ಭಾನುವಾರ, ಫೆಬ್ರವರಿ 28, 2021
21 °C

ವಾರ ಭವಿಷ್ಯ: 24-01-2021ರಿಂದ 30-01-2021ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ, ಸಂಪರ್ಕಕ್ಕೆ 81973 04680

**
ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ನಿಮ್ಮ ಅಹಂ ಮತ್ತು ಪ್ರತಿಷ್ಠೆಗಳು ಏಳಿಗೆಗೆ ಅಡ್ಡಿ ಉಂಟುಮಾಡಬಹುದು. ಸಾತ್ವಿಕ ನಡವಳಿಕೆ ರೂಢಿಸಿಕೊಳ್ಳುವುದು ಒಳ್ಳೆಯದು. ಆರ್ಥಿಕ ಸಮಸ್ಯೆಗಳು ಪರಿಹಾರದತ್ತ ಸಾಗಿ, ನೆಮ್ಮದಿ ಬರುತ್ತದೆ. ಮುಂದಾಲೋಚನೆಯಿಂದ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಣದ ಒಳಹರಿವು ಸಾಮಾನ್ಯ. ವಿದೇಶದಲ್ಲಿ ಇರುವವರಿಗೆ ಸ್ತ್ರೀಯರಿಂದ ಧನಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಏಳಿಗೆ ಇದೆ. ಸಂಗಾತಿಯ ಸಹಾಯದಿಂದ ಒಡವೆ ಕೊಳ್ಳಬಹುದು. ಗಣಿಗಾರಿಕೆ ಮಾಡುವವರಿಗೆ ಹೊಸ ಪರವಾನಗಿ ದೊರೆಯುತ್ತದೆ.

**
ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ1 2)
ತಾಂತ್ರಿಕ ಸಲಹೆ ನೀಡುವವರಲ್ಲಿ ಕೆಲವರಿಗೆ ಪ್ರಸಿದ್ಧ ಸಂಸ್ಥೆಗೆ ಸಲಹೆಗಾರರಾಗಿ ಸೇರುವಂತಹ ಅವಕಾಶವಿದೆ. ಆಸ್ತಿ ಖರೀದಿಯ ಯೋಗವಿದೆ. ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡುವ ಸಂದರ್ಭವಿದೆ. ಯೋಜನಾ ವಿಭಾಗದಲ್ಲಿ ಕೆಲಸ ಮಾಡುವ ಕೆಲವರಿಗೆ ಹೆಚ್ಚಿನ ಜವಾಬ್ದಾರಿಗಳು ಒದಗಿ ಬರುತ್ತವೆ. ಆಭರಣ ವ್ಯಾಪಾರಿಗಳಿಗೆ ಲಾಭ ಬರುತ್ತದೆ. ಕೆಲವು ಕೆಳ ಹಂತದ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಮೇಲ್ದರ್ಜೆಯ ನ್ಯಾಯಾಲಯಗಳ ನ್ಯಾಯಾಧೀಶರಾಗುವ ಯೋಗವಿದೆ. ಧಾರ್ಮಿಕ ಸಲಹೆಗಾರರು ಸಲಹೆ ನೀಡುವ ಮುನ್ನ ಎಚ್ಚರ ವಹಿಸಿ.

**
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ವೃತ್ತಿಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು. ಸಾಮಾಜಿಕ ಕಾರ್ಯಕರ್ತರಿಗೆ ಇರಿಸು ಮುರಿಸು ಆಗುವ ಘಟನೆಗಳು ನಡೆಯಬಹುದು. ಮನೆಯಲ್ಲಿ ವಸ್ತ್ರ ಅಥವಾ ಆಭರಣಕ್ಕಾಗಿ ಬೇಡಿಕೆ ಬರಬಹುದು. ಯೋಜಿತ ವ್ಯವಹಾರಗಳಲ್ಲಿ ನಿಧಾನವಾಗಿ ವ್ಯವಹಾರ ವೃದ್ಧಿಸಲಿದೆ. ಆದಾಯದಲ್ಲಿ ನಿಧಾನ ಹೆಚ್ಚಳ ಕಾಣಬಹುದು. ಮಹಿಳೆಯರಿಗೆ ವಿದೇಶದಲ್ಲಿರುವ ಗಂಡಂದಿರಿಂದ ಧನಸಹಾಯವಾಗಲಿದೆ. ವಿದ್ಯಾರ್ಥಿಗಳಿಗೆ ಪುಸ್ತಕಗಳು ಕೊಡುಗೆಯಾಗಿ ಬರಬಹುದು. ಕೃಷಿಕರು ಬೆಳೆದ ವಸ್ತುಗಳಿಗೆ ಉತ್ತಮ ಲಾಭ ಸಿಗಲಿದೆ. ತಾಯಿಯ ಆರೋಗ್ಯಕ್ಕಾಗಿ ಹಣ ಮೀಸಲಿಡಿ.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಸಂಗಾತಿಯ ಆದಾಯದಲ್ಲಿ ಏರಿಕೆ ಕಾಣಬಹುದು. ಹೆಚ್ಚಿನ ಪರಿಶ್ರಮಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಗರ್ಭಿಣಿಯರು ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು. ತಂದೆಯ ಸಹಕಾರದಿಂದ ಹಳಿತಪ್ಪಿದ ವ್ಯವಹಾರಗಳು ಸರಿದಾರಿಗೆ ಬರುತ್ತವೆ. ಉದ್ಯೋಗದಲ್ಲಿ ಹಿತಶತ್ರುಗಳ ಕಿರುಕುಳ ಕಾಣಬಹುದು. ವಿದೇಶಗಳಿಗೆ ಆಹಾರ ವಸ್ತುಗಳನ್ನು ರಫ್ತು ಮಾಡುವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇದೆ. ಸಂಗಾತಿಯ ಸಂತೋಷಕ್ಕಾಗಿ ಭೋಜನಕೂಟ ಏರ್ಪಡಿಸುವಿರಿ. ಪಶುಸಂಗೋಪನೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುವುದು.

**
ಸಿಂಹ ರಾಶಿ (‌ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ರಾಜಕೀಯ ವ್ಯಕ್ತಿಗಳಿಗೆ ಇದ್ದ ದ್ವಂದ್ವ ನಿಲುವುಗಳು ದೂರವಾಗುತ್ತವೆ. ಚಿನ್ನ-ಬೆಳ್ಳಿಯ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಿ, ಲಾಭ ಬರುತ್ತದೆ. ಕೃಷಿ ಕಾರ್ಯಗಳಿಗೆ ಹೆಚ್ಚಿನ ಬಂಡವಾಳ ಕೊಡುವಿರಿ. ಹಣದ ಅಡಚಣೆ ನಿವಾರಿಸಿಕೊಳ್ಳಲು ಬದಲಿ ಮಾರ್ಗ ಕಂಡುಕೊಳ್ಳುವಿರಿ. ಗೌರವಾನ್ವಿತ ವ್ಯಕ್ತಿಗಳ ಸಹಕಾರದಿಂದ ವ್ಯವಹಾರಗಳನ್ನು ಯಶಸ್ವಿಯಾಗಿ ನಡೆಸುವಿರಿ. ಸಂತಾನಕ್ಕಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ ಸಿಗಲಿದೆ. ಕೀಲುನೋವು ಬಾಧಿಸಬಹುದು.

**
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ಇತಿಮಿತಿ ಅರಿತು ಮಾಡಿದ ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣುವಿರಿ. ವಾಹನ ಮಾರಾಟಗಾರರಿಗೆ ಅಭಿವೃದ್ಧಿ. ವೃತ್ತಿಯಲ್ಲಿ ನಿಮ್ಮ ನೈಪುಣ್ಯತೆಯಿಂದಾಗಿ ಅಭಿವೃದ್ಧಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸನ್ನು ತರುವ ವಾರ. ಬಹಳ ದಿನಗಳಿಂದ ಜಿಜ್ಞಾಸೆಯಲ್ಲಿದ್ದ ಆಸ್ತಿ ಕೊಳ್ಳುವ ವಿಚಾರಕ್ಕೆ ಹೊಸ ರೂಪ ಸಿಗುತ್ತದೆ. ಕಳೆದಿದ್ದ ಅಮೂಲ್ಯ ವಸ್ತುವೊಂದು ಪುನಃ ನಿಮ್ಮನ್ನು ಸೇರುತ್ತದೆ. ಸರ್ಕಾರಿ ನೌಕರರು ತುರ್ತು ಕಾರ್ಯ ನಿಮಿತ್ತ ಬೇರೆಡೆಗೆ ಹೋಗಿ ಕೆಲಸ ಮಾಡುವ ಸಂದರ್ಭವಿದೆ. ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರ ವಹಿಸಿ. ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಅಭಿವೃದ್ಧಿ.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಅನವಶ್ಯಕ ಮಾತುಗಳಿಂದ ಜನರೊಡನೆ ನಿಷ್ಟೂರವಾಗುವ ಸಾಧ್ಯತೆಗಳಿವೆ. ರಾಜಕೀಯ ಮುಖಂಡರು ಭರವಸೆಗಳನ್ನು ಕೊಡುವಾಗ ಎಚ್ಚರವಿರಲಿ, ಇಲ್ಲವಾದಲ್ಲಿ ಅದೇ ನಿಮಗೆ ತಿರುಗುಬಾಣ ಆಗಬಹುದು. ಆದಾಯ ವೃದ್ಧಿಸಿದರೂ ಅಷ್ಟೇ ಖರ್ಚನ್ನು ಸಹ ಕಾಣಬಹುದು. ಹೂವಿನಹಾರ ತಯಾರಿಸುವವರಿಗೆ ಬೇಡಿಕೆ ಹೆಚ್ಚಲಿದೆ. ಕೃಷಿ ಭೂಮಿ ವಿಸ್ತರಿಸುವ ಯೋಗವಿದೆ. ಕೀಲು, ಮೂಳೆ ಸಂಬಂಧಿ ರೋಗಗಳು ಕಾಡಬಹುದು. ಹಿರಿಯರಿಂದ ಆಸ್ತಿ ಅಥವಾ ಕಾಣಿಕೆಗಳು ಕೆಲವರಿಗೆ ಸಿಗಬಹುದು. ವೃತ್ತಿಯಲ್ಲಿದ್ದ ಸಂಕಷ್ಟಗಳು ನಿವಾರಣೆ ಆಗುತ್ತವೆ.

**
ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಆರ್ಥಿಕ ಸ್ಥಿತಿಯು ಉತ್ತೇಜನದತ್ತ ಸಾಗುತ್ತದೆ. ಸಂಪನ್ಮೂಲಗಳ ಅಭಿವೃದ್ಧಿಯಿಂದ ಮನಸ್ಸಿಗೆ ತೃಪ್ತಿ ಇರುತ್ತದೆ. ಹಿರಿಯರ ಮನೋಭಿಲಾಷೆಗಳಲ್ಲಿ ಸ್ವಲ್ಪ ಈಡೇರಲಿದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಗಾಗಿ ಚಿಂತಿಸುವಿರಿ. ಆದರೆ, ಮೇಲಧಿಕಾರಿಗಳ ಬಳಿ ಯಾವುದೇ ರೀತಿಯ ದುಡುಕುತನದ ನಡೆ ಬೇಡ. ಹಣಕಾಸಿನ ವಿಷಯದಲ್ಲಿ ಸ್ಥಿರತೆ ಸಾಧಿಸುವಿರಿ. ತಾಯಿಯೊಂದಿಗೆ ಮುನಿಸು ಬರಬಹುದು. ಕುಟುಂಬದವರೊಡನೆ ಸೇರಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಇರಲಿದೆ.

**
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಕೆಲಸಕಾರ್ಯಗಳಲ್ಲಿ ನಿಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುವಿರಿ‌, ಇದರಿಂದ ಉತ್ಸಾಹ ಹೆಚ್ಚಲಿದೆ. ಸರ್ಕಾರದಿಂದ ಆಗಬೇಕಾದ ಕೆಲಸಗಳು ಬಹಳ ಸರಾಗವಾಗಿ ಆಗಲಿವೆ. ಸರ್ಕಾರಿ ಸಾಲ ಸರಾಗವಾಗಿ ಪಡೆಯಬಹುದು. ಹಿರಿಯರು ತಮ್ಮ ವ್ಯವಹಾರಗಳ ಜವಾಬ್ದಾರಿಗಳನ್ನು ಕಿರಿಯರಿಗೆ ವರ್ಗಾಯಿಸುವುದು ಉತ್ತಮ. ಸಹೋದರರಿಂದ ಸಹಕಾರಗಳು ದೊರೆಯುತ್ತವೆ. ಸಂಗೀತಗಾರರಿಗೆ ಉತ್ತಮ ರೀತಿಯ ಗೌರವ ಸಿಗುತ್ತದೆ. ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿ ಸಾಗಲಿದೆ. ಮಧ್ಯಸ್ಥಿಕೆ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ, ಅದರಲ್ಲೂ ಜಾಮೀನು ಕೊಟ್ಟಲ್ಲಿ ಕಷ್ಟಕ್ಕೆ ಸಿಲುಕುವಿರಿ.

**
ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಆರ್ಥಿಕ ಚಟುವಟಿಕೆಗಳಲ್ಲಿ ನಿಮ್ಮ ಗಮನಕ್ಕೆ ಬರದಂತೆ ಹೆಚ್ಚಿನ ಗಳಿಕೆ ಪಡೆಯುವಿರಿ. ಕಾಡುತ್ತಿದ್ದ ಕೆಲವು ಚಿಂತೆಗಳು ತನ್ನಿಂದ ತಾನೇ ಬಿಡುಗಡೆಯಾಗಿ, ಮನಸ್ಸಿಗೆ ನಿರಾಳವೆನಿಸುತ್ತದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿರುವವರಿಗೆ ವ್ಯವಹಾರ ನಿಧಾನವಾಗಿ ಚೇತರಿಕೆಯಾಗಲಿದೆ. ಬರಹಗಾರರಿಗೆ ಬಹುಮಾನ ಗೆಲ್ಲುವ ಸೂಚನೆಗಳಿವೆ. ಸ್ನೇಹಿತರೊಂದಿಗೆ ಅನಗತ್ಯ ಮಾತು ಚರ್ಚೆಗಳಲ್ಲಿ ಭಾಗವಹಿಸದಿರುವುದು ಉತ್ತಮ. ವಕೀಲಿ ವೃತ್ತಿಯವರಿಗೆ ಕೈತುಂಬಾ ಕೆಲಸವಿರುತ್ತದೆ. ಕೃಷಿಕರಿಗೆ ಅಭಿವೃದ್ಧಿ ಇದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧಗಳು ಒದಗಿಬರುವ ಸೂಚನೆಗಳಿವೆ.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ರಾಜಕೀಯ ಬದುಕಿನಲ್ಲಿ ಬದಲಾವಣೆ ಕಾಣುವಿರಿ. ನಿಮ್ಮ ಪ್ರಭಾವದಿಂದ ನೆರೆಹೊರೆಯವರ ಸಮಸ್ಯೆಗಳನ್ನು ಬಗೆಹರಿಸಿ ಗೌರವ ಪಡೆಯುವಿರಿ. ಬಂಧುಗಳೊಡನೆ ಸಂಬಂಧಗಳು ವೃದ್ಧಿಸಲಿವೆ. ಸಂಗಾತಿಯ ಸಹಕಾರದಿಂದ ಸಂಸಾರದಲ್ಲಿ ನೆಮ್ಮದಿ ಕಾಣುವಿರಿ. ವಿವಿಧ ಮೂಲಗಳಿಂದ ಆದಾಯ ವೃದ್ಧಿಸಲಿದೆ. ಆಸ್ತಿಯಲ್ಲಿನ ಗೋಜಲುಗಳು ಪರಿಹಾರವಾಗುತ್ತವೆ. ಆಭರಣದ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಲಿದೆ. ಧಾರ್ಮಿಕ ಮುಖಂಡರಿಗೆ ಸಾಕಷ್ಟು ಗೌರವ, ಪ್ರಾಮುಖ್ಯತೆ ದೊರೆಯುತ್ತದೆ. ಮಕ್ಕಳ ಸಂತೋಷಕ್ಕಾಗಿ ವಿಹಾರಕ್ಕೆ ಹೋಗಿಬರುವಿರಿ.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಮನೆಪಾಠ ಮಾಡುವವರಿಗೆ ಹಣದ ಹರಿವು ಹೆಚ್ಚಲಿದೆ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ವಿಸ್ತರಣೆಯಾಗಲಿದೆ. ಸಿದ್ಧಪಡಿಸಿದ ಆಹಾರ ಮಾರುವವರಿಗೆ ಲಾಭ ಏರಿಕೆಯಾಗಲಿದೆ. ಸರ್ಕಾರಿ ಸ್ವಾಮ್ಯದ ಸಾಲ ಪಡೆದು, ಇತರೆ ಸಾಲಗಳನ್ನು ತೀರಿಸಿಕೊಳ್ಳಬಹುದು. ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಗೃಹಾಲಂಕಾರ ಸಾಮಗ್ರಿಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಲಿದೆ. ಮಿತ್ರರ ನಡುವಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗುತ್ತವೆ. ಶುಭ ಸಮಾರಂಭಗಳಲ್ಲಿ ಭಾಗಿಯಾಗುವ ಅವಕಾಶಗಳಿವೆ. ಭೂ ವ್ಯವಹಾರದ ಮಧ್ಯವರ್ತಿಗಳಿಗೆ ಕಮಿಷನ್ ಹಣ ದೊರೆಯುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.