ಮೊಬೈಲ್‌ ಅತಿ ಬಳಕೆಯಿಂದ ಆರೋಗ್ಯಕ್ಕೆ ಹಾನಿ

7

ಮೊಬೈಲ್‌ ಅತಿ ಬಳಕೆಯಿಂದ ಆರೋಗ್ಯಕ್ಕೆ ಹಾನಿ

Published:
Updated:
ಸಂಕಲಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಯೋಗಿಶ್ ಚಕ್ಕೆರೆ ಮಾತನಾಡಿದರು

ಚನ್ನಪಟ್ಟಣ: ಮೊಬೈಲ್‌ನಿಂದ ಹೊರಸೂಸುವ ವಿಕರಣಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಮಹಿಳೆಯರು, ಮಕ್ಕಳು ಮೊಬೈಲ್‌ ಅತಿಯಾದ ಬಳಕೆಯಿಂದ ದೂರವಿರುವುದು ಒಳಿತು ಎಂದು ಶಿಕ್ಷಕ ಯೋಗಿಶ್‌ ಚಕ್ಕೆರೆ ಸಲಹೆ ನೀಡಿದರು.

ತಾಲ್ಲೂಕಿನ ಸಂಕಲಗೆರೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ `ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು' ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು. ಮೊಬೈಲ್ ನಿಂದ ಹೊರಸೂಸುವ ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಗಳು ಮಾನವನ ಮೆದುಳಿನ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದರು.

ಮಕ್ಕಳು ಸದಾ ಮೊಬೈಲ್ ಪೋನ್ ಗೆ ಅಂಟಿಕೊಂಡಿರುವುದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು. ಮೊಬೈಲ್ ಜಾಸ್ತಿ ಬಳಕೆ ಮಾಡುವುದರಿಂದ ಜ್ಞಾಪಕ ಶಕ್ತಿ ನಷ್ಟ, ಏಕಾಗ್ರತೆ ಕುಸಿತ, ಅಜೀರ್ಣ, ನಿದ್ರಾಹೀನತೆ, ತಲೆನೋವು, ತಲೆಸುತ್ತು, ಹೃದಯದ ಬಡಿತದಲ್ಲಿ ಏರುಪೇರು ಸೇರಿದಂತೆ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಉಂಟಾಗುತ್ತದೆ ಎಂದರು.

ಸ್ಮಾರ್ಟ್‌ಫೋನ್‌ಗಳಲ್ಲಿ ಎಲ್ಲ ಬಗೆಯ ಅಪ್ಲಿಕೇಶನ್, ವಿಡಿಯೊಗಳು ಲಭ್ಯವಿರುವುದರಿಂದ ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಇಂದು ಅಡ್ಡದಾರಿ ಹಿಡಿಯುವಂತಾಗಿದೆ ಎಂದರು. ಪೋಷಕರು ಮೊಬೈಲ್ ಫೋನ್ ಬಳಕೆಗೆ ಕಡಿವಾಣ ಹಾಕಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರಬರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಯೋಜನೆಯ ತಾಲ್ಲೂಕು ಸಮನ್ವಯಾಧಿಕಾರಿ ಶಿವರಂಜನ್ ಮಾತನಾಡಿ, ಮಾನವ ಕುಲಕ್ಕೆ ಇಂದು ಮೊಬೈಲ್ ಫೋನ್ ಮಾರಕವಾಗಿ ಪರಿಣಮಿಸಿದೆ. ಮೊಬೈಲ್ ಬಳಸುವುದು ಇಂದು ರೋಗವಾಗಿದೆ ಎಂದರು. ಮಾನವ ಇಂದು ಒಂದು ಕ್ಷಣವೂ ಮೊಬೈಲ್ ಫೋನ್ ಬಿಟ್ಟು ಇರಲಾರದ ಸ್ಥಿತಿಯಲ್ಲಿ ಇದ್ದಾನೆ. ದುಷ್ಚಟ ಇರುವ ವ್ಯಕ್ತಿಯನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಬದಲಾಯಿಸಬಹುದು ಎಂದರು. ಮೊಬೈಲ್ ಫೋನ್ ಎಂಬ ಮಾಯಾಜಾಲದಲ್ಲಿ ಬಿದ್ದವರನ್ನು ಗುಣಪಡಿಸುವುದು ಕಷ್ಟ ಸಾಧ್ಯ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಯೋಜನೆಯ ಸಂಯೋಜಕಿ ಸವಿತಾ, ಸೇವಾ ಪ್ರತಿನಿಧಿಗಳಾದ ಚಂದ್ರಮ್ಮ, ವರಲಲಕ್ಷ್ಮೀ, ಸಂಘದ ಅಧ್ಯಕ್ಷೆ ದೇವಿಕಾ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !