ಎಚ್.ಎಸ್.ಘಂಟಿ

ಗುಳೇದಗುಡ್ಡ: ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಹಿಂದುಗಡೆ ಇರುವ ಸರ್ಕಾರಿ ಶಾಲಾ ಆವರಣ ಅವ್ಯವಸ್ಥೆ, ಅನೈತಿಕ ತಾಣವಾಗಿದೆ.

ಅಂದಾಜು 8 ಎಕರೆಯಷ್ಟು ವಿಸಾಲವಾದ ಬಯಲು ಪ್ರದೇಶವನ್ನು ಹೊಂದಿದ್ದು ಕ್ರೀಡಾಪಟುಗಳಿಗೆ ಕ್ರೀಡೆಗಳನ್ನು ಆಡಲು ಹೇಳಿ ಮಾಡಿಸಿದಂತಿದೆ. ಈ ಆವರಣದಲ್ಲಿ 1 ರಿಂದ 10 ನೇ ತರಗತಿಯವರೆಗೆ ಬಾಲಕರ ಸರ್ಕಾರಿ ಪ್ರೌಢಶಾಲೆ ಇದೆ. ಸರ್ಕಾರಿ ಕಲಾ, ವಾಣಿಜ್ಯ, ವಿಜ್ಞಾನ ಪದವಿ ಪೂರ್ವ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇವೆ.

ಹಗಲಿನಲ್ಲಿ ಸದಾ ಶೈಕ್ಷಣಿಕ ಚಟುವಟಿಗಳು ಜರುಗುತ್ತವೆ. ಆದರೆ ಸಂಜೆಯಾಗುತ್ತಲೇ ಈ ಶಾಲಾ ಆವರಣದಲ್ಲಿ ಮದ್ಯಪಾನ ಮಾಡುವವರ ಹಲವು ತಂಡಗಳು ಕಾಣುತ್ತವೆ. ಸಿಗರೇಟು ಸೇದುವುದು, ಸೆರೆ ಕುಡಿಯುದು, ಹಲವು ವ್ಯವಹಾರ ಮಾಡುವವರು ಮಾತುಕತೆಗೆ ಬಂದು ಜಗಳಾಡುವುದು ಸಾಮಾನ್ಯವಾಗಿದೆ.

ಇಲ್ಲಿ ಹೇಳುವವರು ಕೇಳುವವರು ಇಲ್ಲವಾಗಿದ್ದಾರೆ. ಇದೇ ಆವರಣದಲ್ಲಿ ಪಶ್ಚಿಮಕ್ಕೆ ವಿವಿಧ ಆಟಗಳನ್ನು ರಾತ್ರಿ ಎಂಟು ಗಂಟೆಯವರೆಗೆ ಪುರಸಭೆ ಸದಸ್ಯರ ಒಂದು ತಂಡ ಆಟವನ್ನು ಆಡುತ್ತಿದ್ದು ಇದನ್ನು ಗಮನಿಸದೆ ಇರುವುದು ಖೇದಕರವಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಅಲ್ಲಿ ನಡೆಯುವ ಚಟುವಟಿಕೆಗಳು ನನ್ನ ಗಮನಕ್ಕೂ ಬಂದಿದ್ದು ತಹಶೀಲ್ದಾರರಿಗೂ ಮತ್ತು ಪೊಲೀಸರಿಗೂ ದೂರು ನೀಡಲು ಶಾಲಾ ಕಾಲೇಜಿನ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ.
ಆರೀಫ್ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಾದಾಮಿ

ಆವರಣದಲ್ಲಿಯೇ ಆತ್ಮಹತೆ ಪ್ರಕರಣ: ಪಟ್ಟಣದ ಮಾಧುಸಿಂಗ್ ಸೂರ್ಯವಂಶಿ ಎಂಬುವನು 15 ದಿನಗಳ ಹಿಂದೆ ಇಲ್ಲಿನ ಮುಖ್ಯ ಗೇಟಿನ ಮರಕ್ಕೆ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ನಂತರ ಮೇ 28 ಭಾನುವಾರ ಸಂಜೆ ತಾಲ್ಲೂಕಿನ ಕೆಲವಡಿ ಗ್ರಾಮದ ಬಸಪ್ಪ ಹೆಗ್ಗೂರ ಎಂಬುವವರು ಆವರಣದಲ್ಲಿ ಸರಾಯಿ ಕುಡಿದು ರಕ್ತಕಾರಿ ಮರಣ ಹೊಂದಿದ್ದಾರೆ.

ಶಾಲೆಯ ಮುಂದೆ ಕಂಫೌಂಡ್ ಇದೆ. ಒಂದು ದೊಡ್ಡ ಗೇಟ್ ಇದೆ. ಅಲ್ಲಿ ಹಾಕಿದ ಲಾಕ್‍ನ್ನು ಮುರಿದು ಒಳ ಹೋಗುತ್ತಾರೆ. ಜನರಿಗೆ ತಿಳಿ ಹೇಳಿದರೂ ಪ್ರಯೋಜನವಾಗಿಲ್ಲ.
ಎಂ.ಪಿ.ಮಾಗಿ, ಉಪ ಪ್ರಾಚಾರ್ಯ, ಪ್ರೌಢಶಾಲಾ ವಿಭಾಗ

ವಾಣಿಜ್ಯ ಮಳಿಗೆ ತೆರವಿಗೆ ಆಗ್ರಹ: ಕಂಪೌಂಡಿಗೆ ಹೊಂದಿಕೊಂಡಂತೆ ಇರುವ ರಾಜ್ಯ ಹೆದ್ದಾರಿ ಪಕ್ಕ ಬೇಕಾಬಿಟ್ಟಿ ಹಾಕಿಕೊಂಡಿರುವ ವಾಣಿಜ್ಯ ಮಳಿಗೆಗಳನ್ನು ತೆರವು ಗೊಳಿಸಬೇಕು ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂಬಂಧಿಸಿದವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಶಿಕ್ಷಕರ ಅಳಲಾಗಿದೆ.

‘ಎಗ್ ರೈಸ್, ಚಿಕನ್, ಸರಾಯಿ ಅಂಗಡಿಗಳು ಹತ್ತಿರ ಇರುವುದರಿಂದ ಜನರು ಇಲ್ಲಿಗೆ ಕುಡಿಯಲು ಬರುತ್ತಾರೆ. ಎಷ್ಟೆ ಹೇಳಿದರು ಪ್ರಯೋಜನವಾಗಿಲ್ಲ ಸುತ್ತಲೂ ಆವರಣ ಗೋಡೆ ಇರದೇ ಇದ್ದುದರಿಂದ ಬೇರೆ ಬೇರೆ ದಾರಿಯಿಂದ ಕುಡಿಯಲು ಆಗಮಿಸುತ್ತಾರೆ‘ ಎಂದು ಪಿಯು ಕಾಲೇಜ್ ಪ್ರಾಚಾರ್ಯ ವಿಠ್ಠಲ ಕಳಸಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.