ಸೋಮವಾರ, ಸೆಪ್ಟೆಂಬರ್ 27, 2021
21 °C

ವಾರ ಭವಿಷ್ಯ: 15-8-2021ರಿಂದ 21-8-2021ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

****

ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)

ನಿಮ್ಮಿಷ್ಟದಂತೆ ಕಾರ್ಯ ನಡೆಯುವುದರಿಂದ ನೆಮ್ಮದಿಯೊಂದಿಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಗಾತಿ ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ತಾಳ್ಮೆಯಿಂದ ಮತ್ತು ಜಾಗರೂಕತೆಯಿಂದ ಮಾಡಿದ ಕೆಲಸಗಳಲ್ಲಿ ಹೆಚ್ಚು ಫಲ ಇರುತ್ತದೆ. ಸಂಶೋಧನೆ ಮಾಡುತ್ತಿರುವವರಿಗೆ ಹೆಚ್ಚು ಸಹಾಯಧನ ದೊರೆಯುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಕೆಲಸದಲ್ಲಿ ಸ್ವಲ್ಪ ಕಿರಿಕಿರಿಯಾಗುತ್ತದೆ. ಉದ್ಯಮಿಗಳು ಮಾಡಿಕೊಂಡ ವ್ಯಾಪಾರ ಒಪ್ಪಂದಗಳು ಫಲ ಕೊಡುತ್ತವೆ. ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿವೇತನ ದೊರೆಯುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಾರಾಂತ್ಯಕ್ಕೆ ಮನರಂಜನೆಯ ಕಾರ್ಯಗಳಲ್ಲಿ ಭಾಗವಹಿಸುವಿರಿ.

**

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಯಂತ್ರೋಪಕರಣಗಳನ್ನು ಮಾರಾಟ ಮಾಡಿದ್ದ ಹಣ ಈಗ ಬರಲಾರಂಭಿಸುತ್ತದೆ ಮತ್ತು ಹೊಸ ಯಂತ್ರಗಳಿಗಾಗಿ ಬೇಡಿಕೆ ಬರುತ್ತದೆ. ಪತ್ರಿಕೋದ್ಯಮಿಗಳಿಗೆ ಅನಿರೀಕ್ಷಿತವಾಗಿ ತುರ್ತು ಕೆಲಸಕ್ಕಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಅಲ್ಲಿ ಹೊಸ ಸ್ನೇಹಿತರು ದೊರೆತು ನಿಮ್ಮ ಕೆಲಸಕಾರ್ಯಗಳು ಸರಾಗವಾಗಿ ಆಗುತ್ತವೆ. ವಿದೇಶಿ ವ್ಯವಹಾರ ಮಾಡುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ. ವ್ಯವಹಾರದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಅವಕಾಶವೊಂದು ದೊರೆಯುತ್ತದೆ. ಅದನ್ನು ಸದುಪಯೋಗ ಮಾಡಿಕೊಳ್ಳಿರಿ. ಹೆಣ್ಣುಮಕ್ಕಳ ವಿದ್ಯಾಭ್ಯಾಸವು ಉತ್ತಮ ರೀತಿಯಲ್ಲಿ ನಡೆಯುತ್ತದೆ. ವೃತ್ತಿಯಲ್ಲಿ ನಿಶ್ಚಿತ ಆದಾಯ ಇರುತ್ತದೆ. ಒಂದು ಹೊಸ ಆದಾಯದ ಮೂಲ ದೊರೆಯುವ ಸಾಧ್ಯತೆ ಇದೆ.

**
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕಾರ್ಯಕ್ಷೇತ್ರದಲ್ಲಿ ಕಾರ್ಮಿಕರಲ್ಲಿ ಒಮ್ಮತ ಮೂಡಿಸಲು ನೀವು ಅನುಸರಿಸಿದ ಮಾರ್ಗದ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಶಂಸೆಯನ್ನು ವ್ಯಕ್ತಪಡಿಸುವರು. ಉದ್ಯೋಗ ಸ್ಥಳದಲ್ಲಿ ಸ್ಥಾನಮಾನ ಸಿಗುವುದರ ಜೊತೆಗೆ ನಿಮ್ಮ ವರ್ಚಸ್ಸು ಹೆಚ್ಚುತ್ತದೆ. ಧನಾದಾಯ ಉತ್ತಮವಾಗಿರುತ್ತದೆ. ಪಾಲುದಾರಿಕೆಯ ವ್ಯವಹಾರದಲ್ಲಿ ಹಲವರಿಗೆ ನಿಮ್ಮ ಮೇಲಿದ್ದ ಸಂಶಯ ದೂರವಾಗಿ ನಂಬಿಕೆ ಮೂಡುತ್ತದೆ. ಸಾಮಾಜಿಕ ಕೆಲಸ ಮಾಡುವವರಿಗೆ ಜನಮನ್ನಣೆ ದೊರೆಯುತ್ತದೆ. ದಿನಸಿ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಭವಿಷ್ಯದ ಯೋಜನೆಗಳ ಬಗ್ಗೆ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಿರಿ. ವಾಹನ ಮಾರಾಟದಿಂದ ಧನ ಲಾಭವಿರುತ್ತದೆ.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಮದುವೆ ಮುಂತಾದ ಮಂಗಳಕರ ಕಾರ್ಯಗಳನ್ನು ಮಾಡುವವರಿಗೆ ಧನಸಹಾಯ ಮಾಡಲೇಬೇಕಾದ ಅನಿವಾರ್ಯ ಇರುತ್ತದೆ. ವಾಣಿಜ್ಯ ಬೆಳೆಗಾರರಿಗೆ ಸ್ವಲ್ಪ ಲಾಭವಿರುತ್ತದೆ. ಭೂಮಿಯ ವ್ಯಾಪಾರದಲ್ಲಿ  ಮಧ್ಯವರ್ತಿಗಳಿಗೆ ಕಮಿಷನ್ ದೊರೆಯುತ್ತದೆ. ಕಚೇರಿಯಲ್ಲಿ ಕೆಲಸಗಳು ಸುಗಮವಾಗಿ ನಡೆಯಲು ಸ್ನೇಹಿತರ ಸಹಕಾರ ಕೋರುವಿರಿ. ಸಂಗಾತಿಗೆ ಸೂಕ್ತ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಪಾಲುದಾರಿಕೆಯ ವ್ಯವಹಾರಕ್ಕಾಗಿ ಕರೆ ಬಂದರೂ ಅದರಲ್ಲಿ ಸರಿಯಾಗಿ ಆಯ್ಕೆ ಮಾಡಿಕೊಂಡು ಮುನ್ನಡೆಯಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

**
ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ದಿನಬಳಕೆಯ ವಸ್ತುಗಳ ಮಾರಾಟಗಾರರಿಗೆ ವ್ಯವಹಾರ ವೃದ್ಧಿಸುತ್ತದೆ. ಆಲಂಕಾರಿಕ ವಸ್ತುಗಳನ್ನು ತಯಾರು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಯಾವುದೇ ವ್ಯವಹಾರಕ್ಕೆ ಬಂಡವಾಳ ಹೂಡುವ ಮುನ್ನ ಅದರ ಸುತ್ತಲಿನ ವಿದ್ಯಮಾನಗಳನ್ನು ಪರಿಶೀಲಿಸುವುದು ಉತ್ತಮ. ಉದ್ಯಮದ ಅಭಿವೃದ್ಧಿಗಾಗಿ ಕಾರ್ಮಿಕರೊಡನೆ ಕುಳಿತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅತಿ ಉತ್ಸಾಹ ತೋರುವಿರಿ. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುತ್ತದೆ. ಹಳೆಯ ಬಾಕಿ ಸಾಲಗಳನ್ನು ಈಗ ವಸೂಲಿಯನ್ನು ಮಾಡಬಹುದು. ಕೆಲವರಿಗೆ ವಿವಾಹ ಸಂಬಂಧ ಕೂಡಿಬರಬಹುದು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ.

**
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಬದುಕಿಗೊಂದು  ಹೊಸ ಆಯಾಮವನ್ನು ಕಂಡುಕೊಳ್ಳುವಿರಿ. ನಿಮ್ಮ ಬದುಕಿನ ತಿರುವಿಗೆ ನಿಮ್ಮ ಬಂಧುಗಳ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಎಂಬುದನ್ನು ಅರಿತುಕೊಳ್ಳುವಿರಿ. ಸ್ಥಗಿತಗೊಂಡಿರುವ ವಿದ್ಯೆ ಅಥವಾ ಅಭ್ಯಾಸವನ್ನು ಮುಂದುವರಿಸಬಹುದು. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗಿ ಇರುವ ವೃತ್ತಿಯಲ್ಲಿ ಮುಂದುವರೆಯುವಿರಿ. ಮಕ್ಕಳ ಪರೀಕ್ಷೆಗಳ ಬಗ್ಗೆ ದ್ವಂದ್ವ  ನಿಲುವು ಇರುತ್ತದೆ. ಕೌಟುಂಬಿಕ ವಿಷಯಗಳನ್ನು ಆಪ್ತರಲ್ಲಿ ಹಂಚಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಮೂಡುತ್ತದೆ. ಹಣದ ಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಮಕ್ಕಳ ಒತ್ತಾಸೆಗಾಗಿ ಅವರಿಗೆ ಅಲಂಕಾರಿಕ ವಸ್ತುಗಳನ್ನು ಕೊಡಿಸುವಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಕೊಡಿರಿ.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಮನೆಯ ವಿಸ್ತರಣೆ ಅಥವಾ ನವೀಕರಣಕ್ಕಾಗಿ ಹಣ ಖರ್ಚು ಮಾಡುವಿರಿ. ವಿದ್ಯುತ್ ಕಂಪನಿಗಳ ಗುತ್ತಿಗೆದಾರರಿಗೆ ಬರಬೇಕಿದ್ದ ಬಾಕಿ ಹಣದಲ್ಲಿ ಸ್ವಲ್ಪ ಭಾಗ ಬರುತ್ತದೆ. ಮಕ್ಕಳ ಅಭಿವೃದ್ಧಿ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುವಿರಿ. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಆಸಕ್ತಿ ಮೂಡುತ್ತದೆ. ಕೃಷಿ ಉಪಕರಣಗಳನ್ನು ತಯಾರಿಸುವವರಿಗೆ ಉತ್ತಮ ಬೇಡಿಕೆ ಇರುತ್ತದೆ. ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿ ಉತ್ತಮ ಸಂಪಾದನೆಯಾಗುತ್ತದೆ. ನಿಮ್ಮ ಕಷ್ಟಕ್ಕೆ ತಾಯಿಯಿಂದ ಧನ ಸಹಾಯ ದೊರೆಯುತ್ತದೆ. ಹೈನುಗಾರಿಕೆಯನ್ನು ಮಾಡುವವರಿಗೆ ನಿಶ್ಚಿತ ಆದಾಯ ಇರುತ್ತದೆ. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ ಮತ್ತು ಉತ್ತಮ ಹೆಸರು ಬರುತ್ತದೆ.

**
ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ  ಜೇಷ್ಠ) 
ಚಿತ್ರಕಲೆ ಮಾಡುವವರಿಗೆ ಪ್ರೋತ್ಸಾಹ ದೊರೆಯುತ್ತದೆ. ಮನೆಮಂದಿಯೊಂದಿಗೆ ಸಂಬಂಧ ವೃದ್ಧಿ ಆಗುತ್ತದೆ. ಆರ್ಥಿಕತೆಯನ್ನು ಸರಿದೂಗಿಸಲು ಹೊಸ ಪ್ರಯತ್ನ ಮಾಡುವಿರಿ. ಈ ಪ್ರಯತ್ನದಲ್ಲಿ ಸ್ವಲ್ಪ ಫಲವನ್ನು ಸಹ ಕಾಣುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಿಗೆ ಇರುತ್ತದೆ. ಉದ್ದಿಮೆಯನ್ನು ನಡೆಸುವವರು ಹೊಸ ರೀತಿಯ ಪ್ರಯೋಗಕ್ಕೆ ಮುಂದಾಗಿ ಉತ್ತಮ ಫಲವನ್ನು ಕಾಣುವುದರ ಜೊತೆಗೆ ಆದಾಯವು ಸಹ ಹೆಚ್ಚುತ್ತದೆ. ವ್ಯವಹಾರಗಳಲ್ಲಿ ನಿಮ್ಮ ವಿರೋಧಿಗಳನ್ನು ತಂತ್ರಗಳಿಂದ ಮಣಿಸುವಿರಿ. ಆಸ್ತಿ ಸಂಬಂಧವಾಗಿ ಇದ್ದ ತಕರಾರುಗಳು ಪರಿಹಾರವಾಗುತ್ತವೆ. ವ್ಯವಹಾರಗಳ ಒಳಗುಟ್ಟುಗಳನ್ನು ತಂದೆ ನಿಮಗೆ ತಿಳಿಸಿಕೊಡುವರು. ವಾರಾಂತ್ಯಕ್ಕೆ ದೇವತಾಕಾರ್ಯದಲ್ಲಿ ತೊಡಗುವಿರಿ.

**
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ವೃತ್ತಿಯಲ್ಲಿನ ಬದಲಾವಣೆಯ ಅಥವಾ ಸ್ಥಾನ ಬದಲಾವಣೆಯ ಬಗ್ಗೆ ಸ್ನೇಹಿತರೊಡನೆ ಚರ್ಚೆ ಮಾಡಲಿದ್ದೀರಿ. ವೃತ್ತಿ ಬಿಡುವ ಮುಂಚೆ ಸರಿಯಾಗಿ ನಿರ್ಧರಿಸಿರಿ. ಊರಿನ ವ್ಯಾಜ್ಯವೊಂದರ ಪರಿಹಾರಕ್ಕಾಗಿ ಮಧ್ಯಸ್ಥಿಕೆಯನ್ನು ವಹಿಸಬೇಕಾದ ಸಂದರ್ಭ ಒದಗಿ ಬರಲಿದೆ. ಬಹಳ ಜಾಣ್ಮೆಯಿಂದ ವ್ಯವಹರಿಸುವುದು ಉತ್ತಮ. ವ್ಯವಹಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕ್ಲಿಷ್ಟಕರ ವಿಷಯವನ್ನು ಪಾಲುದಾರರಿಗೆ ಮನವರಿಕೆ ಮಾಡಿ ಆಗುತ್ತಿದ್ದ ಧನ ನಷ್ಟವನ್ನು ತಡೆಯುವುದರಲ್ಲಿ ನೀವು ಯಶಸ್ವಿಯಾಗುವಿರಿ. ಇದು ನಿಮಗೆ ಸಹಜವಾಗಿ ಕಂಡರೂ ಇತರರಿಗೆ ವಿಶೇಷವೆನಿಸುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಕ್ರೀಡಾಪಟುಗಳಿಗೆ ಸಾಧನೆ ತೋರಲು ಉತ್ತಮ ಅವಕಾಶ ದೊರೆಯುತ್ತದೆ.

**
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) 
ಭವಿಷ್ಯದ ಯೋಜನೆಗಳ ಬಗ್ಗೆ  ಗಮನಹರಿಸುವಿರಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಿರಲಿದೆ. ಹೊಸ ವ್ಯಕ್ತಿಗಳ ಪರಿಚಯದಿಂದಾಗಿ ಕವಿಗಳಿಗೆ ಹೆಚ್ಚಿನ ಮನ್ನಣೆ ದೊರೆಯುತ್ತದೆ. ಆತ್ಮೀಯರೊಂದಿಗೆ ಹಣಕಾಸಿನ ವಿಷಯವಾಗಿ ಚರ್ಚೆ ಮಾಡುವಿರಿ. ರಚನಾತ್ಮಕ ಕಾರ್ಯಗಳಿಂದ ಸಮಾಜದಲ್ಲಿ ಗೌರವವನ್ನು ಪಡೆಯುವಿರಿ. ಸರಕು ಸಾಗಣೆ ವ್ಯವಹಾರ ನಡೆಸುವವರಿಗೆ ಲಾಭವಿರುತ್ತದೆ. ಬಂಧುಗಳೊಡನೆ ಹಳೆಯ ನೆನಪೊಂದನ್ನು ಹಂಚಿಕೊಳ್ಳುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ಪೂರ್ಣಗೊಳಿಸುತ್ತದೆ. ಉತ್ತಮ ಆರೋಗ್ಯ ನಿಮ್ಮದಾಗಿರುತ್ತದೆ.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮರಳು, ಜಲ್ಲಿ ಮುಂತಾದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರುವವರ ವ್ಯಾಪಾರ ಹೆಚ್ಚುತ್ತದೆ. ಲಲಿತಕಲೆಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಹೆಚ್ಚಿನ ಸ್ಥಾನ ಮತ್ತು ಗೌರವ ದೊರೆಯುತ್ತದೆ. ಬರಹಗಾರರಿಗೆ ಉತ್ತಮ ಅವಕಾಶ ದೊರೆತು ಅವರ ಲೇಖನಗಳು ಪ್ರಕಟಗೊಳ್ಳುತ್ತವೆ. ಧಾನ್ಯಗಳ ಸಗಟು ವರ್ತಕರು ಬೇಕಾದ ಧಾನ್ಯಗಳನ್ನು ಸಂಗ್ರಹ ಮಾಡಬಹುದು. ದ್ರವರೂಪದ ವಸ್ತುಗಳ ಮಾರಾಟಗಾರರಿಗೆ ವ್ಯಾಪಾರದಲ್ಲಿ ಲಾಭವಿರುತ್ತದೆ. ದೂರ ಪ್ರದೇಶದಲ್ಲಿರುವ ವ್ಯಕ್ತಿಗಳಿಂದ ನಿಮಗೆ ಬೇಕಾದ ನೆರವು ಸಕಾಲದಲ್ಲಿ ದೊರೆಯುತ್ತದೆ. ನಿಮ್ಮ ಯೋಜನೆಗಳು ನಿಧಾನವಾದರೂ ಯಶಸ್ಸಿನತ್ತ ಹೋಗುತ್ತವೆ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ವೈದ್ಯರಿಗೆ ಬಿಡುವಿಲ್ಲದ ಕೆಲಸದಿಂದಾಗಿ ಆದಾಯದ ಏರಿಕೆಯ ಜೊತೆ ಆಯಾಸವೂ ಹೆಚ್ಚುವುದು. ಕಟ್ಟಡ ನಿರ್ಮಾಣ ಮಾಡುವವರಿಗೆ ಹೊಸ ನಿರ್ಮಾಣ ಕಾರ್ಯಗಳ ಬಗ್ಗೆ ಒಪ್ಪಂದ ಏರ್ಪಟ್ಟು ಸಂತೋಷವಾಗುವುದು. ಸರಕು ಸಾಗಣೆ ವ್ಯವಸ್ಥೆಯನ್ನು ನಡೆಸುತ್ತಿರುವವರಿಗೆ ವ್ಯವಹಾರಗಳು ವೃದ್ಧಿಸುತ್ತವೆ. ಚಿನ್ನ ಬೆಳ್ಳಿ ಮಾರಾಟಗಾರರಿಗೆ ಗಳಿಕೆಯಲ್ಲಿ ಹೆಚ್ಚಳವಾಗುವುದು. ವ್ಯಾಪಾರ ವ್ಯವಹಾರಗಳಲ್ಲಿ ಅತಿ ಹೆಚ್ಚು ಲಾಭವಿಲ್ಲದಿದ್ದರೂ ನಷ್ಟವೇನಿಲ್ಲ. ಸಂಗಾತಿಯ ಮನಗೆಲ್ಲಲು ಅವರನ್ನು ಬಹಳಷ್ಟು ಓಲೈಕೆ ಮಾಡುವಿರಿ. ಆರೋಗ್ಯದ ನಿರ್ವಹಣೆಗಾಗಿ ಹಣ ಖರ್ಚು ಮಾಡುವಿರಿ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಹಿರಿಯರೊಡನೆ ಗೌರವದಿಂದ ನಡೆದುಕೊಳ್ಳುವುದು ನಿಮಗೆ ಒಳಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.