ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಲಾವಿದರಿಗೆ ಪ್ರೋತ್ಸಾಹ ನೀಡಿ’

Published 30 ಮಾರ್ಚ್ 2024, 16:10 IST
Last Updated 30 ಮಾರ್ಚ್ 2024, 16:10 IST
ಅಕ್ಷರ ಗಾತ್ರ

ಅಮೀನಗಡ: ‘ಕಲಾವಿದರು ಹಾಗೂ ಕಲೆಯನ್ನು ಉಳಿಸಲು ಅಗತ್ಯ ಪ್ರೋತ್ಸಾಹ ನೀಡಬೇಕು’ ಎಂದು ಸಾಹಿತಿ ಯೋಗೀಶ ಲಮಾಣಿ ಹೇಳಿದರು.

ಸಮೀಪದ ಸೂಳೇಭಾವಿಯಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕಲಾವಿದರು ಪರದೆ ಮೇಲೆ ಅಭಿನಯ ತೋರಿದರೆ, ಪರದೆ ಹಿಂದಿನ ಅವರ ಜೀವನ ಕಷ್ಟಕರವಾಗಿರುತ್ತದೆ. ರಂಗಭೂಮಿ ಮೇಲೆ ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬಿ, ಮನರಂಜನೆ ನೀಡುತ್ತಾರೆ. ಹೀಗಾಗಿ, ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಗಳು. ಸರ್ಕಾರ, ಸಂಘ–ಸಂಸ್ಥೆಗಳು ಅವರಿಗೆ ಪ್ರೋತ್ಸಾಹ ನೀಡಬೇಕಿದೆ’ ಎಂದರು.

ಕೃಷ್ಣಾ ರಾಮದುರ್ಗ ಅಧ್ಯಕ್ಷತೆ ವಹಿಸಿದ್ದರು. ರಂಗಕಲಾವಿದ ಮಹಾಂತಪ್ಪ ಅದ್ರಶನವರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಲಕ್ಷ್ಮಣ ಕತ್ತಿ, ಹನಮಂತಪ್ಪ, ನಾಗಪ್ಪ ಹಡಪದ, ವೆಂಕಣ್ಣ ಮಾಶಾಳ, ರಾಜೇಸಾಬ ತಟಗಾರ,ವಿಠ್ಠಲ ರಂಗಭೂಮಿ, ಮಹಾಂತೇಶ ಕಟಾಪೂರ, ಈರಣ್ಣ ಧೂಪದ, ನಾರಾಯಣ ಹುಣಶಾಳ, ಟಿ.ಬಿ.ಭಜಂತ್ರಿ, ದಿವಾಕರ ಸಿನ್ನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT