ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

Published 15 ಫೆಬ್ರುವರಿ 2024, 14:03 IST
Last Updated 15 ಫೆಬ್ರುವರಿ 2024, 14:03 IST
ಅಕ್ಷರ ಗಾತ್ರ

ಮಹಾಲಿಂಗಪುರ: ‘ರಕ್ತದಾನದಲ್ಲಿ ಯುವ ಜನಾಂಗ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಋಣ ತೀರಿಸಲಾಗದ ದಾನ ಎಂದರೆ ಅದು ರಕ್ತದಾನ ಮಾತ್ರ’ ಎಂದು ಕೆಎಲ್‌ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ. ಕುಂದಗೋಳ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಿ ಪದವಿ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್, ವೈಆರ್‌ಸಿ ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಗುರುವಾರ ಹಮ್ಮಿಕೊಂಡ ಆರೋಗ್ಯ ಜಾಗೃತಿ ಮತ್ತು ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ.ವಿದ್ಯಾಶ್ರೀ ಕೊಲೂರ ಮಾತನಾಡಿ, ‘ರಕ್ತದಾನದಿಂದ ಹಲವು ಪ್ರಯೋಜನಗಳಿವೆ. ಒಬ್ಬ ವ್ಯಕ್ತಿಯ ರಕ್ತದಿಂದ ಎರಡ್ಮೂರು ಜನರ ಜೀವ ಉಳಿಯುತ್ತದೆ. ವಿದ್ಯಾರ್ಥಿಗಳು ರಕ್ತದಾನ ಮಾಡುವುದರಿಂದ ಮಾನಸಿಕವಾಗಿ ಚೈತನ್ಯ ಭರಿತರಾಗುತ್ತಾರೆ’ ಎಂದರು.

ರಕ್ತದಾನದ ಮಹತ್ವದ ಕುರಿತು ಪ್ರಾಚಾರ್ಯ ಕೆ.ಎಂ. ಅವರಾದಿ ವಿವರಿಸಿದರು. ಡಾ.ಕಾರ್ತಿಕ ಕುಂದಗೋಳ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ, ಐಕ್ಯೂಎಸಿ ಸಂಯೋಜಕಿ ಎಸ್.ಡಿ. ಸೊರಗಾಂವಿ, ಎಲ್.ಬಿ. ತುಪ್ಪದ, ಟಿ.ಡಿ. ಡಂಗಿ, ಪಿ.ಎಂ. ಗೌಳಿ, ಆರ್.ಎಸ್. ಪೂಜಾರಿ, ಆರ್.ವಿ. ಚೌಗಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT