ಬುಧವಾರ, ನವೆಂಬರ್ 30, 2022
16 °C

ವಾರ ಭವಿಷ್ಯ: 28-8-2022 ರಿಂದ 03-09-2022ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

**

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಯತ್ನಗಳಿಗೆ ಅಡ್ಡಿ ಎದುರಾದರೂ ಕಾರ್ಯನಿಲ್ಲದೆ ನಿಧಾನವಾಗಿಯಾದರೂ ಮುಂದುವರೆಯುವುದು. ಯಾವುದೇ ವ್ಯಕ್ತಿಯ ಹೊಗಳಿಕೆಗೆ ಮರುಳಾಗುವುದು ಬೇಡ. ನೀವು ಅವಮಾನಿಸಿದ ವ್ಯಕ್ತಿಗಳು, ಕಾದು ನಿಮ್ಮನ್ನೇ ಅವಮಾನಿಸಬಹುದು. ಹಣದ ಒಳಹರಿವು ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ಖರ್ಚು ಸಾಕಷ್ಟು ಕಡಿಮೆ ಮಾಡುವುದು ಉತ್ತಮ. ನಿಮ್ಮ ಪ್ರತಿಭೆಯನ್ನು ತೋರಿಸಲು ಕೆಲವೊಂದು ಉತ್ತಮ ಅವಕಾಶಗಳು  ಒದಗುತ್ತವೆ, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಸಂಗಾತಿಯು ಸಿರಿವಂತಿಕೆ ಜೀವನವನ್ನು ಆಶಿಸುವರು ಆದರೆ ಹಾಸಿಗೆ ಇದ್ದಷ್ಟು ಕಾಲುಚಾಚುವುದು ಉತ್ತಮ. ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ದೊರೆಯುವ ಸಂದರ್ಭವಿದೆ. ನರದೌರ್ಬಲ್ಯ ಅಥವಾ ನಿದ್ರಾಹೀನತೆ ನಿಮ್ಮನ್ನು ಈಗ ಕಾಡಬಹುದು. ತಂದೆಯೊಂದಿಗೆ ಹಣದ ಬಗ್ಗೆ ತಿಕ್ಕಾಟ ಆಗಬಹುದು.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ಮಾತು ಹೆಚ್ಚು ನಡೆಯುತ್ತದೆ ಹಾಗೂ ಪ್ರಮುಖ ಸ್ಥಾನವನ್ನು ಹೊಂದುವ ಅವಕಾಶವಿದೆ. ಹೋಟೆಲ್ ಉದ್ಯಮದವರಿಗೆ ವ್ಯಾಪಾರದಲ್ಲಿ ಏರಿಕೆಯಾಗುವ ಸಂಭವವಿದೆ. ಸಹೋದರಿಯರನ್ನು ಭೇಟಿಯಾಗುವ ಲಕ್ಷಣಗಳಿವೆ. ಸ್ಥಿರಾಸ್ತಿ ಕುರಿತ ನಿಮ್ಮ ನಿರ್ಧಾರಗಳು ಸರಿಯಾಗಿರುತ್ತವೆ. ರಾಜಕೀಯ ವ್ಯಕ್ತಿಗಳಿಗೆ ಅವರ ಪ್ರತಿಸ್ಪರ್ಧಿಗಳಿಂದ ಹೆಚ್ಚಿನ ಹೋರಾಟವಿರಲಿದೆ. ಬಹಳ ಹೋರಾಟದಿಂದ ಧನಮೂಲಗಳನ್ನು ಪಡೆಯುವಿರಿ. ಆದಾಯವು ನಿರೀಕ್ಷೆಯಷ್ಟಿರುತ್ತದೆ. ಸಮಾಜದಲ್ಲಿ ಬೆರೆಯಲು ಹೆಚ್ಚಿನ ಅವಕಾಶ ದೊರೆತು ಸ್ವತಃ ಸಂತೋಷಪಡುವಿರಿ. ಪ್ರಸ್ತುತ ಇರುವ ಕೆಲಸದಲ್ಲೇ ಮುಂದುವರಿಯುವುದು ಬಹಳ ಉತ್ತಮ. ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಬರಹಗಾರರಿಗೆ ಹೆಚ್ಚಿನ ಗೌರವಧನ ಸಿಗುವ ಸಾಧ್ಯತೆ ಇದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ವ್ಯವಹಾರದಲ್ಲಿ ವಾದ ವಿವಾದಕ್ಕಿಂತ ಸಮಾಧಾನದ ಮಾತುಗಳು ಹೆಚ್ಚು ಫಲ ಕೊಡುತ್ತವೆ. ಸಹೋದರರಿಂದ ನಿಮ್ಮ ಕೆಲವು ಕೆಲಸಗಳಿಗೆ ವಿರೋಧ ವ್ಯಕ್ತವಾಗಬಹುದು. ಆದಾಯದಷ್ಟೇ ಖರ್ಚು ಇದ್ದೇ ಇರುತ್ತದೆ. ನಿಮ್ಮ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಳ್ಳಿರಿ. ಸಾಂಸಾರಿಕ ವಿಷಯಗಳಲ್ಲಿ ನಿಮ್ಮ ಹಿರಿಯರ ಮಾತನ್ನು ಮೀರದಿರುವುದು ನಿಮಗೆ ಉತ್ತಮ. ಉದ್ದಿಮೆದಾರರಿಗೆ ನಷ್ಟದಿಂದ ಹೊರಬಂದು ಲಾಭದತ್ತ ಹೆಜ್ಜೆ ಹಾಕುವ ಯೋಗವಿದೆ. ಕೃಷಿಕರಿಗೆ ಆದಾಯದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಮ್ಮ ಸಮಾನಮನಸ್ಕರು ಸಾಕಷ್ಟು ಸಹಾಯ ಮಾಡುವರು. ಸಾಮಾಜಿಕ ಕೆಲಸ ಕಾರ್ಯಗಳಿಂದ ಸ್ವಲ್ಪ ದೂರ ಇರುವುದು ಬಹಳ ಉತ್ತಮ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಈ ವಾರ ಹಣಕ್ಕೆ ಕೊರತೆ ಇಲ್ಲ. ಚಿನ್ನ, ಬೆಳ್ಳಿ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಪಾರ ಆಗುವ ಸಾಧ್ಯತೆಗಳಿವೆ. ಸರ್ಕಾರದ ಕಡೆಯಿಂದ ಬರಬೇಕಿದ್ದ ಎಲ್ಲ ರೀತಿಯ ಸಹಾಯಧನ ಈಗ ಬರುತ್ತದೆ. ಆಸ್ತಿ ವಿಚಾರದಲ್ಲಿ ಅಷ್ಟು ಮುಂದುವರಿಯಲು ಅನುಕೂಲವಿರುವುದಿಲ್ಲ. ವೃತ್ತಿರಂಗದಲ್ಲಿ ತಮ್ಮತನವನ್ನು ಕಾಯ್ದುಕೊಳ್ಳುವುದರಿಂದ ಮುಂದಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ನಿಮ್ಮ ಮಾತಿನ ಚತುರತೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ನೌಕರ ವರ್ಗದವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುತ್ತದೆ. ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಆದಾಯವಿರುತ್ತದೆ. ಬರಬೇಕಾಗಿದ್ದ ಬಾಕಿ ಹಣ ಬರುತ್ತದೆ. ಆರಕ್ಷಕ ಸೇವೆಯಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ.

ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 
ರಾಜಕಾರಣಿಗಳಿಗೆ ಸ್ಥಾನ ಬದಲಾವಣೆ ಅಥವಾ ಸ್ಥಾನ ಭದ್ರತೆಯ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆ ಇರುತ್ತದೆ. ರೇಷ್ಮೆ ನೇಕಾರರಿಗೆ ಬೇಡಿಕೆ ಬಂದು ಆದಾಯ ಹೆಚ್ಚುತ್ತದೆ. ರೋಗದ ಬಗ್ಗೆ ಇದ್ದ ಸಂಶಯ ದೂರವಾಗಿ ಮನಸ್ಸು ಹಗುರವಾಗುತ್ತದೆ. ಕೂಲಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಧಾರ್ಮಿಕ ಕೆಲಸ ಮಾಡುವವರ ಆದಾಯದಲ್ಲಿ ಹೆಚ್ಚಳ ಕಾಣಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಖರ್ಚಾಗುವುದು. ಬಣ್ಣದ ಕೆಲಸ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ಸಾಂಪ್ರದಾಯಿಕ ಕೃಷಿ ತಜ್ಞರಿಗೆ ಹೆಚ್ಚು ಬೇಡಿಕೆ ಬರುತ್ತದೆ. ವಿದೇಶಿ ವ್ಯವಹಾರ ಮಾಡುವ ಜನರಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ. ಮಹಿಳಾ ಸ್ವಯಂ ಉದ್ಯೋಗಿಗಳಿಗೆ ವ್ಯವಹಾರ ವಿಸ್ತರಿಸುವ ಸಾಧ್ಯತೆ ಇದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ಮಾತುಕತೆಗಳಲ್ಲಿ ಸಂಪೂರ್ಣ ವ್ಯಾವಹಾರಿಕತೆ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಸೋದರರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಹಿರಿಯರ ಆಸ್ತಿ ವಿಚಾರದಲ್ಲಿ ತಗಾದೆಗಳು ಬರುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಹೆಚ್ಚು ಖರ್ಚು ಮಾಡಬೇಕಾದ ಅನಿವಾರ್ಯವಿದೆ. ಕಾಲು ನೋವು ಇರುವವರಿಗೆ ನೋವು ಅತಿಯಾಗಿ ಬಾಧಿಸುವ ಲಕ್ಷಣವಿದೆ. ಅವಿವಾಹಿತರಿಗೆ ಸಂಬಂಧ ಒದಗುವ ಸಾಧ್ಯತೆ ಇದೆ. ವಿದೇಶಕ್ಕೆ ಆಮದು ಮತ್ತು ರಫ್ತು ವ್ಯವಹಾರ ಮಾಡುವವರಿಗೆ ಸಣ್ಣಪುಟ್ಟ ಕಾನೂನಿನ ತೊಡಕು ಬರುವ ಸಾಧ್ಯತೆ ಇದೆ. ಕೃಷಿಕರಿಗೆ ಹೆಚ್ಚು ಆದಾಯ ಬರುವ ಲಕ್ಷಣಗಳಿವೆ. ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಗೌರವ ದೊರೆಯುತ್ತದೆ.  ವ್ಯವಹಾರದಲ್ಲಿ ನೀವು ಮಂಡಿಸುವ ವರದಿಗಳಿಗೆ ಹೆಚ್ಚು ಬೆಲೆ ಬಂದು ನಿಮಗೆ ಸೂಕ್ತ ಸ್ಥಾನಮಾನ ದೊರೆಯುವ ಸಂದರ್ಭವಿದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳ ಕಾಟ ಜಾಸ್ತಿಯಾಗಬಹುದು. ಸಾರಿಗೆ ವಾಹನ ಬಳಸಿ ದಿನನಿತ್ಯ ದುಡಿಯುವವರಿಗೆ ಸಂಪಾದನೆ ಜಾಸ್ತಿ ಆಗುವ ಯೋಗವಿದೆ. ನ್ಯಾಯಾಲಯದ ವಿಚಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಾಣಬಹುದು. ನಿಮ್ಮ ಶಕ್ತಿ ಸಾಮರ್ಥ್ಯ ಅರಿತು ಜವಾಬ್ದಾರಿ ವಹಿಸಿಕೊಳ್ಳುವುದು ಬಹಳ ಉತ್ತಮ. ವಿದ್ಯಾರ್ಥಿಗಳ ಶಿಸ್ತುಬದ್ಧ ಅಭ್ಯಾಸ ಅವರಿಗೆ ಉತ್ತಮ ಫಲ ಕೊಡುತ್ತದೆ. ರಸಗೊಬ್ಬರಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಣೆಯಾಗಿ ಲಾಭ ಹೆಚ್ಚುತ್ತದೆ. ಜೇನುಕೃಷಿ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ಕೃಷಿ ಉತ್ಪನ್ನಗಳ ಮಾರಾಟಗಾರರಿಗೆ ಆದಾಯ ಕಡಿಮೆ ಆಗಬಹುದು. ಮನೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರ ಮಾರಾಟ ವಿಸ್ತರಿಸುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)  
ವೃತ್ತಿಯಲ್ಲಿ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅನಿವಾರ್ಯವಾಗುತ್ತದೆ. ನಿಮ್ಮ ಶತ್ರುಗಳನ್ನು ಮಟ್ಟಹಾಕಲು ಅವರದೇ ತಂತ್ರಗಳನ್ನು ಬಳಸಬೇಕಾದ ಅಗತ್ಯವಿರುತ್ತದೆ. ಬಹಳ ಕಾಲದಿಂದ ಅಪೇಕ್ಷಿಸುತ್ತಿದ್ದ ವಸ್ತುವೊಂದು ದೊರೆತು ಸಂತಸವಾಗುತ್ತದೆ. ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯ. ರಸ್ತೆ ಕಾಮಗಾರಿ ಮಾಡುವವರಿಗೆ ಹೊಸ ಗುತ್ತಿಗೆಗಳು ಸಿಗುವ ಸಂದರ್ಭವಿದೆ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಹೆಚ್ಚು ಎಚ್ಚರಿಕೆಯಿಂದ ಚಿಕಿತ್ಸೆ ಮಾಡಬೇಕಾದ ಅಗತ್ಯವಿದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಕಾಡಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ನಿರೀಕ್ಷೆ ಮಾಡಬಹುದು. ಸಂಗಾತಿಯ  ಆದಾಯದಲ್ಲಿ ಹೆಚ್ಚಳ ಆಗುವ ಸಂದರ್ಭವಿದೆ. ಹಿರಿಯರ ಹೆಸರು ಹೇಳಿ ನಿಮ್ಮ ಕೆಲಸ ಸಾಧಿಸಿಕೊಳ್ಳುವಿರಿ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮನೆ ಬದಲಾಯಿಸುವ ಯೋಚನೆಗೆ ಚಾಲನೆ ಸಿಗುತ್ತದೆ. ಸಿನಿಮಾ ರಂಗದವರಿಗೆ ಅದರಲ್ಲೂ ಸಾಹಸ ಕಲಾವಿದರುಗಳಿಗೆ ಹೆಚ್ಚು ಅವಕಾಶ ದೊರೆಯುತ್ತದೆ. ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವರ್ಗಾವಣೆಯ ಭಾಗ್ಯ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ತಾಂತ್ರಿಕತೆಯ ಒಳಗುಟ್ಟುಗಳನ್ನು ಎಲ್ಲರಿಗೂ ತಿಳಿಯುವಂತೆ ಹೇಳುವುದು ಬೇಡ. ಹಣದ ಒಳಹರಿವು ಸಾಮಾನ್ಯವಾಗಿರುವುದರಿಂದ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಉತ್ತಮ. ಕ್ರೀಡಾಪಟುಗಳಿಗೆ ಎದುರಾಳಿಗಳನ್ನು ಜಯಿಸುವ ಶಕ್ತಿ ಬರುತ್ತದೆ. ವಿದೇಶದಲ್ಲಿರುವ ನಿಮ್ಮ ಮಕ್ಕಳನ್ನು ನೋಡಲು ಹೋಗಿಬರಬಹುದು. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಹೆಚ್ಚು ಎಚ್ಚರವಾಗಿರಿ. ತಂದೆಯಿಂದ ಆಸ್ತಿ ಬರುವ ಸಾಧ್ಯತೆ ಇದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) 
ಎಲ್ಲವನ್ನೂ ನೀವು ಕಷ್ಟಪಟ್ಟು ಸಂಪಾದಿಸುವಿರಿ. ಉದ್ಯೋಗದಲ್ಲಿ ಸಮಾಧಾನವಿಲ್ಲದಿದ್ದರೂ ಆರ್ಥಿಕ ತೊಂದರೆ ಇರುವುದಿಲ್ಲ. ಸಾಮಾಜಿಕ ಕೆಲಸಗಳಲ್ಲಿ ಅಪಾರ ಜನಬೆಂಬಲ ದೊರೆತು ಕಾರ್ಯಗಳನ್ನು ಮಾಡಿ ಸಾಧಿಸುವಿರಿ. ಬೇರೆಯವರ ಸಮಸ್ಯೆಗಳಿಗೆ ನೆರವಾಗುವ ನಿಮ್ಮ ಗುಣ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಆಸ್ತಿ ವ್ಯವಹಾರಗಳನ್ನು ನೋಡಿಕೊಳ್ಳಲು ನಂಬುಗೆಯ ವ್ಯಕ್ತಿಯೊಬ್ಬನನ್ನು ನೇಮಿಸಿಕೊಳ್ಳುವಿರಿ. ಈ ವಾರದ ಮಧ್ಯದಲ್ಲಿ ಸಂತೋಷಭರಿತ ಸುದ್ದಿಯೊಂದು ನಿಮಗೆ ತಲುಪುತ್ತದೆ. ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಚರ್ಮದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವಿದೇಶಗಳಿಂದ ಬೇಡಿಕೆ ಬರುವ ಸಾಧ್ಯತೆಗಳಿವೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಹೊರದೇಶದಲ್ಲಿ ಇರುವವರು ಸ್ಥಿರಾಸ್ತಿ ಮಾಡಲು ಒಳ್ಳೆಯ ಕಾಲ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹಣ ವ್ಯವಹಾರ ಮಾಡುವವರಿಗೆ ನಿರೀಕ್ಷೆಗೂ ಮೀರಿ ಆದಾಯವಿರುತ್ತದೆ. ಹಿರಿಯರು ಸಾಮಾಜಿಕ ಕೆಲಸಗಳಿಂದ ಹೆಚ್ಚು ಗೌರವ ಪಡೆಯುತ್ತಾರೆ. ತೆರಿಗೆ ಅಧಿಕಾರಿಗಳಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಆಸ್ಪತ್ರೆ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಬಟ್ಟೆಯ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುವ ಸಾಧ್ಯತೆ ಇದೆ. ಆಸ್ತಿ ಕೊಳ್ಳುವ ಬಗ್ಗೆ ಸರಿಯಾಗಿ ಆಲೋಚನೆಯನ್ನು ಮಾಡಿರಿ. ಶೀತ ಬಾಧೆ ಕೆಲವರನ್ನು ಕಾಡಬಹುದು. ಧಾನ್ಯಗಳ ಸಗಟು ವ್ಯಾಪಾರಸ್ಥರಿಗೆ ಹೆಚ್ಚು ಲಾಭ ಬರುವ ಸಾಧ್ಯತೆ ಇದೆ. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಉನ್ನತ ಹುದ್ದೆಯಲ್ಲಿರುವವರು ಸಂದರ್ಭಕ್ಕೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಹೈನುಗಾರಿಕೆಯನ್ನು ಮಾಡುವವರಿಗೆ ಆದಾಯ ಸಮತೋಲನವಾಗಿರುವುದು. ಕೃಷಿಕರಿಗೆ ಹೆಚ್ಚು ಆದಾಯ ಬರುವ ಸಾಧ್ಯತೆಯಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿಮ್ಮ ಸಂತಸಕ್ಕಾಗಿ ಸಾಕಷ್ಟು ಹಣ ಖರ್ಚು  ಮಾಡುವಿರಿ. ನಿಮ್ಮ ನೆಚ್ಚಿನ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆ ಇರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಸಿಗುವ ಕಾಲವಿದು. ಸಣ್ಣಮಟ್ಟದ ಗುತ್ತಿಗೆದಾರರಿಗೆ ಆಶಿಸುತ್ತಿದ್ದ ಕೆಲಸ ಸಿಗುತ್ತದೆ. ಜನರ ಮಧ್ಯೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯವಿದೆ. ಖಾದ್ಯ ತೈಲದ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ಕಣ್ಣಿನ ತೊಂದರೆ ಇರುವವರು ಚಿಕಿತ್ಸೆಗೆ ಹೋಗುವುದು ಒಳ್ಳೆಯದು. ಚಿನ್ನದ ಒಡವೆ ತಯಾರಕರಿಗೆ ಬೇಡಿಕೆ ಹೆಚ್ಚುತ್ತದೆ. ರೇಷ್ಮೆ ವಸ್ತ್ರಗಳ ಮೇಲೆ ಕುಸುರಿ ಕಲೆಯನ್ನು ಮಾಡುವವರಿಗೆ ಹೆಚ್ಚು ಸಂಪಾದನೆಯಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.