ಅಮೀನಗಡ: ಸಮೀಪದ ಬೆನಕನವಾರಿ ಗ್ರಾಮದಲ್ಲಿ ಮಂಗಳವಾರ ಬಾಲಕನ ಕೊಲೆ ನಡೆದಿದೆ.

ಮಧುಕುಮಾರ ಮಾರುತಿ ವಾಲಿಕಾರ (4) ಕೊಲೆಗೀಡಾದ ದುರ್ದೈವಿ.

ಮೃತನ ತಂದೆ ಮಾರುತಿ ವಾಲಿಕಾರ ಹಾಗೂ ಕೊಲೆ ಆರೋಪಿ ಭೀಮಪ್ಪ ವಾಲಿಕಾರ ಸಂಬಂಧಿಕರು.

ಭೀಮಪ್ಪ ವಾಲಿಕಾರ ಈ ಹಿಂದೆ ತನ್ನ ಹೆಂಡತಿಯೊಂದಿಗೆ ಜಗಳವಾಡಿದ ಸಂದರ್ಭದಲ್ಲಿ ಮಾರುತಿ ವಾಲಿಕಾರ ಆತನಿಗೆ ಹೊಡೆದು ಬುದ್ದಿ ಹೇಳಿದ್ದರು. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಆರೋಪಿ ಅಂಗನವಾಡಿಗೆ ತೆರಳುತ್ತಿದ್ದ ಮಧುಕುಮಾರ ಮಾರುತಿ ವಾಲಿಕಾರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ಅಮೀನಗಡ ಠಾಣೆಯ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.