ಗುಳೇದಗುಡ್ಡ: ‘ಸಂಘದ ಸರ್ವ ಸದಸ್ಯರ ಹಾಗೂ ಆಡಳಿತ ಮಂಡಳಿಯ ಪರಸ್ಪರ ಸಹಕಾರದಿಂದ 2023-24ನೇ ಸಾಲಿನಲ್ಲಿ ಸಂಘವು ₹ 56 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ ಶೇಖಾ ಹೇಳಿದರು.
ಪಟ್ಟಣದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಸಾಲೇಶ್ವರ ಪತ್ತಿನ ಸಹಕಾರ ಸಂಘದ 20ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮಾರ್ಚ್ 2023ಕ್ಕೆ ಇದ್ದ ದುಡಿಯುವ ಬಂಡವಾಳ ₹48.45 ಕೋಟಿ, ಮಾರ್ಚ್ 2024ಕ್ಕೆ ₹48.67 ಕೋಟಿಯಷ್ಟಾಗಿದೆ. ಶೇರುದಾರರಿಗೆ ಶೇ 12ರಷ್ಟು ಡಿವಿಡೆಂಡ್ ಕೊಡುವುದಾಗಿ ಘೋಷಣೆ ಮಾಡಿದರು’ ಎಂದರು.
ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹಾಗೂ ಗುರುಬಸವದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಧಾನ ವ್ಯವಸ್ಥಾಪಕ ಆರ್.ಎನ್.ಜಿಡಗಿ, ಸಂಘದ ಉಪಾಧ್ಯಕ್ಷ ಸಂಗನಬಸಪ್ಪ ಚಿಂದಿ, ನಿರ್ದೇಶಕರಾದ ದೊಡ್ಡಬಸಪ್ಪ ಉಂಕಿ, ಗಂಗಾಧರ ಮದ್ದಾನಿ, ಬಸವರಾಜ ತೊಗರಿ, ಭ್ಯಾಗ್ಯಾ ಉದ್ನೂರ ಮುಂತಾದವರಿದ್ದರು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.