ಬಡಮಕ್ಕಳಿಗೆ ನೃತ್ಯದ ಭಾಗ್ಯ

ಬುಧವಾರ, ಮೇ 22, 2019
29 °C

ಬಡಮಕ್ಕಳಿಗೆ ನೃತ್ಯದ ಭಾಗ್ಯ

Published:
Updated:
Prajavani

ನಗರದ ನೃತ್ಯ ಕಲಾವಿದೆ ರೇಖಾ ರಾಜು ಅವರು ಹತ್ತಾರು ವರ್ಷಗಳಿಂದ ‘ನೃತ್ಯಧಾಮ ಟೆಂಪಲ್‌ ಫೈನ್‌ ಆರ್ಟ್ಸ್‌’ ಸಂಸ್ಥೆ ಮೂಲಕ ನೂರಾರು ಮಕ್ಕಳಿಗೆ ಉಚಿತವಾಗಿ ನೃತ್ಯ ಹೇಳಿಕೊಡುತ್ತಿದ್ದಾರೆ. 

‘ನೃತ್ಯ, ಬಡಮಕ್ಕಳ ಪಾಲಿಗೂ ಸಿಗಬೇಕು. ಆಸಕ್ತಿ ಇರುವ ಎಲ್ಲರಿಗೂ ಅವಕಾಶ ಇರಬೇಕು’ ಎಂಬುದು ರೇಖಾ ಅವರ ಅಭಿಲಾಷೆ. 

‘ನನ್ನ ನೃತ್ಯ ಶಾಲೆಯಲ್ಲಿ ನೂರಾರು ಮಕ್ಕಳು ಉಚಿತವಾಗಿ ಕಲಿಯುತ್ತಾರೆ. ಸಂಸ್ಥೆಯಿಂದ ಸಿಗುವ ಹಣದಲ್ಲಿ ಸ್ವಲ್ಪ ಬಡಮಕ್ಕಳ ಶಿಕ್ಷಣಕ್ಕಾಗಿ ಕೂಡ ಖರ್ಚು ಮಾಡುತ್ತಿದ್ದೇನೆ. ವಿಶ್ವ ನೃತ್ಯ ದಿನದ ಪ್ರಯುಕ್ತ ಬೆಂಗಳೂರು ಹಾಗೂ ಒಡಿಶಾದಲ್ಲಿ ನೃತ್ಯ ಕಾರ್ಯಕ್ರಮ ನೀಡಲಿದ್ದೇನೆ. ಇದರಲ್ಲಿ ಸಿಗುವ ಹಣದಲ್ಲಿ ಶೇ 60ರಷ್ಟನ್ನು ಒರಿಸ್ಸಾದ ಬುಡಕಟ್ಟು ಮಕ್ಕಳ ಮೂಲಸೌಕರ್ಯಕ್ಕಾಗಿ ನೀಡಲಿದ್ದೇನೆ’ ಎಂದರು. 

‘ನಾನು ಮೂರೂವರೆ ವರ್ಷದವಳಿದ್ದಾಗಲೇ ನೃತ್ಯ ಕಲಿತೆ. ಮೊದಲು ಭರತನಾಟ್ಯವನ್ನು ಅಭ್ಯಾಸ ಮಾಡಿದೆ. ಸಿ.ಎ ಓದುತ್ತಿದ್ದೆ. ಆದರೆ ನೃತ್ಯದ ಕಡೆಗಿದ್ದ ಆಕರ್ಷಣೆ ಮಾತ್ರ ಕಡಿಮೆಯಾಗಲಿಲ್ಲ. ಭರತನಾಟ್ಯಕ್ಕೆ ಇರುವ ಜನಪ್ರಿಯತೆ ಮೋಹಿನಿಆಟ್ಟಂಗೆ ಇರಲಿಲ್ಲ. ಆದರೂ ನಾನು ಅದೇ ನೃತ್ಯದ ಕಡೆಗೆ ಹೊರಳಿದೆ. ಅದನ್ನೇ ನನ್ನ ವೃತ್ತಿಯಾಗಿ ಆಯ್ಕೆಮಾಡಿಕೊಂಡೆ’ ಎಂದು ರೇಖಾ ಅವರು ತಮ್ಮ ನೃತ್ಯ ಪಯಣವನ್ನು ಬಿಚ್ಚಿಟ್ಟರು. 

‘28 ವರ್ಷಗಳಿಂದ ನಾನು ನೃತ್ಯ ಮಾಡುತ್ತಿದ್ದೇನೆ. ಭರತನಾಟ್ಯ ಎಂದರೆ ಪೋಷಕರು ಎಷ್ಟಾದರೂ ದುಡ್ಡು ಖರ್ಚು ಮಾಡಿ ಕಳಿಸುತ್ತಾರೆ. ಆದರೆ ಮೋಹಿನಿಆಟ್ಟಂ ಬಗ್ಗೆ ಕೆಲವರಲ್ಲಿ ಅಸಡ್ಡೆ ಇದೆ. ಕೆಲವರಿಗೆ ಆಸಕ್ತಿ ಇದ್ದರೂ ಹಣ ಇರುವುದಿಲ್ಲ. ಇಂತಹವರಿಗೆ ನಾನು ಸಹಾಯ ಮಾಡುವ ಉದ್ದೇಶ ಹೊಂದಿದ್ದೇನೆ. ಕೆಲವರಿಗೆ ನೃತ್ಯದ ಬಗ್ಗೆ ಇರುವ ಅಜ್ಞಾನವನ್ನು ಮನದಟ್ಟು ಮಾಡಿದ್ದೇನೆ’ ಎಂಬುದು ಅವರ ಮಾತು. 

‘ಮೋಹಿನಿಆಟ್ಟಂ ನೃತ್ಯವನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಆದ್ದರಿಂದಲೇ ಕೆಲವರು ಇದರ ಬಗ್ಗೆ ನಿರಾಸಕ್ತಿ ತೋರುತ್ತಾರೆ. ನಾನು ಈ ನೃತ್ಯದ ಕುರಿತು ಪಿಎಚ್‌ಡಿ ಕೂಡ ಮಾಡಿದ್ದೇನೆ’ ಎಂದರು. 

ಏಪ್ರಿಲ್‌ 28ರಂದು ನಗರದ ಎಚ್‌ಬಿಆರ್ ಲೇಔಟ್‌ನ ಇಸ್ಕಾನ್‌ನಲ್ಲಿ 20 ಕಲಾವಿದರಿಂದ ಭರತನಾಟ್ಯ ಹಾಗೂ ಇಂದಿರಾನಗರ ಸಂಗೀತ ಸಭಾದಲ್ಲಿ ಅದೇ ದಿನ ರೇಖಾ ಅವರ ನೇತೃತ್ವದಲ್ಲಿ ಮೋಹಿನಿಆಟ್ಟಂ ಪ್ರದರ್ಶನ ನಡೆಯಲಿದೆ. ಎರಡೂ ಕಾರ್ಯಕ್ರಮಗಳು ಸಂಜೆ 6ಕ್ಕೆ ಆರಂಭವಾಗಲಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !