ಮಂಗಳವಾರ, ಜೂನ್ 22, 2021
28 °C

ವಾರ ಭವಿಷ್ಯ: 09-5-2021ರಿಂದ 15-5-2021ರ ವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1) 

ಯಾವುದೇ ಕೆಲಸದಲ್ಲೂ ಆರಂಭಶೂರತ್ವ ಬೇಡ, ಮಾಡುವ ಕೆಲಸದಲ್ಲಿ ಜಾಗೃತೆಯಿರಲಿ. ಹಳೆಯ ಸಾಲಗಾರರು ಬಂದು ಕಾಡಬಹುದು, ಕುಳಿತು ಮಾತನಾಡಿದಲ್ಲಿ ಸಾಲ ತೀರಿಸಲು ಹೆಚ್ಚಿನ ಕಾಲಾವಕಾಶ ದೊರೆಯುತ್ತದೆ. ಮಧ್ಯವರ್ತಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯ ಬರುತ್ತದೆ. ವಿದೇಶಿ ವಿನಿಮಯ ವ್ಯವಹಾರವನ್ನು ಮಾಡುವವರಿಗೆ ಆದಾಯ ವೃದ್ಧಿಸುತ್ತದೆ. ರಾಜಕೀಯ ಪಟುಗಳು ತಮ್ಮ ಮುಂದಿನ ಗುರಿ ಮತ್ತು ನಡೆಯ ಬಗ್ಗೆ ಸರಿಯಾಗಿ ಆಲೋಚಿಸಿ ತೀರ್ಮಾನಿಸುವುದು ಒಳ್ಳೆಯದು. ಷೇರು ವ್ಯವಹಾರ ಮಾಡುವವರಿಗೆ ಸ್ವಲ್ಪ ಅಭಿವೃದ್ಧಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಬಂಧುಗಳ ನಡುವೆ ಚಕಮಕಿ ನಡೆಯಬಹುದು.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ವೃತ್ತಿಯಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಮಾನ್ಯತೆ ದೊರೆತು ಹೆಚ್ಚಿನ ಜವಾಬ್ದಾರಿಯು ದೊರೆಯುತ್ತದೆ. ಉದ್ಯೋಗದಲ್ಲಿ ಸಮಾಧಾನಕರ ವಾತಾವರಣವಿರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ರಾಜಕಾರಣಿಗಳಿಗೆ ಅನಿರೀಕ್ಷಿತ ಒತ್ತಡಗಳು ಬರುತ್ತವೆ. ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಸನ್ಮಾನ ಮತ್ತು ಗೌರವ ಪ್ರಾಪ್ತಿಯಾಗುತ್ತದೆ. ಕುರುಕುಲು ತಿಂಡಿಯನ್ನು ಮಾಡಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ಮೆಟ್ಟಿಲೇರುವ ಅವಕಾಶವಿರುತ್ತದೆ. ಕೃಷಿಕರಿಗೆ ಉತ್ತಮ ಲಾಭ ಇರುತ್ತದೆ. ಉಪಾಧ್ಯಾಯರಿಗೆ ಗೌರವ ಸಿಗುತ್ತದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭ ಬರುತ್ತದೆ ಮತ್ತು ಅವರು ತಯಾರಿಸುವ ಕ್ಷೀರೋತ್ಪನ್ನಗಳಿಗೆ ಉತ್ತಮ ಬೇಡಿಕೆ ಬರುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಉದ್ಯೋಗದಲ್ಲಿ ಮತ್ತು ವ್ಯವಹಾರದಲ್ಲಿ ಧನ ಲಾಭವಿರುತ್ತದೆ. ನ್ಯಾಯಾಧೀಶರಿಗೆ ತೀರ್ಮಾನ ಕೊಡುವ ಸಂದರ್ಭದಲ್ಲಿ ಸಂದಿಗ್ಧ ಸ್ಥಿತಿ ಒದಗುವ ಸಾಧ್ಯತೆ ಇದೆ. ಕೆಲವು ನ್ಯಾಯಾಧೀಶರುಗಳಿಗೆ ಮೇಲ್ದರ್ಜೆಯ ನ್ಯಾಯಾಲಯಗಳಿಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಬ್ಯಾಂಕ್ ಅಧಿಕಾರಿ ವರ್ಗದವರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು. ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ದೈನಂದಿನ ಒತ್ತಡಗಳ ನಡುವೆ ಸಂಸಾರದ ಕಡೆ ಹರಿಸುವುದು ಅಗತ್ಯ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ನೀವು ಬಯಸುತ್ತಿದ್ದ ಸವಲತ್ತುಗಳು ಈಗ ದೊರೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯುತ್ತದೆ. ದೀಕ್ಷಿತರಿಗೆ ವಿವಾಹ ಅಪೇಕ್ಷಿತರಿಗೆ ಕಂಕಣ ಒದಗುವ ಸಾಧ್ಯತೆ ಇದೆ. ಸಾಲ ತೀರಿಸಲು ನೀವು ಆರಿಸಿದ ಮಾರ್ಗ ಫಲ ಕೊಡುತ್ತದೆ. ಸಾಂಸಾರಿಕ ಬದುಕಿನಲ್ಲಿ ಸಂತೋಷವನ್ನು ಕಾಣಬಹುದು. ಮಕ್ಕಳಿಂದ ಸಂತೋಷ ಪ್ರಾಪ್ತಿಯಾಗುತ್ತದೆ. ಹೆಚ್ಚಿನ ಯಶಸ್ಸಿಗಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮವಹಿಸಬೇಕು. ಹಣದ ಒಳಹರಿವು ಸಮಾಧಾನಕಾರವಾಗಿರುತ್ತದೆ. ಖರ್ಚಿಗೆ ಕಡಿವಾಣ ಹಾಕುವುದು ಅತ್ಯಗತ್ಯ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಇರಲಿ. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ವ್ಯವಹಾರ ಹೆಚ್ಚಾಗಿ ಲಾಭ ಬರುತ್ತದೆ. ವಿದೇಶಗಳಿಗೆ ಅದಿರು ಅಥವಾ ಲೋಹಗಳನ್ನು ರಫ್ತು ಮಾಡುವವರ ವ್ಯಾಪಾರ ವೃದ್ಧಿಸಿ ಲಾಭ ಇರುತ್ತದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಹೆಚ್ಚಿನ ಗೌರವ ದೊರೆಯುತ್ತದೆ. ರಾಜಕೀಯದಲ್ಲಿರುವ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ದೊರೆಯುತ್ತದೆ. ಹೊಸ ಆಸ್ತಿ ಕೊಳ್ಳಲು ಈಗ ಸಕಾಲವಲ್ಲ. ಆದಾಯ ಮತ್ತು ವೆಚ್ಚಗಳು ಸಮನಾಗಿರುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಆರ್ಥಿಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಯೋಜನೆಯೊಂದನ್ನು ತಯಾರು ಮಾಡುವಿರಿ. ಸಂಗಾತಿಯ ಸಂಪಾದನೆಯಲ್ಲಿ ಹೆಚ್ಚಳವನ್ನು ಕಾಣಬಹುದು. ಉಸಿರಾಟದ ತೊಂದರೆ ಇರುವವರು ಸ್ವಲ್ಪ ಎಚ್ಚರವಹಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಓದುವ ವಿಚಾರದಲ್ಲಿ ಗುರುಗಳಿಂದ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ಇತರರ ವಿಚಾರದಲ್ಲಿ ಹಗುರವಾಗಿ ಮಾತನಾಡುವುದು ಅಷ್ಟು ಒಳಿತಲ್ಲ, ಅದು ನಿಮಗೆ ತಿರುಗುಬಾಣವಾಗಬಹುದು. ಹೈನುಗಾರಿಕೆ ಮಾಡುವವರಿಗೆ ವ್ಯವಹಾರ  ಹೆಚ್ಚುತ್ತದೆ. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಕ್ರೀಡಾಪಟುಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವಾರದ ಆರಂಭ ಆಲಸ್ಯದಿಂದ ಕೂಡಿರುತ್ತದೆ. ಸಂಗಾತಿಯೊಡನೆ ಕಾವೇರಿದ ಮಾತುಗಳು ನಡೆದು ಬೇಸರ ಆಗಬಹುದು. ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಮನಸ್ಥೈರ್ಯವನ್ನು ಕುಗ್ಗಿಸಿಕೊಳ್ಳದೆ ಮುನ್ನುಗ್ಗುವುದು ಒಳ್ಳೆಯದು.  ಉದ್ಯೋಗ ಬದಲಾವಣೆಯ ವಿಚಾರ ಸದ್ಯಕ್ಕೆ ಬೇಡ. ವ್ಯವಹಾರಗಳಲ್ಲಿ ಹೆಚ್ಚಿನ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಹೋಗಿ ಎಲ್ಲರಿಂದ ಹೆಚ್ಚಿನ ಟೀಕೆಗೆ ಒಳಗಾಗುವ ಸಂದರ್ಭವಿದೆ, ಎಚ್ಚರವಹಿಸಿರಿ. ಲೇವಾದೇವಿ ಮಾಡುವುದು ಈಗ ಅಷ್ಟು ಒಳಿತಲ್ಲ.  ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗುವುದು.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ  ಜೇಷ್ಠ)  

ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಶತ್ರುಗಳನ್ನು ಮಟ್ಟಹಾಕಲು ನೀವು ಬಳಸುವ ತಂತ್ರಗಳು ಸಾಕಷ್ಟು ಫಲವನ್ನು ಕೊಡುತ್ತದೆ. ಸ್ನೇಹಿತರೊಂದಿಗೆ ಕೂಡಿ ಮಾಡುವ ಕಠಿಣ ಪರಿಶ್ರಮದ ಕೆಲಸಗಳು ನಿಮಗೆ ಹೆಸರನ್ನು ತರುತ್ತದೆ. ಮನೆ ಪಾಠವನ್ನು ಮಾಡುವವರಿಗೆ ವಿದ್ಯಾರ್ಥಿಗಳು ದೊರೆತು ಹೆಚ್ಚು ಸಂಪಾದನೆ ಆಗುತ್ತದೆ. ಭೂಮಿಯ ಮೇಲಿನ ಹಕ್ಕಿನ ವಿಷಯದಲ್ಲಿ ಗೊಂದಲಗಳು ಮೂಡಬಹುದು. ಮನಸ್ಸಿಗೆ ಸಂತೋಷವಾಗುವ ಶುಭ ಸುದ್ದಿಯನ್ನು ಕೇಳುವಿರಿ. ಬಂಧುಗಳ ಮಧ್ಯೆ ಇರುವ ಮನಸ್ತಾಪವನ್ನು ಮಾತುಕತೆ ಮಾಡಿ ಪರಿಹರಿಸಿಕೊಳ್ಳುವಿರಿ. ಕೃಷಿಗೆ ಬಳಸುವ ಯಂತ್ರೋಪಕರಣಗಳನ್ನು ತಯಾರಿಸಿ  ಮಾರುವವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಹೊಸ ಜವಾಬ್ದಾರಿಯೊಂದು ಹೆಗಲೇರುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿನ ನೀತಿ-ನಿಯಮಗಳನ್ನು ಬದಲಿಸದೆ ಇರುವುದು ನಿಮಗೆ ಒಳಿತು. ಚಿಲ್ಲರೆ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭ ಬಂದು ಮನಸ್ಸಿಗೆ ನೆಮ್ಮದಿ ಇರುತ್ತದೆ. ವ್ಯವಹಾರದಲ್ಲಿ ನಷ್ಟವನ್ನು  ತಪ್ಪಿಸಲು ಅತ್ಯಂತ ಜಾಗರೂಕರಾಗಿ ಇರುವುದು ಒಳ್ಳೆಯದು. ಕುಟುಂಬ ಕಲಹಗಳಿಂದ ಮುಕ್ತಿ ದೊರೆಯುತ್ತದೆ. ಸ್ಥಿರಾಸ್ತಿಗೆ ಸಂಬಂಧಪಟ್ಟ ಗೊಂದಲಗಳು ಸರಿಯಾಗುತ್ತವೆ. ಉದ್ಯೋಗಿಗಳಿಗೆ ಹೊಸ ರೀತಿಯ ಸಾಲ ಸೌಲಭ್ಯಗಳು ದೊರೆಯುತ್ತವೆ. ಮಹಿಳಾ ಉದ್ಯೋಗಿಗಳಿಗೆ ಪದೋನ್ನತಿಯ ಅವಕಾಶ ಇರುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ವ್ಯವಹಾರಗಳಲ್ಲಿ ನಿಮ್ಮ ಜಾಣ್ಮೆಯನ್ನು ಕಂಡು ಪಾಲುದಾರರು ನಿಮಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಡುವರು. ಸೈನಿಕ ರಕ್ಷಣಾ ಇಲಾಖೆ ಕೆಲಸ ಮಾಡುವವರಿಗೆ ಇಲಾಖೆಯಿಂದ ಬರಬೇಕಾದ ಹಳೆಯ ಬಾಕಿ ಹಣ ಬರುತ್ತದೆ. ಹೊಸ ವಾಹನ ಖರೀದಿ ಮಾಡಬಹುದು. ನೀವು ತೋರಿಸುವ ಸಕಾರಾತ್ಮಕ ಮನೋಭಾವಗಳು ನಿಮ್ಮನ್ನು ಉನ್ನತ ಸ್ಥಾನಕ್ಕೆ ಸೇರಿಸುತ್ತವೆ. ಪತ್ರಿಕೆಯಲ್ಲಿ ಕೆಲಸ ಮಾಡುವವರಿಗೆ ಅವರ ಸಾಧನೆಯನ್ನು ತೋರಿಸಲು ಅವಕಾಶ ಒದಗುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ ಆದರೂ ಹೆಚ್ಚಿನ ಖರ್ಚುಗಳಿಗೆ ಅವಕಾಶ ನೀಡಬೇಡಿ. ಕೃಷಿ ಕ್ಷೇತ್ರದಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗಬಹುದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಶೃಂಗಾರ ಸಾಮಗ್ರಿಗಳನ್ನು ತಯಾರು ಮಾಡುವವರಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ಸರಕು ಸಾಗಣೆ ಮಾಡುವವರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಸ್ತ್ರ ವಿನ್ಯಾಸಕಾರರಿಗೆ ಹೆಚ್ಚಿನ ಮನ್ನಣೆ ದೊರೆತು ಉತ್ತಮ  ಕೆಲಸ ದೊರೆಯುತ್ತದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿಬರುತ್ತದೆ. ತಾಯಿಯಿಂದ ಹೆಚ್ಚಿನ ಧನಸಹಾಯ ಸಿಗುವ ಸಾಧ್ಯತೆಯಿದೆ. ಸಹೋದರರ ಕಷ್ಟಗಳಿಗೆ ಸಹಾಯ ಮಾಡುವಿರಿ. ಮಕ್ಕಳ ಬಗ್ಗೆ ಶುಭ ವಾರ್ತೆಗಳನ್ನು ಕೇಳುವಿರಿ. ಧಾರ್ಮಿಕ ಸಂಸ್ಥೆಗಳನ್ನು ನಡೆಸುವವರಿಗೆ ಅಭಿವೃದ್ಧಿ ಇದೆ.

ಮೀನ ರಾಶಿ(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಹೊಸ ಉದ್ಯಮದ ಸ್ಥಾಪನೆಯ ವಿಚಾರದಲ್ಲಿ ದುಡುಕುವುದು ಬೇಡ. ಪೂರ್ವಾಪರ ವಿಚಾರವನ್ನು ಮಾಡಿ ನಂತರ ತೀರ್ಮಾನಿಸಿರಿ. ಸಂಸಾರದ ವಿಷಯದಲ್ಲಿ  ಗೊಂದಲಗಳು ಮೂಡಬಹುದು. ಅದಿರು ಮಾರಾಟಗಾರರಿಗೆ ಹೆಚ್ಚಿನ ಪೂರೈಕೆಗಾಗಿ ಬೇಡಿಕೆ ಬರಬಹುದು. ಮಿಶ್ರ ಲೋಹಗಳನ್ನು ತಯಾರು ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಆಸ್ತಿಗೆ ಸಂಬಂಧಪಟ್ಟ ವಿಷಯದಲ್ಲಿ ಒಂದು ಒಪ್ಪಂದಕ್ಕೆ ಬಂದು ಆಸ್ತಿ ದೊರಕುತ್ತದೆ. ಉದ್ಯಮಿಗಳಿಗೆ ಇದ್ದ ತೊಡಕುಗಳು ನಿವಾರಣೆಯಾಗಿ ಉತ್ಪಾದನೆ ಹೆಚ್ಚಾಗುತ್ತದೆ. ಹಿರಿಯರಿಂದ ಹಣ ಅಥವಾ ಒಡವೆಗಳು ಉಡುಗೊರೆಯಾಗಿ ಬರಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.