ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಸಿನೊ ಮಾದರಿ ಜೂಜಾಟ: 33 ಜನರ ಬಂಧನ

Last Updated 16 ಮಾರ್ಚ್ 2020, 13:59 IST
ಅಕ್ಷರ ಗಾತ್ರ

ಬಾಗಲಕೋಟೆ: ಕ್ಯಾಸಿನೊ ಮಾದರಿಯಲ್ಲಿ ಜೂಜಾಟ ನಡೆಸುತ್ತಿದ್ದ 3 ಕೇಂದ್ರಗಳ ಮೇಲೆ ಜಮಖಂಡಿ ಪೊಲೀಸರು ಸೋಮವಾರ ದಾಳಿ ನಡೆಸಿ 33 ಜನರನ್ನು ಬಂಧಿಸಿದ್ದಾರೆ.

ಜಮಖಂಡಿಯ ಕೆಲವು ಕಂಪ್ಯೂಟರ್ ಸೆಂಟರ್‌ಗಳಲ್ಲಿ ಈ ರೀತಿ ಜೂಜಾಟ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದರು. ಕಂಪ್ಯೂಟರ್ ಪರದೆಯ ಮೇಲೆ ತಿರುಗುವ ಚಕ್ರಗಳಲ್ಲಿನ ಸಂಖ್ಯೆಯ ಮೇಲೆ ಬಾಜಿ ಕಟ್ಟಿಸಿಕೊಳ್ಳಲಾಗುತ್ತಿತ್ತು. ಕಟ್ಟಿದ ಸಂಖ್ಯೆಯ ಮೇಲೆ ಚಕ್ರ ನಿಂತಲ್ಲಿ ಬಾಜಿ ಕಟ್ಟಿದ ಮೊತ್ತದ ದುಪ್ಪಟ್ಟು ಹಣ ನೀಡಲಾಗುತ್ತಿತ್ತು.

ಈ ಜೂಜಾಟದ ಚಟಕ್ಕೆ ಕಾಲೇಜು ಕಲಿಯುವವರು ಸೇರಿದಂತೆ ಯುವ ಜನತೆ ಹೆಚ್ಚು ಬಲಿಯಾಗಿದ್ದರು. ಜೂಜಾಟ ಆಡಿಸುತ್ತಿದ್ದವರನ್ನು ಬಂಧಿಸಿ ಅವರಿಂದ ಒಟ್ಟು ₹ 39,240 ನಗದು, 47 ಕಂಪ್ಯೂಟರ್, 34 ಮೊಬೈಲ್ ಫೋನ್ ಹಾಗೂ 19 ಸಿಪಿಯುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಜಮಖಂಡಿ ಸರ್ಕಲ್ ಇನ್‌ಸ್ಪೆಕ್ಟರ್ ವಿಜಯ ಮುರಗುಂಡಿ ನೇತೃತ್ವದಲ್ಲಿ ಸಬ್ಇನ್‌ಸ್ಪೆಕ್ಟರ್ ಎಚ್.ಡಿ.ಜಮಖಂಡಿ ಹಾಗೂ ಕೆ.ಟಿ.ಶೋಭಾ ಒಳಗೊಂಡ ತಂಡ ದಾಳಿ ನಡೆಸಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT