ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಕಳ್ಳತನದ ಆರೋಪ: ಬಾಲಕಿ‌ ಆತ್ಮಹತ್ಯೆ

Published 17 ಮಾರ್ಚ್ 2024, 13:49 IST
Last Updated 17 ಮಾರ್ಚ್ 2024, 13:49 IST
ಅಕ್ಷರ ಗಾತ್ರ

ಬಾಗಲಕೋಟೆ: ಶಿಕ್ಷಕಿಯ ಪರ್ಸಿನಲ್ಲಿರುವ ಹಣ ಕದ್ದಿರುವ ಆರೋಪದ ಹಿನ್ನೆಲೆಯಲ್ಲಿ ಮನನೊಂದ ಬಾಲಕಿ ತಾಲ್ಲೂಕಿನ ಹಳೆ ಕದಾಂಪುರ ಗ್ರಾಮದಲ್ಲಿ ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕದಾಂಪುರ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ದಿವ್ಯಾ ಬಾರಕೇರ (13) ಮೃತ ಬಾಲಕಿ.

‘ಶಾಲೆಯ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ತಮ್ಮ ಪರ್ಸಿನಲ್ಲಿದ್ದ ಎರಡು ಸಾವಿರ ರೂಪಾಯಿಗಳನ್ನು ದಿವ್ಯಾ ಕದ್ದಿದ್ದಾಳೆ ಎಂಬ ಸಂಶಯದಿಂದ ಮುಖ್ಯಶಿಕ್ಷಕ ಮುಜಾವರ ಸೇರಿ ಎಲ್ಲ ಮಕ್ಕಳ ಎದುರೇ ದಿವ್ಯಾಳಿಗೆ ಹೆದರಿಸಿದ್ದಾರೆ. ಕದ್ದಿರುವುದನ್ನು ಒಪ್ಪದಿದ್ದರೆ ಟಿಸಿ (ವರ್ಗಾವಣೆ ಪ್ರಮಾಣಪತ್ರ) ಕಿತ್ತು ಕಳಿಸುವುದಾಗಿ ಅವಮಾನಿಸಿದ್ದಾರೆ. ಇದನ್ನು ಮನಸ್ಸಿಗೆ ಹಚ್ಚಿಕೊಂಡು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಶಿಕ್ಷಕಿ ಹಾಗೂ ಮುಖ್ಯಶಿಕ್ಷಕ ಕಾರಣ’ ಎಂದು ಬಾಲಕಿಯ ತಂದೆ ಶಿವಪ್ಪ ಬಾರಕೇರ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT