅನುಕೂಲ ಇರುತ್ತದೆ. ಸಮಾಜಸೇವಕರ ಜೊತೆಯಲ್ಲಿ ಕೆಲಸ ಮಾಡಿ ಸಂತೋಷಪಡುವಿರಿ. ಉದ್ದಿಮೆ ನಡೆಸುತ್ತಿರುವವರಿಗೆ ಕಾರ್ಮಿಕರ ಕೊರತೆ ಹಂತ ಹಂತವಾಗಿ ನಿವಾರಣೆಯಾಗುತ್ತದೆ. ಹಣದ ಹರಿವು ಸಾಮಾನ್ಯ.

***

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಬಿಚ್ಚುಮನಸ್ಸಿನ ಹೇಳಿಕೆಯಿಂದ ಮನೆಯಲ್ಲಿ ಇದ್ದ ದುಗುಡಗಳು ಪರಿಹಾರವಾಗಿ ಸಂತಸ ಮೂಡುತ್ತದೆ. ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಕಷ್ಟು ಹೋರಾಟ ಮಾಡುವಿರಿ. ಕಷ್ಟಕಾಲದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ. ನಿಮ್ಮ ಒಳ್ಳೆಯತನ ದುರುಪಯೋಗ ಆಗದಂತೆ ಎಚ್ಚರ ವಹಿಸಿ. ಕರಕುಶಲ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಇರುತ್ತದೆ. ಅನಿರೀಕ್ಷಿತ ಧನಸಹಾಯ ಬರುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಿರಿ. ವಿದೇಶಗಳಿಗೆ ಸಾಂಪ್ರದಾಯಿಕ ಔಷಧಿಗಳನ್ನು ಪೂರೈಸುವವರಿಗೆ ಬೇಡಿಕೆ ಹೆಚ್ಚುತ್ತದೆ.

***

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಆರ್ಥಿಕ ಕ್ರೋಡೀಕರಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಅಪೇಕ್ಷಿಸಿದ್ದ ಮೂಲದಿಂದ ಸಾಲಗಳು ದೊರೆತು, ಕಷ್ಟಗಳು ಪರಿಹಾರವಾಗುತ್ತವೆ. ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಸೂಚನೆ ದೊರೆಯುತ್ತದೆ. ವಾಹನ ಚಲಾಯಿಸುವಾಗ ಎಚ್ಚರವಹಿಸಿ. ಮಕ್ಕಳ ಬೆಳವಣಿಗೆಯ ಬಗ್ಗೆ ಉತ್ತಮ ಮಾಹಿತಿಗಳು ದೊರೆತು ಸಂತಸವಾಗುತ್ತದೆ. ತರಕಾರಿ ಬೆಳೆಗಾರರಿಗೆ ಹೆಚ್ಚಿನ ಆದಾಯ ಇರುತ್ತದೆ.

***
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಬೇರೆಯರ ವಿವಾದಗಳನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸಬೇಕಾಗುತ್ತದೆ. ಮಿತ್ರರ ಸಹಾಯದಿಂದ ರಾಜಕೀಯ ವ್ಯವಹಾರಗಳು ಸುಗಮವಾಗಲಿವೆ. ಸರ್ಕಾರದಲ್ಲಿರುವ ಹಿರಿಯ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸೂಚನೆ ಇರುತ್ತದೆ. ಸೇನೆಯಲ್ಲಿರುವವರಿಗೆ ಇದ್ದ ಅಡ್ಡಿ-ಆತಂಕಗಳು ನಿವಾರಣೆಯಾಗುತ್ತವೆ. ಕೆಲವು ನೌಕರ ವರ್ಗಕ್ಕೆ ಸಿಗಬೇಕಾದ ಸೌಲಭ್ಯಗಳು ಈಗ ಒದಗಿಬರುತ್ತವೆ. ಮಹಿಳಾ ರಾಜಕಾರಣಿಗಳಿಗೆ ಮನ್ನಣೆ ದೊರೆತು, ಉತ್ತಮ ಸ್ಥಾನ ಸಿಗುತ್ತದೆ. ಕ್ರೀಡಾಪಟುಗಳಿಗೆ ಕೆಲವು ಸಂಸ್ಥೆಗಳಲ್ಲಿ ಉದ್ಯೋಗ ದೊರೆಯುತ್ತದೆ.

***

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಆರ್ಥಿಕ ಗಂಡಾಂತರಗಳಿಂದ ಪಾರಾಗಲು ಹಿರಿಯರಿಂದ ಸಲಹೆ-ಸೂಚನೆಗಳು ಸಕಾಲದಲ್ಲಿ ದೊರೆಯುತ್ತವೆ. ರಾಜಕೀಯದಲ್ಲಿ ಪಟ್ಟುಗಳನ್ನು ಹಾಕಿ ಜನಗಳನ್ನು ಆಟವಾಡಿಸುತ್ತಿದ್ದವರಿಗೆ ಈಗ ಅನಿರೀಕ್ಷಿತ ಆಘಾತ ಕಾಣುವ ಸಂದರ್ಭ. ಕೈ ಕೆಳಗಿನವರಿಗೆ ಗೌರವ ಕೊಟ್ಟು ನಡೆಸಿಕೊಂಡಲ್ಲಿ ನಿಮ್ಮ ಕೆಲಸಗಳು ಸರಾಗವಾಗಲಿವೆ. ಮನೆಗೆ ದೂರದ ಬಂಧುಗಳು ಆಗಮಿಸುವ ಸಾಧ್ಯತೆ ಇದೆ. ಕೃಷಿ ಭೂಮಿ ಹೊಂದಲು ತಕ್ಕ ಅವಕಾಶ ದೊರೆಯುತ್ತದೆ. ಸರ್ಕಾರಿ ಸಂಸ್ಥೆಗಳೊಡನೆ ವ್ಯವಹರಿಸುವವರಿಗೆ ಅವಕಾಶಗಳು ಹೆಚ್ಚುತ್ತವೆ.

***

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಭಿನ್ನಾಭಿಪ್ರಾಯದಿಂದ ನಿಂತಿದ್ದ ಕೆಲಸಗಳು ಈಗ ಎಲ್ಲರೂ ಸೇರಿ ಮಾಡಬೇಕೆಂಬ ಅಭಿಪ್ರಾಯ ಮೂಡುತ್ತದೆ. ಮಂಗಳ ಕಾರ್ಯಗಳನ್ನು ಗುತ್ತಿಗೆ ಪಡೆದು ಮಾಡುವವರಿಗೆ ಉತ್ತಮ ಅವಕಾಶವಿದೆ. ಸಮಾಜಕ್ಕೆ ತಿಳಿ ಹೇಳುವವರು ತಾವು ಸರಿ ಇದ್ದು ನಂತರ ಹೇಳುವುದು ಉತ್ತಮ, ಇಲ್ಲವಾದಲ್ಲಿ ಅವಮಾನವಾಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸದಲ್ಲಿ ಇರುವವರು ಬಿಡುವಿಲ್ಲದ ಕೆಲಸದಿಂದ ಕುಟುಂಬದಿಂದ ದೂರ ಉಳಿಯಬೇಕಾದ ಸಂದರ್ಭವಿದೆ. ಬಂಧುಗಳಲ್ಲಿ ನೀವು ತೋರುವ ಅಹಂಕಾರವು ಸಿಗುವ ಸವಲತ್ತುಗಳನ್ನು ನಿಲ್ಲಿಸಬಹುದು.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ನಿಮ್ಮ ನಿಲುವಿನಲ್ಲಿ ಆದ ಬದಲಾವಣೆ ಕಂಡು ಜನರು ತಿರುಗಿ ಬೀಳುವ ಸಾಧ್ಯತೆಯಿದೆ. ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗಲಿವೆ. ಉತ್ತಮವಾದ ಕುಟುಂಬ ಬಾಂಧವ್ಯ ಹೊಂದುವಿರಿ. ವಿವೇಚನೆಯಿಂದ ನಿಮ್ಮ ಬಹಳ ಕಷ್ಟದ ಕೆಲಸಗಳನ್ನು ಬೇರೆಯವರಿಗೆ ವಹಿಸಿ ನೀವು ಆರಾಮವಾಗಿರಲು ಇಚ್ಚಿಸುವಿರಿ. ಅನಿರೀಕ್ಷಿತ ಪ್ರೀತಿ ಪ್ರೇಮಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ವಾರ. ಹೊರ ದೇಶದೊಡನೆ ವ್ಯಾಪಾರ ಮಾಡುತ್ತಿದ್ದವರ ವ್ಯವಹಾರ ಪುನಃ ಆರಂಭವಾಗುತ್ತದೆ.

***

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿ. ಗಣ್ಯರ ಭೇಟಿಯಿಂದ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು ಮತ್ತು ಲಾಭ ನಿರೀಕ್ಷಿಸಬಹುದು. ಎಲ್ಲಾ ಕಡೆಯಿಂದ ಧನ ಸಂಗ್ರಹ ಮಾಡಿ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಕೃಷಿಯಿಂದ ಪಶು ಆಹಾರ ಉತ್ಪಾದಿಸುವವರಿಗೆ ಉತ್ತಮ ಬೇಡಿಕೆ ಬರುತ್ತದೆ. ಯಾರದೋ ಮಾತು ಕೇಳಿ ಹೆಚ್ಚಿನ ಬಡ್ಡಿ ಆಸೆಗಾಗಿ ಸಿಕ್ಕಸಿಕ್ಕಲ್ಲಿ ಹಣ ಹೂಡಬೇಡಿ. ಇದರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಹಣದ ಹರಿವು ಉತ್ತಮ. ವೈರಿಗಳ ಎದುರಿಗೆ ಉತ್ತಮ ಪರಾಕ್ರಮ ತೋರಿ, ಬಾಯಿ ಮುಚ್ಚಿಸುವಿರಿ.

***

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಕುಟುಂಬದಲ್ಲಿ ಎಲ್ಲರನ್ನೂ ಸಂಭಾಳಿಸಿ ಉತ್ತಮ ಬೆಂಬಲ ಪಡೆಯುವಿರಿ. ಸಾರ್ವಜನಿಕ ಸಂಘರ್ಷಗಳಿಂದ ದೂರವಿರುವುದು ಒಳ್ಳೆಯದು. ದೇಶೀಯ ಪ್ರಸಿದ್ಧ ಕಂಪನಿಗಳ ಸದಸ್ಯತ್ವ ಪಡೆದು ವ್ಯವಹಾರದಲ್ಲಿ ಹೊಸ ತಿರುವು ಪಡೆಯುವಿರಿ. ಅಸಂಘಟಿತ ಕಾರ್ಮಿಕರಿಗೆ ಹೊಸ ರೀತಿಯ ಸಹಾಯ ಸಂಸ್ಥೆಗಳಿಂದ ಸಿಗಬಹುದು. ಗೆಳೆಯರ ಗುಂಪಿನಲ್ಲಿ ನಿಮ್ಮದೇ ಆದ ಒಂದು ರೀತಿಯ ಛಾಪು ಮೂಡಿಸುವಿರಿ. ನಿಮ್ಮ ಚುರುಕು ಮಾತಿನಿಂದ ಮಾರಾಟ ವಿಭಾಗದಲ್ಲಿ ಉತ್ತಮ ಬೆಳವಣಿಗೆ ಸಾಧಿಸುವಿರಿ. ತನ್ಮೂಲಕ ಸ್ವಂತ ಆದಾಯವನ್ನೂ ಸಹ ಹೆಚ್ಚಿಸಿಕೊಳ್ಳುವಿರಿ.

***

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಧೈರ್ಯ, ಸ್ವಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಸಹೋದರರು ನಿಮಗೆ ಸಕಾಲದಲ್ಲಿ ಸಹಾಯ ಮಾಡಲಾರರು ಎಂಬ ಅಳುಕು ಇರುತ್ತದೆ. ಕೃಷಿಭೂಮಿ ಅಭಿವೃದ್ಧಿಪಡಿಸುವಿರಿ. ದೀರ್ಘಕಾಲದ ನೋವುಗಳು ಔಷಧೋಪಚಾರಗಳಿಂದ ಸಲ್ಪ ತಹಬಂದಿಗೆ ಬರುತ್ತವೆ. ಸಂಗಾತಿಯ ಸಹಕಾರದಿಂದ ಹಣಕಾಸಿನ ಮಟ್ಟ ಉತ್ತಮವಾಗುತ್ತದೆ. ಸರ್ಕಾರಿ ಕೆಲಸಗಳಲ್ಲಿ ತ್ರಾಸದಾಯಕ ಮುನ್ನಡೆ ಇರುತ್ತದೆ. ಸ್ತ್ರೀಯರ ಆಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಉತ್ತಮ ಮಾರುಕಟ್ಟೆ ಬರುತ್ತದೆ.

***
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಉದ್ಯೋಗ ಅರಸುತ್ತಿರುವವರಿಗೆ ಈಗ ಉದ್ಯೋಗ ಸಿಗುವ ಸಂದರ್ಭವಿದೆ. ರೈತರಿಗೆ ಉತ್ತಮ ಖರೀದಿ ಮತ್ತು ಮಾರಾಟ ವ್ಯವಸ್ಥೆಯಿಂದ ಹೆಚ್ಚಿನ ಲಾಭವಿರುತ್ತದೆ. ಸಾಹಿತಿಗಳಿಗೆ ಗೌರವ ದೊರೆಯುತ್ತದೆ. ಸಾಮಾಜಿಕ ಕಾರ್ಯಕ್ರಮ ಆಯೋಜಿಸುವುದು ನಿಮ್ಮ ಹವ್ಯಾಸವಾಗುತ್ತದೆ. ಸ್ವಂತ ಪ್ರಯತ್ನದಿಂದ ಕಾರ್ಯಕ್ಷೇತ್ರಗಳಲ್ಲಿ ಉನ್ನತಿ ಸಾಧಿಸುವಿರಿ. ಸಾಲದ ನಿರೀಕ್ಷೆಯಲ್ಲಿರುವ ನಿಮಗೆ ಸಾಲ ನೀಡುವ ಸಂಸ್ಥೆಗಳಿಂದ ಉತ್ತಮ ಸ್ಪಂದನೆ ಸಿಗುತ್ತದೆ. ಕಳೆಗುಂದಿದ್ದ ನಿಮ್ಮ ಕೆಲವು ವ್ಯವಹಾರಗಳು ತಾಯಿಯ ಮಧ್ಯಪ್ರವೇಶದಿಂದ ಚೇತರಿಕೆ ಕಾಣುತ್ತವೆ.

***

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ )

ಬಹಳ ದಿನಗಳಿಂದ ಆಸೆಪಡುತ್ತಿದ್ದ ವ್ಯವಹಾರದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ. ನಿಮ್ಮ ಒರಟು ಮಾತಿನಿಂದ ಕೆಲವು ಸ್ನೇಹಿತರನ್ನು ಕಳೆದುಕೊಳ್ಳುವಿರಿ. ತಾಯಿಯ ಜೊತೆ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಕಾವೇರಿದ ಮಾತಾಗಬಹುದು. ಹೆಣ್ಣುಮಕ್ಕಳಿಂದ ನಿಮಗೆ ಹೆಚ್ಚಿನ ಸಹಾಯಗಳು ಒದಗುತ್ತವೆ. ಕಣ್ಣಿನ ಸೋಂಕಿನ ಬಗ್ಗೆ ಎಚ್ಚರ ವಹಿಸಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ನೀವು ಇಚ್ಚಿಸಿದಷ್ಟು ದೊರೆಯುವುದು ಕಷ್ಟ. ವೃತ್ತಿಯಲ್ಲಿ ನಿಮ್ಮ ನಂಬಿಕಸ್ತರೇ ನಿಮ್ಮ ವಿರುದ್ಧ ಕತ್ತಿ ಮಸೆಯಬಹುದು. ಪಾರಂಪರಿಕ ಕೃಷಿ ಮಾಡುವವರಿಗೆ ಪ್ರೋತ್ಸಾಹವಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.