ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ 129 ಮಂದಿಗೆ ಕೊರೊನಾ ವೈರಸ್‌ ಸೋಂಕು: ವೃದ್ಧ ಸಾವು

Last Updated 3 ಅಕ್ಟೋಬರ್ 2020, 15:33 IST
ಅಕ್ಷರ ಗಾತ್ರ

ದಾವಣಗೆರೆ: 129 ಮಂದಿಗೆ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ. ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮದ 65 ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟವರು.

ದಾವಣಗೆರೆ ತಾಲ್ಲೂಕಿನಲ್ಲಿ 58, ಹರಿಹರ ತಾಲ್ಲೂಕಿನಲ್ಲಿ 26, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 21, ಚನ್ನಗಿರಿ ತಾಲ್ಲೂಕಿನಲ್ಲಿ 18 ಹಾಗೂ ಜಗಳೂರು ತಾಲ್ಲೂಕಿನಲ್ಲಿ 5 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಯ ಒಬ್ಬರಿಗೂ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಈವರೆಗೆ 16,595 ಮಂದಿಗೆ ಕೊರೊನಾ ಬಂಇದೆ. 14,858 ಮಂದಿ ಗುಣಮುಖರಾಗಿದ್ದಾರೆ. 143 ಮಂದಿ ಮೃತಪಟ್ಟಿದ್ದಾರೆ. 1494 ಸಕ್ರಿಯ ಪ್ರಕರಣಗಳಿವೆ.

10 ಮಂದಿಗೆ ಕೊರೊನಾ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ 10 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ.

ನಿಟ್ಟೂರು ಗ್ರಾ,ಮದ ಮೂವರು ಪುರುಷರು, ನಾಲ್ವರು ಮಹಿಳೆಯರು, ಉಕ್ಕಡಗಾತ್ರಿಯ ತಲಾ ಒಬ್ಬ ಪುರುಷ, ಮಹಿಳೆಗೆ, ಆದಾಪುರದ ಒಬ್ಬ ಪುರುಷನಿಗೆ ಕೊರೊನಾ ದೃಢಪಟ್ಟಿದೆ.

ಜಾಗೃತಿ: ಪಟ್ಟಣದಲ್ಲಿ ಪುರಸಭೆ ಸಿಬ್ಬಂದಿ ಶನಿವಾರ ಮಾಸ್ಕ್ ಧರಿಸದೆ ಸಂಚರಿಸುವ ಸಾರ್ವಜನಿಕರಿಗೆ ` 500 ವಿಧಿಸುವ ಆದೇಶವನ್ನು ಪ್ರಚುರ ಪಡಿಸಲು ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಸರ್ಕಾರದ ಹೊಸ ಆದೇಶದಂತೆ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವುದು ಮುಖ್ಯ ಉದ್ದೇಶ ಎಂದು ಮುಖ್ಯಾಧಿಕಾರಿ ಇನ್ಸಿಡೆಂಟ್ ಕಮಾಂಡರ್ ಡಿ.ಎನ್. ಧರಣೀಂಧ್ರ ಕುಮಾರ್ ಮಾಹಿತಿ ನೀಡಿದರು.

ವಿಶೇಷ ತಂಡ ರಚಿಸಲಾಗಿದೆ. ನಿತ್ಯ ಬಸ್ಸು, ಕಾರು, ದ್ವಿಚಕ್ರ ವಾಹನಗಳು, ಅಂಗಡಿ, ಮಾರುಕಟ್ಟೆ, ಜನ ಸಂದಣಿ ಇರುವ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಈ ತಂಡ ದಂಡ ವಿಧಿಸಲಿದೆ. ಕಾನೂನು ಉಲ್ಲಂಘಿಸಿದರೆ ಪ್ರಕರಣ ದಾಖಲು ಮಾಡಿಸಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT