ಸೋಮವಾರ, ಜುಲೈ 4, 2022
21 °C
ಶಾಸ್ತ್ರಿ ಪತ್ತಿನ ಸೌಹಾರ್ದ ಸಹಕಾರಿ

ಗುಳೇದಗುಡ್ಡ: ₹ 8 ಲಕ್ಷ ನಿವ್ವಳ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಳೇದಗುಡ್ಡ: ಕೊರೊನಾದ ಆತಂಕದ ಸ್ಥಿತಿಯಲ್ಲಿಯೂ ಬ್ಯಾಂಕಿನ ಸಿಬ್ಬಂದಿಯ ಕಾರ್ಯ ನಿರ್ವಹಣೆ ಮತ್ತು ಸಹಕಾರದೊಂದಿಗೆ ಲಾಲ್‌ಬಹದ್ದೂರ ಶಾಸ್ತ್ರಿ ಪತ್ತಿನ ಸೌಹಾರ್ದ ಸಹಕಾರಿಗೆ ₹ 8 ಲಕ್ಷ ನಿವ್ವಳ ಲಾಭವಾಗಿದೆ ಎಂದು ಅಧ್ಯಕ್ಷ ಬಾಲಮುಕುಂದ ಎಂ.ತಾಪಾಡಿಯಾ ಹೇಳಿದರು.

ಶನಿವಾರ ಜರುಗಿದ 6ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವರದಿ ವಾಚನ ಮಾಡಿ ಮಾತನಾಡಿದರು. ಕಳೆದ ವರ್ಷ 1,410 ಜನ ಸದಸ್ಯರಿದ್ದು ಪ್ರಸ್ತುತ 164 ಸದಸ್ಯರು ಹೆಚ್ಚಾಗಿದ್ದಾರೆ. ಷೇರು ಬಂಡವಾಳ ₹ 25,67,200 ಇದೆ ಎಂದು ಹೇಳಿದರು.

ಸಹಕಾರಿಯ ಉಪಾಧ್ಯಕ್ಷ ಪ್ರಶಾಂತ ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೌಹಾರ್ದ ಸಹಕಾರಿಯನ್ನು ಆರಂಭಿಸುವಾಗ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆರಂಭದಲ್ಲಿ ನಷ್ಟವನ್ನು ಅನುಭವಿಸಿದೆವು, ಅದರ ನಡುವೆಯೂ ಕಟಾಪೂರ ಗ್ರಾಮದಲ್ಲಿ ಶಾಖೆಯನ್ನು ಸರ್ವ ಸದಸ್ಯರ ಸಹಕಾರದಿಂದ ತೆರೆಯಲು ಸಾಧ್ಯವಾಯಿತು ಎಂದು ಹೇಳಿದರು.

ಇತ್ತೀಚಿಗೆ ನಿಧನರಾದ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಈಶ್ವರ ಮಂಟೂರ, ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಉತ್ತಮ ಗ್ರಾಹಕರನ್ನಾಗಿ ಆಯ್ಕೆ ಮಾಡಿದ ಭೀಮಪ್ಪ ಕೊಟ್ನಳ್ಳಿ, ಶಂಕ್ರಪ್ಪ ಅಸೂಟಿ, ಬಸವರಾಜ ಚಲವಾದಿ, ಬಸಪ್ಪ ಬಿಸರಗೊಂಡ, ವೀರನಗೌಡ ಹಿರೇಗೌಡರ್ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರದ ಡಾ.ಕೆ.ಟಿ. ಗಾಜಿ, ರಾಚಪ್ಪ ಸಾರಂಗಿ, ಶೇಖರ್ ರಾಠೋಡ, ರಮಜಾನಶಾ ಮಕಾನದಾರ, ಮುತ್ತಪ್ಪ ಕಾಳಣ್ಣವರ, ಭೀಮಪ್ಪ ನಡಸೇಸಿ, ಶ್ರೀಮತಿ ಸುನಂದಾ ಸತ್ತಿಗೇರಿ, ಸ್ರೀಮತಿ ರೂಪಾ ಪವಾರ ಹಾಗೂ ಕಾಟಾಪೂರ ಸಾಖಾ ಸಲಹಾ ಸಮಿತಿ ಅಧ್ಯಕ್ಷ ಸುರೇಶ.ಕೆ ಶಿವಪೂರ, ಕಾರ್ಯನಿರ್ವಹಣಾ ಅಧಿಕಾರಿ ಭಾವನಾ ಅಲದಿ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು