ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳ್ಳಿಗಳಲ್ಲಿ ಜೋಕುಮಾರನ ಪೂಜೆ

Published : 14 ಸೆಪ್ಟೆಂಬರ್ 2024, 16:07 IST
Last Updated : 14 ಸೆಪ್ಟೆಂಬರ್ 2024, 16:07 IST
ಫಾಲೋ ಮಾಡಿ
Comments

ರಾಂಪುರ: ‘ಕಾಮುಕ ಪ್ರವೃತ್ತಿಯುಳ್ಳವ, ಊರಿಗೆ ಮಿಕ್ಕಿದವ, ಏಳು ದಿನಗಳ ಅವತಾರಿ...’ ಹೀಗೆ ಕರೆಯಿಸಿಕೊಳ್ಳುವ ಜೋಕುಮಾರ ಗಣಪತಿ ಹೋಗುತ್ತಿದ್ದಂತೆ ಭಾದ್ರಪದ ಮಾಸದ ಅಷ್ಟಮಿಯ ದಿನ ಜನ್ಮ ತಳೆಯುತ್ತಾನೆ. ಗಣಪತಿ ಪ್ರತಿಷ್ಠಾಪನೆಗೊಂಡು ಐದನೇ ದಿನಕ್ಕೆ ವಿಸರ್ಜನೆಗೊಳ್ಳುವ ಸಂದರ್ಭದಲ್ಲಿ ಜನಿಸುವ ಜೋಕುಮಾರ ಈಗ ಹಳ್ಳಿ ಹಳ್ಳಿಗಳಲ್ಲಿ ಪೂಜಿತಗೊಳ್ಳುತ್ತಿದ್ದಾನೆ.

ಸಮೀಪದ ಶಿರೂರ ಪಟ್ಟಣದ ಅಂಬಿಗರ ಸಮಾಜದ ಮಹಿಳೆಯರು ಬುಟ್ಟಿಯಲ್ಲಿ ಹೊತ್ತು ಶಿರೂರ ಪಟ್ಟಣ ಹಾಗೂ ಬೆನಕಟ್ಟಿ ಗ್ರಾಮಗಳ ಓಣಿ ಓಣಿಗೆ ತೆರಳಿ ಜೋಕುಮಾರನ ಜೀವನ ವೃತ್ತಾಂತದ ಕುರಿತಾದ ಜನಪದ ಹಾಡುಗಳನ್ನು ಹೇಳುತ್ತಾ ಜನರಿಂದ ದವಸ ಧಾನ್ಯಗಳನ್ನು ಪಡೆದು ಅವರಿಗೆ ನುಚ್ಚು, ಬೇವಿನ ಸೊಪ್ಪು, ಕಾಡಿಗೆಯನ್ನು ನೀಡುತ್ತಾರೆ.

ಓಣಿಗಳ ಮಧ್ಯದ ಸ್ಥಳದಲ್ಲಿ ಬುಟ್ಟಿಯನ್ನಿರಿಸಿ ‘ಜೋಕುಮಾರ ಬಂದಾನ ಬರ್ರಿ. ನೀರು ಹಾಕಿ ಧಾನ್ಯ ನೀಡ್ರಿ’ ಎನ್ನುವ ಮಹಿಳೆಯರು ಜನರು ನೀಡಿದ ದವಸ ಧಾನ್ಯಗಳು, ರೊಟ್ಟಿ, ಪಲ್ಯ, ಒಣ ಮೆಣಸಿನಕಾಯಿ, ಜೋಳ ಪಡೆಯುತ್ತಾರೆ.

ಓಣಿಗಳಲ್ಲಿ ಜೋಕುಮಾರನನ್ನು ಇರಿಸಿ ‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ...’ ಎಂದು ಹಾಡುತ್ತಾ ಮಳೆಗಾಗಿ ಪ್ರಾರ್ಥಿಸುತ್ತಾರೆ.

ಬೆನಕಟ್ಟಿ ಗ್ರಾಮಕ್ಕೆ ಆಗಮಿಸಿದ ಜೋಕುಮಾರ ಸ್ವಾಮಿಗೆ ಓಣಿ ಓಣಿಗಳಲ್ಲಿ ಮಹಿಳೆಯರು ಪೂಜೆ ಸಲ್ಲಿಸಿ ದವಸ ಧಾನ್ಯ ನೀಡಿದರು
ಬೆನಕಟ್ಟಿ ಗ್ರಾಮಕ್ಕೆ ಆಗಮಿಸಿದ ಜೋಕುಮಾರ ಸ್ವಾಮಿಗೆ ಓಣಿ ಓಣಿಗಳಲ್ಲಿ ಮಹಿಳೆಯರು ಪೂಜೆ ಸಲ್ಲಿಸಿ ದವಸ ಧಾನ್ಯ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT