ಗುರುವಾರ , ಆಗಸ್ಟ್ 18, 2022
24 °C

ವಾರ ಭವಿಷ್ಯ: 20-6-2021ರಿಂದ 26-6-2021 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

**

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ನೂತನ ವಸ್ತ್ರ ಖರೀದಿಯ ಮಾಡಿ ಶುಭ ಸಮಾರಂಭಗಳಿಗೆ ಹೋಗಿ ಬರುವ ಸಾಧ್ಯತೆ ಇದೆ.  ದೂರದ ಊರಿಂದ  ಅನಿರೀಕ್ಷಿತ ಬಂಧುಗಳ ಆಗಮನ ಆಗಬಹುದು. ಅತಿಯಾಗಿ ಸಾಲಮಾಡಿದರೆ, ಸಾಲಗಾರರ ಕಾಟ ಹೆಚ್ಚಾಗಬಹುದು. ರತ್ನಗಳು ಮತ್ತು ಹರಳುಗಳ ವ್ಯಾಪಾರಿಗಳಿಗೆ  ವ್ಯವಹಾರ ಹೆಚ್ಚುತ್ತದೆ. ಗುಡಿ ಕೈಗಾರಿಕೆಯ ಮುತ್ತುಗಳನ್ನು ವಸ್ತುಗಳನ್ನು ತಯಾರು ಮಾಡಿ ಮಾರುವವರಿಗೆ ವ್ಯವಹಾರ ವೃದ್ಧಿಸಿ ಬೇಡಿಕೆ ಹೆಚ್ಚಾಗುತ್ತದೆ. ನಿಮ್ಮವಿರೋಧಿಗಳ ವಿಷಯ ದಲ್ಲಿ ಎಚ್ಚರದಿಂದ ಇರಿ.ಇವರು ನಿಮ್ಮಪ್ರತಿಸ್ಪರ್ಧಿಗಳಿಗೆ ಸಹಾಯ ಮಾಡಬಹುದು.ಆದಾಯವು  ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಮಾಡಿದ ಕೆಲಸ ಕಾರ್ಯಗಳಿಗೆ ಮನ್ನಣೆ ದೊರೆಯುತ್ತದೆ. ವಿದೇಶಿ  ವ್ಯವಹಾರಗಳನ್ನು  ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.

*
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲಕರ ವಾದ ವಾರ. ನಿರುದ್ಯೋಗಿಗಳ ಜೀವನದಲ್ಲಿ ಮಹತ್ವದ ತಿರುವು ಪಡೆದು ಉದ್ಯೋಗ ಸಿಗುವ ಸಾಧ್ಯತೆ ಇದೆ. ಅಧಿಕಾರಿಗಳ ಸಹಕಾರದಿಂದ  ಎಣಿಸಿದ ಕಾರ್ಯದಲ್ಲಿ ಪ್ರಗತಿ ಇರುತ್ತದೆ. ಲೇವಾದೇವಿ ಮಾಡುತ್ತಿದ್ದವರಿಗೆ  ಬಾರದೆನಿಂತಿದ್ದ ಬಾಕಿಹಣಗಳು ಬರುತ್ತವೆ.ಯಾವುದೇ ಕೆಲಸದಲ್ಲಿ ಆರಂಭಶೂರತ್ವ ಬೇಡ, ಅದರ ಬಗ್ಗೆ ಹೆಚ್ಚು ತಿಳುವಳಿಕೆ ಪಡೆಯಲು ಯತ್ನಿಸಿರಿ.ಹಣದ  ನಿರ್ವಹಣೆ ಯನ್ನು ಸರಿಯಾಗಿ ಮಾಡಿರಿ ಇಲ್ಲವಾದಲ್ಲಿ,ಸಾಲಮಾಡಬೇಕಾದ ಪರಿಸ್ಥಿತಿ  ಬರುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರುವ  ವ್ಯಾಪಾರಗಾರರಿಗೆ ವ್ಯವಹಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ಕೆಲವರಿಗೆ ತಾಯಿಯಿಂದ ಕೃಷಿಭೂಮಿ ದೊರೆಯುವ ಸಾಧ್ಯತೆ ಇದೆ.

*
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಸಂಗಾತಿಯ ಸಹಾಯದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಚರ್ಚೆ ಮನೆಯಲ್ಲಿ ನಡೆಯುತ್ತದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆದಾಯದಲ್ಲಿ  ಸ್ವಲ್ಪ ಪ್ರಮಾಣದ ಏರಿಕೆಯನ್ನು ಕಾಣಬಹುದು. ಸಸ್ಯಸಂಪತ್ತನ್ನು ಕಾಪಾಡಲು ಇಚ್ಚಿಸುವವರು ಹೆಚ್ಚು ಚುರುಕಾಗಿ ಕೆಲಸ ಮಾಡುವವರು. ವ್ಯವಹಾರದಲ್ಲಿ ಪರಿಶ್ರಮಕ್ಕೆ ತಕ್ಕ   ಆದಾಯವೂ ಬರುತ್ತದೆ. ಕೆಲವು ರಾಜಕೀಯ  ಮುಖಂಡರುಗಳಿಗೆ  ಜನರೆದುರಿಗೆ ಮುಖಭಂಗ ಅನುಭವಿಸುವ ಸಂದರ್ಭವಿದೆ, ಈ ಬಗ್ಗೆ ಎಚ್ಚರಿಕೆ ವಹಿಸಿರಿ. ಅನಗತ್ಯ ಕೋಪದಿಂದ  ವ್ಯವಹಾರದಲ್ಲಿ ನಷ್ಟದ ಸಾಧ್ಯತೆ ಇದೆ .ಆದ್ದರಿಂದ ಅತಿ ಕೋಪ ಬೇಡ. ಹಳೆಯ ಸಾಲವನ್ನು ಈಗ ವಸೂಲಿ ಮಾಡಬಹುದು.

*
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಕರಕುಶಲ ಕಾರ್ಮಿಕರಿಗೆ  ಉತ್ತಮ ಮನ್ನಣೆ ದೊರೆಯುತ್ತದೆ. ಇವರುಗಳು ಸರ್ಕಾರದಿಂದ  ಹೆಚ್ಚಿನ ಸಹಾಯವನ್ನು ನಿರೀಕ್ಷೆ ಮಾಡಬಹುದು. ಕೆಲವು ಕೃಷಿಕರಿಗೆ ಬರಬೇಕಾಗಿದ್ದ ಸರ್ಕಾರದ  ಸಹಾಯ ಧನಗಳು ಬರುತ್ತವೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಪ್ರೇಮಿಗಳಿಗೆ ಅವರ ಹಿರಿಯರಿಂದ ಅಡ್ಡಿ-ಆತಂಕಗಳು ಎದುರಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತಿಯಾಗಿ ಗಮನ  ಕೊಡುವುದರ ಜೊತೆಗೆ ಮೇಲ್ವಿಚಾರಣೆ ಮಾಡುವುದು ಬಹಳ ಒಳ್ಳೆಯದು.ಗರ್ಭಿಣಿಯರು ಸ್ವಲ್ಪ ಎಚ್ಚರಿಕೆ ಯಿಂದ ಇರುವುದು ಒಳಿತು. ಆದಾಯಕ್ಕಿಂತ ಹೆಚ್ಚಿನ ಖರ್ಚು ಇರುತ್ತದೆ. ದಿನಸಿ ವ್ಯಾಪಾರಿಗಳ ವ್ಯವಹಾರ ಹೆಚ್ಚಾಗಿ ಲಾಭ ಬರುತ್ತದೆ. ಆಹಾರ ಸೇವನೆ ಬಗ್ಗೆ ಎಚ್ಚರ ಇರಲಿ.

*
ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಮಾನಸಿಕ ಸ್ಥೈರ್ಯ ದೃಢವಾಗಿ ನೀವು ದೊಡ್ಡ ನಿರ್ಧಾರಗಳನ್ನು  ಕೈಗೊಳ್ಳುವಿರಿ. ಕೌಟುಂಬಿಕ ಬಿಕ್ಕಟ್ಟಿನ ಕುರಿತು ಹಿರಿಯರ ಮಧ್ಯಸ್ಥಿಕೆ ನಡೆಯು ತ್ತದೆ,ಇದು ಸಾಕಷ್ಟುಪರಿಣಾಮಕಾರಿ ಫಲಿತಾಂಶವನ್ನು  ಕೊಡುತ್ತದೆ.ಕುಟುಂಬದವರೊಡನೆ ಮಾತನಾಡುವಾಗ ಅತಿಯಾದ ಸಿಡುಕುತನ ಬೇಡ. ಆದಾಯದ ಹೊಸ ದಾರಿ ನಿಮಗೆ ಗೋಚರಿಸುತ್ತದೆ, ಇದು ನಿಮ್ಮ ಮಾಮೂಲಿ ಆದಾಯಕ್ಕಿಂತ ಹೆಚ್ಚು ಆದಾಯವನ್ನು ತರುತ್ತದೆ. ಕುಲುಮೆಗಳಲ್ಲಿ ಕೆಲಸ ಮಾಡುವ ವರು ಅಗ್ನಿ ದುರಂತಗಳ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ.ಕಾರ್ಖಾನೆಗಳಲ್ಲಿಅಗ್ನಿದುರಂತ ಸಂಭವಿಸುವ ಸಾಧ್ಯತೆ ಇದೆ. ಅನಿವಾರ್ಯ ಬದಲಾವಣೆಗೆ ಒಳಗಾಗಿ ನಿಮ್ಮತನವನ್ನು ಕಳೆದುಕೊಳ್ಳಬೇಡಿ. ನ್ಯಾಯವಾದಿ ಗಳಿಗೆ ಉತ್ತಮ ದಾವೆಗಳು ದೊರೆತು  ಸಂಪಾದನೆ ಹೆಚ್ಚಾಗುತ್ತದೆ.

*
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಭೂಮಿಯ ವ್ಯವಹಾರಗಳಿಗೆ ಸಂಬಂಧಿ ಸಿದಂತೆ ಶೀಘ್ರಗತಿಯಲ್ಲಿ ಕಾರ್ಯಚಟುವಟಿಕೆಗಳು  ನಡೆದು ಲಾಭ ಬರುತ್ತದೆ.  ತೈಲ ಸಂಸ್ಕರಣೆಯನ್ನು ಮಾಡುವ ವರಿಗೆ ಬೇಡಿಕೆ ಬರುತ್ತದೆ ಮತ್ತು ಹೊಸ ತೈಲ  ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ಬೇಕಾದ ಅನುಕೂಲಗಳು ದೊರೆ ದೊರೆಯುತ್ತವೆ. ಚಿಕ್ಕದಾಗಿ ಆರಂಭವಾದ ಕೆಲವು ಗೃಹೋದ್ಯಮಗಳು ಈಗ ಉದ್ದಿಮೆಯ ಸ್ವರೂಪವನ್ನು ಪಡೆಯುತ್ತವೆ. ಗಾಯನ ಕಲಾವಿದರಿಗೆ ಉತ್ತಮ ಮಾರುಕಟ್ಟೆ ದೊರೆಯುವ ಸಾಧ್ಯತೆ ಇದೆ. ಪಕ್ಕ ವಾದ್ಯದವರ ಸೂಕ್ಷ್ಮ ಪ್ರತಿಭೆಗಳು ಹೊರಬರುವ ಸಾಧ್ಯತೆಯಿದೆ.ಸಾಮಾನ್ಯರೀತಿಯಾದ   ಆದಾಯ ಇರುತ್ತದೆ.ಕೃಷಿಗೆ ಸಂಬಂಧಿಸಿದ ಉಪಕರಣ ಗಳನ್ನು ತಯಾರುಮಾಡಿ ಮಾಡುವವರ  ವ್ಯವಹಾರ ಹೆಚ್ಚಾಗುತ್ತದೆ.

*
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಯೋಜಿಸಿದ್ದ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ಮಾಡುವ ಆಕಾಶವಿದೆ. ವಸ್ತ್ರವಿನ್ಯಾಸಕಾರರಿಗೆ ಹೆಚ್ಚಿನ ಮಾರುಕಟ್ಟೆ ಒದಗುತ್ತದೆ. ಕೈಮಗ್ಗ ವಸ್ತುಗಳನ್ನು ತಯಾರಿಸುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ಸ್ತ್ರೀರೋಗ ತಜ್ಞರಿಗೆ ಹೆಚ್ಚು ಬೇಡಿಕೆ ಬರುತ್ತದೆ.ಕಣ್ಣಿನತೊಂದರೆ ಅಥವಾ ಮೂಳೆ ತೊಂದರೆ ಗಳು ಬಾಧಿಸಬಹುದು. ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿ ಕೊಳ್ಳಬೇಡಿರಿ. ಉದ್ಯೋಗ ಬದಲಾವಣೆಯ ಚಿಂತೆ ಈಗ ಬೇಡವೇ ಬೇಡ. ಅನಿರೀಕ್ಷಿತವಾದ ತಲೆನೋವು ನಿಮ್ಮನ್ನು ಕಾಡಬಹುದು. ವೈದ್ಯರಿಗೆ ತಪ್ಪು ಮಾಹಿತಿ ನೀಡಿ  ಸಿಕ್ಕಿಬೀಳುವ ಸಾಧ್ಯತೆಗಳಿವೆ ಆದ್ದರಿಂದ ವೃತ್ತಿಯಲ್ಲಿ ಎಚ್ಚರಿಕೆಯ ವಹಿಸಿರಿ.

*
ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ  ಜೇಷ್ಠ) 
ಕಟ್ಟಡ ನಿರ್ಮಾಣ ವಸ್ತುಗಳ ಮಾರಾಟಗಾರರಿಗೆ ವ್ಯಾಪಾರದಲ್ಲಿ ಮುನ್ನಡೆ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತಸವನ್ನು ಕಾಣಬಹುದು.ರಾಜಕೀಯ ನಾಯಕರುಗಳಿಗೆ ನಿಭಾಯಿಸಲಾಗದ  ಜವಾಬ್ದಾರಿ ಒಂದು ಹೆಗಲೇರಿ ಕಸಿವಿಸಿಯಾಗುವುದು. ಶತ್ರುಗಳನ್ನು ಮಟ್ಟಹಾಕಲು ನೀವು ಹೂಡುವ ತಂತ್ರಗಳು ಸಾಕಷ್ಟು ಫಲಿತಾಂಶವನ್ನು ಕೊಡುತ್ತವೆ. ವಿದ್ಯಾರ್ಥಿಗಳಿಗೆ ಅವರ ಸಾಧನೆಯಲ್ಲಿ ಅನುಕೂಲತೆ ಒದಗುತ್ತದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿಯ ಆದಾಯದಲ್ಲಿ  ಸ್ವಲ್ಪಮಟ್ಟಿನ ಏರಿಕೆ ಯನ್ನು ಕಾಣಬಹುದು.  ಕೆಲವು ಕೃಷಿಕರಿಗೆ ನಿರೀಕ್ಷಿತ ಮಟ್ಟದ ಫಸಲು ಸಿಗುವ ಸಾಧ್ಯತೆ ಕಡಿಮೆ.  ಸರ್ಕಾರಿ ಹಿರಿಯ ಅಧಿಕಾರಿಗಳು ಜನರೆದುರಿಗೆ  ಮುಜುಗರಕ್ಕೆ ಒಳಗಾಗುವ ಸಂದರ್ಭವಿದೆ.

*
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)
ಉದ್ಯೋಗ ಕ್ಷೇತ್ರದಲ್ಲಿ ಬಹಳ ಲವಲವಿಕೆಯುಳ್ಳ ಕಾಲ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗಳು ಕೇಳಿ ಬರುತ್ತವೆ.ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಒತ್ತಡ ಕಂಡರು ಸ್ನೇಹಿತರ ಸಹಕಾರದಿಂದ ಅದು ಪರಿಹಾರ ವಾಗುತ್ತದೆ. ಮಕ್ಕಳ ಯೋಗಕ್ಷೇಮದ ಬಗ್ಗೆ ಸ್ವಲ್ಪ ನಿಗಾ ಇರಲಿ. ಹಣದ ಒಳಹರಿವು ಕಡಿಮೆ ಇದ್ದರೂ ಹಣದ ನಿರ್ವಹಣೆ ಸರಿಯಾಗಿ ಮಾಡುವಿರಿ. ಹಣ ಉಳಿಸುವ ವಿಷಯಗಳಲ್ಲಿ ನಿಮ್ಮ ಸಾಫಲ್ಯತೆ ಕಂಡು ಬರುತ್ತದೆ.  ಕುಟುಂಬದಲ್ಲಿನ ವಿಷಯಗಳ ಬಗ್ಗೆ ಗಮನಹರಿಸು ವುದು ಒಳ್ಳೆಯದು. ಸಂಗಾತಿಗೆ ಅವರ ಹಿರಿಯರಿಂದ ಧನಸಹಾಯ ಬರುತ್ತದೆ. ಲೋಹದ ಮೂರ್ತಿಗಳನ್ನು ತಯಾರು ಮಾಡಿ ಮಾರುವವರಿಗೆ ಹೆಚ್ಚಿನ ವ್ಯಾಪಾರ ವಿದೆ.ಸ್ಥಿರಾಸ್ತಿಯ ಬಗ್ಗೆ ಇದ್ದ ತಕರಾರುಗಳು ಪರಿಹಾರಕ್ಕೆ ದಾರಿಮಾಡಿಕೊಡುತ್ತವೆ.

*
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಚಿಲ್ಲರೆ ವ್ಯಾಪಾರಿಗಳಿಗೆ ಕಡಿಮೆ ವ್ಯಾಪಾರ ವಿದ್ದರೂ ಇರುವ ವ್ಯಾಪಾರವನ್ನು ನಡೆಸುವುದು ಉತ್ತಮ. ಹಣಕಾಸಿನ ವಿಷಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆಯನ್ನು ಕಾಣಬಹುದು. ಶೇರುಪೇಟೆ ವ್ಯವಹಾರದಲ್ಲಿ  ಹಿನ್ನೆಡೆಯನ್ನು ಕಂಡರು ಕೆಲವೊಂದು ಶೇರುಗಳು ನಿಮ್ಮ ಕೈ ಹಿಡಿಯುತ್ತವೆ. ನೌಕಾಯಾನ ಗಳಿಗೆ ಇದ್ದ ಒತ್ತಡಗಳು ಕಡಿಮೆಯಾಗಿ ನಿರಾಳವೆನಿ ಸುತ್ತದೆ.  ಅನಾವಶ್ಯಕ ವಿಷಯಗಳಿಗೆ ತಲೆ ಹಾಕದಿರಿ ಅದು ನಿಮಗೆ ಕಿರಿಕಿರಿ ತರಬಹುದು. ಉದ್ದಿಮೆದಾರ ರಿಗೆ ಕಾರ್ಮಿಕರ ಸಮಸ್ಯೆ ಬರಬಹುದು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರಿಗೆ ಮಂದಗತಿಯ ವ್ಯವಹಾರವಿರುತ್ತದೆ. ಶೀತಭಾದೆಗಳು   ನಿಮ್ಮನ್ನು ಕಾಡಬಹುದು. ವಾರಾಂತ್ಯಕ್ಕೆ ದೈವತಾ ಕಾರ್ಯವನ್ನು ಹಮ್ಮಿಕೊಳ್ಳುವಿರಿ.

*
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ನಿಮ್ಮ ಮಾನಸಿಕ ಚಿಂತನೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದು ಒಳ್ಳೆಯದು. ಸಂಸಾರದ ಸೌಕರ್ಯಕ್ಕಾಗಿ  ಹೊಸ ಪ್ರಯತ್ನಗಳನ್ನು  ಮಾಡುವಿರಿ. ಹೊಸ ಆದಾಯಮೂಲದ  ಅನ್ವೇಷಣೆ ಯನ್ನು ಮಾಡುವಿರಿ. ಯುವಕರಿಗೆ ವೃತ್ತಿರಂಗದಲ್ಲಿ ಹಳೆ ವೈಷಮ್ಯ ಗರಿಗೆದರಬಹುದು ಆದ್ದರಿಂದ ಯಾರ ಬಳಿಯೂ ದ್ವೇಷ ಸಾಧಿಸದಿರುವುದು ಒಳ್ಳೆಯದು. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎಚ್ಚರಿಕೆ ಯಿಂದ ಕೆಲಸ ಮಾಡಬೇಕಾದ ಕಾಲ. ಪತ್ರಿಕಾ ರಂಗ  ದವರು ತಮ್ಮ ಸುದ್ದಿಗಾಗಿ ಹಗಲು ರಾತ್ರಿ  ದಣಿದರೂ ಒಳ್ಳೆ ಸುದ್ದಿ ಸಿಗುವ ಸಮಯ. ಹಿರಿಯರಿಗೆ ವಾಹನ ಖರೀದಿಯ ಯೋಗ ಕೂಡಿಬರುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರಬಹುದು. ಕೃಷಿ ಕಾರ್ಯ ಗಳಲ್ಲಿ  ಪ್ರಗತಿಯನ್ನು ಕಾಣಬಹುದು.

*
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಕೆಲಸಗಳಲ್ಲಿ ಭಿನ್ನಾಭಿಪ್ರಾಯ ಬಂದರು ಚಿಂತಿಸುವ ಅಗತ್ಯ ಇಲ್ಲ, ಹಾಗೆಂದು ಎಲ್ಲರ ವಿಷಯ ದಲ್ಲೂ ಮೂಗು ತೂರಿಸಲು ಹೋದಲ್ಲಿ ನಿಮಗೆ ಸಾಕಷ್ಟು ಹಿನ್ನಡೆಯಾಗುವ ಸಂದರ್ಭವಿದೆ. ನಿಮ್ಮ ಆಡಂಬರದ ಜೀವನಕ್ಕೆ ಹೆಚ್ಚು ಹಣ ಖರ್ಚನ್ನು ಮಾಡಲು ಗುರುತುನವರ ಬಳಿ ಸಾಲ ಮಾಡುವಿರಿ.  ಪ್ರೀತಿ ಪಾತ್ರದವರಿಂದ ಸ್ವಲ್ಪ ಕಿರಿಕಿರಿಯಾಗಬಹುದು. ಅಪೇಕ್ಷಿಸಿದ್ದ ಸಾಲಗಳು  ದೊರೆತು ಆತಂಕಗಳು ದೂರವಾಗುತ್ತದೆ.  ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ವಾರ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಪ್ರಗತಿಯನ್ನು ಕಾಣಬಹುದು. ಒಡವೆ ವಸ್ತ್ರಗಳನ್ನು ಕೊಳ್ಳಲು ಹೆಚ್ಚು ಆಸಕ್ತಿಯನ್ನು ತೋರುವಿರಿ. ಅವಿವಾಹಿತರು ಪ್ರೀತಿ ಪ್ರೇಮಗಳಲ್ಲಿ  ಸಿಲುಕುವ ಸಾಧ್ಯತೆಯಿದೆ. ಮಾಡಿದ ಕೆಲಸಗಳಲ್ಲಿ ನಿಮಗೆ ತೃಪ್ತಿ ಇರುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು