ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಭೀಕರ‌ ಅಪಘಾತ: ನಾಲ್ವರು ಸಾವು

Published : 26 ಸೆಪ್ಟೆಂಬರ್ 2024, 2:20 IST
Last Updated : 26 ಸೆಪ್ಟೆಂಬರ್ 2024, 2:20 IST
ಫಾಲೋ ಮಾಡಿ
Comments

ಹುನಗುಂದ (ಬಾಗಲಕೋಟೆ): ತಾಲ್ಲೂಕಿನ ಧನ್ನೂರ ಟೋಲ ನಾಕಾ ಬಳಿ ಗುರುವಾರ ಬೆಳಗಿನ ಜಾವ ಲಾರಿ, ಕಾರು ಡಿಕ್ಕಿಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿಯ ಗುತ್ತಿಗೆದಾರ ಲಕ್ಷ್ಮಣ ವಡ್ಡರ, ಬೈಲಪ್ಪ ಬಿರಾದಾರ, ಕಾರು ಚಾಲಕ ಮಹ್ಮದರಫೀಕ ಗುಡ್ನಾಳ, ಮುದ್ದೇಬಿಹಾಳದ ರಾಮಣ್ಣ ನಾಯಕ ಮಕ್ಕಳ ಮೃತಪಟ್ಟವರು.

ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಕಾರು ನಜ್ಜುಗುಜ್ಜಾಗಿದೆ.

ಹೊಸಪೇಟೆ‌ ಬಳಿಯ ಹುಲಿಗೆಮ್ಮನ ದೇವಸ್ಥಾನದ ದರ್ಶನ ಮುಗಿಸಿಕೊಂಡು ವಾಪಸ್ ಊರಿಗೆ ಮರಳುವಾಗ ಅಪಘಾತವಾಗಿದೆ.

ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT