ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಕ್ ಚಂದ್ ರಾಕ್ ಗಾರ್ಡನ್‌

Last Updated 7 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ನೆಕ್ ಚಂದ್ ಸೈನಿ ಜನಿಸಿದ್ದು ಎಲ್ಲಿ, ಯಾವಾಗ?

ಇವರು ಜನಿಸಿದ್ದು 1924ರ ಡಿಸೆಂಬರ್‌ 15ರಂದು. ಈಗಿನ ಪಾಕಿಸ್ತಾನದ ಶಕರಗಡದಲ್ಲಿ. ದೇಶ ವಿಭಜನೆಯ ಸಂದರ್ಭದಲ್ಲಿ ಇವರ ಕುಟುಂಬ ಚಂಡೀಗಡಕ್ಕೆ ವಲಸೆ ಬಂತು.

ಅವರು ನಿರ್ಮಿಸಿದ ಪ್ರತಿಮೆಗಳು ಯಾವ ಬಗೆಯವು?

ಶಿಲ್ಪಕಲೆಯನ್ನು ತಾವಾಗಿಯೇ ಕಲಿತುಕೊಂಡ ಹಿರಿಮೆ ಚಂದ್ ಅವರದ್ದು. ಅವರು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸಿಗುವ ತ್ಯಾಜ್ಯ ವಸ್ತುಗಳಿಂದ ಪ್ರತಿಮೆಗಳನ್ನು ನಿರ್ಮಿಸಿದರು.

ಆ ಪ್ರತಿಮೆಗಳು ಎಲ್ಲಿವೆ?

ಅವು ಚಂಡೀಗಡದಲ್ಲಿ ಇವೆ. ಈ ಪ್ರತಿಮೆಗಳು ಇರುವ ಸ್ಥಳವನ್ನು ‘ನೆಕ್ ಚಂದ್ ರಾಕ್ ಗಾರ್ಡನ್’ ಎಂದು ಕರೆಯಲಾಗುತ್ತದೆ. 40 ಎಕರೆ ವಿಸ್ತೀರ್ಣದ ಈ ಗಾರ್ಡನ್‌ನಲ್ಲಿ ನೃತ್ಯಗಾರರು, ಸಂಗೀತಗಾರರ ಪ್ರತಿಮೆಗಳು, ಜಲಪಾತಗಳ ಕಲಾಕೃತಿಗಳು, ಪ್ರಾಣಿ–ಪಕ್ಷಿಗಳ ಪ್ರತಿಕೃತಿಗಳು ಇವೆ. ಚೂರು ಚೂರಾದ ಗಾಜು ಮತ್ತು ಟೈಲ್ಸ್‌ನಿಂದ ಇವುಗಳನ್ನು ಅಲಂಕರಿಸಲಾಗಿದೆ.

ಚಂದ್ ಅವರು ಇಂತಹ ಕಲಾಕೃತಿಗಳನ್ನು ಸಿದ್ಧಪಡಿಸುವ ಕೆಲಸ ಶುರು ಮಾಡಿದ್ದು ಯಾವಾಗ?

ಆ ಕೆಲಸ ಶುರುವಾಗಿದ್ದು 1957ರಲ್ಲಿ. ಆಗ ಅವರು ಹಗಲು ವೇಳೆಯಲ್ಲಿ, ಪಂಜಾಬ್ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿಯ ವೇಳೆಯಲ್ಲಿ ಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದರು!

ಅವರು ಇಷ್ಟೆಲ್ಲ ಕೆಲಸ ಮಾಡಿದ್ದು ಯಾವ ಸ್ಥಳದಲ್ಲಿ?

ಇವನ್ನೆಲ್ಲ ಮಾಡಿದ್ದು ಸುಖ್ನಾ ಸರೋವರಕ್ಕೆ ಹೊಂದಿಕೊಂಡಂತೆ ಇರುವ ಅರಣ್ಯದಲ್ಲಿ. ವಾಸ್ತವದಲ್ಲಿ, ಹೀಗೆ ಮಾಡಿದ್ದು ಕಾನೂನುಬದ್ಧ ಆಗಿರಲಿಲ್ಲ. ಹಾಗಾಗಿ, ಅವರು ಅಂದಾಜು 20 ವರ್ಷಗಳ ಕಾಲ ಗೋಪ್ಯವಾಗಿ ಈ ಕೆಲಸ ಮಾಡಿದರು! ಅವರು ಮಾಡಿದ ಕಲಾಕೃತಿಗಳೆಲ್ಲ ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದು 1972ರಲ್ಲಿ.

ಅವರ ಕೆಲಸಗಳಿಗೆ ಸರ್ಕಾರದಿಂದ ಮಾನ್ಯತೆ ಸಿಕ್ಕಿತೇ?

ಹೌದು. ಅವರಿಗೆ 1984ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಂದ್ ಅವರು 2015ರಲ್ಲಿ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT